kn_tw/bible/names/cornelius.md

2.6 KiB

ಕೊರ್ನೇಲ್ಯ

ಸತ್ಯಾಂಶಗಳು:

ಕೊರ್ನೇಲ್ಯನು ಅನ್ಯನಾಗಿರುತ್ತಾನೆ, ಅಥವಾ ಯೆಹೂದ್ಯನಾಗಿರುವುದಿಲ್ಲ, ಈತನು ರೋಮಾ ಸೈನ್ಯದಲ್ಲಿ ಸೈನ್ಯಾಧಿಕಾರಿಯಾಗಿದ್ದನು.

  • ಈತನು ಪ್ರತಿದಿನ ದೇವರಿಗೆ ಪ್ರಾರ್ಥಿಸುವವನಾಗಿದ್ದನು ಮತ್ತು ಬಡವರಿಗೆ ಕೊಡುವುದರಲ್ಲಿ ಉದಾರ ಸ್ವಭಾವಿಯಾಗಿದ್ದನು.
  • ಅಪೊಸ್ತಲನಾದ ಪೇತ್ರನು ಸುವಾರ್ತೆಯನ್ನು ವಿವರಿಸಿ ಹೇಳಿದಾಗ ಕೊರ್ನೇಲ್ಯನು ಮತ್ತು ತನ್ನ ಕುಟುಂಬದವರು ಕೇಳಿಸಿಕೊಂಡು ಯೇಸುವಿನಲ್ಲಿ ನಂಬಿಕೆಯನ್ನಿಟ್ಟರು.
  • ಕೊರ್ನೇಲ್ಯನ ಮನೆಯಲ್ಲಿರುವ ಜನರು ಅಥವಾ ಯೆಹೂದ್ಯರಲ್ಲದ ಜನರು ಮೊಟ್ಟಮೊದಲಾಗಿ ವಿಶ್ವಾಸಿಗಳಾದರು.
  • ಯೇಸು ಎಲ್ಲಾ ಜನರನ್ನು ಅಂದರೆ ಅನ್ಯರೆಲ್ಲರನ್ನು ಸೇರಿಸಿ ಪ್ರತಿಯೊಬ್ಬರನ್ನು ರಕ್ಷಿಸುವುದಕ್ಕೆ ಬಂದಿದ್ದಾನೆಂದು ಯೇಸುವಿನ ಹಿಂಬಾಲಕರು ಇದರ ಮೂಲಕ ತೋರಿಸಿದರು.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಅಪೊಸ್ತಲ, ನಂಬು, ಅನ್ಯರು, ಸುವಾರ್ತೆ, ಗ್ರೀಕ್, ಶತಾಧಿಪತಿ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: G2883