kn_ta/translate/writing-background/01.md

19 KiB

ವಿವರಣೆಗಳು.

ಜನರು ಕತೆ ಹೇಳುವಾಗ ನಡೆದ ಘಟನೆಗಳು ಅಥವಾ ಘಟನೆಗಳು ಅಥವಾ ಘಟನೆಗಳ ಬಗ್ಗೆ ಕ್ರಮವಾಗಿ ಹೊಂದಿಸಿ ಹೇಳುತ್ತಾರೆ. ಈ ರೀತಿಯ ಘಟನೆಗಳನ್ನು ಸನ್ನಿವೇಶಕ್ಕೆ ತಕ್ಕಂತೆ ಹೆಣೆದು ಕಥಾಹಂದರದಲ್ಲಿ ಹೇಳುವಂತದ್ದು. ಈ ಕಥಾಹಂದರವು ಕಥೆಯ ಬೆಳವಣಿಗೆಯನ್ನು ಸಂಪೂರ್ಣವಾಗಿ ಕ್ರಿಯಾತ್ಮಕವಾದ ಕ್ರಿಯಾಪದಗಳೊಂದಿಗೆ ಕೊಂಡೊಯ್ಯುತ್ತದೆ. ಆದರೆ ಕೆಲವೊಮ್ಮೆ ಒಬ್ಬ ಲೇಖಕ ಕಥೆಯ ಬೆಳವಣಿಗೆಯಿಂದ ಒಂದು ಚಿಕ್ಕ ವಿರಾಮ ತೆಗೆದುಕೊಂಡು ತನ್ನ ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಮಾಹಿತಿ ನೀಡಿ ಸಹಾಯಮಾಡುತ್ತಾನೆ.

ಇಂತಹ ಮಾಹಿತಿಯನ್ನು ಹಿನ್ನೆಲೆ ಮಾಹಿತಿ ಎಂದು ಕರೆಯುತ್ತಾರೆ. ಈ ಹಿನ್ನೆಲೆ ಮಾಹಿತಿಗಳು ಕತೆಯಲ್ಲಿ ಬರುವ ಘಟನೆಗಳಿಗಿಂತೆ ಮೊದಲು ನಡೆದಿರಬಹುದು ಇಲ್ಲವೆ ಈ ಬಗ್ಗೆ ಈಗಾಗಲೇ ಹೇಳಿರಬಹುದು ಅಥವಾ ಕತೆಯಲ್ಲಿ ಈಬಗ್ಗೆ ಹೇಳಿರುವಂತದ್ದಾಗಿರಬಹುದು.

** ಉದಾಹರಣೆಗೆ** - ಕೆಳಗೆ ಅಡ್ಡಗೆರೆಯಿಂದ ಗುರುತಿಸಿರುವ ವಾಕ್ಯಗಳು ಕಥೆ ಬಗ್ಗೆ ಹಿನ್ನೆಲೆ ಮಾಹಿತಿ ಗಳಾಗಿವೆ. ಪೀಟರ್ ಮತ್ತು ಜಾನ್ ಬೇಟೆಗಾಗಿ ಹೊರಟರು ಏಕೆಂದರೆ ಅವರ ಹಳ್ಳಿಯಲ್ಲಿ ಮಾರನೆ ದಿನ ಹಬ್ಬದ ಆಚರಣೆ ಇದೆ . ಆ ಹಳ್ಳಿಯಲ್ಲಿ ಪೀಟರ್ ಅತ್ಯುತ್ತಮ ಬೇಟೆಗಾರ.ಅವನು ಒಂದೇ ದಿನದಲ್ಲಿ ಮೂರು ಕಾಡುಹಂದಿಗಳನ್ನು ಬೇಟೆಯಾಡಿದ್ದ !ಅವರೆಲ್ಲರೂ ಕಾಡುಹಂದಿಗಳ ಸ್ವರವನ್ನು ಗುರುತಿಸುವವರೆಗೂ ಗಂಟೆಗಟ್ಟಲೆ ಪೊದೆಗಳನ್ನು ಹಾದುಹೋಗಬೇಕಾಯಿತು. ಕಾಡುಹಂದಿಗಳು ಅವರನ್ನು ಹಾದುಹೋಗುವಾಗ ಅವುಗಳನ್ನು ಗುಂಡಿಟ್ಟು ಕೊಲ್ಲಲು ಸಮರ್ಥವಾಗಿ ಕಾರ್ಯನಿರ್ವಹಿಸಿದರು ಅವರು ಆ ಹಂದಿಗಳ ಕಾಲುಗಳನ್ನು ಹಗ್ಗದಿಂದ ಕಟ್ಟಿ ಒಂದು ಗಳವನ್ನು ಹಂದಿಗಳ ಕಾಲುಗಳ ಮಧ್ಯೆ ತೂರಿಸಿ ಅವುಗಳನ್ನು ಹೆಗಲಮೇಲೆ ಹೊತ್ತುಕೊಂಡು ಬಂದರು . ಅವರು ಹಂದಿಗಳನ್ನು ಊರಿನೊಳಗೆ ತರುತ್ತಿದ್ದಾಗ ಪೀಟರ್ ನ ಚಿಕ್ಕಮ್ಮನ ಮಗ ನೋಡಿ ಪೀಟರ್ ಗೊತ್ತಿಲ್ಲದೆ ತನ್ನ ಹಂದಿಯನ್ನು . ಕೊಂದಿದ್ದಾನೆ ಎಂದು ತಿಳಿದುಕೊಂಡನು ತನ್ನ ಚಿಕ್ಕಮ್ಮನ ಮಗನ ಹಂದಿಗಳನ್ನು ತಪ್ಪಾಗಿ ಕೊಂದುಬಿಟ್ಟನು.ಎಂದು ಕೊಂಡನು.

