kn_ta/translate/grammar-connect-condition-c.../01.md

18 KiB

ಷರತ್ತುಬದ್ಧ ಸಂಬಂಧಗಳು

ಷರತ್ತುಬದ್ಧ ಸಂಪರ್ಕ ಪದಗಳು ಎರಡು ಷರತ್ತುಗಳನ್ನು ಸಂಪರ್ಕಿಸುತ್ತದೆ ಮತ್ತು ಆ ಷರತ್ತುಗಳಲ್ಲಿ ಒಂದು ಸಂಭವಿಸಿದಾಗ ಇನ್ನೊಂದು ಸಂಭವಿಸುವುದೆಂದು ಸೂಚಿಸುತ್ತದೆ. ಇಂಗ್ಲಿಷಿನಲ್ಲಿ, ಷರತ್ತುಬದ್ಧ ಷರತ್ತುಗಳನ್ನು ಸಂಪರ್ಕಿಸಲು ಅತ್ಯಂತ ಸಾಮಾನ್ಯ ಮಾರ್ಗವೆಂದರೆ ಈ ಪದಗಳ ಬಳಕೆ "ಒಂದು ವೇಳೆ … ನಂತರ." ಆದಾಗ್ಯೂ, "ನಂತರ" ಎಂಬ ಪದವನ್ನು ಆಗಾಗ್ಗೆ ಹೇಳಲಾಗುವುದಿಲ್ಲ.

ವಾಸ್ತವಕ್ಕೆ ವಿರುದ್ಧವಾದ ಷರತ್ತುಗಳು

ವಿವರಣೆ

ವಾಸ್ತವಕ್ಕೆ ವಿರುದ್ಧವಾದ ಸ್ಥಿತಿಯು ಕಾಲ್ಪನಿಕವೆಂದು ತೋರುವ ಷರತ್ತಾಗಿದೆ, ಆದರೆ ಅದು ನಿಜವಲ್ಲ ಎಂದು ಭಾಷಣಕಾರನಿಗೆ ಈಗಾಗಲೇ ಖಚಿತವಾಗಿರುತ್ತದೆ.

ಕಾರಣ ಇದು ಅನುವಾದ ಸಮಸ್ಯೆ

ಸಾಮಾನ್ಯವಾಗಿ ವ್ಯತಿರಿಕ್ತ-ವಾಸ್ತವ ಸ್ಥಿತಿಯನ್ನು ಸೂಚಿಸುವ ಯಾವುದೇ ವಿಶೇಷ ಪದಗಳಿಲ್ಲ. ಇದು ನಿಜವಾದ ಸ್ಥಿತಿಯಲ್ಲ ಎಂದು ಓದುಗರಿಗೆ ತಿಳಿದಿದೆ ಎಂದು ಬರಹಗಾರ ಊಹಿಸುತ್ತಾನೆ. ಈ ಕಾರಣಕ್ಕಾಗಿ ಅದು ನಿಜವಲ್ಲ ಎಂದು ತಿಳಿಯಲು ಸೂಚಿತ ಮಾಹಿತಿಯ ಜ್ಞಾನದ ಅಗತ್ಯವಿದೆ. ಈ ರೀತಿಯ ಸ್ಥಿತಿಯು ಅನುವಾದಕರಿಗೆ ಸಂವಹನ ನಡೆಸಲು ಕಷ್ಟಕರವಾಗಿದ್ದರೆ, ಅವರು ಈ ತಂತ್ರಗಳನ್ನು ಪರಿಗಣಿಸಬಹುದು Rhetorical Questions or Implied Information.

