kn_tw/bible/names/succoth.md

2.3 KiB

ಸುಕ್ಕೋತ್

ಪದದ ಅರ್ಥವಿವರಣೆ:

ಸುಕ್ಕೋತ್ ಎನ್ನುವುದು ಹಳೇ ಒಡಂಬಡಿಕೆಯಲ್ಲಿರುವ ಅನೇಕ ಪಟ್ಟಣಗಳಲ್ಲಿ ಒಂದಾಗಿರುತ್ತದೆ. “ಸುಕ್ಕೋತ್” ಎನ್ನುವ ಪದಕ್ಕೆ “ಆಶ್ರಯಗಳು” ಎಂದರ್ಥ.

  • ಮೊಟ್ಟ ಮೊದಲಿಗೆ ಕರೆಯಲ್ಪಟ್ಟ ಸುಕ್ಕೋತ್ ಎನ್ನುವುದು ಯೊರ್ದನ್ ಹೊಳೆಯ ಪೂರ್ವ ದಿಕ್ಕಿನಲ್ಲಿ ಕಂಡುಬರುತ್ತದೆ.
  • ಯಾಕೋಬನು ತನ್ನ ಕುಟುಂಬದೊಂದಿಗೆ ಮತ್ತು ಹಿಂಡುಗಳೊಂದಿಗೆ ಸುಕ್ಕೋತಿನಲ್ಲಿ ತಮಗೆ ಆಶ್ರಯಗಳನ್ನು ಕಟ್ಟಿಕೊಳ್ಳುತ್ತಾ ನಿವಾಸವಾಗಿದ್ದನು.
  • ನೂರು ವರ್ಷಗಳಾದನಂತರ, ಗಿದ್ಯೋನನು ಮತ್ತು ತನ್ನ ಬಳಿಯಿರುವ ಮನುಷ್ಯರು ಮಿದ್ಯಾನ್ಯರನ್ನು ಬೆನ್ನಟ್ಟಿದಾಗ ಸುಕ್ಕೋತಿನಲ್ಲಿ ವಿಶ್ರಾಂತಿಯನ್ನು ತೆಗೆದುಕೊಂಡರು, ಆದರೆ ಅಲ್ಲಿರುವ ಜನರು ಅವರಿಗೆ ಆಹಾರವನ್ನು ಕೊಡುವುದಕ್ಕೆ ತಿರಸ್ಕಾರ ಮಾಡಿದರು.
  • ಎರಡನೇ ಸುಕ್ಕೋತ್ ಐಗುಪ್ತದ ಉತ್ತರ ಗಡಿಯಲ್ಲಿ ಕಂಡುಬರುತ್ತದೆ, ಇಲ್ಲಿಯೇ ಇಸ್ರಾಯೇಲ್ಯರು ಐಗುಪ್ತದಲ್ಲಿರುವ ಗುಲಾಮಗಿರಿಯಿಂದ ತಪ್ಪಿಸಿಕೊಂಡಿರುವಾಗ ಕೆಂಪು ಸಮುದ್ರವನ್ನು ದಾಟಿದನಂತರ ಇಲ್ಲಿಯೇ ಇಳಿದುಕೊಂಡಿದ್ದರು.

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H5523, H5524