kn_ta/translate/translate-problem/01.md

8.5 KiB

ಸ್ವರೂಪ ಅರ್ಥಗಳು ಬದಲಾಗುವದು ಅರ್ಥವೇನು ?

ಅಕ್ಷರಷಃ ಭಾಷಾಂತರದಲ್ಲಿ ಆಕರ ಪಠೄವನ್ನೇ ಭಾಷಾಂತರ ಮಾಡುತ್ತಿರುವ ಭಾಷೆಯಲ್ಲಿ ಹಾಗೆ ಉಳಿಸಿಕೊಳ್ಳಿಳ್ಳುತ್ತದೆ. ಕೆಲವು ಭಾಷಾಂತರಗಾರರು ಇದನ್ನು ಹೀಗೆ ಮಾಡುತ್ತಾರೆ ಏಕೆಂದರೆ. ನಾವು ಬೋಧನಾ ಕೈಪಿಡಿಯಲ್ಲಿ "ಸ್ವರೂಪದ ಮುಖ್ಯತ್ವ," ಎಂಬ ಭಾಗದಲ್ಲಿ ನೋಡಿದಂತೆ ಪಠೄದ ಸ್ವರೂಪ ಅದರ ಅರ್ಥದ ಮೇಲೆ ಪರಿಣಾಮ ಬೀರುತ್ತದೆ. ವಿಭಿನ್ನ ವಿವಿಧ ಸಂಸ್ಕೃತಿಯ ಜನರು ಇದನ್ನು ವಿಭಿನ್ನವಾಗಿ ಅರ್ಥಮಾಡಿಕೊಳ್ಳುವರು ಎಂಬುದನ್ನು ನಾವು ನೆನಪಿನಲ್ಲಿ ಇಡಬೇಕು.

ವಿಭಿನ್ನ ಸಂಸ್ಕೃತಿಯಲ್ಲಿ ಒಂದೇ ಸ್ವರೂಪವು ವಿಭಿನ್ನ ರೀತಿಯಲ್ಲಿ ಅರ್ಥವಾಗಬಹುದು. ಮೂಲ ಸ್ವರೂಪವನ್ನು ಉಳಿಸಿಕೊಳ್ಳಲು ಪ್ರಯತ್ನಿಸುವಾಗ ಭಾಷಾಂತರದಲ್ಲಿ ಮೂಲ ಅರ್ಥವನ್ನು ಹಾಗೆ ಉಳಿಸಿಕೊಳ್ಳಲು ಸಾಧ್ಯವಾಗದೇ ಇರಬಹುದು. ಮೂಲ ಸ್ವರೂಪವನ್ನು ಹೊಸ ಸ್ವರೂಪಕ್ಕೆ ಬದಲಾಯಿಸಿ ಅದರ ಅರ್ಥವನ್ನು ಹಾಗೇ ಉಳಿಸಿಕೊಳ್ಳಬೇಕು. ಇದೇ ಅರ್ಥವನ್ನು ಹೊಸ ಸಂಸ್ಕೃತಿಯ ಮೂಲಕ ತಿಳಿಸಲು ಪ್ರಯತ್ನಿಸಬೇಕು, ಹಳೇ ಸ್ವರೂಪವನ್ನು, ಹಳೇ ಸಂಸ್ಕೃತಿಯಲ್ಲಿ ಉಳಿಸಿಕೊಂಡಂತೆಯೇ ಮಾಡಬೇಕು.

ವಿಭಿನ್ನ ಭಾಷೆಗಳು ವಿಭಿನ್ನ ರೀತಿಯ ಪದಗಳನ್ನು ಮತ್ತು ನುಡಿಗಟ್ಟುಗಳನ್ನು ಬಳಸುತ್ತಾರೆ.

ಮೂಲಭಾಷೆಯ ಪದಗಳ ಕ್ರಮವನ್ನು ನಿಮ್ಮ ಭಾಷಾಂತರದಲ್ಲಿ ಉಳಿಸಿ ಕೊಂಡರೆ ನಿಮ್ಮ ಭಾಷೆ ಮಾತನಾಡುವವರಿಗೆ ಅರ್ಥಮಾಡಿಕೊಳ್ಳಲು ತುಂಬಾ ಕಷ್ಟ ಮತ್ತು ಕೆಲವೊಮ್ಮೆ ಅಸಾಧ್ಯವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಭಾಷಾಂತರ ಮಾಡುತ್ತಿರುವ ಭಾಷೆಯಲ್ಲಿ ಸಹಜವಾದ ಪದಗಳ ಕ್ರಮವನ್ನು ಬಳಸಿದರೆ ನಿಮ್ಮ ಜನರಿಗೆ ಸುಲಭವಾಗಿ ವಾಕ್ಯಭಾಗದ ಅರ್ಥ ಆಗುತ್ತದೆ.

