kn_tw/bible/names/mediterranean.md

2.9 KiB

ಸಮುದ್ರ, ಮಹಾ ಸಮುದ್ರ, ಪಶ್ಚಿಮ ಸಮುದ್ರ, ಮೆಡಿಟರೇನಿಯನ್ ಸಮುದ್ರ

ಸತ್ಯಾಂಶಗಳು:

ಸತ್ಯವೇದದಲ್ಲಿ “ಮಹಾ ಸಮುದ್ರ” ಅಥವಾ “ಪಶ್ಚಿಮ ಸಮುದ್ರ” ಎನ್ನುವ ಪದಗಳು ಈಗಿನ ಕಾಲದಲ್ಲಿ “ಮೆಡಿಟರೇನಿಯನ್ ಸಮುದ್ರ” ಎಂದು ಕರೆಯುತ್ತಾರೆ, ಸತ್ಯವೇದ ಕಾಲದಲ್ಲಿ ಇದು ಹೆಚ್ಚಿನ ನೀರನ್ನು ಹೊಂದಿರುವ ಸಮುದ್ರ ಎಂಬುದಾಗಿ ಹೆಸರುವಾಸಿಯಾಗಿತ್ತು.

  • ಮೆಡಿಟರೇನಿಯನ್ ಸಮುದ್ರವು ಈ ಕೆಳಗಿನ ಪ್ರಾಂತ್ಯಗಳ ಗಡಿಗಳನ್ನು ಹೊಂದಿರುತ್ತದೆ : ಇಸ್ರಾಯೇಲ್ (ಪೂರ್ವ), ಯುರೋಪ್ (ಉತ್ತರ ಮತ್ತು ಪಶ್ಚಿಮ), ಮತ್ತು ಆಫ್ರಿಕಾ (ದಕ್ಷಿಣ).
  • ಈ ಸಮುದ್ರವು ಅನೇಕ ದೇಶಗಳ ಗಡಿಗಳನ್ನು ಹೊಂದಿರುವುದರಿಂದ ಪುರಾತನ ಕಾಲಗಳಲ್ಲಿ ವ್ಯಾಪಾರ ವ್ಯವಹಾರಗಳಿಗೆ ಮತ್ತು ಸಾರಿಗೆಗೆ ತುಂಬಾ ಪ್ರಾಮುಖ್ಯವಾಗಿತ್ತು. ಈ ಸಮುದ್ರ ಕರಾವಳಿಯಲ್ಲಿ ಕಂಡುಬರುವ ಪಟ್ಟಣಗಳು ಮತ್ತು ಜನರ ಗುಂಪುಗಳು ತುಂಬಾ ಅಭಿವೃದ್ಧಿ ಹೊಂದಿದವುಗಳಾಗಿದ್ದವು ಅಥವಾ ಹೊಂದಿದವರಾಗಿದ್ದರು, ಯಾಕಂದರೆ ಹಡಗಿನ ಮೂಲಕ ಇತರ ದೇಶಗಳಿಂದ ವಸ್ತುಗಳನ್ನು ತುಂಬಾ ಸುಲಭವಾಗಿ ವರ್ಗಾಯಿಸುತ್ತಿದ್ದರು.
  • ಮಹಾ ಸಮುದ್ರ ಎನ್ನುವುದು ಇಸ್ರಾಯೇಲ್ ಪಶ್ಚಿಮ ದಿಕ್ಕಿನಲ್ಲಿ ಕಂಡುಬರುತ್ತದೆ, ಇದನ್ನು ಕೆಲವೊಂದುಸಲ “ಪಶ್ಚಿಮ ಸಮುದ್ರ” ಎಂದೂ ಸೂಚಿಸುತ್ತಾರೆ.

(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ

(ಈ ಪದಗಳನ್ನು ಸಹ ನೋಡಿರಿ : ಇಸ್ರಾಯೇಲ್, ಜನರ ಗುಂಪು, ಅಭಿವೃದ್ಧಿ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H314, H1419, H3220