kn_ta/translate/translate-levels/01.md

3.7 KiB

ಅರ್ಥಗಳ ಹಂತಗಳು

ಮೂಲಭಾಷೆಯಲ್ಲಿರುವ ಅರ್ಥವು ಭಾಷಾಂತರ ಮಾಡುತ್ತಿರುವ ಭಾಷೆಯಲ್ಲೂ ಒಂದೇ ಆಗಿದ್ದರೆ ಉತ್ತಮ ಭಾಷಾಂತರ ಎನಿಸಿಕೊಳ್ಳುತ್ತದೆ. ಎಲ್ಲಾ ಗ್ರಂಥಗಳಲ್ಲೂ ಅರ್ಥಗಳ ಹಂತಗಳು ಇರುತ್ತವೆ. ಹಾಗೆಯೇ ಸತ್ಯವೇದದಲ್ಲೂ ಇದೆ. ಈ ಹಂತಗಳಲ್ಲಿ ಕಂಡು ಬರುವ ಅಂಶಗಳು :

  • ಪದಗಳ ಅರ್ಥ
  • ಪದಗುಚ್ಛಗಳ ಅರ್ಥ
  • ವಾಕ್ಯಗಳ ಅರ್ಥ
  • ಪ್ಯಾರ (ವಾಕ್ಯ ಭಾಗಗಳ) ಅರ್ಥ
  • ಅಧ್ಯಾಯಗಳ ಅರ್ಥ
  • ಪುಸ್ತಕಗಳ ಅರ್ಥ

ಪ್ರತಿಯೊಂದು ಪದಕ್ಕೂ ತನ್ನದೇ ಆದ ಅರ್ಥವಿದೆ.

ನಾವು ಎಷ್ಟೋಸಲ ವಾಕ್ಯ ಭಾಗದ ಅರ್ಥ ಪದಗಳಲ್ಲಿ ಇದೆ ಎಂದು ಯೋಚಿಸುತ್ತೇವೆ. ಆದರೆ ವಾಕ್ಯ ಭಾಗವು ಅದರಲ್ಲಿರುವ ಪ್ರತಿಯೊಂದು ಪದದ ಅರ್ಥವನ್ನು ಸಂಯೋಜಿಸಿ ಹಿಡಿದಿಡುತ್ತದೆ. ಅಂದರೆ ಪ್ರತಿಯೊಂದು ಪದದ ಅರ್ಥದ ವಿಭಿನ್ನ ಹಂತಗಳನ್ನು ಪದಗುಚ್ಛಗಳು, ವಾಕ್ಯಗಳು, ಪ್ಯಾರ, ವಾಕ್ಯಬಂಧಗಳಲ್ಲಿ ಒಳಗೊಂಡಿರುತ್ತದೆ. ಉದಾಹರಣೆಗೆ ಒಂದು ಚಿಕ್ಕ ಪದ "ಕೊಡು" ಈ ಕೆಳಗೆ ಕೊಟ್ಟಿರುವ ವಿವಿಧ ಅರ್ಥಗಳನ್ನು ಹೊಂದಿದೆ ಎಂಬುದನ್ನು ನೋಡೋಣ.

  • ಉಡುಗೊರೆ ಕೊಡುವುದು
  • ನಿರ್ನಾಮ ಅಥವಾ ಕುಸಿಯುವುದು.
  • ಶರಣಾಗುವುದು.
  • ಬಿಟ್ಟು ಬಿಡುವುದು.
  • ಒಪ್ಪಿಕೊಳ್ಳುವುದು.
  • ಸರಬರಾಜು ಮಾಡು.
  • ಮುಂತಾದುವು

ವಿಶಾಲವಾದ ಅರ್ಥವನ್ನು ರಚಿಸುವುದು.

ಪ್ರತಿಯೊಬ್ಬ ಭಾಷಾಂತರಗಾರನು ಪ್ರತಿಯೊಂದು ಪದವು ಪ್ರತಿಯೊಂದು ಸಂದರ್ಭದಲ್ಲಿ ಯಾವ ಅರ್ಥ ನೀಡುತ್ತದೆ ಎಂದು ತಿಳಿದು ಅದನ್ನು ಭಾಷಾಂತರ ಮಾಡುವ ಪಠ್ಯಭಾಗದಲ್ಲಿ ಮರುಸೃಷ್ಟಿಸಬೇಕು. ಅಂದರೆ ಈ ಪದಗಳನ್ನು ಪ್ರತ್ಯೇಕವಾಗಿ ಭಾಷಾಂತರಮಾಡಲು ಆಗುವುದಿಲ್ಲ ಆದರೆ ಅವುಗಳು ಸರಿಯಾದ ಅರ್ಥವನ್ನು ಪದಗುಚ್ಛಗಳೊಂದಿಗೆ ಒಂದುಗೂಡಿಸಿ ಭಾಷಾಂತರ ಮಾಡಬೇಕು. ಆದುದರಿಂದಲೇ ಭಾಷಾಂತರಗಾರನು ಭಾಷಾಂತರ ಮಾಡುವ ಮೊದಲು ಪ್ಯಾರಾ, ವಾಕ್ಯ ಭಾಗವನ್ನು ಅಧ್ಯಾಯವನ್ನು ಅಥವಾ ಪುಸ್ತಕವನ್ನು ಚೆನ್ನಾಗಿ ಓದಿ ನಂತರ ಭಾಷಾಂತರಿಸಬೇಕು. ಹೀಗೆ ವಿವರವಾಗಿ ಓದುವುದರಿಂದ ವಾಕ್ಯಭಾಗವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಲ್ಲದೆ ಯಾವ ಹಂತದಲ್ಲಿ ಬೇಕಾದರೂ ಭಾಷಾಂತರಿಸಿ ಅರ್ಥವಾಗುವಂತೆ ಮಾಡಲು ಸಹಾಯವಾಗುತ್ತದೆ.