kn_ta/translate/translate-more/01.md

8.9 KiB

ಭಾಷಾಂತರ ಕಾರ್ಯಕ್ಕೆ ಒಬ್ಬ ವ್ಯಕ್ತಿಯ ಅಗತ್ಯವಿದ್ದು ಅವನು ವಿಭಿನ್ನ ಭಾಷೆಗಳು ಮತ್ತು ಮೂಲಭಾಷೆಯ ನಡುವೆ ನಡೆಯುವ ಒಂದು ಪ್ರಕ್ರಿಯೆ ಈ ಪ್ರಕ್ರಿಯೆಯನ್ನು ಮುಂದುವರೆಸಲು ಸಹಾಯಮಾದುತ್ತಾರೆ. ಮೂಲಭಾಷೆಯ ಲೇಖಕರ ಉದ್ದೇಶ ಮತ್ತು ಭಾಷಾಂತರ ಆಗುತ್ತಿರುವ ಭಾಷೆಯ ಓದುಗರ ನಿರೀಕ್ಷೆಯನ್ನು, ಅರ್ಥವಾಗುವಂತೆ ಭಾಷಾಂತರವನ್ನು ಮಾಡಬೇಕಾಗಿದೆ.

ಜನರು ಏಕೆ ಪುಸ್ತಕಗಳನ್ನು ವಾಕ್ಯಭಾಗಗಳನ್ನು ಭಾಷಾಂತರಿಸುತ್ತಾರೆ?

ಸಾಮಾನ್ಯವಾಗಿ ಭಾಷಾಂತರಗಾರರಿಗೆ ಭಾಷಾಂತರ ಕಾರ್ಯ ಮಾಡಲು ಅನೇಕ ಕಾರಣಗಳು ಇರುತ್ತವೆ. ಅವರು ಭಾಷಾಂತರ ಮಾಡಲು ಇರುವ ಕಾರಣಗಳು ಅವರು ಭಾಷಾಂತರ ಮಾಡುವ ವಿಷಯ ಅಥವಾ ದಾಖಲೆಗಳನ್ನು ಅವಲಂಭಿಸಿರುತ್ತದೆ. ಇನ್ನೊಂದು ಕಾರಣವೆಂದರೆ ಭಾಷಾಂತರ ಮಾಡಲು ತಿಳಿಸಿದ ವ್ಯಕ್ತಿಯ ಬೇಡಿಕೆಗೆ ಅನುಗುಣವಾಗಿ ಇರುತ್ತದೆ. ಸತ್ಯವೇದವನ್ನು ಭಾಷಾಂತರ ಮಾಡುವಾಗ ಭಾಷಾಂತರ ಆಗುತ್ತಿರುವ ಭಾಷೆಯ ಜನರಿಗೆ ಸುಲಭವಾಗಿ ಸತ್ಯವೇದದ ಅಂಶಗಳು ಅರ್ಥವಾಗುವಂತಿರಬೇಕು. ಮೂಲಭಾಷೆಯ ಓದುಗರಿಗೆ ಯಾವ ರೀತಿಯಲ್ಲಿ ಅರ್ಥವಾಗುತ್ತದೋ ಅದೇ ರೀತಿ ಅರ್ಥವಾಗುವಂತೆ ಭಾಷಾಂತರ ಮಾಡಬೇಕು. ಏಕೆಂದರೆ ಸತ್ಯವೇದದಲ್ಲಿರುವ ದೇವರ ಉದ್ದೇಶಗಳು ನಮ್ಮನ್ನು ನಿತ್ಯಜೀವದ ಕಡೆಗೆ ಯೇಸುಕ್ರಿಸ್ತನ ಮೂಲಕ ನಡೆಸುತ್ತದೆ. ಭಾಷಾಂತರ ಆಗುತ್ತಿರುವ ಭಾಷೆಯ ಜನರಿಗೆ ಈ ಎಲ್ಲಾ ಉದ್ದೇಶಗಳು ಯಾವ ಅಡಚಣೆಯೂ ಇಲ್ಲದೆ ಸಂಪೂರ್ಣವಾಗಿ ಅರ್ಥವಾಗುವಂತಿರಬೇಕು ಎಂಬುದು ಭಾಷಾಂತರ ಮಾಡುವವರ ಉದ್ದೇಶ.

ಸತ್ಯವೇದದ ಭಾಷಾಂತರಗಾರರಾಗಿ ನಾವು ಸತ್ಯವೇದದ ಉದ್ದೇಶವನ್ನು ಹೇಗೆ ನಿರೀಕ್ಷಿಸಬಹುದು?