OBS ಮತ್ತು ಸತ್ಯವೇದದಿಂದ ಉದಾಹರಣೆಗಳು

ಆದರೆ ಬಾಳನು ದೇವರಾಗಿದ್ದರೆ, ಅವನನ್ನು ಆರಾಧಿಸಿ! (Story 19 Frame 6 OBS)

ಎಲೀಯನು ಎಲ್ಲಾ ಜನರ ಹತ್ತಿರ ಹೋಗಿ ಅವರಿಗೆ "ನೀವು ಎಷ್ಟರವರೆಗೆ ಎರಡು ಮನಸ್ಸುಳ್ಳವರಾಗಿರುವಿರಿ? ಯೆಹೋವನು ದೇವರಾಗಿದ್ದರೆ, ಆತನನ್ನೇ ಹಿಂಬಾಲಿಸಿರಿ. ಬಾಳನು ದೇವರಾಗಿದ್ದರೆ, ಅವನನ್ನೇ ಹಿಂಬಾಲಿಸಿರಿ" ಎಂದು ಹೇಳಿದನು. ಜನರು ಇದಕ್ಕೆ ಏನೂ ಉತ್ತರಕೊಡದೆ ಸುಮ್ಮನಿದ್ದರು. (1 ಅರಸು 18:21 ULT)

ಬಾಳನು ದೇವರಲ್ಲ. ಬಾಳನು ದೇವರಾಗಿರಬಹುದು ಎಂದು ಎಲೀಯನು ಸೂಚಿಸುತ್ತಿಲ್ಲ, ಮತ್ತು ಜನರು ಬಾಳನನ್ನು ಅನುಸರಿಸುವುದನ್ನು ಅವನು ಬಯಸುವುದಿಲ್ಲ. ಆದರೆ ಎಲೀಯನು ಅವರು ಮಾಡುತ್ತಿರುವುದು ತಪ್ಪು ಎಂದು ತೋರಿಸಲು ಷರತ್ತುಬದ್ಧ ಹೇಳಿಕೆಯನ್ನು ಬಳಸಿದನು. ಮೇಲಿನ ಉದಾಹರಣೆಯಲ್ಲಿ, ಒಂದೇ ನಿರ್ಮಾಣವನ್ನು ಹೊಂದಿರುವ ಎರಡು ಪರಿಸ್ಥಿತಿಗಳನ್ನು ನಾವು ನೋಡುತ್ತೇವೆ. ಮೊದಲನೆಯದು, "ಯೆಹೋವನು ದೇವರಾಗಿದ್ದರೆ", ಇದು ವಾಸ್ತವಿಕ ಸ್ಥಿತಿಯಾಗಿದೆ ಏಕೆಂದರೆ ಅದು ನಿಜ ಎಂದು ಎಲೀಯನಿಗೆ ಖಚಿತವಾಗಿದೆ. ಎರಡನೆಯದು, "ಬಾಳನು ದೇವರಾಗಿದ್ದರೆ", ಇದು ವಾಸ್ತವಕ್ಕೆ ವಿರುದ್ಧವಾದ ಸ್ಥಿತಿಯಾಗಿದೆ ಏಕೆಂದರೆ ಅದು ನಿಜವಲ್ಲ ಎಂದು ಎಲೀಯನಿಗೆ ಖಚಿತವಾಗಿದೆ. ಇವೆರಡನ್ನೂ ನಿಮ್ಮ ಭಾಷೆಯಲ್ಲಿ ಜನರು ಒಂದೇ ರೀತಿಯಲ್ಲಿ ಹೇಳುತ್ತಾರೆಯೇ ಅಥವಾ ಅವುಗಳನ್ನು ವಿಭಿನ್ನ ರೀತಿಯಲ್ಲಿ ಹೇಳುತ್ತಾರೆಯೇ ಎಂಬುದನ್ನು ನೀವು ಪರಿಗಣಿಸಬೇಕಾಗುತ್ತದೆ.

