kn_ta/translate/translate-ordinal/01.md

11 KiB
Raw Permalink Blame History

ವಿವರಣೆ

ಕ್ರಮಸೂಚಕ ಸಂಖ್ಯೆಗಳನ್ನು ಸತ್ಯವೇದದಲ್ಲಿ ಮುಖ್ಯವಾಗಿ ಪಟ್ಟಿಯನ್ನು ಮಾಡುವಾಗ ಅದರಲ್ಲಿರುವ ವಸ್ತುಗಳು / ವಿಷಯದ ಸ್ಥಾನದ ಬಗ್ಗೆ ಹೇಳುವಾಗ ಬಳಸುತ್ತಾರೆ.

ದೇವರು ತನ್ನ ಸಭೆಯಲ್ಲಿ ಮೊದಲನೆಯದಾಗಿ ಅಪೋಸ್ತಲರನ್ನು ಎರಡನೆಯದಾಗಿ ಪ್ರವಾದಿಗಳನ್ನು ಮೂರನೆಯದಾಗಿ ಉಪದೇಶಕರನ್ನು ಇಟ್ಟಿದ್ದಾನೆ ; ಆಮೇಲೆ ಮಹಾತ್ಕಾರ್ಯ ಮಾಡುವ ಶಕ್ತಿಯನ್ನು ಇಟ್ಟಿದ್ದಾನೆ (1 ಕೊರಿಂಥ 12:28 ULB)

ಇದು ದೇವರು ಸಭೆಯಲ್ಲಿ ಕೆಲಸ ನಿರ್ವಹಿಸುವ ಕೆಲಸಗಾರರನ್ನು ನೇಮಿಸಿದ ಕ್ರಮಸೂಚಕ ಪಟ್ಟಿ.

ಇಂಗ್ಲೀಷ್ ಭಾಷೆಯ ಕ್ರಮಸೂಚಕ ಸಂಖ್ಯೆಗಳು.

ಇಂಗ್ಲೀಷ್ ಭಾಷೆಯ ಕ್ರಮಸೂಚಕ ಸಂಖ್ಯೆಗಳು "-th" ನಿಂದ ಕೊನೆಗೊಳ್ಳುತ್ತವೆ.

ಅಂಕೆ ಸಂಖ್ಯೆ ಕ್ರಮಸೂಚಕ ಸಂಖ್ಯೆ
4 ನಾಲ್ಕು ನಾಲ್ಕನೆ
10 ಹತ್ತು ಹತ್ತನೆ
100 ಒಂದು ನೂರು ಒಂದು ನೂರನೆ
1,000 ಒಂದು ಸಾವಿರ ಒಂದು ಸಾವಿರದ

ಕೆಲವು ಕ್ರಮಸೂಚಕ ಸಂಖ್ಯೆಗಳು ಇಂಗ್ಲೀಷಿನಲ್ಲಿ ಈ ವಿನ್ಯಾಸವನ್ನು ಅನುಸರಿಸುವುದಿಲ್ಲ.

ಅಂಕೆ ಸಂಖ್ಯೆ ಕ್ರಮಸೂಚಕ ಸಂಖ್ಯೆ
1 ಒಂದು ಮೊದಲ
2 ಎರಡು ಎರಡನೆ
3 ಮೂರು ಮೂರನೆ
5 ಐದು ಐದನೆ
12 ಹನ್ನೆರಡು ಹನ್ನೆರಡನೆ

ಕಾರಣ ಇದೊಂದು ಭಾಷಾಂತರದ ಸಮಸ್ಯೆ

ಕೆಲವು ಭಾಷೆಯ ಪಟ್ಟಿಯಲ್ಲಿ ಕ್ರಮವನ್ನು ಸೂಚಿಸುವ ವಿಶೇಷ ಸಂಖ್ಯೆಗಳು ಇರುವುದಿಲ್ಲ. ಅದರ ಬಗ್ಗೆ ನಿಭಾಯಿಸಲು ಅನೇಕ ದಾರಿಗಳಿವೆ.

