kn_tw/bible/names/gomorrah.md

2.3 KiB

ಗೊಮೋರ

ಸತ್ಯಾಂಶಗಳು:

ಸೊದೊಮ್ ಹತ್ತಿರ ಸರವುಳ್ಳ ಕಣಿವೆಯಲ್ಲಿ ಗೊಮೋರ ಇತ್ತು, ಅಬ್ರಹಾಮನ ಸಹೋದರನಾದ ಲೋಟನು ಅಲ್ಲಿ ವಾಸಿಸುತ್ತೇನೆಂದು ಆಯ್ಕೆ ಮಾಡಿಕೊಂಡನು.

  • ಸೊದೊಮ್ ಮತ್ತು ಗೊಮೋರ ಪಟ್ಟಣಗಳು ಎಲ್ಲಿವೆ ಎಂದು ತಿಳಿಯದು, ಆದರೆ ಆ ಪಟ್ಟಣಗಳು ಲವಣಸಮುದ್ರದ ದಕ್ಷಿಣ ಭಾಗದಲ್ಲಿರುವ ಸಿದ್ದೀಮ್ ಹತ್ತಿರವಿರಬಹುದು ಎಂದು ಸೂಚನೆಗಳಿವೆ.
  • ಸೊದೊಮ್ ಮತ್ತು ಗೊಮೋರ ಪಟ್ಟಣಗಳು ಇದ್ದ ಸ್ಥಳದಲ್ಲಿ ಅನೇಕ ಅರಸರು ಯುದ್ಧ ಮಾಡುವವರಾಗಿದ್ದರು.
  • ಸೊದೊಮ್ ಮತ್ತು ಬೇರೆ ಪಟ್ಟಣಗಳ ಜೊತೆ ಲೋಟನಿಗೆ ಜಗಳವಾದಾಗ ಅಬ್ರಹಾಮನು ಮತ್ತು ಅವನ ಮನುಷ್ಯರು ಲೋಟನನ್ನು ಬಿಡಿಸಿದರು.
  • ಇದಾದ ಸ್ವಲ್ಪ ಕಾಲಕ್ಕೆ ಯೆಹೋವನು ಸೊದೊಮ್ ಮತ್ತು ಗೊಮೋರ ಪಟ್ಟಣಗಳಲ್ಲಿದ್ದ ಜನರ ದುಷ್ಟತಾಣವನ್ನು ಕಂಡು ಅವುಗಳನ್ನು ನಾಶಮಾಡಿದನು.

(ಅನುವಾದ ಸಲಹೆಗಳು: ಹೆಸರುಗಳನ್ನು ಹೇಗೆ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಅಬ್ರಹಾಮ, ಬಾಬುಲೋನ್, ಲೋಟ, ಲವಣಸಮುದ್ರ, ಸೊದೊಮ್)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H6017