kn_tw/bible/names/sinai.md

3.3 KiB

ಸೀನಾಯಿ

ಸತ್ಯಾಂಶಗಳು:

ಸೀನಾಯಿ ಬೆಟ್ಟ ಎನ್ನುವುದು ಒಂದು ಪರ್ವತವಾಗಿರುತ್ತದೆ, ಇದು ಬಹುಶಃ ಈಗಿನ ಸೀನಾಯಿ ಪೆನಿನ್ಸುಲ ಎಂದು ಕರೆಯಲ್ಪಡುವ ದಕ್ಷಿಣ ಭಾಗದಲ್ಲಿ ಕಂಡುಬರುತ್ತದೆ. ಇದನ್ನು “ಹೋರೆಬ್ ಬೆಟ್ಟ” ಎಂದೂ ಕರೆಯುತ್ತಾರೆ.

  • ಸೀನಾಯಿ ಬೆಟ್ಟ ಎನ್ನುವುದು ಬಂಡೆಗಳು ಇರುವ ಅಡವಿಯಲ್ಲಿ ದೊಡ್ಡ ಭಾಗವಾಗಿರುತ್ತದೆ.
  • ಇಸ್ರಾಯೇಲ್ಯರು ಐಗುಪ್ತದಿಂದ ವಾಗ್ಧಾನ ಭೂಮಿಗೆ ಪ್ರಯಾಣ ಮಾಡುತ್ತಿರುವಾಗ ಅವರು ಸೀನಾಯಿ ಬೆಟ್ಟಕ್ಕೆ ಬಂದಿದ್ದರು.
  • ದೇವರು ಸೀನಾಯಿ ಬೆಟ್ಟದ ಮೇಲೆ ಮೋಶೆಗೆ ಹತ್ತು ಆಜ್ಞೆಗಳನ್ನು ಕೊಟ್ಟನು.

(ಈ ಪದಗಳನ್ನು ಸಹ ನೋಡಿರಿ : ಐಗುಪ್ತ, ಹೋರೆಬ್, ವಾಗ್ಧಾನ ಭೂಮಿ, ಹತ್ತು ಆಜ್ಞೆಗಳು,)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 13:01 ದೇವರು ಇಸ್ರಾಯೇಲ್ಯರನ್ನು ಕೆಂಪು ಸಮುದ್ರದಿಂದ ನಡೆಸಿದನಂತರ, ಆತನು ಅವರನ್ನು ___ ಸೀನಾಯಿ ___ ಎನ್ನುವ ಬೆಟ್ಟದ ಕಡೆಗೆ ಅರಣ್ಯದ ಮೂಲಕ ನಡೆಸಿದನು.
  • 13:03 ಮೂರು ದಿನಗಳಾದನಂತರ, ಜನರು ತಮ್ಮನ್ನು ತಾವು ಆತ್ಮೀಕವಾಗಿ ಸಿದ್ಧಗೊಳಿಸಿಕೊಂಡನಂತರ, ದೇವರು ತುತೂರಿ ಧ್ವನಿಯಿಂದ, ಗುಡುಗು, ಮಿಂಚು, ಮತ್ತು ಹೊಗೆಯೊಳಗಿಂದ ___ ಸೀನಾಯಿ ಬೆಟ್ಟದ ___ ಮೇಲಕ್ಕೆ ಇಳಿದು ಬಂದರು.
  • 13:11 ಅನೇಕ ದಿನಗಳವರೆಗೆ, ಮೋಶೆಯು ___ ಸೀನಾಯಿ ಬೆಟ್ಟದ ___ ಮೇಲೆ ದೇವರೊಂದಿಗೆ ಮಾತನಾಡುತ್ತಾ ಇದ್ದರು.
  • 15:13 ___ ಸೀನಾಯಿ ___ ಮೇಲೆ ದೇವರು ಇಸ್ರಾಯೇಲ್ಯರೊಂದಿಗೆ ಮಾಡಿದ ಒಡಂಬಡಿಕೆಗೆ ವಿಧೇಯರಾಗುವುದಕ್ಕೆ ಯೆಹೋಶುವ ಜನರಿಗೆ ತಮ್ಮ ಕರ್ತವ್ಯವನ್ನು ನೆನಪು ಮಾಡಿದನು.

ಪದ ಡೇಟಾ:

  • Strong's: H2022, H5514, G3735, G4614