kn_tw/bible/names/ruth.md

3.1 KiB

ರೂತಳು

ಸತ್ಯಾಂಶಗಳು:

ರೂತಳು ಮೋವಾಬ್ಯ ಸ್ತ್ರೀಯಾಗಿರುತ್ತಾಳೆ, ಈಕೆ ನ್ಯಾಯಾಧೀಶರು ಇಸ್ರಾಯೇಲ್ಯರನ್ನು ನಡೆಸುತ್ತಿರುವ ಕಾಲದಲ್ಲಿ ಜೀವನ ಮಾಡಿದ್ದಳು. ನ್ಯಾಯಾಧೀಶರು ಇಸ್ರಾಯೇಲ್ಯರನ್ನು ನಡೆಸುತ್ತಿರುವ ಕಾಲದಲ್ಲಿ ಬರಗಾಲ ಬಂದ ಕಾರಣದಿಂದ ಈಕೆ ತನ್ನ ಕುಟುಂಬದೊಂದಿಗೆ ಮೋವಾಬ್ಯಿಗೆ ಹೋದಾಗ ಅಲ್ಲಿ ಒಬ್ಬ ಇಸ್ರಾಯೇಲ್ ವ್ಯಕ್ತಿಯನ್ನು ಮದುವೆ ಮಾಡಿಕೊಂಡಳು.

  • ರೂತಳ ಗಂಡನು ಸತ್ತುಹೋದನು, ಮತ್ತು ಸ್ವಲ್ಪ ಕಾಲವಾದನಂತರ ಈಕೆ ಮೋವಾಬ್ಯ ದೇಶವನ್ನು ಬಿಟ್ಟು ತನ್ನ ಅತ್ತೆಯಾದ ನೊವೊಮಿಯಳೊಂದಿಗೆ ಪ್ರಯಾಣಿಸಿದಳು, ತನ್ನ ಆತ್ತೆಯು ಆ ಸಮಯದಲ್ಲಿ ಇಸ್ರಾಯೇಲಿನಲ್ಲಿರುವ ತನ್ನ ಸ್ವಂತ ಊರು ಬೆತ್ಲೆಹೇಮಿಗೆ ಬರುತ್ತಿದ್ದಳು.
  • ರೂತಳು ನೊವೊಮಿಗೆ ತುಂಬಾ ನಂಬಿಗಸ್ತಳಾಗಿದ್ದಳು ಮತ್ತು ಆಕೆಗೆ ಆಹಾರವನ್ನು ಒದಗಿಸಿ ಕೊಡುವುದಕ್ಕೆ ತುಂಬಾ ಹೆಚ್ಚಿನ ಕಷ್ಟವನ್ನು ಮಾಡಿದ್ದಳು.
  • ಈಕೆ ಕೂಡ ಇಸ್ರಾಯೇಲ್ ನಿಜವಾದ ದೇವರನ್ನು ಸೇವಿಸುವುದಕ್ಕೆ ತನ್ನನ್ನು ತಾನು ಸಮರ್ಪಣೆ ಮಾಡಿಕೊಂಡಿದ್ದಳು.
  • ರೂತಳು ಬೋವಜ ಎನ್ನುವ ಇಸ್ರಾಯೇಲ್ ವ್ಯಕ್ತಿಯನ್ನು ವಿವಾಹ ಮಾಡಿಕೊಂಡಳು ಮತ್ತು ಅಲ್ಲಿ ಒಂದು ಗಂಡು ಮಗುವಿಗೆ ಜನ್ಮವನ್ನು ತಾಳಿದಳು, ಇವನು ಅರಸನಾದ ದಾವೀದನ ತಾತನಾಗಿದ್ದನು. ಯೇಸುಕ್ರಿಸ್ತನ ಪೂರ್ವಜನಾಗಿರುವ ಅರಸನಾದ ದಾವೀದನು ರೂತಳಿಂದ ಬಂದಿದ್ದನು.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಬೇತ್ಲೆಹೇಮ್, ಬೋವಜ, ದಾವೀದ, ನ್ಯಾಯಾಧೀಶ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H7327, G4503