ಮೂಲ ಭಾಷೆಯ ವಾಕ್ಯಭಾಗದಲ್ಲಿರುವ ಉದ್ದೇಶಗಳನ್ನು ಅನೇಕ ರೀತಿಯಲ್ಲಿ ಭಾಷಾಂತರ ಮಾಡ ಬಹುದು. ಅವುಗಳನ್ನು ನಾವು ಪಟ್ಟಿ ಮಾಡಬಹುದು. ಇವುಗಳನ್ನು ಸಂಕ್ಷಿಪ್ತಗೊಳಿಸಿ ಕಡಿಮೆ ವಾಕ್ಯಗಳಲ್ಲಿ ಅರ್ಥಕೆಡದಂತೆ ಇಡಬಹುದು. ಚಿಕ್ಕ ಮಕ್ಕಳಿಗೆ ಬರೆಯುವ ಸತ್ಯವೇದದ ಕತೆಗಳಂತೆ, ಸುಲಭವಾಗಿ ಅರ್ಥವಾಗಲು ಸತ್ಯವೇದದ ಅಧ್ಯಯನಕ್ಕೆ ಸಹಾಯಕವಾಗಿರುವ ಸರಳ ಸತ್ಯವೇದವನ್ನು ಸರಳವಾಗಿ ಭಾಷಾಂತರ ಮಾಡಬಹುದು ಅಥವಾ ಕೆಲವು ವಿಷಯಗಳನ್ನುನಕ್ಷೆಯಮೂಲಕ ಅಥವಾ ಚಿತ್ರಗಳ ಮೂಲಕವೂ ಬರೆಯಬಹುದು.

ಸತ್ಯವೇದದ ಭಾಷಾಂತರಗಾರರು ಸಾಮಾನ್ಯವಾಗಿ ಸತ್ಯವೇದದ ಉದ್ದೇಶಗಳನ್ನು ಎಷ್ಟು ಸಾಧ್ಯವೋ ಅಷ್ಟು ಉತ್ತಮವಾಗಿ ಭಾಷಾಂತರ ಮಾಡಬೇಕು. ಇದರ ಇನ್ನೊಂದು ಅರ್ಥವೆಂದರೆ ಭಾಷಾಂತರಗಾರರು ಮೂಲಭಾಷೆಯಲ್ಲಿನ ಮೂಲ ದಾಖಲೆಗಳು ಮತ್ತು ವಾಕ್ಯಭಾಗಗಳನ್ನು ಯಾವ ಬದಲಾವಣೆಯೂ ಇಲ್ಲದೆ ಮರುಸೃಷ್ಟಿ ಮಾಡಬೇಕು ಪ್ರವಾದನೆಗಾಗಿ ಪ್ರವಾದನೆ, ಪತ್ರಕ್ಕಾಗಿ ಪತ್ರ, ಇತಿಹಾಸದ ಪುಸ್ತಕಕ್ಕಾಗಿ ಇತಿಹಾಸದ ಪುಸ್ತಕ ಹೀಗೆ ಎಲ್ಲವೂ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಮಾಡಬೇಕು) ಮೂಲಪಠ್ಯ/ವಾಕ್ಯಭಾಗಗಳಲ್ಲಿ ಇರುವ ಎಲ್ಲ ರೀತಿಯ ಉದ್ವೇಗ, ಭಾವನೆಗಳನ್ನು ತಮ್ಮ ಭಾಷಾಂತರದಲ್ಲಿ ಯಥಾವತ್ತಾದ ಮರುಸೃಷ್ಟಿ ಮಾಡಿದಂತೆ ಮಾಡಬೇಕು.

ವಾಕ್ಯಭಾಗಗಳಲ್ಲಿ ಉದ್ವೇಗ/ ಒತ್ತಡಗಳು ಎಂದರೆ ಅರ್ಥವೇನು ?

