kn_tw/bible/names/saul.md

3.9 KiB

ಸೌಲ (ಹಳೇ ಒಡಂಬಡಿಕೆ)

ಸತ್ಯಾಂಶಗಳು:

ಸೌಲನು ಇಸ್ರಾಯೇಲ್ಯರಿಗೆ ಮೊಟ್ಟ ಮೊದಲು ಅರಸನಾಗಿರಲು ದೇವರು ಆದುಕೊಂಡ ಇಸ್ರಾಯೇಲಿಯನಾಗಿದ್ದನು.

  • ಸೌಲನು ಎತ್ತರವಾಗಿದ್ದನು ಮತ್ತು ಸುಂದರವಾಗಿದ್ದನು, ಮತ್ತು ಶಕ್ತಿಯುತವಾದ ಸೈನಿಕನಾಗಿದ್ದನು. ಇವನು ಇಸ್ರಾಯೆಲ್ಯರು ತಮ್ಮ ಅರಸನಾಗಿರಲು ಬಯಸಿದ ಒಂದು ವಿಧವಾದ ಮನುಷ್ಯನಾಗಿದ್ದನು.
  • ಇವನು ಮೊಟ್ಟ ಮೊದಲಿಗೆ ದೇವರಿಗೆ ಸೇವೆ ಮಾಡಿದ್ದನು, ಸ್ವಲ್ಪ ಕಾಲವಾದನಂತರ ಸೌಲನು ಗರ್ವಪಟ್ಟು, ದೇವರಿಗೆ ಅವಿಧೇಯನಾದನು. ಇದಕ್ಕೆ ಫಲವಾಗಿ ಅರಸನಾಗಿರುವುದಕ್ಕೆ ಸೌಲನ ಸ್ಥಾನದಲ್ಲಿ ದೇವರು ದಾವೀದನನ್ನು ನೇಮಿಸಿದನು ಮತ್ತು ಸೌಲನು ಯುದ್ಧದಲ್ಲಿ ಸಾಯುವಂತೆ ಅನುಮತಿಸಿದನು.
  • ಹೊಸ ಒಡಂಬಡಿಕೆಯಲ್ಲಿ ಸೌಲ ಎನ್ನುವ ಯೆಹೂದ್ಯ ಹೆಸರಿನ ಮೇಲೆ ಪೌಲನಿದ್ದನು, ಈತನು ಯೇಸು ಕ್ರಿಸ್ತನಿಗೆ ಅಪೊಸ್ತಲನಾದನು.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಅರಸ)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 17:01_ ___ ಸೌಲನು ___ ಇಸ್ರಾಯೇಲ್.ಗೆ ಮೊದಲ ಅರಸನಾಗಿದ್ದನು. ಇವನು ಎತ್ತರವಾಗಿದ್ದು, ಬಹು ಸುಂದರವಾಗಿದ್ದನು, ಜನರಿಗೆ ಬೇಕಾದ ರೀತಿಯಲ್ಲಿ ಇದ್ದನು. ___ ಸೌಲನು ___ ಇಸ್ರಾಯೇಲ್ಯರನ್ನು ಆಳಿದ ಮೊದಲ ಕೆಲವು ವರ್ಷಗಳವರೆಗೂ ಒಳ್ಳೇಯವನಾಗಿದ್ದನು. ಆದರೆ ಸ್ವಲ್ಪಕಾಲವಾದನಂತರ ದೇವರಿಗೆ ವಿಧೇಯನಾಗದ ದುಷ್ಟ ಮನುಷ್ಯನಾಗಿದ್ದನು, ಆದರೆ ದೇವರು ಇವನ ಸ್ಥಾನದಲ್ಲಿ ಅರಸನಾಗಿರುವುದಕ್ಕೆ ಒಂದು ದಿನ ಬೇರೊಬ್ಬರನ್ನು ಆಯ್ಕೆ ಮಾಡಿಕೊಂಡಿದ್ದನು.
  • 17:04_ ಜನರೆಲ್ಲರು ದಾವೀದನನ್ನು ಪ್ರೀತಿ ಮಾಡಿದ್ದಕ್ಕೆ ___ ಸೌಲನು ___ ಅವನ ಮೇಲೆ ಅಸೂಯೆಪಟ್ಟಿದ್ದನು. ___ ಸೌಲನು ___ ದಾವೀದನನ್ನು ಸಾಯಿಸಲು ಅನೇಕಸಲ ಪ್ರಯತ್ನಿಸಿದನು, ಇದರಿಂದ ದಾವೀದನು ___ ಸೌಲನಿಂದ ___ ಪಾರಾಗಿ ಮರೆಯಾದನು.
  • 17:05_ ಕೊನೆಗೆ, ___ ಸೌಲನು ___ ಯುದ್ಧದಲ್ಲಿ ಸತ್ತನು, ಮತ್ತು ದಾವೀದನು ಇಸ್ರಾಯೇಲ್ ಅರಸನಾದನು.

ಪದ ಡೇಟಾ:

  • Strong's: H7586, G4549