kn_ta/translate/writing-connectingwords/01.md

19 KiB
Raw Permalink Blame History

ವಿವರಣೆಗಳು.

** ಸಂಪರ್ಕ ಕಲ್ಪಿಸುವ ಪದಗಳು** ಅವುಗಳನ್ನು conjunctions. ಸಂಯೋಗ ಕಲ್ಪಿಸುವ ಅವ್ಯಯ.

ಈ ಪುಟದಲ್ಲಿ ಸಂಯೋಗ ಕಲ್ಪಿಸುವ / ಸಂಪರ್ಕ ಕಲ್ಪಿಸುವ ಪದಗಳು ಎರಡು ವಾಕ್ಯಗಳನ್ನು ಮತ್ತು ಅನೇಕ ವಾಕ್ಯಗಳನ್ನು ಸೇರಿಸಿ ವಾಕ್ಯಮಾಡುವಂತಾದ್ದು ಇಂತಹ ಸಂಪರ್ಕ ಕಲ್ಪಿಸುವ ಕೆಲವು ಪದಗಳನ್ನು ಇಲ್ಲಿ ಕೊಟ್ಟಿದೆ : ಮತ್ತು, ಆದರೆ, ಇದಕ್ಕಾಗಿ / ಅದಕ್ಕಾಗಿ, ಆದುದರಿಂದ, ಈಗ, ರೇ, ಚೆನ್ನಾಗಿದ್ದರೆ, ಅಲ್ಲಿಂದ, ಆಗ, ಯಾವಾಗ, ಇದು ನಡೆಯುತ್ತಿರುವಾಗ, ಏಕೆಂದರೆ, ಎಲ್ಲಿದ್ದರೂ, ಇದುವರೆಗೂ, ಇಲ್ಲದಿದ್ದರೆ.

  • ಮಳೆ ಬರುತ್ತಿತ್ತು,* ಆದುದರಿಂದನಾನು ಛತ್ರಿಯನ್ನು ತೆರೆದೆನು.
  • ಮಳೆ ಬರುತ್ತಿತ್ತು,* ಆದರೆ ನನ್ನ ಬಳಿ ಛತ್ರಿ ಇರಲಿಲ್ಲ ಇದರಿಂದನಾನು ನೆನೆದು ಒದ್ದೆಯಾದೆ ಪಠ್ಯದ ಆಧಾರದ ಮೇಲೆ ಓದುಗರು ವಾಕ್ಯಗಳ ನಡುವೆ ಇರುವ ಸಂಪರ್ಕವನ್ನು ಅರ್ಥಮಾಡಿಕೊಳ್ಳಲು ಸಾಧ್ಯ ಎಂಬ ನಿರೀಕ್ಷೆಯಿಂದ ಕೆಲವೊಮ್ಮೆ ಇಂತಹ ಸಂಪರ್ಕ ಕಲ್ಪಿಸುವ ಪದಗಳನ್ನು ಬಳಸುವುದಿಲ್ಲ
  • ಮಳೆ ಬರುತ್ತಿತ್ತು ನನ್ನ ಬಳಿ ಛತ್ರಿ ಇರಲಿಲ್ಲ. ನಾನು ನೆನೆದು ಒದ್ದಯಾದೆ

ಕಾರಣ ಇದೊಂದು ಭಾಷಾಂತರ ವಿಷಯ.

