kn_ta/translate/writing-endofstory/01.md

8.4 KiB

ವಿವರಣೆ

ಕಥೆಯು ಮುಕ್ತಾಯವಾಗುವಾಗ ವಿವಿಧ ರೀತಿಯ ಮಾಹಿತಿಗಳನ್ನು ಕೊಡಬಹುದು. ಕೆಲವೊಮ್ಮೆ ಈ ಮಾಹಿತಿಗಳು ಕಥೆಯ ಹಿನ್ನೆಲೆಯಾಗಿಯೂ ಬರಬಹುದು. ಕೆಲವೊಮ್ಮೆ ಈ ಹಿನ್ನೆಲೆಯಾಗಿ ಬರುವ ಮಾಹಿತಿಗಳು ಮುಖ್ಯಕಥೆಯಲ್ಲಿ ಇರುವ ಪ್ರಕ್ರಿಯೆಯಾಗಿ ಬರುವ ವಿಷಯದಿಂದ ಭಿನ್ನವಾಗಿರುತ್ತದೆ. ಸತ್ಯವೇದದಲ್ಲಿ ಅನೇಕ ಪುಸ್ತಕಗಳಿವೆ ಒಂದೊಂದು ಪುಸ್ತಕವು ಅನೇಕ ಚಿಕ್ಕ ಕಥೆಗಳಿಂದ ಕೂಡಿರುತ್ತದೆ. ಉದಾಹರಣೆಗೆ ಲೂಕನು ಬರೆದ ಸುವಾರ್ತೆ ಒಂದು ಪುಸ್ತಕ. ಇದರಲ್ಲಿ ಯೇಸುಕ್ರಿಸ್ತನ ಜನನದ ಮಾಹಿತಿ ಒಂದು ಚಿಕ್ಕ ಕಥೆ. ಹೀಗೆ ಬರುವ ಎಲ್ಲಾ ಕಥೆಗಳು ಚಿಕ್ಕದಾಗಿದ್ದರೂ ದೊಡ್ಡದಾಗಿದ್ದರೂಅದಕ್ಕೆ ಅವುಗಳದೇ ಆದ ಹಿನ್ನೆಲೆ ಮಾಹಿತಿ ಇರುತ್ತದೆ.

ಕಥೆಯ ಮುಕ್ತಾಯಕ್ಕೆ ಬೇಕಾದ ಮಾಹಿತಿಯ ವಿವಿಧ ಉದ್ದೇಶಗಳು

  • ಕಥೆಯನ್ನು ಸಂಕ್ಷಿಪ್ತಗೊಳಿಸಲು.
  • ಕಥೆಯಲ್ಲಿ ನಡೆದ ಘಟನೆಗಳ ಬಗ್ಗೆ ಸ್ಪಷ್ಟೀಕರಣ ನೀಡುವುದು.
  • ದೊಡ್ಡ ಕಥೆಯೊಂದಿಗೆ (ಮುಖ್ಯ ಕಥೆಯೊಂದಿಗೆ) ಚಿಕ್ಕ ಕಥೆಯನ್ನು ಸೇರಿಸುವುದು.
  • ಮುಖ್ಯ ಕಥೆಕೊನೆಗೊಳ್ಳುವಾಗ ನಿರ್ದಿಷ್ಟ ಪಾತ್ರ ಏನಾಗುತ್ತದೆ ಎಂಬುದನ್ನು ಅರ್ಥವಾಗುವಂತೆ ಹೇಳುವುದು.
  • ಮುಖ್ಯಕಥೆ ಕೊನೆಗೊಳ್ಳುವಾಗ ಪ್ರಾರಂಭವಾದ ಪ್ರಕ್ರಿಯೆ ಮುಂದುವರೆಯಬೇಕು.
  • ಕಥೆಯಲ್ಲಿ ನಡೆದ ಮುಖ್ಯಘಟನೆಗಳು ಫಲಿತಾಂಶದಿಂದ ಏನು ನಡೆಯುತ್ತದೆ ಎಂಬುದನ್ನು ಹೇಳುವುದು.