ಹಿನ್ನೆಲೆ ಮಾಹಿತಿ ಯಾವಾಗಲೂ ಈಗಾಗಲೇ ನಡೆದ ಘಟನೆಗಳ ಬಗ್ಗೆ ಅಥವಾ ನಂತರ ನಡೆಯುವ ಘಟನೆಗಳ ಬಗ್ಗೆ ಹೇಳುತ್ತದೆ. ಉದಾಹರಣೆಗಾಗಿ ಬಂದ ವಾಕ್ಯಗಳಲ್ಲಿ " ಅವರ ಹಳ್ಳಿಯಲ್ಲಿ ಮಾರನೆಯ ದಿನ ಹಬ್ಬವಿದ್ದುದ್ದರಿಂದ " ಅವನು ಒಂದೇ ಸಲ ಮೂರು ಕಾಡುಹಂದಿಗಳನ್ನು ಬೇಟೆಯಾಡಿ ಕೊಂದನು, " ಅವುಗಳನ್ನು ಅವರು ಊರೊಳಗೆ ತಂದರು " ಮತ್ತು " ಪೀಟರನಿಗೆ ಅವು ತಮ್ಮ ಚಿಕ್ಕಮ್ಮನ ಮಗನ ಹಂದಿಗಳೆಂದು ತಿಳಿಯದೆ ತಪ್ಪಾಗಿ ಅವುಗಳನ್ನು ಕೊಂದನು.

Often background information uses "be" verbs like "was" and "were", rather than action verbs.- ಇಂಗ್ಲೀಷ್ ಭಾಷೆಯಲ್ಲಿ ಸಾಮಾನ್ಯವಾಗಿ ಇಂತಹ ಪದಗಳನ್ನು ಬಳಸುತ್ತಾರೆ. ಇದಕ್ಕೆ ಉದಾಹರಣೆ "Peter wasthe best hunter in the village" and "it washis own pig." " ಪೀಟರ್ ಆ ಹಳ್ಳಿಯಲ್ಲಿ ಉತ್ತಮ ಬೇಟೆಗಾರ ಆಗಿದ್ದನು ಆ ಹಂದಿಗಳು ಅವನ ಸ್ವಂತ ಹಂದಿಗಳಾಗಿದ್ದವು ಹಿನ್ನೆಲೆ ಮಾಹಿತಿಯನ್ನು ಓದುಗರಿಗೆ ತಿಳಿಸುವಾಗ ಈ ಮಾಹಿತಿ ಕಥೆಯ ಘಟನೆಯನ್ನು ಆಧರಿಸಿ ಇಲ್ಲ ಎಂದಾಗಲೂ ತಿಳಿಸಬಹುದು. ಈ ಕಥೆಯಲ್ಲಿ ಕೆಲವು ಪದಗಳು ಮುಖ್ಯವಾಗಿವೆ "ಏಕೆಂದರೆ," "ಒಮ್ಮೆ " ಮತ್ತು " ಹೊಂದಿದ್ದ."

