kn_tw/bible/names/caesar.md

3.2 KiB

ಕೈಸರ

ಸತ್ಯಾಂಶಗಳು:

“ಕೈಸರ” ಎನ್ನುವ ಪದವು ರೋಮಾ ಸಾಮ್ರಾಜ್ಯವನ್ನು ಆಳುವ ಆಡಳಿತಗಾರರಿಗೆ ಉಪಯೋಗಿಸುವ ಹೆಸರು ಅಥವಾ ಬಿರುದು ಆಗಿರುತ್ತದೆ. ಸತ್ಯವೇದದಲ್ಲಿ ಈ ಹೆಸರು ಮೂವರು ರೋಮಾ ಪಾಲಕರಿಗೆ ಸೂಚಿಸುತ್ತದೆ.

  • ಮೊಟ್ಟಮೊದಲು ರೋಮಾ ಪಾಲಕರಾಗಿರುವ ಕೈಸರ ಯಾರೆಂದರೆ “ಕೈಸರ ಅಗಸ್ತ”, ಈ ಚಕ್ರವರ್ತಿ ಯೇಸು ಹುಟ್ಟಿದ ದಿನಗಳಲ್ಲಿ ಆಳುತ್ತಿದ್ದನು.
  • ಸುಮಾರು ಮೂವತ್ತು ವರ್ಷಗಳಾದನಂತರ, ದೀಕ್ಷಾಸ್ನಾನ ಮಾಡಿಸುವ ಯೋಹಾನನು ಪ್ರಸಂಗ ಮಾಡುತ್ತಿರುವ ದಿನಗಳಲ್ಲಿ, ರೋಮಾ ಸಾಮ್ರಾಜ್ಯಕ್ಕೆ ಕೈಸರ ತಿಬೇರಿ ಆಳ್ವಿಕೆ ಮಾಡುತ್ತಿದ್ದನು.
  • ಕೈಸರನದು ಕೈಸರನಿಗೆ ಕೊಡಿರಿ; ದೇವರದನ್ನು ದೇವರಿಗೆ ಕೊಡಿರಿ ಎಂದು ಯೇಸು ಜನರಿಗೆ ಹೇಳಿದಾಗ ಕೈಸರ ತಿಬೇರಿ ರೋಮಾ ಸಾಮ್ರಾಜ್ಯವನ್ನು ಅಳುತ್ತಿದ್ದರು.
  • ಪೌಲನು ಕೈಸರನ ಮುಂದೆ ನಿಂತುಕೊಂಡ ಸಂದರ್ಭವೂ ಕೂಡ “ಕೈಸರ” ಎಂದು ಬಿರುದನ್ನು ಹೊಂದಿರುವ ರೋಮಾ ಚಕ್ರವರ್ತಿಯಾದ ನೀರೋನನ್ನು ಸೂಚಿಸುತ್ತದೆ.
  • “ಕೈಸರ” ಎನ್ನುವ ಪದವನ್ನು ಬಿರುದಾಗಿ ಉಪಯೋಗಿಸುವಾಗ, ಇದನ್ನು “ಚಕ್ರವರ್ತಿ” ಅಥವಾ “ರೋಮಾ ಪಾಲಕರು” ಎಂದೂ ಅನುವಾದ ಮಾಡಬಹುದು.
  • ಕೈಸರ ಅಗಸ್ತ ಅಥವಾ ಕೈಸರ ತಿಬೇರಿ ಎನ್ನುವ ಹೆಸರುಗಳಲ್ಲಿ, “ಕೈಸರ” ಎನ್ನುವ ಪದವನ್ನು ಜಾತೀಯ ಭಾಷೆಯಲ್ಲಿ ಉಚ್ಚರಿಸುವ ವಿಧಾನದಲ್ಲೇ ಉಚ್ಚರಣೆ ಮಾಡಬಹುದು.

(ಅನುವಾದ ಸಲಹೆಗಳು: /ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಅರಸ, ಪೌಲ, ರೋಮಾ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: G2541