kn_ta/translate/translate-original/01.md

6.1 KiB

ಮೂಲಭಾಷೆಯಲ್ಲಿನ ಪಠ್ಯಭಾಗ ತುಂಬಾ ನಿಖರವಾಗಿರುತ್ತದೆ.

** ಲಕ್ಷ ವ್ಯಾಖ್ಯಾನ** - ಪ್ರಾರಂಭದಲ್ಲೇ ಮೂಲಭಾಷೆಯಲ್ಲಿ ಸತ್ಯವೇದದ ಎಲ್ಲಾ ವಾಕ್ಯಗಳನ್ನು ಬರೆಯಲಾಗಿದೆ.

** ವಿವರಣೆ** - ಹೊಸ ಒಡಂಬಡಿಕೆಯ ಮೂಲ ಭಾಷೆ ಗ್ರೀಕ್. ಹಳೆ ಒಡಂಬಡಿಕೆಯ ಮೂಲಭಾಷೆ ಹೆಚ್ಚಾಗಿ ಹಿಬ್ರೂ ಭಾಷೆಯಲ್ಲಿ ಬರೆಯಲ್ಪಟ್ಟಿದೆ.

ಹಾಗೆಯೇ ಕೆಲವು ಪುಸ್ತಕಗಳು ಅಂದರೆ ದಾನಿಯೆಲ ಮತ್ತು ಎಜ್ರ ಅರಾಮಿಕ್ ಭಾಷೆಯಲ್ಲಿ ಬರೆಯಲ್ಪಟ್ಟಿವೆ. ಮೂಲಭಾಷೆ ಯಾವಾಗಲೂ ಅತ್ಯಂತ ನಿಖರವಾದ ಭಾಷೆ ಇದರಲ್ಲಿ ಯಾವ ವಾಕ್ಯಭಾಗವನ್ನು ಭಾಷಾಂತರ ಮಾಡಬೇಕು ಎಂಬುದು ತಿಳಿಯುತ್ತದೆ. ಆಕರ ಗ್ರಂಥದ ಭಾಷೆ ಯಾವುದು ಮತ್ತು ಭಾಷಾಂತರ ಯಾವ ಮೂಲ ಭಾಷೆಯಿಂದ ಆಯಿತು ಎಂಬುದು ಮುಖ್ಯ . ಒಬ್ಬ ಭಾಷಾಂತರಗಾರ ಸತ್ಯವೇದವನ್ನು ಮೂಲಭಾಷೆಯಿಂದ ಭಾಷಾಂತರ ಮಾಡುತ್ತಾನೆ ಎಂದರೆ ಅವನಿಗೆ ಮೂಲಭಾಷೆ ಮತ್ತು ಆಕರ ಗ್ರಂಥದ ಭಾಷೆ ಎರಡೂ ಒಂದೇ ಆಗಿರುತ್ತದೆ. ಮೂಲಭಾಷೆಯನ್ನು ಯಾರು ಅನೇಕ ವರ್ಷಗಳಿಂದ ಅಧ್ಯಯನ ಮಾಡಿರುತ್ತಾರೋ ಅವರು ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲರು.ಹಾಗೂ ಆಕರಗ್ರಂಥದ ಭಾಷೆಯನ್ನು ಚೆನ್ನಾಗಿ ಅರ್ಥಮಾಡಿಕೊಂಡು ಬಳಸಬಲ್ಲರು .

ಈ ಕಾರಣಕ್ಕಾಗಿ ಬಹುಮಂದಿ ಭಾಷಾಂತರಗಾರರು ಬಹು ಜನರಿಗೆ ಸುಲಭವಾಗಿ ಅರ್ಥವಾಗುವಂತಹ ಭಾಷೆಯಲ್ಲಿ ಬರೆಯಲ್ಪಟ್ಟ , ಭಾಷಾಂತರಿಸಲ್ಪಟ್ಟ ಸತ್ಯವೇದವನ್ನು ಭಾಷಾಂತರಿಸಲು ತೊಡಗಿ ಇದನ್ನು ಆಕರ ಗ್ರಂಥಭಾಷೆಯನ್ನಾಗಿ ಬಳಸಿಕೊಂಡರು. ಒಂದು ವೇಳೆ ನೀವು ವ್ಯಾಪಕ ಸಂಹನದ ಭಾಷೆಯಿಂದ ಅನುವಾದ ಮಾಡಲು ಯೋಚಿಸಿದರೆ ಆ ಬಾಷೆಯನ್ನು ಸರಿಯಾಗಿ ತಿಳಿದು, ಅದನ್ನು ಭಾಷಾಂತರ ಮಾಡುವ ವ್ಯಕ್ತಿಯ ಸಹಾಯವನ್ನು ಪಡೆಯುವುದು ಒಳ್ಳೆಯದು. ಮೂಲ ಭಾಷೆ ಮತ್ತು ಭಾಷಾಂತರ ಮಾಡಿದ ಭಾಷೆಯಲ್ಲಿನ ಅರ್ಥಗಳು ಸರಿಯಾಗಿ ಇರಬೇಕು. ಮಾಡಿರುವ ಭಾಷಾಂತರದ ಅರ್ಥಗಳು ಸರಿಯಾಗಿದೆಯೋ ಇಲ್ಲವೋ ಎಂದು ತಿಳಿದುಕೊಳ್ಳಲು ಅದೇ ಭಾಷೆಯಲ್ಲಿ ಬರೆಯಲಾಗಿರುವ ಸಹಾಯಕ ಪ್ರತಿಗಳನ್ನು ಅಂದರೆ ಭಾಷಾಂತರ ಪದಗಳು, ಭಾಷಾಂತರ ಟಿಪ್ಪಣಿಗಳು ಭಾಷಾಂತರ ವ್ಯಖ್ಯಾಯಾನಗಳು, ಅವುಗಳ ಪ್ರಶ್ನೆಗಳು ಮತ್ತು ಉತ್ತರ ಇವುಗಳ ಸಹಾಯ ಪಡೆಯಬಹುದು.