ಆಕೆಯು ಅವನಿಗೆ "ಯೆಹೋವನು ನಮ್ಮನ್ನು ಕೊಲ್ಲಬೇಕೆಂದಿದ್ದರೆ, ಆತನು ನಮ್ಮ ಕೈಯಿಂದ ಯಜ್ಞವನ್ನೂ ನೈವೇದ್ಯವನ್ನೂ ಸ್ವೀಕರಿಸುತ್ತಿದ್ದಿಲ್ಲ; ಈಗ ಇವುಗಳನ್ನೆಲ್ಲಾ ನಮಗೆ ತೋರಿಸುತ್ತಿದ್ದಿಲ್ಲ, ಹೇಳುತ್ತಿದ್ದಿಲ್ಲ ಅಂದಳು.” (ನ್ಯಾಯಸ್ಥಾಪಕರು 13:23 ULT)

ಮಾನೋಹನ ಹೆಂಡತಿ ತನ್ನ ಷರತ್ತುಬದ್ಧ ಹೇಳಿಕೆಯ ಎರಡನೇ ಭಾಗವು ನಿಜವಲ್ಲ ಎಂದು ಭಾವಿಸುತ್ತಾಳೆ, ಆದ್ದರಿಂದ ಮೊದಲ ಭಾಗವೂ ನಿಜವಲ್ಲ. ದೇವರು ಅವರ ಯಜ್ಞವನ್ನೂ ನೈವೇದ್ಯವನ್ನೂ ಸ್ವೀಕರಿಸಿದನು; ಆದ್ದರಿಂದ, ಅವರನ್ನು ಕೊಲ್ಲಲು ಅವನು ಬಯಸುವುದಿಲ್ಲ.

“ನಾವು ಐಗುಪ್ತದೇಶದಲ್ಲಿದ್ದಾಗ ಯೆಹೋವನ ಕೈಯಿಂದ ಸತ್ತಿದ್ದರೆ ಎಷ್ಟೋ ಮೇಲಾಗಿತ್ತು; ಆಗ ಮಾಂಸಪಾತ್ರೆಗಳ ಬಳಿಯಲ್ಲಿ ಕೂತು ಹೊಟ್ಟೇತುಂಬ ಊಟಮಾಡುತ್ತಿದ್ದೆವಲ್ಲಾ ಎಂದು ಹೇಳಿದರು.” (ವಿಮೋಚನಕಾಂಡ 16b:3 ULT)

ಇಲ್ಲಿ ಮಾತನಾಡುವ ಜನರು ಐಗುಪ್ತದೇಶದಲ್ಲಿ ಸಾಯಲಿಲ್ಲ, ಆದ್ದರಿಂದ ಇದು ಒಂದು ಆಶಯವನ್ನು ವ್ಯಕ್ತಪಡಿಸಲು ಬಳಸಲಾಗುವ ವಾಸ್ತವಕ್ಕೆ ವಿರುದ್ಧವಾದ ಸ್ಥಿತಿಯಾಗಿದೆ.

“ಅಯ್ಯೋ ಖೊರಾಜಿನೇ! ಅಯ್ಯೋ ಬೇತ್ಸಾಯಿದವೇ! ನಿಮ್ಮಲ್ಲಿ ನಡೆದ ಮಹತ್ಕಾರ್ಯಗಳು ತೂರ್ ಮತ್ತು ಸೀದೋನ್ ಪಟ್ಟಣಗಳಲ್ಲಿ ನಡೆದಿದ್ದರೆ ಅಲ್ಲಿಯವರು ಆಗಲೇ ಗೋಣೀತಟ್ಟು ಹೊದ್ದುಕೊಂಡು ಬೂದಿಯಲ್ಲಿ ಕೂತುಕೊಂಡು ದೇವರ ಕಡೆಗೆ ತಿರುಗಿಕೊಳ್ಳುತ್ತಿದ್ದರು."(ಮತ್ತಾಯ 11:21 ULT)

ಇಂಗ್ಲಿಷ್ ಭಾಷೆಯನ್ನು ಓದುಗನಿಗೆ ಈ ಕೊನೆಯ ಎರಡು ಉದಾಹರಣೆಗಳು ವ್ಯತಿರಿಕ್ತ-ವಾಸ್ತವಾಂಶದ ಪರಿಸ್ಥಿತಿಗಳು ಎಂದು ತಿಳಿಯುತ್ತದೆ ಏಕೆಂದರೆ ಮೊದಲ ಭಾಗದಲ್ಲಿ ಬಳಸಲಾದ ಭೂತಕಾಲದ ಕ್ರಿಯಾಪದಗಳು (ಅವು ಸಂಭವಿಸಬಹುದಾದ ವಿಷಯಗಳಲ್ಲ) ಎಂಬುದಾಗಿದೆ ಮತ್ತು ಕೊನೆಯ ಉದಾಹರಣೆಯು ಸಹ ಎರಡನೇ ಭಾಗವನ್ನು ಹೊಂದಿರುತ್ತದೆ "ತಿರುಗಿಕೊಳ್ಳುತ್ತಿದ್ದರು" ಎಂಬುದಾಗಿ. ಈ ಮಾತುಗಳು ಸಂಭವಿಸದ ಸಂಗತಿಯನ್ನು ಸಂಕೇತಿಸುವವು.

