kn_ta/translate/translate-tform/01.md

4.8 KiB

ಒಂದು ಅರ್ಥದ ಪ್ರಾಮುಖ್ಯತೆ.

ಸತ್ಯವೇದವನ್ನು ಬರೆದ ಜನರಿಗೆ ದೇವರಿಂದ ಸಂದೇಶವು ದೊರೆಯಿತು, ಜನರು ಅದನ್ನು ಅರ್ಥಮಾಡಿಕೊಳ್ಳಬೇಕೆಂಬದೇ ದೇವರ ಉದ್ದೇಶವಾಗಿತ್ತು. ಈ ಮೂಲ ಲೇಖಕರು ಜನರು ಅಂದು ಮಾತನಾಡುತ್ತಿದ್ದ ಭಾಷೆಯನ್ನೇ ಬಳಸಿ ಈ ಸಂದೇಶಗಳನ್ನು ಸತ್ಯವೇದದಲ್ಲಿ ಬರೆದರು. ಏಕೆಂದರೆ ಈ ಭಾಷೆ ಅವರ ಆಡುಭಾಷೆ ಆದುದರಿಂದ ಅವರಿಗೆ ಸುಲಭವಾಗಿ ಅರ್ಥವಾಗುತ್ತಿತ್ತು. ಇಂದೂ ಸಹ ಜನರು ಆ ಸಂದೇಶಗಳನ್ನು ಅರ್ಥಮಾಡಿಕೊಳ್ಳಬೇಕೆಂದು ದೇವರು ಬಯಸುತ್ತಿದ್ದಾನೆ. ಆದರೆ ಬಹುವರ್ಷಗಳ ಹಿಂದೆ ಬರೆದ ಸತ್ಯವೇದದ ಭಾಷೆಯನ್ನು ಇಂದಿನ ಜನರು ಮಾತನಾಡುತ್ತಿಲ್ಲ.

ಆದುದರಿಂದ ದೇವರು ನಮಗೆ ಒಂದು ವಿಶೇಷ ಜವಾಬ್ದಾರಿಯನ್ನು ನೀಡಿ ಜನರಿಗೆ ಅರ್ಥವಾಗುವ, ಮಾತನಾಡುವ ಭಾಷೆಯಲ್ಲಿ ಸತ್ಯವೇದವನ್ನು ಭಾಷಾಂತರಿಸಲು ಅವಕಾಶ ಮಾಡಿಕೊಟ್ಟಿದ್ದಾನೆ. ದೇವರ ಸಂದೇಶವನ್ನು ಇತರರಿಗೆ ತಿಳಿಸಲು ಕೇವಲ ಒಂದು ನಿರ್ದಿಷ್ಟಭಾಷೆ ಇರಬೇಕೆಂಬುದು ಮುಖ್ಯವಲ್ಲ ಇದರಲ್ಲಿ ನಾವು ಬಳಸುವ ನಿರ್ದಿಷ್ಟ ಪದಗಳು ಮುಖ್ಯವಲ್ಲ. ಇಲ್ಲಿ ಮುಖ್ಯವಾದುದು ಏನೆಂದರೆ ತಿಳಿಸಬೇಕಾದ ವಿಷಯ ಸರಿಯಾಗಿ ಪರಿಣಾಮಕಾರಿಯಾಗಿ ತಲುಪಿತೆ ಎಂದು ನೋಡುವುದು. ಇದರ ಅರ್ಥ ಸಂದೇಶ ತಲುಪಬೇಕೇ ಹೊರತು ಪದಗಳಾಗಲೀ, ಭಾಷೆಯಾಗಲೀ, ಮುಖ್ಯವಲ್ಲ. ಮೂಲಭಾಷೆಯಲ್ಲಿರುವ ಪದಗಳಾಗಲೀ, ವಾಕ್ಯಗಳಾಗಲೀ, ಭಾಷೆಯಾಗಲೀ ನಾವು ಭಾಷಾಂತರ ಮಾಡುವುದು ಮುಖ್ಯವಲ್ಲ. ಆದರೆ ಸರಿಯಾದ ಅರ್ಥವನ್ನು ಗ್ರಹಿಸಿ ಯಾವ ಬದಲಾವಣೆ ಇಲ್ಲದಂತೆ ಭಾಷಾಂತರಿಸಬೇಕು. ಕೆಳಗೆ ಕೊಟ್ಟಿರುವ ಜೋಡಿ ವಾಕ್ಯಗಳನ್ನು ಗಮನಿಸಿ.