ಒಬ್ಬ ಲೇಖಕ ತಾನು ಕಥೆಬರೆಯುವಾಗ ‘“ ಹಿನ್ನೆಲೆ ಮಾಹಿತಿ “ ಯನ್ನು ಈ ಕಾರಣದಿಂದ ಉಪಯೋಗಿಸ ಬಹುದು.

  • ಓದುಗರಿಗೆ ಕಥೆಯಲ್ಲಿ ಆಸಕ್ತಿ ಹುಟ್ಟಿಸಲು ಸಹಕಾರಿಯಾಗಿ ಬಳಸಬಹುದು.
  • ಕಥೆಯಲ್ಲಿರುವ ಮೂಲ ಅರ್ಥವನ್ನು ಓದುಗರು ತಿಳಿದುಕೊಳ್ಳಲು.
  • ಕಥೆಯಲ್ಲಿ ಕೆಲವು ಅಂಶಗಳು ಏಕೆ ಮುಖ್ಯವಾಗುತ್ತವೆ ಎಂಬುದನ್ನು ಓದುಗರು ಅರ್ಥಮಾಡಿಕೊಳ್ಳಲು.
  • ಕಥೆಯ ಹಿನ್ನೆಲೆ / ಹಂದರವನ್ನು ಹೇಳಲು.
  • ಕಥೆಯ ಹಿನ್ನೆಲೆ / ಹಂದರದಲ್ಲಿ ಇರುವ ಅಂಶಗಳು:
  • ಕಥೆ ಎಲ್ಲಿ / ಯಾವಸ್ಥಳದಲ್ಲಿ ನಡೆಯಿತು ?
  • ಕಥೆ ಯಾವಾಗ ನಡೆಯಿತು ?
  • ಕಥೆ ಪ್ರಾರಂಭವಾದಾಗ ಯಾರು ಇದ್ದರು ?
  • ಕಥೆ ಪ್ರಾರಂಭವಾದಾಗ ಏನು ನಡೆಯಿತು ?

ಕಾರಣ ಇದೊಂದು ಭಾಷಾಂತರ ವಿಷಯ

  • ವಿವಿಧ ಭಾಷೆಗಳಲ್ಲಿ ವಿವಿಧ ರೀತಿಯ ಹಿನ್ನೆಲೆಮಾಹಿತಿಯನ್ನು ಮತ್ತು ಕಥೆಯ ಘಟನಾವಳಿಗಳನ್ನು ಹೊಂದಿರುತ್ತದೆ.
  • ಸತ್ಯವೇದದ ಭಾಷಾಂತರಗಾರರು ಸತ್ಯವೇದದಲ್ಲಿ ಬರುವ ಘಟನಾವಳಿಗಳ ಕ್ರಮ, ಯಾವ ಮಾಹಿತಿ, ಸನ್ನಿವೇಶ, ಹಿನ್ನೆಲೆ ಮಾಹಿತಿ ಕ್ರಮವಾಗಿ ಬರುತ್ತವೆ. ಮತ್ತು ಕಥೆಯ ಘಟನಾವಳಿಗಳ ಮಾಹಿತಿಗಳ ಕ್ರಮ ಇವುಗಳನ್ನು ತಿಳಿದುಕೊಳ್ಳಬೇಕು.
  • ಭಾಷಾಂತರಗಾರರು ಸತ್ಯವೇದದಲ್ಲಿ ಬರುವ ಕಥೆಯನ್ನು ಭಾಷಾಂತರರಿಸುವ ಹಿನ್ನೆಲೆ ಮಾಹಿತಿಯನ್ನು ಓದುಗರು ಘಟನಾವಳಿಗಳ ಕ್ರಮವನ್ನು ಅರ್ಥಮಾಡಿಕೊಳ್ಳುವಂತೆ ಮತ್ತು ಯಾವುದು ಹಿನ್ನೆಲೆ ಮಾಹಿತಿ, ಯಾವುದು ಕಥೆಯ ಘಟನಾವಳಿಗಳ ಮಾಹಿತಿ ಎಂಬುದನ್ನು ಅರ್ಥಮಾಡಿಕೊಳ್ಳುವಂತಿರಬೇಕು.