ಭಾಷಾಂತರದ ತಂತ್ರಗಳು

ನಿಮ್ಮ ಭಾಷೆಯಲ್ಲಿ ವ್ಯತಿರಿಕ್ತ-ವಾಸ್ತವ ಪರಿಸ್ಥಿತಿಗಳು ಸ್ಪಷ್ಟವಾಗಿದ್ದರೆ, ಅವುಗಳನ್ನು ಹಾಗೆಯೇ ಬಳಸಿ.

(1) ಈ ಷರತ್ತು ಏನಂದರೆ ಭಾಷಣಕಾರನು ಸುಳ್ಳಾದ ವಿಷಯ ನಂಬುತ್ತಾನೆ ಎಂದು ಓದುಗರು ಭಾವಿಸಲು ಕಾರಣವಾದರೆ, ಆ ಸ್ಥಿತಿಯನ್ನು ಇತರರು ನಂಬುವ ವಿಷಯವಾಗಿ ಮರುತಿಳಿಸಲಿ.

(2) ಈ ಷರತ್ತು ಏನಂದರೆ ಭಾಷಣಕಾರನು ಸೂಚಿಸುತ್ತಿರುವ ಮೊದಲ ಭಾಗವು ನಿಜವೆಂದು ಓದುಗರು ಭಾವಿಸಲು ಕಾರಣವಾದರೆ, ಅದು ನಿಜವಲ್ಲ ಎಂದು ಹೇಳಿಕೆಯಾಗಿ ಮರುತಿಳಿಸಲಿ.

(3) ಈ ಷರತ್ತು ಏನಂದರೆ ಸಂಭವಿಸದ ಏನನ್ನಾದರೂ ವ್ಯಕ್ತಪಡಿಸುತ್ತಿರುವುದನ್ನು ಭಾಷಣಕಾರನು ಸಂಭವಿಸಬೇಕೆಂದು ಬಯಸಿದರೆ, ಅದನ್ನು ಆಸೆಯಾಗಿ ಮರುತಿಳಿಸಲಿ.

(4) ಈ ಷರತ್ತು ಏನಂದರೆ ಸಂಭವಿಸದ ಏನನ್ನಾದರೂ ವ್ಯಕ್ತಪಡಿಸುತ್ತಿದ್ದರೆ, ಅದನ್ನು ನಕಾರಾತ್ಮಕ ಹೇಳಿಕೆ ಎಂದು ಮರುತಿಳಿಸಲಿ.