  • ಭಾಷಾಂತರಗಾರರು ಸತ್ಯವೇದದಲ್ಲಿರುವ ವಾಕ್ಯಗಳನ್ನು ಸಂಪರ್ಕ ಕಲ್ಪಿಸುವ ಪದಗಳು ಮತ್ತು ವಾಕ್ಯಗಳು ಮತ್ತು ವಿಷಯಗಳ ನಡುವೆ ಇರುವ ಸಂಬಂಧಗಳನ್ನು ಮೊದಲು ಅರ್ಥಮಾಡಿಕೊಳ್ಳಬೇಕು,.
  • ಪ್ರತಿಯೊಂದು ಭಾಷೆಯಲ್ಲಿ ಅದರದೇ ಆದ ಆಲೋಚನೆಗಳು / ವಿಷಯಗಳ ನಡುವೆ ಹೇಗೆ ಸಂಬಂಧ ಕಲ್ಪಿಸಬಹುದು ಎಂಬ ಶೈಲಿ ಇರುತ್ತದೆ.
  • ಭಾಷಾಂತರಗಾರರು ಭಾಷಾಂತರ ಭಾಷೆಯಲ್ಲಿ ತಾವು ಭಾಷಾಂತರ ಮಾಡುತ್ತಿರುವ ಭಾಷೆಯ ಓದುಗರು ತಮ್ಮ ಭಾಷೆಯಲ್ಲಿನ ವಿಷಯವನ್ನು / ಆಲೋಚನೆಯನ್ನು ಅರ್ಥಮಾಡಿಕೊಳ್ಳಲು ಅವುಗಳ ನಡುವಿನ ಸಂಬಂಧವನ್ನು ಅರ್ಥಮಾಡಿಕೊಳ್ಳುವಂತೆ, ಸಹಜವಾಗಿ ಇರುವಂತೆ ಸಹಾಯಮಾಡಲು ತಿಳಿದಿರಬೇಕು.

ಭಾಷಾಂತರ ತತ್ವಗಳು.

  • ಮೂಲ ವಾಕ್ಯಭಾಗಗಳನ್ನು ಅರ್ಥಮಾಡಿಕೊಂಡ ಓದುಗರಂತೆ ಭಾಷಾಂತರವಾದ ಭಾಷೆಯ ಓದುಗರು ವಿಷಯಗಳನ್ನು, ವಿಷಯಗಳ ನಡುವಿನ ಸಂಬಂಧವನ್ನು ಅರ್ಥಮಾಡಿಕೊಳ್ಳುವಂತೆ ಭಾಷಾಂತರಗಾರರು ಭಾಷಾಂತರ ಮಾಡಬೇಕು.
  • ಸಂಪರ್ಕ ಕಲ್ಪಿಸುವ ಪದಗಳನ್ನು ಬಳಸುವುದು ಇಲ್ಲವೇ ಬಳಸದಿರುವುದು ಮುಖ್ಯವಲ್ಲ, ಆದರೆ ಓದುಗರು ವಿಷಯಗಳ ನಡುವಿನ ಸಂಬಂಧದ ಬಗ್ಗೆ ಅರ್ಥಮಾಡಿಕೊಳ್ಳುವುದು ಮುಖ್ಯ.

ಸತ್ಯವೇದದಿಂದ ಉದಾಹರಣೆಗಳು.

ನಾನು ಅನ್ಯ ಜನರಲ್ಲಿ ಪ್ರಸಿದ್ಧಿಪಡಿಸುವವನಾಗಬೇಕೆಂದು ಆತನನ್ನು ನನ್ನೊಳಗೆ ಪ್ರಕಟಿಸುವುದಕ್ಕೆ ಇಚ್ಛಿಸಿದಾಗಲೇ ನಾನು ಮನುಷ್ಯರ ಆಲೋಚನೆಯನ್ನು ವಿಚಾರಿಸದೆ ಯೇರೋಸಲಮಿಗೆ ನನಗಿಂತ ಮುಂಚೆ ಅಪೋಸ್ತಲರಾಗಿದ್ದವರ ಬಳಿಗೂ ಹೋಗದೆ ಅರಬಸ್ಥಾನಕ್ಕೆಹೋದನು ಆದರೆ ಪುನಃ ದಮಾಸ್ಕಕ್ಕೆ ಬಂದನು. ಮೂರು ವರ್ಷಗಳಾದ ಮೇಲೆ ಕೇಫನ ಪರಿಚಯ ಮಾಡಿಕೊಳ್ಳಬೇಕೆಂದು ಯೆರುಸಲೇಮಿಗೆ ಹೋಗಿ ಅವನ ಬಳಿಯಲ್ಲಿ ಹದಿನೈದು ದಿನ ಇದ್ದನು. (ಗಲಾತ್ಯರು 1:16-18 ULB)