ಸತ್ಯವೇದದಲ್ಲಿನ ಕೆಲವು ಉದಾಹರಣೆಗಳು

ಮೊದಲನೆಯ ಚೀಟುಯೆಹೋಯಾರೀಬನಿಗೆ ಬಿದ್ದಿತು ಎರಡನೆಯದುಯೆದಾಯನಿಗೆ, ಮೂರನೆಯದುಹಾರೀಮನಿಗೆ ನಾಲ್ಕನೆಯದು ಸೆಯೋರೀಮನಿಗೆ ಇಪ್ಪತ್ಮೂರನೆಯದು ದೆಲಾಯನಿಗೆ ಮತ್ತು ಇಪ್ಪತ್ತ ನಾಲ್ಕನೆಯದು ಮಾಜ್ಯನಿಗೆ ಬಿದ್ದಿತು. (1 ಪೂರ್ವಕಾಲ ವೃತ್ತಾಂತ 24:7-18 ULB)

ಜನರು ಈ ರೀತಿ ಚೀಟುಹಾಕಿ ಪ್ರತಿಯೊಬ್ಬರನ್ನೂ ಕ್ರಮಸೂಚಕ ಸಂಖ್ಯೆಗಳನ್ನು ನಿರ್ಧರಿಸುತ್ತಿದ್ದರು.

ಅದರ ಮುಂಭಾಗದಲ್ಲಿ ನಾಲ್ಕು ಸಾಲುಗಳಲ್ಲಿ ರತ್ನಗಳನ್ನು ಸೇರಿಸಬೇಕು. ಮೊದಲ ಸಾಲಿನಲ್ಲಿ ಮಾಣಿಕ್ಯ, ಪುಷ್ಯರಾಗ, ಸ್ಫಟಿಕಗಳನ್ನು ಎರಡನೆಯಸಾಲಿನಲ್ಲಿ ಕೆಂಪುಹರಳು, ನೀಲಪಚ್ಚೆಗಳನ್ನು, ವಜ್ರವನ್ನು ಮೂರನೆಯಸಾಲಿನಲ್ಲಿ ಸುವರ್ಣರತ್ನ, ಗೋಮೇದಿಕ, ಧೂಮ್ರಮಣಿಗಳನ್ನು ನಾಲ್ಕನೆಯ ಸಾಲಿನಲ್ಲಿ ಪೀತರತ್ನ, ಬೇರುಲ್ಲ, ವೈಢೂರ್ಯಗಳನ್ನು ಚಿನ್ನದ ಜವೆಯ ಕಲ್ಲಿನಲ್ಲಿ ಸೇರಿಸಬಹುದು. (ವಿಮೋಚನಾ ಕಾಂಡ 28:17-20 ULB)

ಇದು ಅಮೂಲ್ಯ ಕಲ್ಲುಗಳ ಸಾಲುಗಳನ್ನು ವಿವರಿಸುತ್ತದೆ. ಮೊದಲ ಸಾಲು ಬಹುಷಃ ಮೇಲಿನ ಸ್ಥಾನದಲ್ಲಿ ಮತ್ತು ನಾಲ್ಕನೆ ಸ್ಥಾನದಲ್ಲಿ ಇರುವುದು ಬಹುಷಃ ಕೆಳಗಿನ ಸಾಲಿನಲ್ಲಿ ಇವೆ.

ಭಾಷಾಂತರ ತಂತ್ರಗಳು

ನಿಮ್ಮ ಭಾಷೆಯಲ್ಲೂ ಇಂತಹ ಕ್ರಮಸೂಚಕ ಸಂಖ್ಯೆಗಳಿದ್ದು, ಅವುಗಳನ್ನು ಬಳಸುತ್ತಿದ್ದು ಸರಿಯಾದ ಅರ್ಥಕೊಡುತ್ತಿದ್ದರೆ ಅದನ್ನೇ ಬಳಸಲು ಪರಿಗಣಿಸಬಹುದು. ಹಾಗೆ ಇಲ್ಲದಿದ್ದರೆ ಕೆಳಗೆ ಕೊಟ್ಟಿರುವ ಕೆಲವು ವಿಧಾನಗಳನ್ನು ಪರಿಗಣಿಸಬಹುದು.

  1. "ಒಂದು " ಎಂಬುದನ್ನು ಮೊದಲ ವಿಷಯಕ್ಕೆ ಮತ್ತು " ಇನ್ನೊಂದು" ಅಥವಾ "ಮುಂದಿನದು " ಉಳಿದವುಗಳೊಂದಿಗೆ ಬಳಸಬಹುದು
  2. ಮೊದಲು ಎಲ್ಲಾ ವಸ್ತುಗಳ ಒಟ್ಟು ಸಂಖ್ಯೆಯನ್ನು ಹೇಳಬೇಕು ಆಮೇಲೆ ಆ ವಸ್ತುಗಳಿಗೆ ಸಂಬಂಧಿಸಿದವುಗಳನ್ನು ಪಟ್ಟಿಮಾಡಬೇಕು.

