kn_tw/bible/names/marymagdalene.md

2.4 KiB

ಮಗ್ದಲದ ಮರಿಯ

ಸತ್ಯಾಂಶಗಳು:

ಮಗ್ದಲದ ಮರಿಯಳು ಯೇಸುವಿನ ಸೇವೆಯಲ್ಲಿ ಆತನನ್ನು ಹಿಂಬಾಲಿಸಿದ ಮತ್ತು ಯೇಸುವಿನಲ್ಲಿ ನಂಬಿಕೆಯಿಟ್ಟಿರುವ ಅನೇಕಮಂದಿ ಸ್ತ್ರೀಯರಲ್ಲಿ ಒಬ್ಬಳಾಗಿದ್ದಳು. ಈಕೆಯಲ್ಲಿರುವ ಏಳು ದೆವ್ವಗಳನ್ನು ಯೇಸು ಹೋಗಲಾಡಿಸಿ ಆಕೆಗೆ ಬಿಡುಗಡೆಯನ್ನು ಕೊಟ್ಟಿದ್ದನು, ಹೀಗೆ ಆಕೆ ಪ್ರಸಿದ್ಧಿಯಾಗಿದ್ದಳು.

  • ಮಗ್ದಲದ ಮರಿಯಳು ಮತ್ತು ಇತರ ಬೇರೆ ಸ್ತ್ರೀಯರು ಯೇಸುವಿಗೆ ಮತ್ತು ಆತನ ಶಿಷ್ಯರಿಗೆ ಕೊಡುವುದರ ಮೂಲಕ ಹೆಚ್ಚಾಗಿ ಸಹಾಯ ಮಾಡಿದ್ದರು.
  • ಯೇಸುವು ಮರಣದಿಂದ ಎಬ್ಬಿಸಲ್ಪಟ್ಟಾಗ ಆತನನ್ನು ಮೊಟ್ಟ ಮೊದಲಾಗಿ ನೋಡಿದ ಸ್ತ್ರೀಯರಲ್ಲಿ ಈಕೆಯು ಒಬ್ಬಳೆಂದು ದಾಖಲಿಸಿದ್ದಾರೆ.
  • ಮಗ್ದಲದ ಮರಿಯಳು ಸಮಾಧಿಯ ಹೊರಗಡೆ ನಿಂತುಕೊಂಡಿರುವಾಗಲೇ ಆಕೆ ಯೇಸು ನಿಂತಿರುವುದನ್ನು ನೋಡಿದಳು ಮತ್ತು ಆತನು ಆಕೆಗೆ ನೀನು ಇತರ ಶಿಷ್ಯರ ಹತ್ತಿರ ಹೋಗಿ ಆತನು ಎದ್ದಿದ್ದಾನೆಂದು ಪ್ರಕಟಿಸು ಎಂದು ಹೇಳಿದನು.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ದೆವ್ವ, ದೆವ್ವ-ಹಿಡಿಯಲ್ಪಟ್ಟವರು)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: G3094, G3137