kn_ta/translate/translate-numbers/01.md

12 KiB
Raw Permalink Blame History

ವಿವರಣೆಗಳು.

ಸತ್ಯವೇದದಲ್ಲಿ ಅನೇಕ ಸಂಖ್ಯೆಗಳು ಇವೆ. ಅವುಗಳನ್ನು ಅಕ್ಷರಗಳಲ್ಲಿ ಬರೆಯಬಹುದು. ಉದಾಃ- "ಐದು" ಅಥವಾ "5." ಎಂದೂ ಬರೆಯಬಹುದು. ಕೆಲವು ಸಂಖ್ಯೆಗಳು ತುಂಬಾ ದೊಡ್ಡದಾಗಿದ್ದು ಉದ್ದಕ್ಕೆ ಬರೆಯುತ್ತಾ ಹೋಗಬೇಕಾಗುತ್ತದೆ. ಉದಾಃ "ಇನ್ನೂರು" (200), " ಇಪ್ಪತ್ತೆರಡು ಸಾವಿರ " (22,000), "ಒಂದು ನೂರು ಮಿಲಿಯನ್ " (100,000,000.)

ಕೆಲವು ಭಾಷೆಯಲ್ಲಿ ಇಂತಹ ಸಂಖ್ಯೆಗಳನ್ನುಅಕ್ಷರದಲ್ಲಿ ಬರೆಯಲು ಅವಕಾಶ ಇರುವುದಿಲ್ಲ. ಭಾಷಾಂತರಗಾರರು ಸಂಖ್ಯೆಗಳನ್ನು. ಭಾಷಾಂತರಿಸಲು ನಿರ್ಧರಿಸುವ ಅಗತ್ಯವಿದೆ, ಸಂಖ್ಯೆಗಳಲ್ಲಿ ಬರೆಯಬೇಕೇ ? ಅಕ್ಷರಗಳಲ್ಲಿ ಬರೆಯಬೇಕೇ ಎಂದು ನಿರ್ಧರಿಸಬೇಕು ಕೆಲವು ಸಂಖ್ಯೆಗಳನ್ನು ನಿಖರವಾಗಿ ಮತ್ತು ಸಂಪೂರ್ಣ ಸಂಖ್ಯೆಯಾಗಿ ಬರೆಯಬೇಕು.

ಹಾಗರಳು ಇಷ್ಮಾಯೇಲನಿಗೆ ಜನ್ಮನೀಡಿದಾಗ ಅಬ್ರಹಾಮನಿಗೆ ಎಂಬತ್ತಾರು ವರ್ಷದವನಾಗಿ ಇದ್ದನು. (ಆದಿಕಾಡ16:16 ULB) ಎಂಬತ್ತಾರು (86) ನಿಖರವಾದ ಸಂಖ್ಯೆ.

ಆ ದಿನ ಸುಮಾರು ಮೂರುಸಾವಿರಮಂದಿ ಆ ಜನರೊಳಗೆ ಕೊಲ್ಲಲ್ಪಟ್ಟರು. (ವಿಮೋಚನಾಕಾಂಡ 32:28 ULB)

ಇಲ್ಲಿರುವ 3000/ಮೂರುಸಾವಿರ ಎಂಬುದು ಸಂಪೂರ್ಣಸಂಖ್ಯೆ. ಇದು ಇರುವುದಕ್ಕಿಂತ ಸ್ವಲ್ಪ ಹೆಚ್ಚು ಇಲ್ಲವೆ ಸ್ವಲ್ಪಕಡಿಮೆಯೂ ಇರಬಹುದು "ಸುಮಾರು" ಎಂಬ ಪದ ಇದು ನಿಖರವಾದ ನಿರ್ದಿಷ್ಟವಾದ ಸಂಖ್ಯೆಯಲ್ಲ ಎಂಬುದನ್ನು ತಿಳಿಸುತ್ತದೆ.