  • ರಾತ್ರಿಯೆಲ್ಲಾ ಮಳೆಬಂದಿತು / ಇಡೀ ರಾತ್ರಿ ಮಳೆ ಸುರಿಯಿತು.
  • ಜಾನ್ ಈ ಸುದ್ದಿಯನ್ನು ಕೇಳಿ ತುಂಬಾ ಆಶ್ಚರ್ಯಪಟ್ಟ / ಸುದ್ದಿಯನ್ನು ಕೇಳಿದ ಜಾನ್ ದಿಗ್ಭ್ರಮೆಗೊಂಡನು.
  • ಇದೊಂದು ಬಹು ಬಿಸಿಲಿನ ದಿನ / ದಿನ ಬಿಸಿಯಾಗಿತ್ತು
  • ಪೀಟರ್ ನ ಮನೆ / ಪೀಟರ್ ಗೆ ಸೇರಿದ ಮನೆ

ಈ ಮೇಲಿನ ವಾಕ್ಯಗಳು ಒಂದೇ ಅರ್ಥವನ್ನು ಕೊಡುವ ವಾಕ್ಯಗಳಾದರೂ ಬಳಸಿರುವ ಪದಗಳು ವಿಭಿನ್ನವಾಗಿವೆ. ಈ ರೀತಿಯ ವಾಕ್ಯಗಳು ಒಳ್ಳೆಯ ಭಾಷಾಂತರಕ್ಕೆ ಅವಕಾಶ ಮಾಡಿಕೊಡುತ್ತದೆ. ಮೂಲಗ್ರಂಥದಲ್ಲಿನ ಪದಗಳಿಗಿಂತಾ ವಿಭಿನ್ನ ಪದಗಳನ್ನು ನಾವು ಬಳಸಿದರೂ ಮೂಲ ಅರ್ಥಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳುತ್ತೇವೆ. ನಾವು ಬಳಸುವ ಪದಗಳನ್ನು ನಮ್ಮ ಜನರು ಅರ್ಥಮಾಡಿಕೊಳ್ಳುತ್ತಾರೆ. ಅದನ್ನು ನಾವು ಹೇಗೆ ಬಳಸುತ್ತೇವೆ ಎಂದರೆ ಅದು ನಮ್ಮ ಭಾಷೆಗೆ ಸಹಜವಾಗಿ ಹೊಂದಿಕೊಳ್ಳುವಂತೆ ಇರುತ್ತದೆ. ಮೂಲ ವಾಕ್ಯಭಾಗದಲ್ಲಿರುವ ಅರ್ಥಕೆಡದಂತೆ ಸ್ಪಷ್ಟವಾಗಿ, ಸಹಜವಾಗಿ, ಅರ್ಥಪೂರ್ಣವಾಗಿ ನಮ್ಮ ಭಾಷೆಯಲ್ಲಿ ತಿಳಿಸುವುದೇ ಉತ್ತಮ ಭಾಷಾಂತರದ ಉದ್ದೇಶ.

  • ಕೃತಜ್ಞತೆಗಳು: ಉದಾಹರಣೆ ವಾಕ್ಯಗಳು Barnwell, pp. 19-20, (c) SIL International 1986, used by permission.* ರಿಂದ ಮತ್ತು ಅವರ ಅನುಮತಿ ಪಡೆದು ಬಳಸಿದೆ