ಕಾರಣ ಇದೊಂದು ಭಾಷಾಂತರ ಸಮಸ್ಯೆ

  • ಇಂತಹ ಮಾಹಿತಿಗಳನ್ನು ವಿವಿಧ ರೀತಿಯಲ್ಲಿ ವಿವಿಧ ಭಾಷೆಯಲ್ಲಿ ತಿಳಿಸುತ್ತಾರೆ. ಭಾಷಾಂತರಕಾರರು ಈ ರೀತಿ ಮಾಡದಿದ್ದರೆ ಅವರ ಭಾಷೆಯ ಓದುಗರು ಅದನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಈ ಕೆಳಗಿನ ಕಾರಣಗಳಿಂದ ಸಾಧ್ಯವಾಗುವುದಿಲ್ಲ:.
  • ಈ ಮಾಹಿತಿಯು ಕಥೆಯನ್ನು ಮುಕ್ತಾಯಗೊಳಿಸುತ್ತದೆ ಎಂದು.
  • ಈ ಮಾಹಿತಿಯ ಉದ್ದೇಶ ಏನೆಂದು ತಿಳಿಯುವುದಿಲ್ಲ.
  • ಈ ಮಾಹಿತಿಗಳು ಕಥೆಯ ಮುಕ್ತಾಯಕ್ಕೆ ಹೇಗೆ ಸಹಾಯವಾಗುತ್ತದೆ? ಎಂದು.

ಭಾಷಾಂತರದ ತತ್ವಗಳು.

  • ಕಥೆಯ ಮುಕ್ತಾಯದಲ್ಲಿ ನಿರ್ದಿಷ್ಟ ಮಾಹಿತಿಯನ್ನು ಸರಿಯಾಗಿ ಭಾಷಾಂತರಿಸುವಾಗ ಆ ಭಾಷೆಯಲ್ಲಿ ತಿಳಿಸಬೇಕಾದ ಮಾಹಿತಿಯನ್ನು ಪರಿಣಾಮಕಾರಿಯಾಗಿ ಬಳಸಬೇಕು.
  • ಜನರು ಇದನ್ನು ಕಥೆಯ ಮುಕ್ತಾಯದಲ್ಲಿರುವ ಮಾಹಿತಿ ಹೇಗೆ ಕಥೆಯೊಂದಿಗೆ ಪರಿಣಾಮಕಾರಿಯಾಗಿ ಬಂದಿದೆ ಎಂದು ತಿಳಿದುಕೊಳ್ಳಲು ಸಹಾಯವಾಗುವಂತೆ ಭಾಷಾಂತರಿಸಬೇಕು.
  • ಭಾಷಾಂತರ ಮಾಡುವಾಗ ಕಥೆ ಎಲ್ಲಿ ಮುಕ್ತಾಯವಾಗುತ್ತದೆ ಮತ್ತು ಮುಂದಿನ ಕಥೆ ಎಲ್ಲಿ ಪ್ರಾರಂಭವಾಗುತ್ತದೆ ಎಂಬುದನ್ನು ಗಮನವಿಟ್ಟು ಭಾಷಾಂತರಿಸಲು ಆದಷ್ಟು ಪ್ರಯತ್ನಿಸಬೇಕು

ಸತ್ಯವೇದದಲ್ಲಿನ ಕೆಲವು ಉದಾಹರಣೆಗಳು

  1. ಕಥೆಯನ್ನು ಸಂಕ್ಷಿಪ್ತಗೊಳಿಸುವುದು.

ಈಜಬಲ್ಲವನು ಹಡಗಿನಿಂದ ದುಮುಕಿ ತೀರಕ್ಕೆ ಹೋಗಬೇಕೆಂದು, ಕೆಲವರು ಹಲಗೆಗಳ ಮೇಲೆ,ಕೆಲವರು ಹಡಗಿನ ತುಂಡಿನ ಮೇಲೆ ಹೋಗಬೇಕೆಂದು ಅಪ್ಪಣೆಕೊಟ್ಟನು. ಈ ರೀತಿ ಎಲ್ಲರು ಸುರಕ್ಷಿತವಾಗಿ ತೀರಕ್ಕೆ ಬಂದು ಸೇರಿದರು./u>(ಆ.ಕೃ 27:44 ULB)

  1. ಈ ಕಥೆಯಲ್ಲಿ ಏನು ನಡೆಯಿತು ಎಂಬುದರ ಬಗ್ಗೆ ಸ್ಪಷ್ಟೀಕರಣ ನೀಡಬಹುದು.

