kn_tw/bible/names/philiptheapostle.md

2.4 KiB

ಫಿಲಿಪ್ಪ, ಅಪೊಸ್ತಲ

ಸತ್ಯಾಂಶಗಳು:

ಅಪೊಸ್ತಲನಾದ ಫಿಲಿಪ್ಪನು ಯೇಸುವಿನ ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾಗಿದ್ದನು. ಈತನು ಬೇತ್ಸಾಯಿದ ಪಟ್ಟಣದಿಂದ ಬಂದವನಾಗಿದ್ದನು.

  • ಯೇಸುವನ್ನು ಭೇಟಿ ಮಾಡುವುದಕ್ಕೆ ಫಿಲಿಪ್ಪನು ನತಾನಯೇಲನನ್ನು ಕರೆದುಕೊಂಡು ಬಂದಿದ್ದನು.
  • 5,000 ಜನರಿಗಿಂತ ಹೆಚ್ಚಿಗೆ ಇರುವ ಈ ಜನಸಮೂಹಕ್ಕೆ ಆಹಾರವನ್ನು ಹೇಗೆ ಒದಗಿಸಿಕೊಡುವುದು ಎಂದು ಯೇಸು ಫಿಲಿಪ್ಪನಿಗೆ ಪ್ರಶ್ನೆ ಕೇಳಿದನು.
  • ಯೇಸು ತನ್ನ ಶಿಷ್ಯರೊಂದಿಗೆ ಊಟ ಮಾಡಿದ ಕೊನೆಯ ರಾತ್ರಿ ಭೋಜನದ ಕೂಟದಲ್ಲಿ ತನ್ನ ತಂದೆಯಾದ ದೇವರ ಕುರಿತಾಗಿ ಆತನು ಅವರೊಂದಿಗೆ ಮಾತನಾಡಿದನು. ತಂದೆಯನ್ನು ತೋರಿಸಬೇಕೆಂದು ಫಿಲಿಪ್ಪನು ಯೇಸುವಿಗೆ ಕೇಳಿದನು.
  • ಕೆಲವೊಂದು ಭಾಷೆಗಳಲ್ಲಿ ಗಲಿಬಿಲಿಯಾಗದಂತಿರುವುದಕ್ಕೆ ಶಿಷ್ಯನಾಗಿರುವ ಫಿಲಿಪ್ಪನ ಹೆಸರನ್ನು ಮತ್ತು ಸುವಾರ್ತಿಕನಾದ ಫಿಲಿಪ್ಪನ ಹೆಸರನ್ನು ಬೇರೆ ಬೇರೆಯಾಗಿ ಉಚ್ಚಾರಣೆ ಮಾಡುತ್ತಾರೆ.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಫಿಲಿಪ್ಪ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: G5376