ಸತ್ಯವೇದದಿಂದ ಉದಾಹರಣೆಗಳು.

ಹಾಗರಳು ಅಬ್ರಹಾಮನ ಮಗನಿಗೆ ಜನ್ಮನೀಡಿದಳು, ಅಬ್ರಹಾಮನು ಹಾಗರಳಿಂದ ಪಡೆದ ತನ್ನ ಮಗನಿಗೆ ಇಷ್ಮಾಯೇಲ್ ಎಂದು ಹೆಸರಿಟ್ಟನು. ಹಾಗರಳು ಇಷ್ಮಾಯೇಲನನ್ನು ಹೆತ್ತಾಗ ಅಬ್ರಹಾಮನಿಗೆಎಂಬತ್ತಾರು ವರುಷ ಆಗಿತ್ತು (ಆದಿಕಾಂಡ 16:16 ULB)

ಆ ಮೊದಲ ವಾಕ್ಯ ಎರಡು ಘಟನೆಗಳ ಬಗ್ಗೆ ಹೇಳುತ್ತದೆ. ಹಾಗರಳು ಮಗನಿಗೆ ಜನ್ಮಕೊಟ್ಟಳು ಮತ್ತು ಅಬ್ರಹಾಮನು ಅವನಿಗೆ ಹೆಸರಿಟ್ಟನು. ಎರಡನೆ ವಾಕ್ಯ ಹಿನ್ನೆಲೆ ಮಾಹಿತಿಯಂತೆ ಬಂದು, ಈ ಘಟನೆಗಳು ನಡೆಯುವಾಗ ಅಬ್ರಹಾನು ಎಷ್ಟು ವರ್ಷದವನಾಗಿದ್ದನು ಎಂಬುದನ್ನು ಸೂಚಿಸುತ್ತದೆ.

ಯೇಸು ಉಪದೇಶಮಾಡುವುದಕ್ಕೆ ಪ್ರಾರಂಭಿಸಿದಾಗ, ಹೆಚ್ಚು ಕಡಿಮೆ ಮುವತ್ತು ವರ್ಷದವನಾಗಿ ದ್ದನು . ಆತನು ಯೋಸೇಫನ ಮಗ . ಯೋಸೇಫನು ಏಲಿಯ ಮಗ ಎಂದು ಜನರು ತಿಳಿದಿದ್ದರು (ಲೂಕ 3:23 ULB)

ಈ ವಾಕ್ಯಕ್ಕಿಂತ ಮೊದಲು ಬಂದ ವಾಕ್ಯಗಳಲ್ಲಿ ಯೇಸುವಿಗೆ ಯಾವಾಗ ದೀಕ್ಷಾಸ್ನಾನವಾಯಿತು ಎಂದು ತಿಳಿದಿದೆ. ಈ ವಾಕ್ಯಗಳು ಯೇಸುವಿನ ವಯಸ್ಸು ಮತ್ತು ಪೂರ್ಜರ ಬಗ್ಗೆ ಹಿನ್ನೆಲೆ ಮಾಹಿತಿಯನ್ನು ಒದಗಿಸುತ್ತದೆ. ನಾಲ್ಕನೇ ಅಧ್ಯಾಯದಲ್ಲಿ ಈ ಕಥೆಯ ಘಟನೆ ಪುನಃ ಪ್ರಾರಂಭವಾಗಿ ಯೇಸು ಅಡವಿಯನ್ನು ಪ್ರವೇಶಿಸುವ ಬಗ್ಗೆ ತಿಳಿಸುತ್ತದೆ.

ಈಗ ಇದು ನಡೆದದ್ದು ಸಬ್ಬತ್ ದಿನದಂದು , ಯೇಸು ಹಸಿರು ಪೈರು ಬೆಳೆದ ಹೊಲಗಳನ್ನು ಹಾದುಹೋಗುವಾಗ ಆತನ ಶಿಷ್ಯರು ತೆನೆಗಳನ್ನು ಮುರಿದು ಕೈಗಳಲ್ಲಿ ಹೊಸಕಿ ತಿನ್ನುತ್ತಿದ್ದರು. ಆಗ ಪರಿಸಾಯರಲ್ಲಿ ಕೆಲವರು ಹೀಗೆ ಹೇಳಿದರು. (ಲೂಕ 6:1-2a ULB)

ಈ ವಾಕ್ಯಗಳು ಇಲ್ಲಿನ ಕಥೆಯ ಹಿನ್ನೆಲೆಯಾಗಿ ಬರುತ್ತದೆ. ಇಲ್ಲಿನ ಘಟನೆ ಭಾನುವಾರ / ಸಬ್ಬತ್ ದಿನದಂದುಹಸಿರು ಪೈರಿನ ಹೊಲದಲ್ಲಿ ನಡೆಯಿತು. ಯೇಸು,ಆತನ ಶಿಷ್ಯರು, ಮತ್ತು ಕೆಲವು ಪರಿಸಾಯರು ಅಲ್ಲಿದ್ದರು, ಯೇಸುವಿನ ಶಿಷ್ಯರು ಹೊಲದಲ್ಲಿನ ತೆನೆಗಳನ್ನು ಮುರಿದು ತಿನ್ನುತ್ತಿದ್ದರು. ಆದರೆ ಇಲ್ಲಿ ಕಥೆಯ ಪ್ರಾರಂಭದಲ್ಲೇ ಪರಿಸಾಯರು ಏನು ಹೇಳಿದರು ಎಂಬುದರೊಂದಿಗೆ ಪ್ರಾರಂಭವಾಗು ತ್ತದೆ.

ಭಾಷಾಂತರ ತಂತ್ರಗಳು.

ನಿಮ್ಮ ಭಾಷಾಂತರ ಸ್ಪಷ್ಟವಾಗಿಯೂ, ಸಹಜವಾಗಿಯೂ ಇರುವಂತೆ ಮಾಡಲು ನಿಮ್ಮ ಭಾಷೆಯ ಜನರು ಕಥೆಯನ್ನು ಹೇಗೆ ಹೇಳುತ್ತಾರೆ ಎಂಬುದನ್ನು ಕೇಳಿ ತಿಳಿದುಕೊಳ್ಳಬೇಕು ನಿಮ್ಮ ಭಾಷೆಯಲ್ಲಿ ಹಿನ್ನೆಲೆ ಮಾಹಿತಿಯನ್ನು ಹೇಗೆ ಬಳಸಿಕೊಳ್ಳಲಾಗಿದೆ ಎಂಬುದನ್ನು ಗಮನಿಸಿ. ಇವುಗಳನ್ನು ಅಳವಡಿಸಿಕೊಳ್ಳಲು ನೀವು ಕೆಲವು ಕಥೆಗಳನ್ನು ಬರೆದು ಅಭ್ಯಾಸಮಾಡಿಕೊಳ್ಳಬೇಕು. ನಿಮ್ಮ ಭಾಷೆಯಲ್ಲಿ ಹಿನ್ನೆಲೆ ಮಾಹಿತಿಯನ್ನುಬಳಸಿಕೊಳ್ಳುವಾಗ ಯಾವ ಕ್ರಿಯಾಪದಗಳನ್ನು, ಯಾವ ಪದಗಳನ್ನು ಮತ್ತು ಯಾವ ರೀತಿಯ ಗುರುತುಗಳನ್ನು ಬಳಸುತ್ತಾರೆ ಎಂಬುದನ್ನು ಗಮನಿಸಿ. ಈ ಅಂಶಗಳನ್ನು ನೀವು ಭಾಷಾಂತರಿಸುವಾಗ ಬಳಸಿದರೆ ನಿಮ್ಮ ಭಾಷಾಂತರ ಸ್ಪಷ್ಟ ಹಾಗೂ ಸಹಜವಾಗಿದ್ದು ಜನರು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ.

  1. ಕೆಲವು ಮಾಹಿತಿಗಳು ಹಿನ್ನೆಲೆ ಮಾಹಿತಿಗಳು ಎಂಬುದನ್ನು ನಿಮ್ಮ ಭಾಷೆಯಲ್ಲಿ ತೋರಿಸಿಕೊಡಿ.
  2. ಎಲ್ಲಾ ಘಟನೆಗಳನ್ನು ಸರಿಯಾದ ಕ್ರಮದಲ್ಲಿ ಜೋಡಿಸಿ ಬರೆಯಿರಿ ಇದರಿಂದ ಘಟನೆಗಳು ಕ್ರಮವಾಗಿ ಒಂದರನಂತರ ಒಂದು ಬರುತ್ತದೆ. (ಹಿನ್ನೆಲೆ ಮಾಹಿತಿ ತುಂಬಾ ದೀರ್ಘವಾಗಿದ್ದರೆ ಇದು ಸಾಧ್ಯವಾಗುವುದಿಲ್ಲ)

ಭಾಷಾಂತರದ ವಿಧಾನಗಳನ್ನು ಅಳವಡಿಸಿರುವ ಬಗ್ಗೆ ಉದಾಹರಣೆಗಳು.