ಮೂಲ ಭಾಷೆಯಲ್ಲಿರುವ ಪ್ರತಿ ನಿಖರವಾಗಿಲ್ಲದೆ ಇರಬಹುದು.

ಅನುವಾದಕನಿಗೆ ಮೂಲ ಭಾಷೆ ಅರ್ಥವಾಗದೆ ಹೋದರೆ ಆಗ ಅವನು ವ್ಯಾಪಕ ಸಂಹನದ ಭಾಷೆಯನ್ನು ಮೂಲ ಭಾಷೆಯನ್ನಾಗಿ ಉಪಯೋಗಿಸಬೇಕು. ಭಾಷಾಂತರ ಹೇಗೆ ಮಾಡಲಾಗಿದೆ ಎಂಬ ಆದಾರದ ಮೇಲೆ ನಿಮ್ಮ ಮೂಲ ಭಾಷೆಯ ಅನುವಾದವನ್ನು ಅರ್ಥೈಸಬಹುದು. ಆದರೂ ಅದು ಸತ್ಯವೇದ ಬರೆಯಲಾದ ಭಾಷೆಗಿಂತ ಒಂದು ಹೆಜ್ಜೆ ಹಿಂದೆ ಇರುವುದು. ಕೆಲವು ಸಂದರ್ಭಗಳಲ್ಲಿ ಮೂಲವನ್ನು ವಾಸ್ತವವಾಗಿ, ಕೇವಲ ಎರಡು ಹೆಜ್ಜೆ ದೂರವಿರಿಸಿ ಇನ್ನೊಂದು ಮೂಲದಿಂದ ಅನುವಾದಿಸಬಹುದು.

ಈ ಕೆಳಕಂಡ ಉದಾಹರಣೆಯನ್ನು ಗಮನಸಿರಿ. ಒಬ್ಬ ಅನುವಾದಕ ಸ್ವಾಹಿಲಿ ಹೊಸ ಒಡಂಬಡಿಕೆಯನ್ನು ಮುಂದೆ ಭಾಷಾಂತರ ಮಾಡಲಿರುವ ಭಾಷೆಗೆ ಮೂಲ ಭಾಷೆಯನ್ನಾಗಿ ಇಟ್ಟುಕೊಳ್ಳಬಹುದು. ಹೇಗೂ ಅವನು ಉಪಯೋಗಿಸುವ ಈ ಸ್ವಾಹಿಲಿ ಸತ್ಯವೇದ ಅದು ಆಂಗ್ಲ ಭಾಷೆಯಿಂದ ಅನುವಾದವಾಗಿದೆ ಹೊರತು ಮೂಲ ಗ್ರೀಕ್ ಭಾಷೆಯಿಂದ ಅಲ್ಲ. ಹಾಗಾಗಿ ಭಾಷಾಂತರ ಪ್ರಯೋಗದಲ್ಲಿ ಕೆಲವಾರು ಅರ್ಥಗಳು ಬದಲಾಗಿರಬಹುದು.

ಮಾಡಿರುವ ಭಾಷಾಂತರ ನಿಖರವಾಗಿದೆಯೋ ಇಲ್ಲವೋ ಎಂದು ಸ್ಪಷ್ಟಪಡಿಸಿಕೊಳ್ಳಲು ಹೊಸ ಭಾಷಾಂತರವನ್ನು ಮೂಲ ಭಾಷಾಂತರಕ್ಕೆ ಹೋಲಿಸುವುದು. ಅದು ಸಾಧ್ಯವಾಗದೆ ಹೋದರೆ ಮೂಲ ಭಾಷೆಯಿಂದ ಭಾಷಾಂತರ ಮಾಡಲಾದ ಸತ್ಯವೇದದೊಂದಿಗೆ ULT ಇಟ್ಟುಕೊಂಡು ಅದರೊಂದಿಗೆ ಹೋಲಿಸಿ ನೋಡಿರಿ.