** ಕಾರಣವೇನೆಂದರೆ ಇದೊಂದು ಭಾಷಾಂತರ ಪ್ರಕರಣ** ಕೆಲವು ಭಾಷೆಯಲ್ಲಿ ಈ ಕೆಲವು ಸಂಖ್ಯೆಗಳಿಗೆ ಪದಗಳು ಇರುವುದಿಲ್ಲ

ಭಾಷಾಂತರ ತತ್ವಗಳು

  • ನಿಖರವಾದ ಸಂಖ್ಯೆಗಳನ್ನು ಹೆಚ್ಚು ಹತ್ತಿರವಾಗಿ ಮತ್ತು ವಿಶೇಷವಾಗಿ ನಿರ್ದಿಷ್ಟವಾಗಿ ಭಾಷಾಂತರ ಮಾಡಬೇಕು.
  • ಸಂಪೂರ್ಣವಾದ ಸಂಖ್ಯೆಗಳನ್ನು ಸಾಮಾನ್ಯವಾಗಿ ಭಾಷಾಂತರ ಮಾಡುತ್ತಾರೆ.

ಸತ್ಯವೇದದಲ್ಲಿನ ಉದಾಹರಣೆಗಳು

ಎರೇದನು 162ವರ್ಷದವನಾದಾಗ ಹನೋಕನನ್ನು ಮಗನಾಗಿ ಪಡೆದನು. ಹನೋಕನು ಹುಟ್ಟಿದ ಮೇಲೆ ಅವನ ತಂದೆಯಾದ ಎರೇದನು ಎಂಟುನೂರುವರ್ಷಗಳವರೆಗೆ ಬದುಕಿದ್ದನು. ನಂತರ ಅವನು ಅನೇಕ ಗಂಡು ಮತ್ತು ಹೆಣ್ಣು ಮಕ್ಕಳನ್ನು ಪಡೆದನು. ಯೆರೇದನು ಒಟ್ಟು 962ವರಷಗಳು ಬದುಕಿ ಮರಣಹೊಂದಿದನು. (ಆದಿಕಾಂಡ 5:18-20 ULB)

162, ಎಂಟುನೂರು ಮತ್ತು 962 ನಿರ್ದಿಷ್ಟ ಸಂಖ್ಯೆಗಳು ಮತ್ತು ಇವುಗಳನ್ನು ಈ ಸಂಖ್ಯೆಗಳಂತೆ ಭಾಷಾಂತರಿಸಬೇಕು.

ಸಹೋದರಿ,ನೀನುಲಕ್ಷಾಂತರ ಮಕ್ಕಳಿಗೆ ತಾಯಿಯಾಗುವಿ(ಆದಿಕಾಂಡ 24:60 ULB)

ಇದೊಂದು ಸಂಪೂರ್ಣ ಸಂಖ್ಯೆ. ಇದು ಅವಳು ನಿರ್ದಿಷ್ಟವಾಗಿ ಇಷ್ಟೇ ಸಂಖ್ಯೆಯ ಮಕ್ಕಳನ್ನು ಪಡೆಯಬೇಕು ಎಂದು ಹೇಳದೆ ಒಂದು ದೊಡ್ಡ ಸಂಖ್ಯೆಯನ್ನು ತಿಳಿಸುವಂತದ್ದು.

ಭಾಷಾಂತರ ತಂತ್ರಗಳು

  1. ಸಂಖ್ಯೆಗಳನ್ನು ತಿಳಿಸಲು ಅಂಕೆಗಳನ್ನು ಬಳಸಿ ಬರೆಯಿರಿ.
  2. ನಿಮ್ಮ ಭಾಷೆಯ ಪದಗಳನ್ನು ಬಳಸಿ ಸಂಖ್ಯೆಗಳನ್ನು ಬರೆಯಿರಿ. ಅಥವಾ ಗೇಟ್ ವೇ ಭಾಷೆಯ ಪದಗಳನ್ನುಆ ಸಂಖ್ಯೆಗಳಿಗೆ ಬರೆಯಿರಿ.
  3. ಪದಗಳನ್ನು ಬಳಸಿ ಸಂಖ್ಯೆಗಳನ್ನು ಬರೆಯಿರಿ ಮತ್ತು ಅಂಕೆಗಳನ್ನು ಆವರಣದಲ್ಲಿ ಬರೆಯಿರಿ.
  4. ದೊಡ್ಡ ಸಂಖ್ಯೆಗಳನ್ನು ಪದದೊಂದಿಗೆ ಸೇರಿಸಿ ಬರೆಯಿರಿ.
  5. ದೊಡ್ಡ ಸಂಪೂರ್ಣವಾದ ಸಂಖ್ಯೆಗಳಿಗೆ ಸಾಮಾನ್ಯವಾದ ಅಭಿವ್ಯಕ್ತಿಯನ್ನು ಬಳಸಿ ಮತ್ತು ಅಂಕಿಗಳನ್ನು ಆವರಣದಲ್ಲಿ ಬರೆಯಿರಿ.

