kn_tw/bible/names/abijah.md

2.4 KiB

ಅಬೀಯ

ಸತ್ಯಾಂಶಗಳು:

ಅಬಿಯ ಯೂದಾ ಅರಸನಾಗಿ ಕ್ರಿ.ಪೂ.915 ರಿಂದ 913 ರವರೆಗೆ ಆಳ್ವಿಕೆ ಮಾಡಿದ್ದನು. ಇವನು ಅರಸನಾದ ಯಾರೊಬ್ಬಾಮನ ಮಗನಾಗಿದ್ದನು. ಅಬೀಯ ಹೆಸರಿನ ಮೇಲೆ ಇರುವ ಇತರ ಜನರು ಕೂಡ ಹಳೇ ಒಡಂಬಡಿಕೆಯಲ್ಲಿ ಸೇವೆಯನ್ನು ಮಾಡಿದ್ದರು.

  • ಸಮೂವೇಲ ಮಕ್ಕಳಾಗಿರುವ ಅಬೀಯ ಮತ್ತು ಯೋವೇಲರು ಬೇರ್ಷೆಬದಲ್ಲಿರುವ ಇಸ್ರಾಯೇಲ್ಯರ ಜನರ ಮೇಲೆ ನಾಯಕರಾಗಿದ್ದರು. * ಯಾಕಂದರೆ ಅಬೀಯ ಮತ್ತು ತನ್ನ ಸಹೋದರನು ಯಥಾರ್ಥವಾಗಿರದೇ ಲೋಭಿಗಳಾಗಿದ್ದರು. ಆದ್ದರಿಂದ ಜನರೆಲ್ಲರು ಸಮೂವೇಲನ ಹತ್ತಿರಕ್ಕೆ ಹೋಗಿ ನಿಮ್ಮ ಮಕ್ಕಳಿಗೆ ಬದಲಾಗಿ ನಮಗೆ ಬೇರೊಬ್ಬ ಅರಸನನ್ನು ನೇಮಿಸು ಎಂದು ಕೇಳಿಕೊಂಡರು.
  • ಅಬೀಯ ಅರಸನಾದ ದಾವೀದನ ಆಳ್ವಿಕೆಯಲ್ಲಿ ದೇವಾಲಯದಲ್ಲಿ ಸೇವೆ ಮಾಡುವ ಯಾಜಕರುಗಳಲ್ಲಿ ಒಬ್ಬರಾಗಿದ್ದರು.
  • ಅಬೀಯ ಅರಸನಾದ ಯಾರೊಬ್ಬಾಮನ ಮಕ್ಕಳಲ್ಲಿ ಒಬ್ಬನಾಗಿದ್ದನು.
  • ಬಾಬೆಲೋನಿನ ಸೆರೆಯಿಂದ ಯೆರೂಸಲೇಮಿಗೆ ಕರೆದುಕೊಂಡು ಬಂದಾಗ ಅಬೀಯ ಜೆರೂಬ್ಬಾಬೆಲ್ ಜೊತೆಯಲ್ಲಿ ಹಿಂದಿರುಗಿ ಬಂದ ಪ್ರಧಾನ ಯಾಜಕನಾಗಿದ್ದನು.

(ಅನುವಾದ ಸಲಹೆಗಳು : /ಹೆಸರುಗಳನ್ನು ಅನುವಾದ ಮಾಡಿರಿ

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H29, G7