ಕೆಲವೊಮ್ಮೆ "ಆದರೆ " ಎಂಬ ಪದ ಮೊದಲು ಹೇಳಿದವಿಷಯದ ಬಗ್ಗೆ ಭಿನ್ನ ಹೇಳಿಕೆಯನ್ನು ಪರಿಚಯಿಸಲು ಬಳಸಲಾಗುವುದು. ಇಲ್ಲಿರುವ ಭಿನ್ನತೆ ಯಾವುದೆಂದರೆ ಪೌಲನು ಮಾಡದೆ ಇರುವ ಕೆಲಸ ಮತ್ತು ಪೌಲನು ಮಾಡಿದ ಕೆಲಸದ ನಡುವೆ ಇರುವಂತದ್ದು. ಇಲ್ಲಿ ಬಳಕೆಯಾಗಿರುವ ಪದ "then" "ಆಗ" ಎಂಬ ಪದ ಪೌಲನು ದಮಾಸ್ಕಕ್ಕೆ ಹಿಂತಿರುಗಿ ಬಂದಮೇಲೆ ಏನು ಮಾಡಿದ ಎಂಬುದನ್ನು ತಿಳಿಸುತ್ತದೆ.

ಆದುದರಿಂದಈ ಸಣ್ಣ ಸಣ್ಣ ಆಜ್ಞೆಗಳಲ್ಲಿ ಮತ್ತುಜನರನ್ನು ಹಾಗೆ ಮಾಡುವಂತೆ ಬೋಧಿಸುವವನು ಪರಲೋಕ ರಾಜ್ಯದಲ್ಲಿ ಬಹು ಚಿಕ್ಕವನೆನಿಸಿಕೊಳ್ಳುವನು ಆದರೆತಾನೇ ಆ ಆಜ್ಞೆಗಳಂತೆ ನಡೆದುಕೊಂಡು ಜನರಿಗೆ ಅದರಂತೆ ನಡೆಯಬೇಕೆಂದು ಬೋಧಿಸುವವರು ಪರಲೋಕರಾಜ್ಯದಲ್ಲಿ ದೊಡ್ಡವನೆನಿಸಿಕೊಳ್ಳುವನು. (Matthew 5:19 ULB) ಮತ್ತಾಯ

"ಆದುದರಿಂದ" ಎಂಬ ಪದ ಈಗಾಗಲೇ ಹೇಳಿರುವ ಹಿಂದಿನ ವಾಕ್ಯಕ್ಕೆ ಸಂಬಂಧಿಸಿದೆ. "ಆದುದರಿಂದ" ಎಂಬ ಪದ ಸಾಮಾನ್ಯವಾಗಿ ಒಂದು ವಾಕ್ಯಕ್ಕಿಂತ ಅನೇಕ ವಾಕ್ಯಭಾಗವನ್ನು ಸೇರಿಸುತ್ತದೆ, "ಮತ್ತು" ಎಂಬ ಪದ ಎರಡು ಕ್ರಿಯೆಗಳನ್ನು ಒಂದೇವಾಕ್ಯದಲ್ಲಿ ಸೇರಿಸಿ ಹೇಳುತ್ತದೆ.ಇವು ಆಜ್ಞೆಗಳನ್ನು ಮೀರಿ ಮತ್ತು ಇತರರಿಗೆ ಬೋಧಿಸುವುದನ್ನು ಸೂಚಿಸುತ್ತದೆ. ಈ ವಾಕ್ಯದಲ್ಲಿ "ಆದರೆ" ಎಂಬ ಪದ ಪರಲೋಕರಾಜ್ಯದಲ್ಲಿ ಒಂದು ಗುಂಪಿನ ಜನರನ್ನು ಏನೆಂದು ಕರೆಯುತ್ತಾರೆ ಮತ್ತು ಇನ್ನೊಂದು ರೀತಿಯ ಗುಂಪನ್ನು ಏನೆಂದು ಕರೆಯುತ್ತಾರೆ ಎಂಬ ಭಿನ್ನ ವಾಕ್ಯಗಳನ್ನು ತಿಳಿಸುತ್ತದೆ.