  1. ಕೆಲವು ಮಾಹಿತಿಗಳು ಹಿನ್ನೆಲೆ ಮಾಹಿತಿಗಳು ಎಂಬುದನ್ನು ನಿಮ್ಮ ಭಾಷೆಯಲ್ಲಿ ತೋರಿಸಿಕೊಡಿ. ಕೆಳಗೆ ಕೊಟ್ಟಿರುವ ಉದಾಹರಣೆಗಳು ULBಯ ಇಂಗ್ಲೀಷ್ ಭಾಷೆಯ ಭಾಷಾಂತರದಲ್ಲಿ ಹೇಗೆ ಭಾಷಾಂತರವಾಗಿದೆ ಎಂಬುದನ್ನು ವಿವರಿಸುತ್ತದೆ.
  • ಈಗಯೇಸು ಉಪದೇಶಿಸಲು ಪ್ರಾರಂಭಿಸಿದಾಗ ಸುಮಾರು ಮುವತ್ತು ವರ್ಷದವನಾಗಿದ್ದ ಆತನು ಯೋಸೇಫನ ಮಗ ಯೋಸೇಫನು ಏಲಿಯ ಮಗ. (ಲೂಕ 3:23 ULB) ಇಂಗ್ಲೀಷ್ ಭಾಷೆಯಲ್ಲಿ "now" ಎಂಬ ಪದವನ್ನು ಬಳಸಿ ಕಥೆಯಲ್ಲಿ ಏನೋ ಬದಲಾವಣೆ ಇದೆ ಎಂದು ತೋರಿಸಲಾಗುತ್ತದೆ. "was" ಎಂಬ ಕ್ರಿಯಾ ಪದ ಇದು ಹಿನ್ನೆಲೆ ಮಾಹಿತಿ ಎಂಬುದನ್ನು ಸೂಚಿಸುತ್ತದೆ.
  • **ಇನ್ನೂ ಅನೇಕ ಮಾತುಗಳಿಂದ ಇಸ್ರಾಯೇಲ್ ಜನರಿಗೆ ಬುದ್ಧಿ ಹೇಳಿ ಸುವಾರ್ತೆಯನ್ನು ಸಾರುತ್ತಿದ್ದನು. ಆದರೆ ಉಪರಾಜನಾದ ಹೆರೋದನು ತನ್ನ ಅಣ್ಣನ ಹೆಂಡತಿಯಾದ ಹೆರೋದ್ಯಳನ್ನು ಮದುವೆಯಾಗಿ , ಮತ್ತು ತಾನು ಮಾಡಿದ ಎಲ್ಲಾ ದುಷ್ಕೃತ್ಯ ಗಳ ನಿಮಿತ್ತವಾಗಿ ಯೋಹಾನನು ಅವನನ್ನು ಗದರಿಸಿ ಎಚ್ಚರಿಸಿದನು .

ಆದರೆ ಹೆರೋದನು ಇದೆಲ್ಲಕ್ಕಿಂತ ಕ್ರೂರವಾದ ದುಷ್ಕೃತ್ಯ ಮಾಡಿದನು. ಯೋಹಾನನ್ನು ಸೆರೆಮನೆಗೆ ಹಾಕಿಸಿದನು** (ಲೂಕ3:18-20 ULB)ಈ ಎಲ್ಲಾ ಗುರುತಿಸಲ್ಪಟ್ಟ ವಾಕ್ಯಗಳು ಯೋಹಾನನು ಎಚ್ಚರಿಸುವ ಮೊದಲೇ ನಡೆದದ್ದು. ಇಂಗ್ಲೀಷ್ ಭಾಷೆಯಲ್ಲಿ ಸಹಾಯಕ ಕ್ರಿಯಾಪದವಾದ "had", "had done" ಹೆರೋದನು ಯೋಹಾನನ್ನು ಗದರಿಸಿ ಎಚ್ಚರಿಸುವ ಮೊದಲೇ ನಡೆದದ್ದು ಎಂಬುದನ್ನು ಸೂಚಿಸುತ್ತದೆ.

