kn_ta/translate/translate-manuscripts/01.md

4.1 KiB

ಮೂಲಹಸ್ತಪ್ರತಿಗಳನ್ನು ಬರೆಯುವ ಬಗ್ಗೆ.

ದೇವರು ನೇಮಿಸಿದ ಪ್ರವಾದಿಗಳು ನೂರಾರು ವರ್ಷಗಳ ಹಿಂದೆ ಸತ್ಯವೇದವನ್ನು ಬರೆದರು. ಹಾಗೆಯೇ ಅಪೋಸ್ತಲರಿಗೂ ದೇವರು ನಿರ್ದೇಶಿಸಿದಂತೆ ಬರೆದರು. ಇಸ್ರಾಯೇಲ್ ಜನಾಂಗದವರು ಹಿಬ್ರೂ ಭಾಷೆ ಮಾತನಾಡಿದರು. ಆದುದರಿಂದ ಹಳೆ ಒಡಂಬಡಿಕೆಯ ಬಹುಪಾಲು ಪುಸ್ತಕಗಳು ಹಿಬ್ರೂ ಭಾಷೆಯಲ್ಲೇ ಬರೆಯಲಾಯಿತು. ಅವರು ಅಸ್ಯ ಮತ್ತು ಬ್ಯಾಬಿಲೋನ್ ದೇಶದಲ್ಲಿ ಅಪರಿಚಿತರಂತೆ ವಾಸಿಸಿದಾಗಲೂ ಅರಾಮಿಕ್ ಭಾಷೆ ಮಾತನಾಡಲು ಕಲಿತರು.ಆದುದರಿಂದ ಆಮೇಲಿನ ಕೆಲವು ಹಳೆ ಒಡಂಬಡಿಕೆ ಪುಸ್ತಕಗಳು ಅರಾಮಿಕ್ ಭಾಷೆಯಲ್ಲಿ ಬರೆಯಲ್ಪಟ್ಟವು. ಯೇಸುವಿನ ಜನನ ಆಗುವ ಮುನ್ನೂರು ವರ್ಷಗಳ ಮೊದಲು ಗ್ರೀಕ್ ಭಾಷೆ ಸಂಪರ್ಕ ಭಾಷೆಯಾಗಿ ಪ್ರಚಲಿತವಾಯಿತು.

ಯೂರೋಪಿನಲ್ಲಿ ಮತ್ತು ಪೂರ್ವ ಮಧ್ಯ ಪ್ರದೇಶದಲ್ಲಿ ಅನೇಕ ಜನರು ಗ್ರೀಕ್ ಭಾಷೆಯನ್ನು ತಮ್ಮ ದ್ವಿತೀಯ ಭಾಷೆಯನ್ನಾಗಿ ಮಾತನಾಡುತ್ತಿದ್ದರು. ಆದುದರಿಂದ ಆಗ ಹಳೆ ಒಡಂಬಡಿಕೆ ಪುಸ್ತಕಗಳು ಗ್ರೀಕ್ ಭಾಷೆಯಲ್ಲೂ ಭಾಷಾಂತರವಾಯಿತು. ಯೇಸುವಿನ ಜನನದ ನಂತರವೂ ಪೂರ್ವಮಧ್ಯಪ್ರದೇಶದ ಸುತ್ತ ಇರುವ ಜನರು ಗ್ರೀಕ್ ಭಾಷೆಯನ್ನು ತಮ್ಮ ದ್ವಿತೀಯ ಭಾಷೆಯನ್ನಾಗಿ ಮಾತನಾಡುತ್ತಿದ್ದರು. ನಂತರ ಹೊಸ ಒಡಂಬಡಿಕೆಯ ಎಲ್ಲಾ ಪುಸ್ತಕಗಳನ್ನು ಗ್ರೀಕ್ ಭಾಷೆಯಲ್ಲಿ ಬರೆಯಲಾಯಿತು. ಅಂದಿನ ಕಾಲದಲ್ಲಿ ಮುದ್ರಣಯಂತ್ರಗಳು ಇಲ್ಲದಿದ್ದುದರಿಂದ ಬರಹಗಾರರು ಎಲ್ಲಾ ಪುಸ್ತಕಗಳನ್ನು ಕೈಯಲ್ಲೇ ಬರೆದರು. ಇವುಗಳು ಮೂಲಹಸ್ತಪ್ರತಿಗಳು. ಇವುಗಳನ್ನು ಪ್ರತಿಮಾಡಿದವರೂ ಸಹ ತಮ್ಮ ಕೈಯಿಂದಲೇ ಬರೆದರು.

ಇವುಗಳೂ ಸಹ ಹಸ್ತಪ್ರತಿಗಳು. ಈ ಪುಸ್ತಕಗಳು ಅತ್ಯಂತ ಪ್ರಮುಖವಾದುದು, ಇಂತಹ ಪ್ರತಿಗಳನ್ನು ಸಿದ್ಧಪಡಿಸಿದವರಿಗೆ ಪ್ರತಿಗಳನ್ನು ಸಿದ್ಧಪಡಿಸುವಾಗ ನಿಖರವಾಗಿ ಬಹು, ಎಚ್ಚರಿಕೆಯಿಂದ ಪ್ರತಿ ಮಾಡುವಂತೆ ವಿಶೇಷ ತರಬೇತಿ ನೀಡಲಾಗುತ್ತಿತ್ತು. ನೂರಾರು ವರ್ಷಗಳಲ್ಲಿ ಸಾವಿರಾರು ಸತ್ಯವೇದದ ಪ್ರತಿಗಳನ್ನು ಅನೇಕ ಜನರು ಸಿದ್ಧಪಡಿಸಿದರು. ಆದರೆ ಮೂಲ ಲೇಖಕರು ಬರೆದ ಎಲ್ಲಾ ಹಸ್ತಪ್ರತಿಗಳು ಕಳೆದು ಹೋದುದಲ್ಲದೆ, ಮತ್ತು ಎಲ್ಲೋ ಕಾಣದಾಯಿತು. ಆದುದರಿಂದ ಈಗ ಅವು ನಮಗೆ ಲಭ್ಯವಿಲ್ಲ. ಆದರೆ ನಂತರ ಕೈಯಿಂದ ಬರೆದ ಕೆಲವು ಪ್ರತಿಗಳು ದೊರೆತಿವೆ. ಇಂತಹ ಕೆಲವು ಪ್ರತಿಗಳನ್ನು ಸಾವಿರ ಮತ್ತು ನೂರಾರು ವರ್ಷಗಳಿಂದ ರಕ್ಷಿಸಿ ಇಡಲ್ಪಟ್ಟಿವೆ,.