ವಿಭಿನ್ನ ಭಾಷೆಗಳು ವಿಭಿನ್ನ ನುಡಿಗಟ್ಟುಗಳು ಮತ್ತು ಅಭಿವ್ಯಕ್ತಿಯನ್ನು ಬಳಸುತ್ತವೆ.

ಪ್ರತಿಯೊಂದು ಭಾಷೆಯಲ್ಲಿ ಅದರದೇ ಆದ ಸ್ವಂತ ನುಡಿಗಟ್ಟುಗಳು, ಅಭಿವ್ಯಕ್ತಿಗಳು ಇರುತ್ತವೆ ಉದಾಃ ಭಾವನೆಗಳು ಮತ್ತು ಉಚ್ಛಾರಗಳನ್ನು ಪ್ರತಿನಿಧಿಸುವ ಪದಗಳು. ಭಾಷಾಂತರ ಮಾಡುವಾಗ ಪದಗಳನ್ನು ಭಾಷಾಂತರ ಮಾಡಿದರಷ್ಟೇ ಸಾಲದು, ಭಾಷಾಂತರ ಮಾಡುತ್ತಿರುವ ಭಾಷೆಯಲ್ಲಿ ಬಳಸುವ ನುಡಿಗಟ್ಟುಗಳಿಗೆ ಅಥವಾ ಭಾವನೆಗಳಿಗೆ ಅರ್ಥ ಇರುವ ಪದಗಳನ್ನು ಬಳಸಿ. ಇದರಿಂದ ಮೂಲ ಭಾಷೆಯ ಅರ್ಥದಂತೆ ಭಾಷಾಂತರವಾಗುತ್ತಿರುವ ಭಾಷೆಯಲ್ಲೂ ಅರ್ಥವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಪ್ರತಿಯೊಂದು ಪದವನ್ನು ಭಾಷಾಂತರಕ್ಕಾಗಿ ಭಾಷಾಂತರ ಮಾಡಿದರೆ ನುಡಿಗಟ್ಟುಗಳು ಮತ್ತು ಅಭಿವ್ಯಕ್ತಿಗಳಿಗೆ ತಪ್ಪಾದ ಅರ್ಥ ಬರಬಹುದು.

ಕೆಲವು ಪದಗಳಿಗೆ ಬೇರೆ ಸಂಸ್ಕೃತಿಯಲ್ಲಿ ಸಮಾನ ಪದಗಳು ದೊರೆಯದೆ ಇರಬಹುದು.

ಸತ್ಯವೇದದಲ್ಲಿ ಇಂತಹ ಅನೇಕ ಪದಗಳು ಇವೆ ಮತ್ತು ಈ ಪದಗಳು ಈ ಬಳಕೆಯಲ್ಲಿ ಇಲ್ಲ. ಉದಾಹರಣೆಗೆ ಪುರಾತನ ಕಾಲದಲ್ಲಿ ಬಳಸುತ್ತಿದ್ದ ಪದಗಳು /ತೂಕ (ಸ್ಟೇಡಿಯಾ, ಕ್ಯುಬಿಕ್) ಹಣ / ನಾಣ್ಯ (ದಿನಾರಿಯಸ್,ಸ್ಪೇಟರ್) ಅಳತೆ/ ಮಾಪನ (ಹಿನ್, ಎಫಾ) ಕೆಲವೊಮ್ಮೆ ಪ್ರಾಣಿಗಳು ಸಹ ಕೆಲವು ಪ್ರದೇಶದಲ್ಲಿ ಇಲ್ಲದಿರಬಹುದು (ಉದಾ, ನರಿ ಒಂಟೆ, ಕಡಲಹಂದಿ) ಇನ್ನು ಕೆಲ ಪದಗಳು ಇತರ ಸಂಸ್ಕೃತಿಯವರಿಗೆ ಅಪರಿಚಿತವಾಗಿರಬಹುದು ಉದಾ. (ಮಂಜು, ಸುನ್ನತಿ) ಇಂತಹ ಸನ್ನಿವೇಶದಲ್ಲಿ ಈ ಪದಗಳಿಗೆ ಸಮಾನ ಪದಗಳು ದೊರೆಯದೆ ಇದ್ದಾಗ ಅದರ ಹತ್ತಿರದ ಪದಗಳನ್ನು ಬಳಸುವುದು ತಪ್ಪಾಗಬಹುದು. ಭಾಷಾಂತರಗಾರರು ಇಂತಹ ಪದಗಳು ಅರ್ಥವಾಗುವಂತೆ ಹೇಳಲು ದಾರಿ ಹುಡುಕಬೇಕು.

