kn_tw/bible/names/melchizedek.md

3.9 KiB

ಮೆಲ್ಕೀಚೆದೆಕ

ಸತ್ಯಾಂಶಗಳು:

ಅಬ್ರಾಮನು ಜೀವಿಸಿದ ಸಮಯದಲ್ಲಿ ಮೆಲ್ಕೀಚೆದೆಕ ಸಾಲೇಮಿನ (“ಯೆರೂಸಲೇಮ್”) ಅರಸನಾಗಿದ್ದನು.

  • ಮೆಲ್ಕೀಚೆದೆಕ ಎನ್ನುವ ಹೆಸರಿಗೆ “ನೀತಿಗೆ ಅರಸ” ಎಂದರ್ಥ ಮತ್ತು ಆತನಿಗೆ ಕೊಟ್ಟ “ಸಾಲೇಮಿನ ಅರಸ” ಎನ್ನುವ ಬಿರುದಿಗೆ “ಸಮಾಧಾನ ಅರಸ” ಎಂದರ್ಥ.
  • ಈತನನ್ನು “ಮಹೋನ್ನತನಾದ ದೇವರ ಯಾಜಕ” ಎಂದೂ ಕರೆಯಲ್ಪಟ್ಟಿದ್ದನು.
  • ಅಬ್ರಾಮ ತನ್ನ ಸೋದರ ಸಂಬಂಧಿಯಾದ ಲೋಟನನ್ನು ಶಕ್ತಿಯುತವಾದ ಅರಸರಿಂದ ರಕ್ಷಿಸಿದಾಗ ಅಬ್ರಾಮನು ರೊಟ್ಟಿ ಮತ್ತು ದ್ರಾಕ್ಷಾರಸವನ್ನು ಆತನಿಗೆ ಅರ್ಪಿಸಿದಾಗ ಸತ್ಯವೇದದಲ್ಲಿ ಮೊಟ್ಟ ಮೊದಲಿಗೆ ಮೆಲ್ಕೀಚೆದೆಕ ಎನ್ನುವ ಹೆಸರನ್ನು ದಾಖಲಿಸಲಾಗಿರುತ್ತದೆ. ಅಬ್ರಾಮನು ತನ್ನ ಜಯದೊಳಗಿಂದ ಬಂದ ವಸ್ತುಗಳಲ್ಲಿ ದಶಮ ಭಾಗವನ್ನು ಮೆಲ್ಕೀಚೆದೆಕನಿಗೆ ಕೊಟ್ಟನು.
  • ಹೊಸ ಒಡಂಬಡಿಕೆಯಲ್ಲಿ ಮೆಲ್ಕೀಚೆದೆಕನು ತಂದೆತಾಯಿಗಳಿಲ್ಲದ ವ್ಯಕ್ತಿಯಾಗಿ ವಿವರಿಸಲ್ಪಟ್ಟಿದ್ದನು. ಈತನು ಯಾಜಕನಾಗಿ ಮತ್ತು ಸದಾಕಾಲವೂ ಆಳ್ವಿಕೆ ಮಾಡುವ ಅರಸನಾಗಿ ಕರೆಯಲ್ಪಟ್ಟಿದ್ದನು.
  • ಹೊಸ ಒಡಂಬಡಿಕೆಯು ಕೂಡ “ಮೆಲ್ಕೀಚೆದೆಕನ ಕ್ರಮದ” ಯಾಜಕನ ಪ್ರಕಾರ ಯೇಸು ಯಾಜಕನಾಗಿದ್ದಾನೆಂದು ಹೇಳುತ್ತಿದೆ. ಇಸ್ರಾಯೇಲ್ ಯಾಜಕರಾಗಿರುವಂತೆ ಯೇಸು ಲೇವಿ ವಂಶಸ್ಥನಾಗಿರುವುದಿಲ್ಲ. ಈತನ ಯಾಜಕತ್ವವು ಮೆಲ್ಕೀಚೆದೆಕನಂತೆಯೇ ನೇರವಾಗಿ ದೇವರಿಂದ ಬಂದಿದ್ದಾಗಿರುತ್ತದೆ.
  • ಸತ್ಯವೇದದಲ್ಲಿರುವ ಈತನ ಕುರಿತಾದ ಈ ವಿವರಣೆಗಳ ಆಧಾರದಮೇಲೆ, ಮೆಲ್ಕೀಚೆದೆಕನು ನಮ್ಮ ಮಹಾ ದೊಡ್ಡ ಯಾಜಕನಾದ, ನೀತಿ ಸಮಾಧಾನಗಳಿಗೆ ನಿತ್ಯ ಅರಸನಾದ ಯೇಸುವಿನ ಕಡೆಗೆ ನಡೆಸುವ ಅಥವಾ ಆತನನ್ನು ಪ್ರತಿನಿಧಿಸುವ ದೇವರಿಂದ ಆಯ್ಕೆ ಮಾಡಲ್ಪಟ್ಟಿರುವ ಮನುಷ್ಯ ಯಾಜಕನಾಗಿದ್ದನು.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಅಬ್ರಾಹಾಮ್, ನಿತ್ಯತ್ವ, ಮಹಾ ಯಾಜಕ, ಯೆರೂಸಲೇಮ್, ಲೇವಿ, ಯಾಜಕ, ನೀತಿ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H4442, G3198