kn_ta/translate/translate-formatsignals/01.md

11 KiB
Raw Permalink Blame History

ವಿವರಣೆ

Unlocked Literal Bible (ULB) ಮತ್ತು Unlocked Dynamic Bible (UDB)ಗಳಲ್ಲಿ ಪದಲೋಪ ಗುರುತುಗಳು (ellipsis marks,) ಉದ್ದ ಅಡ್ಡಗೆರೆಗಳು (long dashes) ಮತ್ತು ಪರಿಚ್ಛೇದದ ಗುರುತುಗಳು (indentation) ವಾಕ್ಯಭಾಗದಲ್ಲಿರುವ ಮಾಹಿತಿಗಳು ಹೇಗೆ ಒಂದರೊಡನೊಂದು ಸಂಬಂಧಪಟ್ಟಿದೆ ಹಾಗೂ ಹೊಂದಿಕೊಂಡಿದೆ ಎಂದು ತೋರಿಸಿಕೊಡುತ್ತದೆ.

(ಪದಲೋಪ ಗುರುತುಗಳು) Ellipsis marks

** ಶಬ್ದಾರ್ಥ ನಿರೂಪನೆ / ವ್ಯಾಖ್ಯಾನ** ಪದಲೋಪ ಗುರುತುಗಳು - Ellipsis marks (..) ವಾಕ್ಯವನ್ನು ಹೇಳಲು ಅಥವಾ ಬರೆಯಲು ಪ್ರಾರಂಭಿಸಿ ಇನ್ನು ಅದನ್ನು ಸಂಪೂರ್ಣವಾಗಿ ಮುಗಿಸಿಲ್ಲ ಎಂಬುದನ್ನು ತೋರಿಸಲುಬಳಸುವಂತಾದ್ದು ಅಥವಾ ಲೇಖಕನು ಇನ್ನೊಬ್ಬರು ಹೇಳಿದ ಮಾತುಗಳನ್ನು /ವಾಕ್ಯಗಳನ್ನು ಬಳಸಿಕೊಂಡು ಸಂಪೂರ್ಣವಾಗಿ ಹೇಳದೆ ಇನ್ನೂ ಇದೆ ಎಂಬುದನ್ನು ಸೂಚಿಸಲು ಬಳಸುವಂತದ್ದು. ಮತ್ತಾಯ 9:4-6,ರಲ್ಲಿ ಇಂತಹ ಪದಲೋಪ ಗುರುತುಗಳನ್ನು ಬಳಸಿಕೊಂಡಿರುವುದಕ್ಕೆ ಉದಾಹರಣೆಗಳಿವೆ. ಯೇಸುಶಾಸ್ತ್ರಿ ಪರಿಸಾಯರೊಂದಿಗೆ ಮಾತನಾಡುತ್ತಿದ್ದಾಗ ಒಬ್ಬ ಪಾರ್ಶ್ವವಾಯು ವ್ಯಕ್ತಿಯನ್ನು ಮಾತನಾಡುತ್ತಿದ್ದ ಸಂದರ್ಭ ಒಂದಕ್ಕೆ ಒಳ್ಳೆಯ ಉದಾಹರಣೆ.

ಇವನು ದೇವ ದೂಷಣೆ ಮಾಡುತ್ತಿದ್ದಾನೆ ಎಂದು ತಮ್ಮೊಳಗೆ ಮಾತನಾಡಿಕೊಂಡರು. ಯೇಸು ಅವರ ಅಲೋಚನೆಗಳನ್ನು ತಿಳಿದು,ನೀವು ಏಕೆ ನಿಮ್ಮಮನಸ್ಸಿನಲ್ಲಿ ಕೆಟ್ಟ ಅಲೋಚನೆಗಳನ್ನು ಮಾಡುತ್ತೀರಿ ? ಎಂದು ಕೇಳಿದನು 'ಯಾವುದು ಸುಲಭ ? ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿದೆ ಅನ್ನುವುದೋ ಎದ್ದು ನಡೆ ಅನ್ನುವುದೋ?' ಆದರೆ ಪಾಪಗಳನ್ನು ಕ್ಷಮಿಸಿಬಿಡುವುದಕ್ಕೆ ಮನುಷ್ಯಕುಮಾರನಿಗೆ ಭೂಲೋಕದಲ್ಲಿ ಅಧಿಕಾರ ಉಂಟೆಂದು ನಿಮಗೆ ತಿಳಿಯಬೇಕು .. "ಎಂದು ಹೇಳಿ ಪಾರ್ಶ್ವವಾಯು ರೋಗಿಯನ್ನು ನೋಡಿ “ಎದ್ದು ನಿನ್ನ ಹಾಸಿಗೆಯನ್ನು ಎತ್ತಿಕೊಂಡು ಮನೆಗೆ ಹೋಗು” ಅಂದನು (ULB) ಮಾರ್ಕ 11:31-33,

ರಲ್ಲಿ ಪದಲೋಪಗುರುತುಗಳು ಆ ಮಹಾಯಾಜಕರು ಶಾಸ್ತ್ರಿಗಳು ತಾವು ಹೇಳುವ ವಾಕ್ಯಗಳನ್ನು ಸಂಪೂರ್ಣ ಮಾಡಲಿಲ್ಲ ಅಥವಾ ಮಾರ್ಕನು ಅವರು ಹೇಳಿದ ವಾಕ್ಯಗಳನ್ನು ಸಂಪೂರ್ಣವಾಗಿ ದಾಖಲಿಸಲಿಲ್ಲ ಎಂಬುದನ್ನು ಸೂಚಿಸುತ್ತದೆ.

