kn_ta/intro/uw-intro/01.md

30 lines
7.2 KiB
Markdown
Raw Permalink Blame History

This file contains ambiguous Unicode characters

This file contains Unicode characters that might be confused with other characters. If you think that this is intentional, you can safely ignore this warning. Use the Escape button to reveal them.

**ನಿಬಂಧನೆಯಿಲ್ಲದ ಸತ್ಯವೇದದ ವಿಷಯವನ್ನು ಪ್ರತಿಯೊಂದು ಭಾಷೆಯಲ್ಲೂ ನಾವು ನೋಡಲು** ಅನಾವರಣಗೊಂಡ ಪದಗಳ ಯೋಜನೆ ಇರುವುದು ಯೇಸುಕ್ರಿಸ್ತನು “ಪ್ರತಿಯೊಂದು ಜನರ ಗುಂಪನ್ನು” ಆತನ ಶಿಷ್ಯರನ್ನಾಗಿ ಮಾಡುವಂತೆ ತನ್ನ ಶಿಷ್ಯರಿಗೆ ಅಪ್ಪಣೆ ಕೊಟ್ಟನು.
>" ಯೇಸು ಅವರ ಬಳಿ ಬಂದು ಅವರನ್ನು ಕುರಿತು, ಭೂಪರಲೋಕಗಳಲ್ಲಿ ಮೇಲಿನ ಸರ್ವಾಧಿಕಾರವನ್ನು ನನಗೆ ಕೊಡಲ್ಪಟ್ಟಿದೆ ಎಂದು ಹೇಳಿದನು. ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ನನ್ನ ಶಿಷ್ಯರನ್ನಾಗಿ ಮಾಡಿ. ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿ. ನಾನು ನಿಮಗೆ ಆಜ್ಞಾಪಿಸಿದ್ದೆಲ್ಲವನ್ನು ಕಾಪಾಡಿಕೊಳ್ಳುವಂತೆ ಅವರಿಗೆ ಉಪದೇಶಮಾಡಿ. ನೋಡಿರಿ, ನಾನು ಯುಗದ ಸಮಾಪ್ತಿಯವರೆಗೂ, ಎಲ್ಲಾ ದಿವಸ ನಿಮ್ಮ ಸಂಗಡ ಇರುತ್ತೇನೆ ಎಂದು ಹೇಳಿದನು'" (ಮತ್ತಾಯ 28:18-20 ULB)
ನಮಗೆ ವಾಗ್ದಾನ ಮಾಡಿದಂತೆ ಎಲ್ಲಾ ಭಾಷೆಯನ್ನು ಮಾತನಾಡುವ ಜನರು ಪರಲೋಕದಲ್ಲಿ ಇರುವರು:
>"ಇವುಗಳಾದ ಮೇಲೆ ಇಗೋ, ಯಾರಿಂದಲೂ ಎಣಿಸಲಾಗದಂತಹ ಮಹಾ ಸಮೂಹವು ಸಿಂಹಾಸನದ ಮುಂದೆ ಯಜ್ಞದ ಕುರಿಯಾದಾತನ ಮುಂದೆಯು ನಿಂತಿರುವುದನ್ನು ಕಂಡೆನು. ಅವರು ಸಕಲ ಜನಾಂಗ, ಕುಲ, ಪ್ರಜೆಗಳವರು, ಸಕಲಭಾಷೆಗಳನ್ನು ಆಡುವವರು ಆಗಿದ್ದರು." (ಪ್ರಕಟಣೆ 7:9 ULB)
ದೇವರ ವಾಕ್ಯಗಳನ್ನು ಹೃದಯದ ಭಾಷೆಯಲ್ಲಿ ಅರ್ಥಮಾಡಿಕೊಳ್ಳುವುದು ಬಹು ಮುಖ್ಯವಾದುದು .
>"ಆದ ಕಾರಣ ಸಾರಿದ ವಾರ್ತೆಯು ನಂಬಿಕೆಗೆ ಆಧಾರ, ಆ ವಾರ್ತೆಗೆ ಕ್ರಿಸ್ತನ ವಾಕ್ಯವೇ ಆಧಾರ." (ರೋ.ಪ. 10:17 ULB)
### ನಾವು ಇದನ್ನು ಹೇಗೆ ಮಾಡಬಹುದು ?
**ನಿರ್ಬಂಧವಿಲ್ಲದ ಸತ್ಯವೇದದ ವಿಷಯದ ಉದ್ದೇಶವನ್ನು ಪ್ರತಿಯೊಂದು ಭಾಷೆಯಲ್ಲಿ ನಾವು ಹೇಗೆ ನಿರ್ವಹಿಸಬಹುದು**?
* [ಅನಾವರಣಗೊಂಡ ಪದಗಳ ಜಾಲ](https://unfoldingword.bible/) ಇತರ ಸಹಮತವುಳ್ಳ ಸಂಸ್ಥೆಗಳೊಂದಿಗೆ ಪೋಷಿಸುವುದರಿಂದ .
* [ನಂಬಿಕೆಯ ಹೇಳಿಕೆ](../statement-of-faith/01.md) - ಒಂದೇ ರೀತಿಯ ವಿಶ್ವಾಸವಿರುವ ಜನರೊಂದಿಗೆ ಕೆಲಸ ಮಾಡುವುದು .
* [ಭಾಷಾಂತರದ ಮಾರ್ಗದರ್ಶನಗಳು](../translation-guidelines/01.md) - ಸಹಜ ಹಾಗೂ ಒಂದೇ ರೀತಿಯ ಭಾಷಾಂತರ ಸಿದ್ಧಾಂತಗಳನ್ನು ಬಳಸುವುದು.
* [ಮುಕ್ತ ಪರವಾನಗಿ](../open-license/01.md) - ಮುಕ್ತ ಪರವಾನಗಿಯಡಿಯಲ್ಲಿ ನಾವು ಸೃಷ್ಟಿಸುವ ಎಲ್ಲವನ್ನು ಬಿಡುಗಡೆ ಮಾಡುವುದು .
* [ಗೇಟ್ ವೇ ಭಾಷೆಗಳ ಕಾರ್ಯತಂತ್ರ](../gl-strategy/01.md) ಗೊತ್ತಿರುವ ಭಾಷೆಯಿಂದ ಭಾಷಾಂತರಿಸಲು ಸತ್ಯವೇದದ ವಿಷಯವನ್ನು ಒದಗುವಂತೆ ಮಾಡುವುದು.
### ನಾವು ಏನು ಮಾಡಬೇಕು ?
* **ವಿಷಯ** - ನಿರ್ಬಂಧವಿಲ್ಲದ ಸತ್ಯವೇದದ ವಿಷಯವನ್ನು ನಾವು ಸೃಷ್ಟಿಸಿ ಮತ್ತು ಲಭ್ಯವಿರುವುದನ್ನು ಭಾಷಾಂತರ ಮಾಡಲು ಒದಗಿಸುವುದು. ಸಂಪೂರ್ಣವಾದ ಸಂಪನ್ಮೂಲ ಮತ್ತು ಭಾಷಾಂತರಗಳ ಪಟ್ಟಿಯನ್ನು ಪಡೆಯಲು ನೋಡು See http://ufw.io/content/ ಇಲ್ಲಿ ಕೆಲವು ಮಾದರಿಯನ್ನು ನೀಡಿದೆ.
* **ಮುಕ್ತ ಸತ್ಯವೇದದ ಕತೆಗಳು** - ಕಾಲಾನುಕ್ರಮವಾದ ಚಿಕ್ಕ ಸತ್ಯವೇದದಲ್ಲಿ 50 ಮುಖ್ಯಕತೆಗಳನ್ನು ಸೇರಿಸಿ ಮಾಡಲಾಗಿದೆ. ಇದರಲ್ಲಿ ಸೃಷ್ಟಿಯಿಂದ - ಆದಿಕಾಂಡ -ಪ್ರಕಟಣೆಯ ಗ್ರಂಥದವರೆಗೂ, ಸುವಾರ್ತೆ ಸಾರಲು ಮತ್ತು ಶಿಷ್ಯತ್ವಗಳನ್ನು ಕುರಿತು ಮುದ್ರಣದಲ್ಲಿ, ಆಡಿಯೋ ಮತ್ತು ವೀಡಿಯೋಗಳಲ್ಲಿ ಅಳವಡಿಸಿದೆ. (ನೋಡಿ http://ufw.io/stories/).
* **ಸತ್ಯವೇದ** -ವು ಸ್ಪೂರ್ತಿದಾಯಕವಾಗಿ, ಸಹಜವಾಗಿ, ಸಂಪೂರ್ಣವಾಗಿ, ಅಧಿಕಾರಯುತವಾಗಿರುವ ದೇವರ ವಾಕ್ಯವನ್ನು ಮುಕ್ತಪರವಾನಗಿಯಡಿಯಲ್ಲಿ ದೊರೆಯುವಂತೆ ಮಾಡಿದುದಲ್ಲದೆ, ನಿರ್ಬಂಧವಿಲ್ಲದ ಭಾಷಾಂತರ ಮಾಡಲು, ಬಳಸಲು ಮತ್ತು ವಿತರಿಸಲು ಅವಕಾಶ ಮಾಡಿಕೊಟ್ಟಿದೆ. (ನೋಡಿ http://ufw.io/bible/).
* **ಭಾಷಾಂತರ ಟಿಪ್ಪಣಿಗಳು** - ಭಾಷಾಶಾಸ್ತ್ರ, ಸಾಂಸ್ಕೃತಿಕ ಮತ್ತು ಸತ್ಯವೇದ ಅಭ್ಯಾಸಕ್ಕೆ ಬೇಕಾದ ಸಹಾಯವನ್ನು ಭಾಷಾಂತರಗಾರರಿಗೆ ನೀಡುವಂತದ್ದು. ಇವು ಮುಕ್ತ ಬೈಬಲ್ ಕತೆಗಳಿಗೆ ಮತ್ತು ಬೈಬಲ್ ಗೆ ಇರುವಂತದ್ದು. (ನೋಡಿ http://ufw.io/tn/).
* **ಭಾಷಾಂತರ ಪ್ರಶ್ನೆಗಳು** -ಭಾಷಾಂತರಗಾರರು ಮತ್ತು ಪರಿಶೀಲನೆ ಮಾಡುವವರು ಪ್ರಶ್ನೆಕೇಳಲು ಒದಗಿಸುವ ವಾಕ್ಯಭಾಗದ ಚಿಕ್ಕಚಿಕ್ಕ ಭಾಗಗಳು. ಇವು ಅವರು ಮಾಡಿರುವ ಭಾಷಾಂತರಗಳು ಸರಿಯಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿದೆಯೇ ಎಂಬುದನ್ನು ದೃಢಪಡಿಸಲು ಸಹಾಯಮಾಡುತ್ತವೆ. ಮುಕ್ತ ಸತ್ಯವೇದದ ಕತೆಗಳು ಮತ್ತು ಸತ್ಯವೇದಗಳಿಗೆ ಲಭ್ಯವಿರುವಂತದ್ದು. (see http://ufw.io/tq/).