kn_tw/bible/names/tirzah.md

2.6 KiB

ತಿರ್ಚಾ

ಸತ್ಯಾಂಶಗಳು:

ತಿರ್ಚಾ ಎನ್ನುವುದು ಇಸ್ರಾಯೇಲ್ಯರಿಂದ ವಶಪಡಿಸಿಕೊಂಡಿರುವ ತುಂಬಾ ಪ್ರಾಮುಖ್ಯವಾದ ಕಾನಾನ್ಯರ ಪಟ್ಟಣವಾಗಿದ್ದಿತ್ತು. ಇದಕ್ಕೆ ಮನಸ್ಸೆ ಸಂತಾನದವನಾಗಿರುವ ಗಿಲ್ಯಾದನ ಮಗಳ ಹೆಸರೂ ಇದ್ದಿತ್ತು.

  • ತಿರ್ಚಾ ಪಟ್ಟಣವು ಮನಸ್ಸೆ ಕುಲದವರಿಂದ ವಶಪಡಿಸಿಕೊಂಡಿರುವ ಪ್ರಾಂತ್ಯದಲ್ಲಿ ಕಂಡುಬರುತ್ತದೆ. ಶೆಕೆಮ್ ಪಟ್ಟಣದ ಉತ್ತರ ಭಾಗದಿಂದ ಸುಮಾರು 10 ಮೇಲ್.ಗಳ ದೂರದಲ್ಲಿ ಈ ಪಟ್ಟಣವಿದ್ದಿರಬಹುದು.
  • ಅನೇಕ ವರ್ಷಗಳಾದನಂತರ, ಇಸ್ರಾಯೇಲ್ಯರು ನಾಲ್ಕು ಮಂದಿ ಅರಸರು ಆಳುತ್ತಿರುವ ಕಾಲದಲ್ಲಿ ಇಸ್ರಾಯೇಲ್ ಉತ್ತರ ರಾಜ್ಯ ತಾತ್ಕಾಲಿಕ ರಾಜಧಾನಿ ಪಟ್ಟಣವಾಗಿ ತಿರ್ಚಾ ಇದ್ದಿತ್ತು.
  • ತಿರ್ಚಾ ಎನ್ನುವ ಹೆಸರು ಮನಸ್ಸೆ ಹೆಣ್ಣು ಮೊಮ್ಮೊಕ್ಕಳ ಒಬ್ಬರ ಹೆಸರಾಗಿದ್ದಿತ್ತು. ಅವರ ತಂದೆ ಸತ್ತು ಹೋಗಿರುವುದರಿಂದ, ಸಾಂಪ್ರದಾಯಿಕವಾಗಿ ಸ್ವಾಸ್ಥ್ಯವನ್ನು ಹೊಂದಿಕೊಳ್ಳುವುದಕ್ಕೆ ಗಂಡು ಮಕ್ಕಳು ಇಲ್ಲದ ಕಾರಣದಿಂದ ಭೂಮಿಯಲ್ಲಿ ಒಂದು ಭಾಗವನ್ನು ತಮಗೆ ಕೊಡಬೇಕೆಂದು ಅವರು ಕೇಳಿಕೊಂಡರು.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಕಾನಾನ್, ಸ್ವಾಸ್ಥ್ಯ, ಇಸ್ರಾಯೇಲ್ ರಾಜ್ಯ, ಮನಸ್ಸೆ, ಶೆಕೆಮ್)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H8656