kn_tw/bible/names/phonecia.md

3.1 KiB

ಫೊಯಿನೀಕೆ

ಸತ್ಯಾಂಶಗಳು:

ಪುರಾತನ ಕಾಲಗಳಲ್ಲಿ ಫೊಯಿನೀಕೆ ಎನ್ನುವುದು ಶ್ರೀಮಂತ ದೇಶವಾಗಿರುತ್ತದೆ, ಇದು ಇಸ್ರಾಯೇಲ್ ಉತ್ತರ ಭಾಗದಲ್ಲಿರುವ ಮೆಡಿಟರೇನಿಯನ್ ಸಮುದ್ರದ ಕರಾವಳಿಯ ಬದಿಗೆ ಕಾನಾನ್.ನಲ್ಲಿ ಕಂಡುಬರುತ್ತದೆ.

  • ಈಗಿನ ಲೆಬನೋನ್ ದೇಶವಾಗಿರುವ ಪಶ್ಚಿಮ ಭಾಗದಲ್ಲಿ ಫೊಯಿನೀಕೆಯು ಭೂಮಿಯನ್ನು ವಶಪಡಿಸಿಕೊಂಡಿರುತ್ತದೆ.
  • ಹೊಸ ಒಡಂಬಡಿಕೆಯ ಕಾಲಗಳಲ್ಲಿ ಫೊಯಿನೀಕೆಯ ರಾಜಧಾನಿ ತೂರ್ ಆಗಿತ್ತು. ಇತರ ಪ್ರಾಮುಖ್ಯವಾದ ಫೊಯಿನೀಕೆಯು ಪಟ್ಟಣವು ಸೀದೋನ್ ಆಗಿತ್ತು.
  • ಫೊಯಿನೀಕೆಯರು ತಮ್ಮ ದೇಶದ ದೇವದಾರು ವೃಕ್ಷಗಳನ್ನು ಉಪಯೋಗಿಸಿ ತಮ್ಮ ಮರಗೆಲಸದ ಕೌಶಲ್ಯಗಳಿಗೆ ಪ್ರಸಿದ್ದಿ ಹೊಂದಿರುತ್ತಾರೆ, ತುಂಬಾ ಬೆಲೆಯುಳ್ಳ ಕೆನ್ನರಳೆ ಬಣ್ಣ ಉತ್ಪಾದಕರಾಗಿದ್ದರು ಮತ್ತು ಸಮುದ್ರದ ಮೂಲಕ ಪ್ರಯಾಣಗಳನ್ನು ಮಾಡಿ, ವ್ಯಾಪಾರ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಅವರು ಹಡಗುಗಳನ್ನು ನಿರ್ಮಿಸುವುದರಲ್ಲಿ ಉನ್ನತವಾದ ನಿಪುಣತೆಯನ್ನು ಹೊಂದಿರುತ್ತಾರೆ.
  • ಆದಿಮ ವರ್ಣಮಾಲೆಯಲ್ಲಿ ಒಂದನ್ನು ಫೊಯಿನೀಕೆಯ ಜನರಿಂದ ಸೃಷ್ಟಿಸಲ್ಪಟ್ಟಿರುತ್ತದೆ. ಅವರ ಅಕ್ಷರವು ತುಂಬಾ ಹೆಚ್ಚಾಗಿ ವಿಸ್ತರಿಸಲ್ಪಟ್ಟಿರುತ್ತದೆ,ಯಾಕಂದರೆ ಅವರು ಮಾಡುವ ವ್ಯಾಪಾರದ ಮೂಲಕ ಅನೇಕ ಜನರ ಗುಂಪಿಗಳೊಂದಿಗೆ ಹೆಚ್ಚಿನ ಸಂಬಂಧಗಳನ್ನು ಇಟ್ಟುಕೊಂಡಿದ್ದರು.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಕೇದಾರ್, ನೇರಳೆ ಬಣ್ಣ, ಸೀದೋನ್, ತೂರ್)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H3667, G4949, G5403