ನಾವು ಸಂಕಟಗಳಲ್ಲಿಯೂ,ಕೊರತೆಗಳಲ್ಲಿಯೂ, ಇಕ್ಕಟ್ಟುಗಳಲ್ಲಿಯೂ, ಪೆಟ್ಟುಗಳಲ್ಲಿಯೂ, ನೆರೆಮನೆ ಗಳಲ್ಲಿಯೂ, ನಿಂದೆಗೆ ಅವಕಾಶಕೊಡದೆ, ಅದರ ಬದಲುಎಲ್ಲಾ ಸಂಗತಿಗಳಲ್ಲಿ ದೇವರ ಸೇವಕರೆಂದು ನಮ್ಮನ್ನು ಸಮ್ಮತರಾಗುವಂತೆ ಮಾಡಿಕೊಳ್ಳುತ್ತೇವೆ . (2 ಕೋರಿಂಥ 6:3-4 ULB)

ಇಂಗ್ಲೀಷ್ ವಾಕ್ಯದಲ್ಲಿರುವ "for" "ಇದಕ್ಕಾಗಿ" ವಾಕ್ಯಕ್ಕೆ ಕಾರಣಕೊಡುವ ರೀತಿಯಲ್ಲಿ ಇದೇ ವಾಕ್ಯ ಪೌಲನು ಯಾವತಡೆಯನ್ನೂ ಒಡ್ಡದೆ ತನ್ನ ಸುವಾರ್ತಾ ಸೇವೆ ಮುಂದುವರೆಯುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದ. "ಅದರ ಬದಲು" ಎಂಬ ಪದ ಪೌಲನು ಏನು ಮಾಡುತ್ತಾನೆ ಮತ್ತು ಅವನು ಏನು ಮಾಡುವುದಿಲ್ಲ ಎಂಬ ಎರಡು ಭಿನ್ನವಾಕ್ಯ ತಿಳಿಸಿದ್ದಾನೆ, (ಅವನು ತಾನು ದೇವರಸೇವಕ ಎಂಬುದನ್ನು ತನ್ನ ಕಾರ್ಯಗಳ ಮೂಲಕ ತಿಳಿಸುತ್ತಾನೆ.

ಭಾಷಾಂತರ ತಂತ್ರಗಳು

ಎರಡು ವಿಚಾರಗಳ ನಡುವೆ ಇರುವ ಸಂಬಂಧವನ್ನು ULB ಯಲ್ಲಿ ಸಹಜವಾಗಿ ಮತ್ತು ನಿಮ್ಮ ಭಾಷೆಯಲ್ಲಿ ಸರಿಯಾದ ಅರ್ಥನೀಡುವುದಾದರೆ ಅದನ್ನೇ ಬಳಸಿಕೊಳ್ಳಿ. ಹಾಗೆ ಇಲ್ಲದಿದ್ದರೆ ಇಲ್ಲಿ ಕೊಟ್ಟಿರುವ ಆಯ್ಕೆಗಳನ್ನು ಗಮನಿಸಿ