(5) ಆಗಾಗ್ಗೆ ವಾಸ್ತವಿಕ ಮತ್ತು ವ್ಯತಿರಿಕ್ತ-ವಾಸ್ತವ ಪರಿಸ್ಥಿತಿಗಳನ್ನು ನಡವಳಿಕೆಯಲ್ಲಿ ಬದಲಾವಣೆಗಾಗಿ ತರ್ಕೀಕೃತ ವಾದಗಳನ್ನು ಮಾಡಲು ಬಳಸಲಾಗುತ್ತದೆ. ಅನುವಾದಕರು ಅವುಗಳನ್ನು ಅನುವಾದಿಸಲು ಉತ್ತಮ ಮಾರ್ಗವನ್ನು ತಿಳಿಯಲು ಹೆಣಗಾಡುತ್ತಿದ್ದರೆ, ಇದನ್ನು ಅವರ ಭಾಷಾ ಸಮುದಾಯದಲ್ಲಿ ಹೇಗೆ ಮಾಡಲಾಗುತ್ತದೆ ಎಂಬುದನ್ನು ಚರ್ಚಿಸಲು ಸಹಾಯಕವಾಗಬಹುದು. ಯಾರಾದರೂ ತಮ್ಮ ನಡವಳಿಕೆಯನ್ನು ಬದಲಾಯಿಸಲು ಜನರನ್ನು ಮನವೊಲಿಸಲು ಪ್ರಯತ್ನಿಸುತ್ತಿದ್ದರೆ, ಅವರು ಅದನ್ನು ಹೇಗೆ ಮಾಡುತ್ತಾರೆ? ಈ ಪರಿಸ್ಥಿತಿಗಳನ್ನು ಭಾಷಾಂತರಿಸುವಾಗ ಇದೇ ರೀತಿಯ ತಂತ್ರಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಾಗಬಹುದು.

ಅನ್ವಯಿಸಲಾದ ಅನುವಾದ ತಂತ್ರಗಳ ಉದಾಹರಣೆಗಳು

(1) ಈ ಷರತ್ತು ಏನಂದರೆ ಭಾಷಣಕಾರನು ಸುಳ್ಳಾದ ವಿಷಯ ನಂಬುತ್ತಾನೆ ಎಂದು ಓದುಗರು ಭಾವಿಸಲು ಕಾರಣವಾದರೆ, ಆ ಸ್ಥಿತಿಯನ್ನು ಇತರರು ನಂಬುವ ವಿಷಯವಾಗಿ ಮರುತಿಳಿಸಲಿ.

ಆದರೆ ಬಾಳನು ದೇವರಾಗಿದ್ದರೆ, ಅವನನ್ನು ಆರಾಧಿಸಿ! (Story 19 Frame 6 OBS)

ಬಾಳನು ದೇವರೆಂದು ನೀವು ನಂಬಿದರೆ, ಅವನನ್ನು ಆರಾಧಿಸಿ!

(2) ಈ ಷರತ್ತು ಏನಂದರೆ ಭಾಷಣಕಾರನು ಸೂಚಿಸುತ್ತಿರುವ ಮೊದಲ ಭಾಗವು ನಿಜವೆಂದು ಓದುಗರು ಭಾವಿಸಲು ಕಾರಣವಾದರೆ, ಅದು ನಿಜವಲ್ಲ ಎಂದು ಹೇಳಿಕೆಯಾಗಿ ಮರುತಿಳಿಸಲಿ.

ಬಾಳನು ದೇವರಲ್ಲವಾದರೆ, ನೀವು ಅವನನ್ನುಆರಾಧಿಸಬಾರದು!

ಆಕೆಯು ಅವನಿಗೆ "ಯೆಹೋವನು ನಮ್ಮನ್ನು ಕೊಲ್ಲಬೇಕೆಂದಿದ್ದರೆ, ಆತನು ನಮ್ಮ ಕೈಯಿಂದ ಯಜ್ಞವನ್ನೂ ನೈವೇದ್ಯವನ್ನೂ ಸ್ವೀಕರಿಸುತ್ತಿದ್ದಿಲ್ಲ; ಈಗ ಇವುಗಳನ್ನೆಲ್ಲಾ ನಮಗೆ ತೋರಿಸುತ್ತಿದ್ದಿಲ್ಲ, ಹೇಳುತ್ತಿದ್ದಿಲ್ಲ ಅಂದಳು.” (ನ್ಯಾಯಸ್ಥಾಪಕರು 13:23 ULT)

ಯೆಹೋವನು ನಮ್ಮನ್ನು ಕೊಲ್ಲಲು ಬಯಸುವುದಿಲ್ಲ, ಅಥವಾ ನಾವು ಅವನಿಗೆ ನೀಡಿದ ಯಜ್ಞವನ್ನೂ ನೈವೇದ್ಯವನ್ನೂ ಅವನು ಸ್ವೀಕರಿಸುತ್ತಿರಲಿಲ್ಲ."