  1. ಎಲ್ಲಾ ಘಟನೆಗಳನ್ನು ಸರಿಯಾದ ಕ್ರಮದಲ್ಲಿ ಜೋಡಿಸಿ ಬರೆಯಿರಿ ಇದರಿಂದ ಘಟನೆಗಳು ಕ್ರಮವಾಗಿ ಒಂದರನಂತರ ಒಂದು ಬರುತ್ತದೆ.
  • ಹಾಗರಳು ಅಬ್ರಹಾಮನ ಮಗನಿಗೆ ಜನ್ಮಕೊಟ್ಟಳು ಮತ್ತು ಅಬ್ರಹಾಮನು ಅವನ ಮಗನನ್ನು ಇಷ್ಮಾಯೇಲ್ ಎಂದು ಹೆಸರಿಟ್ಟು ಕರೆದನು. ಹಾಗರಳು ಇಷ್ಮಾಯೇಲ್ ನಿಗೆ ಜನ್ಮನೀಡಿದಾಗ ಅಬ್ರಹಾಮನು ಎಂಬತ್ತಾರು ವರ್ಷದವನಾಗಿದ್ದನು . (ಆದಿಕಾಂಡ 16:16 ULB)
  • "ಅಬ್ರಹಾಮನು ಎಂಬತ್ತಾರು ವರ್ಷದವನಾಗಿದ್ದಾಗ , ಹಾಗರಳು ಅವನ ಮಗನಿಗೆ ಜನ್ಮನೀಡಿದಳು ಮತ್ತು ಅಬ್ರಹಾಮನು ಅವನ ಮಗನಿಗೆ ಇಷ್ಮಾಯೇಲ್ ಎಂದು ಹೆಸರಿಟ್ಟನು.
  • ಉಪರಾಜನಾದ ಹೆರೋದನು , ತನ್ನ ಅಣ್ಣನ ಹೆಂಡತಿಯಾದ ಹೆರೋದ್ಯಳನ್ನುಮದುವೆಮಾಡಿಕೊಂಡ , ಮತ್ತು ಅವನು ಮಾಡಿದ ಎಲ್ಲಾ ದುಷ್ಕೃತ್ಯಗಳ ನಿಮಿತ್ತವಾಗಿ ಯೋಹಾನನು ಅವನನ್ನು ಗದರಿಸಿ ಎಚ್ಚರಿಸಿದನು , ಆಮೇಲೆ ಹೆರೋದನು ಇದೆಲ್ಲಕ್ಕಿಂತ ಕ್ರೂರವಾದ ದುಷ್ಕೃತ್ಯ ಮಾಡಿದನು. ಅವನು ಯೋಹಾನನನ್ನು ಸೆರೆಮನೆಗೆ ಹಾಕಿಸಿದನು. (ಲೂಕ 3:18-20) - ಕೆಳಗೆ ಕೊಟ್ಟಿರುವ ಭಾಷಾಂತರವು ಯೋಹಾನನು ಗದರಿಸಿ ಎಚ್ಚರಿಸಿದ ಬಗ್ಗೆ ಮತ್ತು ಹೆರೋದನು ಮಾಡಿದ ಕಾರ್ಯಗಳನ್ನು ಕ್ರಮಗೊಳಿಸಬೇಕು. ಉಪರಾಜನಾದ ಹೆರೋದನು ಅವನ ಅಣ್ಣನ ಹೆಂಡತಿಯಾದ ಹೆರೋದ್ಯಳನ್ನು ಮದುವೆಯಾದನು ಇದರೊಂದಿಗೆ ಅನೇಕ ದುಷ್ಕೃತ್ಯ ಗಳನ್ನು ಮಾಡಿದ್ದರಿಂದ ಯೋಹಾನನು ಗದರಿಸಿ ಎಚ್ಚರಿಸಿದನು. ಇದರಿಂದ ಹೆರೋದನು ಇನ್ನೂ ಹೆಚ್ಚಾದ ದುಷ್ಕೃತ್ಯಗಳನ್ನು ಮಾಡಿದನು. ಯೋಹಾನನನ್ನು ಸೆರೆಮನೆಗೆ ಹಾಕಿಸಿದನು"