ಭಾಷಾಂತರ ವಿಧಾನಗಳನ್ನು ಅಳವಡಿಸಿರುವ ಬಗ್ಗೆ ಉದಾಹರಣೆಗಳು.

  1. ಮೊದಲು ವಿಷಯ / ವಸ್ತುಗಳ ಒಟ್ಟು ಸಂಖ್ಯೆಯ ಬಗ್ಗೆ ಹೇಳಬೇಕು ಆಮೇಲೆ "ಒಂದು " ಎಂಬುದನ್ನು ಮೊದಲವಸ್ತು ಮತ್ತು " ಇನ್ನೊಂದು" ಅಥವಾ "ಮುಂದಿನದು" ಎಂಬುದನ್ನು ಉಳಿದ ವಸ್ತುಗಳೊಂದಿಗೆ ಬಳಸಬಹುದು.
  • ಮೊದಲನೆಯ ಚೀಟು ಯೆಹೋಯಾರೀಬನಿಗೆ, ಎರಡನೆಯದು ಯೆದಾಯನಿಗೆ, ಮೂರನೆಯದು ಹಾರೀಮನಿಗೆ, ನಾಲ್ಕನೆಯದು ಸೆಯೇರೀಮನಿಗೆ, ಇಪ್ಪತ್ಮೂರನೆಯದು ದೆಲಾಯನಿಗೆ ಮತ್ತು ಇಪ್ಪತ್ತ ನಾಲ್ಕನೆಯದು ಮಾಜ್ಯನಿಗೆ ಬಿದ್ದಿತು. (1 ಪೂರ್ವಕಾಲವೃತ್ತಾಂತ 24:7-18 ULB)
  • ಅಲ್ಲಿ ಒಟ್ಟು ಇಪ್ಪತ್ತ ನಾಲ್ಕು ಚೀಟುಗಳಿದ್ದವು. ಒಂದು ಚೀಟುಯೆಹೋಯಾರೀಬನಿಗೆ ಇನ್ನೊಂದು ಯೆದಾಯನಿಗೆ, ಮುಂದಿನದು ಹಾರೀಮನಿಗೆ, … ಅನಂತರದ್ದುದೆಲಾಯನಿಗೆ, ಮತ್ತು ಕೊನೆಯದು ಮಾಜ್ಯನಿಗೆ ಬಿದ್ದಿತು.
  • ಅಲ್ಲಿ ಇಪ್ಪತ್ತ ನಾಲ್ಕು ಚೀಟುಗಳಿದ್ದವು. ಒಂದು ಚೀಟು ಯೆಹೋಯಾರೀಬ ನಿಗೆ. ನಂತರದ್ದು ಯೆದಾಯನಿಗೆ, ನಂತರದ್ದು ಹಾರೀಮನಿಗೆ, … ಮುಂದಿನದು ದೆಲಾಯನಿಗೆ, ಮತ್ತು ಕೊನೆಯದು ಮಾಜ್ಯನಿಗೆ ಬಿದ್ದಿತು.
  • ಏದೇನ್ ತೋಟದಲ್ಲಿ ಒಂದು ನದಿ ಹುಟ್ಟಿ ಹರಿದು ಆ ತೋಟವನ್ನೆಲ್ಲಾ ನೀರಿನಿಂದ ತೋಯಿಸುತ್ತಿತ್ತು. ನದಿ ನಂತರ ನಾಲ್ಕುಕವಲುಗಳಾಗಿ ವಿಂಗಡಿಸಲ್ಪಟ್ಟು ಹರಿಯಿತು. ಮೊದಲ ನದಿಯ ಕವಲಿನ ಹೆಸರು ಪೀಶೋನ್. ಇದು ಬಂಗಾರ ದೊರೆಯುವ “ ಹವೀಲ “ ದೇಶವನ್ನೆಲ್ಲಾ ಸುತ್ತುವರೆದು ಹರಿಯುವುದು. ಈ ದೇಶದ ಬಂಗಾರವು ಶ್ರೇಷ್ಠವಾದದ್ದು. ಅಲ್ಲಿ ಬದೋಲಕ ಧೂಪವು ಗೋಮೇದಿಕ ರತ್ನವೂ ದೊರೆಯುತ್ತದೆ. ಎರಡನೆಯನದಿಯ ಹೆಸರು ಗೆಹೋನ್. ಈ ನದಿಯು ಕೂಷ್ ದೇಶವನ್ನೆಲ್ಲಾ ಸುತ್ತುವರೆದು ಹರಿಯುವುದು. ಮೂರನೆ ನದಿಯ ಹೆಸರು ಟೈಗ್ರಿಸ್ ಇದು ಅಶೂರ್ ದೇಶದ ಪೂರ್ವಕ್ಕೆ ಹರಿಯುತ್ತದೆ. ನಾಲ್ಕನೆಯದು ಯುಫ್ರೆಟಿಸ್. (ಆದಿಕಾಂಡ 2:10-14 ULB)
  • ಒಂದು ನದಿ ಏದೆನ್ ತೋಟದಿಂದ ಹರಿದು ತೋಟವನ್ನೆಲ್ಲಾ ನೀರಿನಿಂದ ತೋಯಿಸುತ್ತಿತ್ತು. ಅಲ್ಲಿಂದ ಮುಂದೆ ಅದು ನಾಲ್ಕು ಕವಲುಗಳಾಗಿ ವಿಭಾಗವಾಯಿತು. ಒಂದರ ಹೆಸರು ಪೀಶೋನ್. ಈ ನದಿಯೇ ಬಂಗಾರ ದೊರಕುವ ಹವಿಲಾ ದೇಶದ ಮೂಲಕ ಹರಿಯುತ್ತದೆ. ಈ ದೇಶದಲ್ಲಿರುವ ಬಂಗಾರವು ಅತ್ಯಮೂಲ್ಯವಾದುದು. ಅಲ್ಲಿ ಬದೋಲಕ ಧೂಪವು ಗೋಮೇದಿಕ ರತ್ನವೂ ಸಿಗುತ್ತದೆ. ನಂತರ ನದಿಯ ಹೆಸರು ಗೆಹೋನ್. ಈ ನದಿಯು ಕೂಷ್ ದೇಶದಲ್ಲೆಲ್ಲಾ ಹರಿಯುತ್ತದೆ. ಮುಂದಿನ ನದಿಯ ಹೆಸರು ಟೈಗ್ರಿಸ್ ಇದು ಅಶೂರ್ ದೇಶದ ಪೂರ್ವಕ್ಕೆ ಹರಿಯುತ್ತದೆ ಕೊನೆಯ ನದಿಯ ಹೆಸರು ಯೂಫ್ರೆಟಿಸ್
  1. ಎಲ್ಲಾ ವಿಷಯಗಳು ಸಂಖ್ಯೆಗಳನ್ನು ಒಟ್ಟಾಗಿ ಹೇಳಿ ಮತ್ತು ನಂತರ ಅವುಗಳಿಗೆ ಸಂಬಂಧಿಸಿದವುಗಳನ್ನು ಪಟ್ಟಿಮಾಡಿ.
  • ಮೊದಲನೆಯ ಚೀಟು ಯೆಹೋಯಾರೀಬನಿಗೆ, ಎರಡನೆಯದು ಯೆದಾಯನಿಗೆ, ಮೂರನೆಯದುಹಾರೀಮನಿಗೆ, ನಾಲ್ಕನೆಯದು ಸೆಯೇರೀಮನಿಗೆ, ಇಪ್ಪತ್ಮೂರನೆಯದು ದೆಲಾಯನಿಗೆ ಮತ್ತು ಇಪ್ಪತ್ತ ನಾಲ್ಕನೆಯದು ಮಾಜ್ಯನಿಗೆ ಬಿದ್ದಿತು. (1 ಪೂರ್ವಕಾಲ ವೃತ್ತಾಂತ 24:7-18 ULB)
  • ಅವರು ಒಟ್ಟು ಇಪ್ಪತ್ತನಾಲ್ಕು ಚೀಟು ಹಾಕಿದರು. ಆ ಚೀಟು ಗಳು ಯೆಹೋಯಾರೀಬ, ಯೆದಾಯ, ಹಾರೀಮ, ಸೆಯೇರೀಮ, ದೆಲಾಯನಿಗೆ ಮತ್ತು ಮಾಜ್ಯನಿಗೆ ಬಿದ್ದವು.