kn_tw/bible/names/herodthegreat.md

3.5 KiB

ಮಹಾ ಹೆರೋದ್

ಸತ್ಯಾಂಶಗಳು:

ಮಹಾ ಹೆರೋದ್ ಯೇಸು ಹುಟ್ಟಿದ ಸಮಯದಲ್ಲಿ ಯೂದಾಯವನ್ನು ಆಳುತ್ತಿದ್ದನು. ಇವನೇ ಅನೇಕಮಂದಿ ಎದೋಮಿಯರ ಪಾಲಕರಲ್ಲಿ ಮೊಟ್ಟಮೊದಲನೇಯವನಾಗಿದ್ದನು, ಹೆರೋದ್ ಎನ್ನುವ ಹೆಸರಿನ ಮೇಲೆ ರೋಮಾ ಸಾಮ್ರಾಜ್ಯದ ಎಲ್ಲಾ ಭಾಗಗಳನ್ನು ಆಳ್ವಿಕೆ ಮಾಡಿದ್ದನು.

  • ಇವನ ಪೂರ್ವಿಕರು ಯೆಹೂದ್ಯ ಮತದಲ್ಲಿ ಸೇರಿದ್ದರು ಮತ್ತು ಇವನು ಯೆಹೂದ್ಯನಾಗಿಯೇ ಬೆಳೆದಿದ್ದನು.
  • ಇವನು ಅರಸನಾಗದಿದ್ದರೂ ಚಕ್ರವರ್ತಿಯಾದ ಅಗಸ್ತನು ಇವನಿಗೆ “ಅರಸನಾದ ಹೆರೋದ್” ಎಂದು ಹೆಸರಿಟ್ಟನು. ಇವನು ಯೂದಾಯದಲ್ಲಿ ಸುಮಾರು 33 ವರ್ಷಗಳ ಕಾಲ ಯೆಹೂದ್ಯರ ಮೇಲೆ ಆಳ್ವಿಕೆ ಮಾಡಿದನು.
  • ಮಹಾ ಹೆರೋದನು ತಾನು ನಿರ್ಮಿಸಬೇಕೆಂದು ಆಜ್ಞಾಪಿಸಿದ ಅನೇಕವಾದ ಸುಂದರ ಭವನಗಳಿಗೆ ಹೆಸರುವಾಸಿಯಾಗಿದ್ದನು ಮತ್ತು ಯೆರೂಸಲೇಮಿನಲ್ಲಿರುವ ಯೆಹೂದ್ಯರ ಆಲಯವನ್ನು ತಿರುಗಿ ನಿರ್ಮಿಸಿದ್ದನು.
  • ಈ ಹೆರೋದ್ ತುಂಬಾ ಕ್ರೂರಿಯಾಗಿದ್ದನು ಮತ್ತು ಅನೇಕ ಜನರನ್ನು ಸಾಯಿಸಿದ್ದನು. “ಯೆಹೂದ್ಯರ ಅರಸನು” ಬೆತ್ಲೆಹೇಮಿನಲ್ಲಿ ಜನಿಸಿದ್ದಾನೆಂದು ಇವನು ಕೇಳಿಸಿಕೊಂಡಾಗ, ಆ ಪಟ್ಟಣದಲ್ಲಿರುವ ಎಲ್ಲಾ ಗಂಡು ಶಿಶುಗಳನ್ನು ಕೊಂದುಹಾಕಿಸಿದನು.
  • ತನ್ನ ಗಂಡು ಮಕ್ಕಳಾದ ಹೆರೋದ್ ಅಂತಿಪ ಮತ್ತು ಹೆರೋದ್ ಫಿಲಿಪ್ ಮತ್ತು ತನ್ನ ಮೊಮ್ಮೊಗನಾದ ಹೆರೋದ್ ಅಗ್ರಿಪ್ಪನು ಕೂಡ ರೋಮಾ ಪಾಲಕರಾಗಿದ್ದರು. ತನ್ನ ಮರಿ ಮೊಮ್ಮೊಗ ಹೆರೋದ್ ಅಗ್ರಿಪ್ಪ II (“ಅರಸನಾದ ಅಗ್ರಿಪ್ಪ” ಎಂದು ಕರೆಯಲ್ಪಡುವ ವ್ಯಕ್ತಿ) ಯೂದಾಯದ ಎಲ್ಲಾ ಭಾಗಗಳನ್ನು ಆಳಿದನು.

(ನೋಡಿರಿ: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ: ಹೆರೋದ್ ಅಂತಿಪ, ಯೂದಾಯ, ಅರಸ, ದೇವಾಲಯ)

ಸತ್ಯವೇದದ ಅನುಬಂಧ ವಾಕ್ಯಗಳು:

ಪದ ಡೇಟಾ:

  • Strong's: G2264