ಕತೆಯಲ್ಲಿರುವ ಪಾತ್ರಗಳಿಗೆ ಮುಂದೆ ಏನಾಗುತ್ತದೋ ಎಂಬ ಉದ್ವೇಗ ಹಾಗೂ ಕುತೂಹಲವನ್ನು ಓದುಗರು ಆಶ್ಚರ್ಯದಿಂದ, ನಿರೀಕ್ಷಣೆಯಿಂದ ಕಾಯುವಂತೆ ಮಾಡುವಂತಿರಬೇಕು. ಪತ್ರಿಕಾ ಭಾಗದಲ್ಲಿ ಬರುವ ಎಚ್ಚರಿಕೆ, ಪ್ರೋತ್ಸಾಹ, ಪ್ರೇರಣೆ, ವಾದವಿವಾದಗಳು, ಎಲ್ಲವೂ ಅದೇ ಪರಿಣಾಮದಲ್ಲಿ ಬರುವಂತೆ ಭಾಷಾಂತರಿಸಬೇಕು. ದಾವೀದನ ಕೀರ್ತನೆಗಳನ್ನು ಓದುವಾಗ ಓದುಗರು ಆ ಒಂದು ಅನುಭವಿಸುವಂತೆ ಮಾಡಲು ಕಾರಂ ಭಾಷಾಂತರ ಮಾಡುವವರಿಗೆ ಕೀರ್ತನೆಗಳು ವಿಶೇಷ ಅನುಭವಕ್ಕೆ ನಡೆಸಿರುತ್ತದೆ. ಹಳೇ ಒಡಂಬಡಿಕೆಯಲ್ಲಿನ ಪ್ರವಾದನಾ ಪುಸ್ತಕದಲ್ಲಿ ಪ್ರವಾದಿಯು ಜನರ ಪಾಪಗಳಿಗಾಗಿ ಖಂಡಿಸುವುದು, ದೇವರ ಕಡೆಗೆ ತಿರುಗಿಕೊಳ್ಳಲು ಎಚ್ಚರಿಕೆಯನ್ನು ನೀಡುವುದನ್ನು ನೋಡುತ್ತೇವೆ. ಇತಂಹ ಸಂದರ್ಭದಲ್ಲಿ ಜನರು ವಿವರಗಳಿಗೆ ತಕ್ಕಂತೆ ಭಾವೋದ್ವೇಗಕ್ಕೆ ಒಳಗಾಗುತ್ತಾರೆ.

ಭವಿಷ್ಯದಲ್ಲಿ ನಡೆಯುವ ಕಾರ್ಯಗಳ ಬಗ್ಗೆ ದೇವರು ನೀಡುವ ವಾಗ್ದಾನಗಳ ಬಗ್ಗೆ ಓದಿದಾಗ ಜನರು ಈ ಬಗ್ಗೆ ಸಂತೋಷ ಹಾಗೂ ವಾಗ್ದಾನ ನೆರವೇರಿದಾಗ ಆಗುವ ಹರ್ಷೋಲ್ಲಾಸ, ಯಾವಾಗ ಆ ವಾಗ್ದಾನ ನೆರವೇರುವುದೋ ಎಂಬ ನಿರೀಕ್ಷೆಯ ಒತ್ತಡ ಅವರಲ್ಲಿರುತ್ತದೆ. ಒಳ್ಳೆ ಭಾಷಾಂತರಗಾರರು ಮೂಲಭಾಷೆಯಲ್ಲಿರುವ ಉದ್ವೇಗ, ಒತ್ತಡಗಳನ್ನು ಚೆನ್ನಾಗಿ ಓದಿ ಅರ್ಥಮಾಡಿಕೊಂಡು ಅನುಭವಿಸಿ ಅದೇ ರೀತಿಯ ಒತ್ತಡದ, ಭಾವನೆಗಳನ್ನು ಭಾಷಾಂತರ ಮಾಡುತ್ತಿರುವ ಭಾಷೆಯ ಜನರು ಅನುಭವಿಸುವಂತೆ ಮರುಸೃಷ್ಟಿಸುತ್ತಾರೆ. ಮೂಲಭಾಷೆಯ ಓದುಗರು ಅನುಭವಿಸುವಂತಹ ಅನುಭವವನ್ನೇ ಭಾಷಾಂತರ ಮಾಡುತ್ತಿರುವ ಭಾಷೆಯ ಜನರು ಅನುಭವಿಸುವಂತೆ ಮಾಡಲು ಮರುಸೃಷ್ಟಿಯ ಬೇರೆ ಮಾರ್ಗವನ್ನು ಹುಡುಕಬಹುದು. ಉದಾಹರಣೆಗೆ ಮೂಲ ಭಾಷೆಯಲ್ಲಿ ಮೂಲ ಓದುಗರಿಗೆ ಎಚ್ಚರಿಕೆ, ಖಂಡನೆ ಆಗಿದ್ದರೆ ಭಾಷಾಂತರ ಆಗುತ್ತಿರುವ ಭಾಷೆಯ ಜನರಿಗೂ ಅದೇ ಎಚ್ಚರಿಕೆ, ಖಂಡನೆಯ ಅನುಭವವಾಗುವಂತೆ ಭಾಷಾಂತರ ಮಾಡಬೇಕು. ಭಾಷಾಂತರಗಾರರು ಭಾಷಾಂತರ ಮಾಡುತ್ತಿರುವ ಭಾಷೆಯಲ್ಲಿ ಖಂಡನೆಯನ್ನು ವ್ಯಕ್ತಪಡಿಸುವಾಗ, ಇತರ ರೀತಿಯ ಸಂಪರ್ಕಗಳು ಇವುಗಳ ಬಗ್ಗೆ ಆಲೋಚಿಸಬೇಕು. ಇದರಿಂದ ಭಾಷಾಂತರದ ಪರಿಣಾಮ ಸೂಕ್ತ ರೀತಿಯಲ್ಲಿ ಆಗಲು ಸಾಧ್ಯ.