ಸತ್ಯವೇದದಲ್ಲಿನ ಪದಗಳನ್ನು ಅರ್ಥವಾಗುವಂತೆ ಉದ್ದೇಶಿಸಲಾಗಿದೆ,

ಸತ್ಯವೇದದಲ್ಲಿ ಬರುವ ಸಾಕ್ಷಿಗಳೆ ಅರ್ಥವಾಗುವದಕ್ಕಾಗಿ ಬರೆಲಾಗಿದೆ ಎಂದು ತೋರಿಸ\ಸುವುದಕ್ಕೆ ಉದಾಹರಣೆಯಾಗಿದೆ ಉದಾಹರಣೆ. ಸತ್ಯವೇದವನ್ನು ಮೊದಲು ಮೂರು ಭಾಷೆಗಳಲ್ಲಿ ಬರೆಯಲಾಯಿತು, ಏಕೆಂದರೆ ವಿಭಿನ್ನ ದೇವ ಜನರು ವಿಭಿನ್ನ ಸಮಯದಲ್ಲಿ ಬಳಸುತ್ತಿದ್ದರು ಯಹೂದಿಗಳು ಐಗುಪ್ತ ಪ್ರದೇಶದಿಂದ ಬಿಡುಗಡೆಯಾಗಿ ಬಂದಾಗ ಅವರಿಗೆ ಹಿಬ್ರೂ ಭಾಷೆ ಮರೆತು ಹೋಗಿತ್ತು ಯಾಜಕರು ಹಳೇ ಒಡಂಬಡಿಕೆಯ ಗೊತ್ತಿದ್ದ ಮತ್ತು ಅವರಿಗೆ ಅರ್ಥವಾಗುವ ಭಾಗಗಳನ್ನು ಅರಾಮಿಕ್ ಭಾಷೆಗೆ ಭಾಷಾಂತರಿಸಿದರು (ನೆಹೆಮಿಯ 8:8).

ನಂತರ ಹೊಸ ಒಡಂಬಡಿಕೆಯನ್ನು ಅಂದು ಎಲ್ಲರಿಗೂ ಅರ್ಥವಾಗುತ್ತಿದ್ದ ಮತ್ತು ಬಹು ಜನರು ಮಾತನಾಡುತ್ತಿದ್ದ ಸಾಮಾನ್ಯ ಗ್ರೀಕ್ ಭಾಷೆಯಲ್ಲಿ ಬರೆದರು (ಹಿಬ್ರೂ ಅಥವಾ ಅರಾಮಿಕ್ ಅಥವಾ ಶಾಸ್ತ್ರೀಯವಾದ ಗ್ರೀಕ್ ಭಾಷೆಯು ಅರ್ಥಮಾಡಿಕೊಳ್ಳಲು ಸಾಮಾನ್ಯ ಜನರಿಗೆ ಕಷ್ಟವಾಗುತ್ತಿತ್ತು.) ಇವುಗಳಿಂದ ಮತ್ತು ಇತರ ಕಾರಣಗಳಿಂದ ತನ್ನ ಜನರು ವಾಕ್ಯವನ್ನು ಅರ್ಥಮಾಡಿಕೊಳ್ಳುವ ಸಾಮಾನ್ಯ ಭಾಷೆಯಲ್ಲಿ ಬರೆದರೆ ಮಾತ್ರ ಸಾಧ್ಯ ಎಂದು ದೇವರು ತೋರಿಸಿಕೊಟ್ಟಿದ್ದಾನೆ. ಇದರಿಂದ ನಮಗೆ ಸ್ಪಷ್ಟವಾಗಿತಿಳಿಯುವ ವಿಷಯವೇನೆಂದರೆ ಸತ್ಯವೇದವನ್ನು ಅರ್ಥಕ್ಕೆ ಸರಿಯಾಗಿ ಭಾಷಾಂತರಿಸಬೇಕೆ ವಿನಃ ಸತ್ಯವೇದವನ್ನು ಮರುಸೃಷ್ಟಿಸಬಾರದು. ಸತ್ಯವೇದದ ವಾಕ್ಯಗಳಿಗೆ ಸರಿಯಾದ ಅರ್ಥ ನೀಡುವುದು ಮುಖ್ಯವೇ ಹೊರತು ಅದರ ರೂಪವಲ್ಲ.