ಇದಲ್ಲದೆ ಮಾಟಮಂತ್ರಗಳನ್ನು ನಡೆಸಿದವರಲ್ಲಿ ಅನೇಕರು ತಮ್ಮ ಪುಸ್ತಕಗಳನ್ನು ಕೂಡಿಸಿ ತಂದು ಎಲ್ಲರ ಮುಂದೆ ಸುಟ್ಟುಬಿಟ್ಟರು. ಅವುಗಳ ಕ್ರಯವನ್ನು ಲೆಕ್ಕ ಮಾಡಿ ಇಪ್ಪತ್ತು ಸಾವಿರ ಬೆಳ್ಳಿನಾಣ್ಯ ಆಯಿತೆಂದು ತಿಳಿದುಕೊಂಡರು ಈ ರೀತಿಯಾಗಿ ಕರ್ತನ ವಾಕ್ಯವು ಬಹಳವಾಗಿ ಹೆಚ್ಚುತ್ತಾ ಪ್ರಬಲವಾಯಿತು.(ಆ.ಕೃ 19:19-20 ULB)

  1. ಮುಖ್ಯ ಕಥೆಕೊನೆಗೊಳ್ಳುವಾಗ ನಿರ್ದಿಷ್ಟ ಪಾತ್ರ ಏನಾಗುತ್ತದೆ ಎಂಬುದನ್ನು ಅರ್ಥವಾಗುವಂತೆ ಹೇಳುವುದು.

ಮರಿಯಳು ಹೇಳಿದ್ದೇನೆಂದರೆ " ನನ್ನ ಪ್ರಾಣವು ಕರ್ತನನ್ನು ಕೊಂಡಾಡುತ್ತದೆ ನನ್ನ ಆತ್ಮವು ನನ್ನ ರಕ್ಷಕನಾದ ದೇವರ ವಿಷಯದಲ್ಲಿ ಉಲ್ಲಾಸಗೊಂಡಿದೆ ಮರಿಯಳು ಎಲಜಿಬೇತಳ ಮನೆಯಲ್ಲಿ ಮೂರು ತಿಂಗಳು ತಂಗಿದ್ದು ನಂತರ ಮನೆಗೆ ಹಿಂತಿರುಗಿದಳು.(ಲೂಕ 1:46-47, 56 ULB).

  1. ಕಥೆ ಮುಕ್ತಾಯವಾದರೂ ನಡೆಯುತ್ತಿದ್ದ ಪ್ರಕ್ರಿಯೆಯು ಮುಂದುವರೆಯುತ್ತಿರುವ ಬಗ್ಗೆ ಹೇಳಬೇಕಿದೆ.

ಅದನ್ನು ಹೇಳಿದವರೆಲ್ಲರೂ ತಮಗೆ ಕುರುಬರು ಹೇಳಿದ ಮಾತುಗಳಿಗೆ ಆಶ್ವರ್ಯಪಟ್ಟರು.ಆದರೆ ಮರಿಯಳು ಆ ಮಾತುಗಳನ್ನೆಲ್ಲಾ ತನ್ನ ಮನಸ್ಸಿನಲ್ಲಿ ಇಟ್ಟುಕೊಂಡು ಯೋಚಿಸುತ್ತಿದ್ದಳು.(ಲೂಕ 2:18-19 ULB)

  1. ಕಥೆಯಲ್ಲಿ ನಡೆದ ಮುಖ್ಯಘಟನೆಗಳು ಫಲಿತಾಂಶದಿಂದ ಏನು ನಡೆಯುತ್ತದೆ ಎಂಬುದನ್ನು ಹೇಳುವುದು.

ಅಯ್ಯೋ ಧರ್ಮೋಪದೇಶಕರೇ, ಜ್ಞಾನಕ್ಕೆ ಸಾಧನವಾದ ಬೀಗದ ಕೈಯನ್ನು ತೆಗೆದು ಬಿಟ್ಟಿರಿ. ನೀವು ಒಳಗೆ ಹೋಗಲಿಲ್ಲ, ಒಳಗೆ ಹೋಗುವವರಿಗೂ ಅಡ್ಡಿಮಾಡಿದಿರಿ ಬಳಿಕ ಆತನು ಅಲ್ಲಿಂದ ಹೊರಗೆ ಬಂದಾಗ ಶಾಸ್ತ್ರಿಗಳು, ಪರಿಸಾಯರು ಆತನನ್ನು ಕಠಿಣವಾಗಿ ವಿರೋಧಿಸಿ ಅನೇಕ ವಿಷಯಗಳನ್ನು ಕುರಿತು ಅಡ್ಡಾದಿಡ್ಡಿ ಪ್ರಶ್ನೆಗಳನ್ನು ಕೇಳುತ್ತಾ ಆತನು ಆಡುವ ಬಾಯಿಮಾತಿನಲ್ಲಿ ತಪ್ಪು ಕಂಡುಹಿಡಿಯಬೇಕೆಂದು ಹೊಂಚುಹಾಕುತ್ತಿದ್ದರು.(Luke 11:52-54 ULB)