ಭಾಷಾಂತರ ಕೌಶಲ್ಯಗಳನ್ನು ಅಳವಡಿಸಿರುವ ಬಗ್ಗೆ ಉದಾಹರಣೆಗಳು.

ನಾವು ಕೆಳಗೆ ಕೊಟ್ಟಿರುವ ವಾಕ್ಯಗಳನ್ನು ಉದಾಹರಣೆಯಾಗಿ ಬಳಸಿಕೊಳ್ಳುತ್ತೇವೆ.

ಇಗೋ ನೋಡು, ನಾನು ಬಹು ಪ್ರಯಾಸಪಟ್ಟು, ಯೆಹೋವನ ಆಲಯಕ್ಕಾಗಿ 100,000ತಲಾಂತು ಬಂಗಾರವನ್ನು, ಒಂದು ಮಿಲಿಯನ್ (ಹತ್ತು ಲಕ್ಷ)ತಲಾಂತು ಬೆಳ್ಳಿಯನ್ನು ಮತ್ತು ಲೆಕ್ಕವಿಲ್ಲದಷ್ಟು ತಾಮ್ರ ಮತ್ತು ಕಬ್ಬಿಣ ಇವುಗಳನ್ನು ಒದಗಿಸಿದ್ದೇನೆ. (1 ನೇ ಪೂರ್ವಕಾಲ ವೃತ್ತಾಂತ 22:14 ULB)

