kn_ta/translate/translate-help/01.md

3.6 KiB

ಭಾಷಾಂತರ / ಅನುವಾದದ ಸಹಾಯಕ ವಿಚಾರಗಳನ್ನು ಬಳಸಿಕೊಳ್ಳವುದು.

ಅನುವಾದ ಮಾಡುವವರು ಅದನ್ನು ಅತ್ಯುತ್ತಮವಾಗಿ ಮಾಡುವಂತೆ ಅನುವಾದದ ಟಿಪ್ಪಣಿಗಳು, ಅನುವಾದದ ಪದಗಳು, ಮತ್ತು ಅನುವಾದದ ಪ್ರಶ್ನೆಗಳು ಇವುಗಳನ್ನು ಸಹಾಯಕಾಗಿ ನೀಡಲಾಗಿದೆ.

** ಅನುವಾದದ ಟಿಪ್ಪಣಿಗಳು**. ಅನುವಾದ ಮಾಡುವವರು ಸತ್ಯವೇದದ ಹಿನ್ನೆಲೆಯಲ್ಲಿ ಅದನ್ನು ಸ್ಪಷ್ಟವಾಗಿ ಮಾಡುವಂತೆ ಅದರ ಹಿನ್ನೆಲೆ, ಸಂಸ್ಕೃತಿ ಮತ್ತು ಭಾಷೆ ಇವುಗಳ ವಿವರಣೆ ನೀಡಲಾಗಿದೆ. ಒಂದೇ ವಿಷಯವನ್ನು ವಿವಿಧ ರೀತಿಯಲ್ಲಿ ಹೇಗೆ ತಿಳಿಸಬಹುದು ಎಂದು ಈ ಟಿಪ್ಪಣಿಗಳು ಮಾರ್ಗದರ್ಶನ ನೀಡುತ್ತವೆ. ವಿವರಣೆಗಳಿಗಾಗಿ ನೋಡಿ http://ufw.io/tn/.

** ಅನುವಾದದ ಪದಗಳು**: ಇವು ಸತ್ಯವೇದ ಮತ್ತು ತೆರೆದ ಸತ್ಯವೇದ ಕಥೆಗಳ ಗ್ರಂಥಲ್ಲಿ ಕಾಣುವ ಪ್ರಮುಖ ಪದಗಳಾಗಿವೆ. ಈ ಪದಗಳ ಕುರಿತು ಒಂದು ಸಣ್ಣ ಲೇಖನ ಮತ್ತು ಆ ಪದಗಳು ಸತ್ಯವೇದದಲ್ಲಿ ಮತ್ತು ತೆರೆದ ಸತ್ಯವೇದ ಕಥೆಗಳ ಗ್ರಂಥಲ್ಲಿ ಎಲ್ಲಿ ಬರುತ್ತವೆ ಎಂದು ಉಲ್ಲೇಖಿಸುತ್ತದೆ. ಅನುವಾದ ಮಾಡುವವರು ಸರಿಯಾದ ಪದವನ್ನು ಸರಿಯಾದ್ದ ಸ್ಥಳದಲ್ಲಿ ಉಪಯೋಗಿಸಲು ಇದು ಸಹಾಯ ಮಾಡುತ್ತದೆ. ವಿವರಣೆಗಳಿಗಾಗಿ ನೋಡಿ http://ufw.io/tw/.

** ಅನುವಾದದ ಪ್ರಶ್ನೆಗಳು**. ನಿಮ್ಮ ಅನುವಾದವನ್ನು ಸ್ವಯಂ ಪರಿಶೀಲನೆ ಮಾಡಲ ನೀವು ಬಳಿಸಬಹುದಾದ ಗ್ರಹಿಕೆಯ ಪ್ರಶ್ನೆಗಳು. ನೀವು ಅನುವಾದ ಮಾಡಲಿರುವ ಭಾಷೆಯಲ್ಲಿ ಈ ಪ್ರಶ್ನೆಗಳನ್ನು ಸರಿಯಾಗಿ ಉತ್ತರಿಸಿದರೆ, ಆಗ ಅದು ಅದು ಅತ್ಯುತ್ತಮ ಅನುವಾದ ಎಂದು ಅಂದುಕೊಳ್ಳಬಹುದು. ಈ ಪ್ರಶ್ನೆಗಳು ಉದ್ದೇಶಿತ ಭಾಷಾ ಸಮುದಾಯದೊಂದಿಗೆ ಪರಿಶೀಲಿಸಲು ಉತ್ತಮ ಸಾಧನವಾಗಿದೆ. ವಿವರಣೆಗಳಿಗಾಗಿ ನೋಡಿ http://ufw.io/tw/.

ನೀವು ಅನುವಾದದ ಟಿಪ್ಪಣಿಗಳನ್ನು,ಅನುವಾದದ ಪದಗಳನ್ನು ಮತ್ತು ಅನುವಾದದ ಪ್ರಶ್ನೆಗಳನ್ನು ಸಮಾಲೋಚನೆ ಮಾಡಿದರೆ ಆಗ ನೀವು ಉತ್ತಮವಾದ ಅನುವಾದ ಮಾಡಲು ಸಿದ್ಧರೆಂದು ತಿಳಿದುಕೊಳ್ಳಬಹುದು.

ದಯವಿಟ್ಟು ಅನುವಾದದ ಟಿಪ್ಪಣಿಗಳನ್ನು, ಅನುವಾದದ ಪದಗಳನ್ನು ಮತ್ತು ಅನುವಾದದ ಪ್ರಶ್ನೆಗಳನ್ನು ಸರಿಯಾಗಿ ತಿಳಿದುಕೊಳ್ಳಿರಿ.