(3) ಈ ಷರತ್ತು ಏನಂದರೆ ಸಂಭವಿಸದ ಏನನ್ನಾದರೂ ವ್ಯಕ್ತಪಡಿಸುತ್ತಿರುವುದನ್ನು ಭಾಷಣಕಾರನು ಸಂಭವಿಸಬೇಕೆಂದು ಬಯಸಿದರೆ, ಅದನ್ನು ಆಸೆಯಾಗಿ ಮರುತಿಳಿಸಲಿ.

“ನಾವು ಐಗುಪ್ತದೇಶದಲ್ಲಿದ್ದಾಗ ಯೆಹೋವನ ಕೈಯಿಂದ ಸತ್ತಿದ್ದರೆ ಎಷ್ಟೋ ಮೇಲಾಗಿತ್ತು; ಆಗ ಮಾಂಸಪಾತ್ರೆಗಳ ಬಳಿಯಲ್ಲಿ ಕೂತು ಹೊಟ್ಟೇತುಂಬ ಊಟಮಾಡುತ್ತಿದ್ದೆವಲ್ಲಾ ಎಂದು ಹೇಳಿದರು.” (ವಿಮೋಚನಕಾಂಡ 16b:3 ULT)

“ಯೆಹೋವನ ಕೈಯಿಂದ ನಾವು ಸತ್ತಿದ್ದರೆ ಎಷ್ಟೋ ಮೇಲಾಗಿತ್ತು ಐಗುಪ್ತದೇಶದಲ್ಲಿದ್ದಾಗ..."

(4) ಈ ಷರತ್ತು ಏನಂದರೆ ಸಂಭವಿಸದ ಏನನ್ನಾದರೂ ವ್ಯಕ್ತಪಡಿಸುತ್ತಿದ್ದರೆ, ಅದನ್ನು ನಕಾರಾತ್ಮಕ ಹೇಳಿಕೆ ಎಂದು ಮರುತಿಳಿಸಲಿ.

“ಅಯ್ಯೋ ಖೊರಾಜಿನೇ! ಅಯ್ಯೋ ಬೇತ್ಸಾಯಿದವೇ! ನಿಮ್ಮಲ್ಲಿ ನಡೆದ ಮಹತ್ಕಾರ್ಯಗಳು ತೂರ್ ಮತ್ತು ಸೀದೋನ್ ಪಟ್ಟಣಗಳಲ್ಲಿ ನಡೆದಿದ್ದರೆ ಅಲ್ಲಿಯವರು ಆಗಲೇ ಗೋಣೀತಟ್ಟು ಹೊದ್ದುಕೊಂಡು ಬೂದಿಯಲ್ಲಿ ಕೂತುಕೊಂಡು ದೇವರ ಕಡೆಗೆ ತಿರುಗಿಕೊಳ್ಳುತ್ತಿದ್ದರು."(ಮತ್ತಾಯ 11:21 ULT)

“ಅಯ್ಯೋ ಖೊರಾಜಿನೇ! ಅಯ್ಯೋ ಬೇತ್ಸಾಯಿದವೇ! ನಿಮ್ಮಲ್ಲಿ ನಡೆದ ಮಹತ್ಕಾರ್ಯಗಳು ತೂರ್ ಮತ್ತು ಸೀದೋನ್ ಪಟ್ಟಣಗಳಲ್ಲಿ ನಡೆಯಲ್ಲಿಲ್ಲ. ಆದರೆ ಅಲ್ಲಿ ನಡೆದಿದ್ದರೆ ಅಲ್ಲಿಯವರು ಆಗಲೇ ಗೋಣೀತಟ್ಟು ಹೊದ್ದುಕೊಂಡು ಬೂದಿಯಲ್ಲಿ ಕೂತುಕೊಂಡು ದೇವರ ಕಡೆಗೆ ತಿರುಗಿಕೊಳ್ಳುತ್ತಿದ್ದರು."