  1. ಅಂಕೆಗಳನ್ನು ಬಳಸಿ ಸಂಖ್ಯೆಗಳನ್ನು ಬರೆಯಿರಿ.
  • ನಾನು ಯೆಹೋವನ ಆಲಯಕ್ಕಾಗಿ ಸಿದ್ಧಮಾಡಿರುವುದು 100,000ತಲಾಂತು ಬಂಗಾರ 1,000,000ತಲಾಂತು ಬೆಳ್ಳಿ ಮತ್ತು ಯೆಥೇಚ್ಚವಾದ ತಾಮ್ರ ಮತ್ತು ಕಬ್ಬಿಣ.
  1. ನಿಮ್ಮ ಭಾಷೆಯ ಪದಗಳನ್ನು ಬಳಸಿ ಸಂಖ್ಯೆಗಳನ್ನು ಬರೆಯಿರಿ. ಅಥವಾ ಗೇಟ್ ವೇ ಭಾಷೆಯ ಪದಗಳನ್ನು ಆ ಸಂಖ್ಯೆಗಳಿಗೆ ಬರೆಯಿರಿ.
  • ನಾನು ಯೆಹೋವನ ಆಲಯಕ್ಕಾಗಿಒಂದು ನೂರು ಸಾವಿರ ತಲಾಂತು ಬಂಗಾರ ಒಂದು ಮಿಲಿಯನ್ (ಹತ್ತುಲಕ್ಷ) ತಲಾಂತು ಬೆಳ್ಳಿ ಮತ್ತು ಯೆಥೇಚ್ಛವಾದ ತಾಮ್ರ ಮತ್ತು ಕಬ್ಬಿಣ. ಸಿದ್ಧಮಾಡಿದ್ದೇನೆ.
  1. ಪದಗಳನ್ನು ಬಳಸಿ ಸಂಖ್ಯೆಗಳನ್ನು ಬರೆಯಿರಿ ಮತ್ತು ಅಂಕೆಗಳನ್ನು ಆವರಣದಲ್ಲಿ ಬರೆಯಿರಿ.
  • ನಾನು ಯೆಹೋವನ ಆಲಯಕ್ಕಾಗಿ ಒಂದುನೂರು ಸಾವಿರ (100,000)ತಲಾಂತು ಬಂಗಾರ, ಒಂದು ಮಿಲಿಯನ್ (ಹತ್ತುಲಕ್ಷ) (1,000,000)ತಲಾಂತು ಬೆಳ್ಳಿ ಯೆಥೇಚ್ಛವಾದ ತಾಮ್ರ ಮತ್ತು ಕಬ್ಬಿಣ. ಸಿದ್ಧಮಾಡಿದ್ದೇನೆ.
  1. ದೊಡ್ಡ ಸಂಖ್ಯೆಗಳನ್ನು ಪದದೊಂದಿಗೆ ಸೇರಿಸಿ ಬರೆಯಿರಿ.
  • ನಾನು ಯೆಹೋವನ ಆಲಯಕ್ಕಾಗಿಒಂದು ನೂರು ಸಾವಿರ ತಲಾಂತು ಬಂಗಾರ ಒಂದು ಸಾವಿರ ತಲಾಂತು ಬೆಳ್ಳಿ ಮತ್ತು ಹೆಚ್ಚಾದ ತಾಮ್ರ ಮತ್ತು ಕಬ್ಬಿಣ. ಸಿದ್ಧಮಾಡಿದ್ದೇನೆ./ಕೂಡಿಸಿದ್ದೇನೆ.
  1. ದೊಡ್ಡ ಸಂಪೂರ್ಣವಾದ ಸಂಖ್ಯೆಗಳಿಗೆ ಸಾಮಾನ್ಯವಾದ ಅಭಿವ್ಯಕ್ತಿಯನ್ನು ಬಳಸಿ ಮತ್ತು ಅಂಕಿಗಳನ್ನು ಆವರಣದಲ್ಲಿ ಬರೆಯಿರಿ.
  • ನಾನು ಯೆಹೋವನ ಆಲಯಕ್ಕಾಗಿಯೆಥೇಚ್ಛವಾದ ಬಂಗಾರ (100,000 ತಲಾಂತುಗಳು), ಮತ್ತು ಹತ್ತು ಪಟ್ಟು ಬೆಳ್ಳಿ (1,000,000 ತಲಾಂತುಗಳು), ಯೆಥೇಚ್ಛವಾದ ತಾಮ್ರ ಮತ್ತು ಕಬ್ಬಿಣ. ಕೂಡಿಸಿದ್ದೇನೆ.

ಏಕರೂಪನೀತಿ.

ನಿಮ್ಮ ಭಾಷಾಂತರದಲ್ಲಿ ಏಕರೂಪವನ್ನು ಉಳಿಸಿಕೊಳ್ಳಿ. ಸಂಖ್ಯೆಗಳನ್ನು ಹೇಗೆ ಭಾಷಾಂತರಿಸಬೇಕು ಮತ್ತು ಅಂಕೆಗಳನ್ನು ಬಳಸಿ ಸಂಖ್ಯೆಗಳನ್ನು ಹೇಗೆ ಭಾಷಾಂತರಿಸಬೇಕು ಎಂದು ನಿರ್ಧರಿಸಬೇಕು.

  • ಏಕರೂಪವನ್ನು ಉಳಿಸಿಕೊಳ್ಳಲು ಅನೇಕ ಮಾರ್ಗಗಳಿವೆ.
  • ಎಲ್ಲಾ ಸಮಯದಲ್ಲೂ ಸಂಖ್ಯೆಗಳನ್ನು ಪ್ರತಿನಿಧಿಸುವಂತೆ ಅಂಕೆಗಳನ್ನು ಬಳಸಿಕೊಳ್ಳಿ. (ಕೆಲವೊಮ್ಮೆ ತುಂಬಾ ಉದ್ದವಾದ ಪದಗಳನ್ನು ಬಳಸಬೇಕಾಗಬಹುದು)
  • ಅಂಕೆಗಳನ್ನು ಬಳಸಿ ಎಲ್ಲಾ ಸಮಯದಲ್ಲೂ ಸಂಖ್ಯೆಗಳನ್ನು ಪ್ರತಿನಿಧಿಸುವಂತೆ ಬರೆಯಿರಿ
  • ನಿಮ್ಮ ಭಾಷೆಯಲ್ಲಿ ಸಂಖ್ಯೆಗಳನ್ನು ಪ್ರತಿನಿಧಿಸುವ ಪದಗಳನ್ನು ಮತ್ತು ಅಂಕಿಗಳಿಗೆ ಸಂಖ್ಯೆಗಳನ್ನು ಬರೆದು ನಿಮ್ಮ ಭಾಷೆಯಲ್ಲಿಯ ಪದಗಳನ್ನು ಬರೆಯಿರಿ.
  • ಚಿಕ್ಕ ಸಂಖ್ಯೆಗಳಿಗೆ ಪದಗಳನ್ನು ದೊಡ್ಡ ಸಂಖ್ಯೆಗಳಿಗೆ ಅಂಕೆಗಳನ್ನು ಬಳಸಿ.
  • ಕೆಲವೇ ಅಕ್ಷರಗಳು ಬಳಸಿ ಬರೆಯುವುದಾದರೆ ಸಂಖ್ಯೆಗಳಿಗೆ ಬಳಸಿಕೊಳ್ಳಿ ದೊಡ್ಡ ಸಂಖ್ಯೆಗಳನ್ನು ಅಂಕೆಗಳಿಂದ ಬರೆಯಿರಿ
  • ಸಂಖ್ಯೆಗಳನ್ನುಪ್ರತಿನಿಧಿಸಲು ಪದಗಳನ್ನು ಬಳಸಿ ಮತ್ತು ಅಂಕೆಗಳನ್ನು ಆವರಣದಲ್ಲಿ ಬರೆಯಿರಿ.

ULB ಮತ್ತು UDBಯಲ್ಲಿರುವ ಏಕರೂಪ.

The Unlocked Literal Bible (ULB) and the Unlocked Dynamic Bible (UDB) ಇವುಗಳಲ್ಲಿ ಸಂಖ್ಯೆಗಳಿಗೆ ಪದಗಳನ್ನು ಒಂದು ಅಥವಾ ಎರಡು ಇದ್ದರೆ ಬಳಸಬಹುದು (ಒಂಬತ್ತು, ಹದಿನಾರು, ಮುನ್ನೂರು). ಅವುಗಳಲ್ಲಿ ಒಂದಕ್ಕಿಂತ ಹೆಚ್ಚು ಸಂಖ್ಯೆಗಳಿದ್ದರೆ ಪದಗಳ ಬದಲು ಅಂಕೆಗಳನ್ನೇ ಬಳಸುತ್ತಾರೆ (ಅಂಕೆಗಳು "130" ಎಂಬುದನ್ನು " ಒಂದುನೂರ ಮೂವತ್ತು " ಎಂಬುದನ್ನು ನೂರಮೂವತ್ತು ಎಂದು ಬರೆಯುತ್ತಾರೆ.

ಆದಮ 130ವರ್ಷದವನಾಗಿದ್ದಾಗ ರೂಪದಲ್ಲಿ ತನ್ನ ಹೋಲಿಕೆಗೆ ಸರಿಯಾದ ಮಗನನ್ನು ಪಡೆದು ಸೇತ ಎಂದು ಹೆಸರಿಟ್ಟನು ಸೇತನಿಗೆ ತಂದೆಯಾದ ಮೇಲೆ ಅವನು ಎಂಟುನೂರುವರ್ಷ ಬದುಕಿದ್ದನು. ಅವನು ಅನೇಕ ಗಂಡು,ಹೆಣ್ಣು ಮಕ್ಕಳನ್ನು ಪಡೆದನು ಆದಾಮನು 930ವರ್ಷ ಬದುಕಿ ನಂತರ ಮರಣಹೊಂದಿದನು. (ಆದಿಕಾಡ5:3-5 ULB)