  1. ಸಂಪರ್ಕ ಕಲ್ಪಿಸುವ ಪದವನ್ನು ಬಳಸಿ (ULB ಯಲ್ಲಿ ಇದನ್ನು ಉಪಯೋಗಿಸದಿದ್ದರೂ ಸರಿ)
  2. ಸಂಪರ್ಕ ಕಲ್ಪಿಸುವ ಪದ ಅಸಹಜವಾಗಿ ಕಂಡುಬಂದರೆ ಅದನ್ನು ಬಳಸಬೇಡಿ. ವಿಷಯಗಳ ನಡುವಿನ ಸಂಬಂಧವನ್ನು ಸುಲಭವಾಗಿ ಬಳಸದೇ ಇರುವುದೇ ಒಳ್ಳೆಯದು.
  3. ವಿಭಿನ್ನವಾದ ಸಂಪರ್ಕ ಕಲ್ಪಿಸುವ ಪದಗಳನ್ನು ಬಳಸಬಹುದು.

ಭಾಷಾಂತರ ತಂತ್ರಗಳನ್ನು ಅಳವಡಿಸಿರುವ ಬಗ್ಗೆ ಉದಾಹರಣೆಗಳು.

  1. ಸಂಪರ್ಕ ಕಲ್ಪಿಸುವ ಪದವನ್ನು ಬಳಸಿ (ULB ಯಲ್ಲಿ ಇದನ್ನು ಉಪಯೋಗಿಸದಿದ್ದರೂ ಸರಿ)
  • ಯೇಸು ಅವರಿಗೆ " ನನ್ನ ಹಿಂದೆ ಬನ್ನಿರಿ, ಮನುಷ್ಯರನ್ನು ಹಿಡಿಯುವ ಬೆಸ್ತರನ್ನಾಗಿ ನಿಮ್ಮನ್ನು ಮಾಡುವೆನು " ತಕ್ಷಣವೇ, ಅವರು ತಮ್ಮ ಬಲೆಗಳನ್ನುಬಿಟ್ಟು ಆತನ ಹಿಂದೆ ಹೋದರು. (ಮಾರ್ಕ 1:17-18 ULB) -ಅವರು ಯೇಸುವನ್ನು ಹಿಂಬಾಲಿಸಿದರು ಏಕೆಂದರೆಆತನು ಅವರಿಗೆ ಹೀಗೆ ಹೇಳಿದನು ಕೆಲವು ಭಾಷಾಂತರಗಾರರು ಈ ಪದವನ್ನು "ಆದುದರಿಂದ." ಎಂಬ ಪದವನ್ನು ಬಳಸಿದ್ದಾರೆ.
  • ಯೇಸು ಅವರಿಗೆ ನನ್ನ ಹಿಂದೆ ಬನ್ನಿರಿ, ನಾನು ನಿಮ್ಮನ್ನು ಮನುಷ್ಯರನ್ನು ಹಿಡಿಯುವ ಬೆಸ್ತರನ್ನಾಗಿ ಮಾಡುವೆನು " ಎಂದು ಹೇಳಿದ ಆದುದರಿಂದ ತಕ್ಷಣವೇ, ಅವರು ತಮ್ಮ ಬಲೆಗಳನ್ನುಬಿಟ್ಟು ಆತನನ್ನು ಹಿಂಬಾಲಿಸಿದರು.
  1. ಸಂಪರ್ಕ ಕಲ್ಪಿಸುವ ಪದ ಅಸಹಜವಾಗಿ ಕಂಡುಬಂದರೆ ಅದನ್ನು ಬಳಸಬೇಡಿ. ವಿಷಯಗಳ ನಡುವಿನ ಸಂಬಂಧವನ್ನು ಸುಲಭವಾಗಿ ಬಳಸದೇ ಇರುವುದೇ ಒಳ್ಳೆಯದು.