(5) ಆಗಾಗ್ಗೆ ವಾಸ್ತವಿಕ ಮತ್ತು ವ್ಯತಿರಿಕ್ತ-ವಾಸ್ತವ ಪರಿಸ್ಥಿತಿಗಳನ್ನು ನಡವಳಿಕೆಯಲ್ಲಿ ಬದಲಾವಣೆಗಾಗಿ ತರ್ಕೀಕೃತ ವಾದಗಳನ್ನು ಮಾಡಲು ಬಳಸಲಾಗುತ್ತದೆ. ಅನುವಾದಕರು ಅವುಗಳನ್ನು ಅನುವಾದಿಸಲು ಉತ್ತಮ ಮಾರ್ಗವನ್ನು ತಿಳಿಯಲು ಹೆಣಗಾಡುತ್ತಿದ್ದರೆ, ಇದನ್ನು ಅವರ ಭಾಷಾ ಸಮುದಾಯದಲ್ಲಿ ಹೇಗೆ ಮಾಡಲಾಗುತ್ತದೆ ಎಂಬುದನ್ನು ಚರ್ಚಿಸಲು ಸಹಾಯಕವಾಗಬಹುದು. ಯಾರಾದರೂ ತಮ್ಮ ನಡವಳಿಕೆಯನ್ನು ಬದಲಾಯಿಸಲು ಜನರನ್ನು ಮನವೊಲಿಸಲು ಪ್ರಯತ್ನಿಸುತ್ತಿದ್ದರೆ, ಅವರು ಅದನ್ನು ಹೇಗೆ ಮಾಡುತ್ತಾರೆ? ಈ ಪರಿಸ್ಥಿತಿಗಳನ್ನು ಭಾಷಾಂತರಿಸುವಾಗ ಇದೇ ರೀತಿಯ ತಂತ್ರಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಾಗಬಹುದು.

ಆದರೆ ಬಾಳನು ದೇವರಾಗಿದ್ದರೆ, ಅವನನ್ನು ಆರಾಧಿಸಿ! (Story 19 Frame 6 OBS)

ಬಾಳನು ನಿಜವಾಗಿಯೂ ದೇವರಾ? ನೀವು ಅವನನ್ನು ಆರಾಧಿಸಬೇಕೆ?

“ಅಯ್ಯೋ ಖೊರಾಜಿನೇ! ಅಯ್ಯೋ ಬೇತ್ಸಾಯಿದವೇ! ನಿಮ್ಮಲ್ಲಿ ನಡೆದ ಮಹತ್ಕಾರ್ಯಗಳು ತೂರ್ ಮತ್ತು ಸೀದೋನ್ ಪಟ್ಟಣಗಳಲ್ಲಿ ನಡೆದಿದ್ದರೆ ಅಲ್ಲಿಯವರು ಆಗಲೇ ಗೋಣೀತಟ್ಟು ಹೊದ್ದುಕೊಂಡು ಬೂದಿಯಲ್ಲಿ ಕೂತುಕೊಂಡು ದೇವರ ಕಡೆಗೆ ತಿರುಗಿಕೊಳ್ಳುತ್ತಿದ್ದರು."(ಮತ್ತಾಯ 11:21 ULT)

“ಅಯ್ಯೋ ಖೊರಾಜಿನೇ! ಅಯ್ಯೋ ಬೇತ್ಸಾಯಿದವೇ! ನೀವು ತೂರ್ ಮತ್ತು ಸೀದೋನ್ ಪಟ್ಟಣದವರಿಗಿಂತ ಉತ್ತಮರು ಎಂದು ಭಾವಿಸುತ್ತೀರಿ, ಆದರೆ ನೀವಲ್ಲ! ನಿಮ್ಮಲ್ಲಿ ನಡೆದ ಮಹತ್ಕಾರ್ಯಗಳು ಅಲ್ಲಿ ನಡೆದಿದ್ದರೆ, ಬಹಳ ಹಿಂದೆಯೇ ಅವರು ದೇವರ ಕಡೆಗೆ ತಿರುಗಿಕೊಳ್ಳುತ್ತಿದ್ದರು! ನೀವು ಅವರಂತೆ ಇರಬೇಕು!"