  • ಆದುದರಿಂದ ಈ ಸಣ್ಣ ಸಣ್ಣ ಆಜ್ಞೆಗಳಲ್ಲಿಯಾವುದಾದರೂ ಒಂದನ್ನು ಮೀರಿ ಮತ್ತುಜನರಿಗೆ ಹಾಗೆ ಮೀರುವಂತೆ ಬೋಧಿಸುವವನು ಪರಲೋಕ ರಾಜ್ಯದಲ್ಲಿ ಬಹು ಚಿಕ್ಕವನೆನಿಸಿಕೊಳ್ಳುವನು ಆದರೆತಾನೇ ಆ ಆಜ್ಞೆಗಳಂತೆ ನಡೆದುಕೊಂಡು ಜನರಿಗೂ ಹಾಗೆ ನಡೆಯಬೇಕೆಂದು ಬೋಧಿಸುವವರು ಪರಲೋಕರಾಜ್ಯದಲ್ಲಿ ದೊಡ್ಡವನೆನಿಸಿಕೊಳ್ಳುವನು. (ಮತ್ತಾಯ5:19 ULB) - ಕೆಲವು ಭಾಷೆಯಲ್ಲಿ ಇಂತಹ ಸಂಪರ್ಕಕಲ್ಪಿಸುವ ಪದಗಳನ್ನು ಬಳಸಲು ಬಯಸಲಾರರು, ಏಕೆಂದರೆ ಇಲ್ಲಿ ಇಂತಹ ಪದಗಳನ್ನು ಬಳಸದೆಯೇ ಅರ್ಥಪೂರ್ಣವಾಕ್ಯಗಳನ್ನು ಮಾಡಬಹುದು ಮತ್ತು ಅದನ್ನು ಮೀರಿ ಉಪಯೋಗಿಸಿದರೆ ಅಸಹಜವಾಗಿ ಕಂಡುಬರಬಹುದು. ಆಗ ಅವರು ಈ ರೀತಿ ಭಾಷಾಂತರಿಸಬಹುದು.
  • ಆದುದರಿಂದ ಯಾರು ದೇವರ ಆಜ್ಞೆಗಳನ್ನು ಮೀರಿ, ಹಾಗೆ ಮಾಡುವಂತೆ ಬೋಧಿಸುತ್ತಾರೋ ಅವರನ್ನು ಪರಲೋಕ ರಾಜ್ಯದಲ್ಲಿ ಬಹಳ ಚಿಕ್ಕವರೆಂದು ಪರಿಗಣಿಸಲಾಗುವುದು. ಯಾರು ದೇವರ ಆಜ್ಞೆಗಳಂತೆ ನಡೆದು, ಅದರಂತೆ ನಡೆಯುವಂತೆ ಜನರಿಗೂ ಬೋಧಿಸುತ್ತಾರೋ ಅವರನ್ನು ಪರಲೋಕರಾಜ್ಯದಲ್ಲಿ ದೊಡ್ಡವರೆಂದು ಪರಿಗಣಿಸಲಾಗುವುದು.
  • ನಾನು ತಾಯಿಯ ಗರ್ಭದಲ್ಲಿದ್ದಾಗಲೇ ನನ್ನನ್ನು ಪ್ರತ್ಯೇಕಿಸಿ ತನ್ನ ಕೃಪೆಯಿಂದ ಕರೆದ ದೇವರು ತನ್ನ ಮಗನನ್ನು ಅನ್ಯ ಜನರಲ್ಲಿ ಪ್ರಸಿದ್ಧಿಪಡಿಸುವುದಕ್ಕಾಗಿ ಆತನನ್ನು ನನ್ನೊಳಗೆ ಪ್ರಕಟಿಸುವುದಕ್ಕೆ ಇಚ್ಛಿಸದೆ ನಾನು ಮನುಷ್ಯರ ಆಲೋಚನೆಯನ್ನು ವಿಚಾರಿಸದೆ ಯೆರುಸಲೇಮಿಗೆ ನನಗಿಂತ ಮುಂಚೆ ಅಪೋಸ್ತಲರಾಗಿದ್ದವರ ಬಳಿಗೂ ಹೋಗದೆ ಅರಬಸ್ಥಾನಕ್ಕೆಆದರೆ ಹೋಗಿ ಪುನಃ ದಮಾಸ್ಕಕ್ಕೆ ಬಂದನು ಆಗ . ಮೂರು ವರ್ಷಗಳಾದ ಮೇಲೆ ಕೇಫನ ಪರಿಚಯ ಮಾಡಿಕೊಳ್ಳಬೇಕೆಂದು ಯೇರೋಸಲಮಿಗೆ ಹೋಗಿ ಅವನ ಬಳಿಯಲ್ಲಿ ಹದಿನೈದು ದಿನ ಇದ್ದೆನು. (ಗಲಾತ್ಯ 1:16-18 ULB) - ಕೆಲವು ಭಾಷೆಗಳಲ್ಲಿ ಇಂತಹ ಸಂದರ್ಭದಲ್ಲಿ "ಆದರೆ" ಅಥವಾ "ಆಗ" ಎಂಬ ಪದಗಳ ಅವಶ್ಯಕತೆ ಇರುವುದಿಲ್ಲ
  • ನಾನು ತಕ್ಷಣವೇ ಮನುಷ್ಯರ ಆಲೋಚನೆಯನ್ನು ವಿಚಾರಿಸದೆ ಯೆರುಸಲೇಮಿಗೆ ನನಗಿಂತ ಮುಂಚೆ ಅಪೋಸ್ತಲರಾಗಿದ್ದವರ ಬಳಿಗೆ ಹೋಗಲಿಲ್ಲ. ಅದರ ಬದಲು ನಾನು ಅರಬಸ್ಥಾನಕ್ಕೆ ಹೋಗಿ ಪುನಃ ದಮಾಸ್ಕಕ್ಕೆ ಬಂದೆನು. ಮೂರು ವರ್ಷಗಳನಂತರ ಕೇಫನನನ್ನು ಭೇಟಿಮಾಡಲು ನಾನು ಯೆರುಸಲೇಮಿಗೆ ಹೋಗಿ ಅವನ ಬಳಿಯಲ್ಲಿ ಹದಿನೈದು ದಿನ ಇದ್ದೆನು.
  1. ಇಲ್ಲಿ ವಿಭಿನ್ನವಾದ ಸಂಪರ್ಕ ಕಲ್ಪಿಸುವ ಪದ ಬಳಸಿ.
  • ಆದುದರಿಂದ ದೇವರ ಆಜ್ಞೆಗಳನ್ನು ಮೀರಿ ಜನರಿಗೂ ಹಾಗೆ ಮಾಡುವಂತೆ ಬೋಧಿಸುವವನು ಪರಲೋಕರಾಜ್ಯದಲ್ಲಿ ಅತಿಚಿಕ್ಕವನೆಂದು ಪರಿಗಣಿಸಲ್ಪಡುವನು. ಆದರೆ/u>ಯಾರು ದೇವರ ಆಜ್ಞೆಗಳಂತೆ ನಡೆದು ಅದರಂತೆ ನಡೆಯುವಂತೆ ಬೋಧಿಸುವನೋ ಅವನು ಪರಲೋಕರಾಜ್ಯದಲ್ಲಿ ದೊಡ್ಡವನೆಂದು ಪರಿಗಣಿಸಲ್ಪಡುವನು. (ಮತ್ತಾಯ 5:19 ULB) " ಆದುದರಿಂದ "ಎಂಬ ಪದವನ್ನು ಭಾಷೆಯಲ್ಲಿ ಬಳಸುವಾಗ ಮೊದಲ ವಾಕ್ಯವನ್ನು ಹೇಳುವಾಗ ಹಿಂದಿನ ವಾಕ್ಯಗಳನ್ನು ಅನುಸರಿಸಿ ಬರುತ್ತವೆ. " ಆದರೆ " ಎಂಬ ಪದವನ್ನು ಬಳಸಿದೆ ಏಕೆಂದರೆ ಎರಡು ಗುಂಪುಗಳ ನಡುವೆ ವಿಭಿನ್ನ ರೀತಿಯಲ್ಲಿ ಬಳಸಲಾಗಿದೆ. ಇದರೊಂದಿಗೆ " ಆದರೆ " ಎಂಬ ಪದ ಕೆಲವು ಭಾಷೆಗಳಲ್ಲಿ ಒಂದು ಪದದನಂತರ ಬರುವ ಪದ ಆಶ್ಚರ್ಯಕರವಾಗಿರುತ್ತದೆ, ಏಕೆಂದರೆ ಮೊದಲು ಬಂದ ಪದದ ನಂತರ ಬರುವಂತದ್ದು ಆದುದರಿಂದ " ಮತ್ತು " ಎಂಬ ಪದ ಆ ಭಾಷೆಗಳಲ್ಲಿ ಸ್ಪಷ್ಟವಾಗಿರುತ್ತದೆ.
  • ಏಕೆಂದರೆ , ದೇವರ ಆಜ್ಞೆಗಳನ್ನು ಯಾರು ಮೀರಿನಡೆದು ಅದರಂತೆ ನಡೆಯವಂತೆ ಇತರರಿಗೆ ಬೋಧಿಸುತ್ತಾರೋ ಅವರನ್ನು ಪರಲೋಕರಾಜ್ಯದಲ್ಲಿ ಅತಿಚಿಕ್ಕವರಂತೆ ಕರೆಯಲ್ಪಡುತ್ತಾರೆ. ಮತ್ತು ಯಾರು ದೇವರ ಆಜ್ಞೆಗಳನ್ನು ಅನುಸರಿಸಿ ನಡೆದು ಅದರಂತೆ ನಡೆಯುವಂತೆ ಇತರರಿಗೆ ಬೋಧಿಸಿದರೆ ಅವನು ಪರಲೋಕರಾಜ್ಯದಲ್ಲಿ ದೊಡ್ಡವನಾಗಿ ಪರಿಗಣಿಸಲ್ಪಡುವನು.
  • ಅಂದಿನಿಂದಆ ಸಹಸ್ರಾಧಿಪತಿಯು ಯಾರು ? ಏನು ಮಾಡಿದ್ದಾನೆ ? ಎಂದು ಕೇಳಲು ಗದ್ದಲದಿಂದ ನಿಜ ಸ್ಥಿತಿಯನ್ನು ತಿಳಿಯಲು ಆಗದೆ ಅವನನ್ನು ಕೋಟೆಯೊಳಗೆ ತೆಗೆದುಕೊಂಡುಹೋಗಿರೆಂದು ಹೇಳಿದನು. (ಆ.ಕೃ.21:34 ULB) ಅದರ ಬದಲು ವಾಕ್ಯದ ಮೊದಲ ಭಾಗವನ್ನು ಅಂದಿನಿಂದ ಎಂಬ ಪದದಿಂದ ಪ್ರಾರಂಭಿಸಿದರೋ ಎರಡನೇ ಭಾಗವನ್ನು " ಆದುದರಿಂದ " ಎಂಬ ಪದ ಬಳಸಿ ಅದೆ ಸಂಬಂಧವನ್ನು ತೋರಿಸುತ್ತದೆ.
  • " ಸಹಸ್ರಾಧಿಪತಿಗೆ ಜನರ ಗದ್ದಲದಿಂದ ಏನೂ ಕೇಳಿಸಲಿಲ್ಲ ಆದುದರಿಂದ , ಪೌಲನನ್ನು ಕೋಟೆಯೊಳಗೆ ತೆಗೆದುಕೊಂಡು ಹೋಗಲು ತಿಳಿಸಿದ."