ಆಗ ಅವರು ಪರಲೋಕದಿಂದ ಬಂತೆಂದು ನಾವು ಹೇಳಿದರೆ " ಹಾಗಾದರೆ ನೀವು ಅವನನ್ನು ಏಕೆ ನಂಬಲಿಲ್ಲ ? ಅಂದಾನು " " ಮನುಷ್ಯರಿಂದ ಬಂತೆಂದು ಹೇಳಿದರೆ ಏನಾಗುವುದೋ ?" ಎಂದು ತಮ್ಮತಮ್ಮೊಳಗೆ ಮಾತನಾಡಿಕೊಳ್ಳುತ್ತಿದ್ದರು. ಯೆಹೋವನು ಪ್ರವಾದಿ ಎಂದು ಜನರೆಲ್ಲರೂ ಯಾವ ಅನುಮಾನವಿಲ್ಲದೆ ತಿಳಿದುಕೊಂಡಿದ್ದರಿಂದ ಇವರಿಗೆ ಜನರ ಭಯವಿತ್ತು.

ಆದುದರಿಂದ ಅವರು" ನಾವು ಅರಿಯೆವು " ಎಂದು ಯೇಸುವಿಗೆ ಉತ್ತರ ಕೊಟ್ಟರು. ಆಗ ಯೇಸು ಅವರಿಗೆ " ಯಾವ ಅಧಿಕಾರದಿಂದ ಇದನ್ನು ಮಾಡುತ್ತೇನೆಂದು ನಾನು ನಿಮಗೆ ಹೇಳುವುದಿಲ್ಲ " ಅಂದನು (ULB)

ಉದ್ದ ಅಡ್ಡ ಗೆರೆಗಳು (Long dashes (—)

** ವ್ಯಾಖ್ಯಾನ** - ಶಬ್ಧಾರ್ಥ ನಿರೂಪಣೆ - Long dashes (—) /ಉದ್ದ ಅಡ್ಡ ಗೆರೆಗಳು ಮೊದಲು ಬಂದ ವಿಚಾರಗಳ ಬಗ್ಗೆ ತಕ್ಷಣವೇ ನೀಡಬೇಕಾದ ಮಾಹಿತಿಯನ್ನು ಪರಿಚಯಿಸುವಾಗ (—) ಬಳಸುತ್ತೇವೆ. ಉದಾಹರಣೆಗೆ.

ಆಗ ಇಬ್ಬರು ಹೊಲದಲ್ಲಿರುವರು " ಒಬ್ಬರು ತೆಗೆದುಕೊಳ್ಳಲ್ಪಡುವನು, ಒಬ್ಬನು ಬಿಡಲ್ಪಡುವನು" ಇಬ್ಬರು ಹೆಂಗಸರು ಬೀಸುಕಲ್ಲಿನ ಮುಂದೆ ಕುಳಿತು ಬೀಸುತ್ತಿರುವರು ಒಬ್ಭಳು ತೆಗೆದು ಕೊಳ್ಳಲ್ಪಡುವಳು ಒಬ್ಬಳು ಬಿಡಲ್ಪಡುವಳು. ಹೀಗಿರಲು ನಿಮ್ಮ ಕರ್ತನು ಬರುವ ದಿನವು ನಿಮಗೆ ಗೊತ್ತಿಲ್ಲವಾದುದರಿಂದ ಎಚ್ಚರವಾಗಿರಿ. (ಮತ್ತಾಯ 24:40-41 ULB)

Parentheses / ಆವರಣ/BRACKET. "()"

** ವ್ಯಾಖ್ಯಾನ** - Parentheses ಆವರಣ/BRACKET "()" ವಾಕ್ಯದಲ್ಲಿ ಬರುವ ಪದಗಳ ಬಗ್ಗೆ ಮಾಹಿತಿಯ ವಿವರಣೆ ಅಥವಾ ಅದಕ್ಕೆ ಸಂಬಂಧಿಸಿ ಇನ್ನೊಂದು ಸಮಾನ ಅರ್ಥ/ ಪದನಂತರ ತಿಳಿಸುವಂತದ್ದು. ಇದು ಹಿನ್ನೆಲೆಯಾಗಿ ಬರುವ ಮಾಹಿತಿಯಾಗಿದ್ದು ಓದುಗರಿಗೆ ಪರಿಪೂರ್ಣವಾಗಿ ಅರ್ಥವಾಗುವಂತೆ ಮಾಡಲು ಲೇಖಕನು ಬಳಸುವ ವಿಧಾನ. ಯೋಹಾನ 6:6,

ರಲ್ಲಿ ಯೇಸು ತಾನು ಏನು ಮಾಡಬೇಕೆಂಬುದನ್ನು ಮೊದಲೇ ತಿಳಿದವನಾಗಿದ್ದ ಎಂಬುದನ್ನು ತಾನು ಬರೆದ ಕಥೆಯಲ್ಲಿ ವ್ಯಕ್ತಪಡಿಸಿದ್ದಾನೆ. ಇದನ್ನು ಆವರಣದಲ್ಲಿ "()" ಬರೆಯಲಾಗಿದೆ.

5ಯೇಸು ಕಣ್ಣೆತ್ತಿ ನೋಡಿದಾಗ ಬಹುಜನರ ಗುಂಪು ತನ್ನ ಬಳಿಗೆ ಬರುವುದನ್ನು ಕಂಡು ಇವರ ಊಟಕ್ಕೆ ಎಲ್ಲಿಂದ ರೊಟ್ಟಿ ಕೊಂಡು ತರೋಣ ? ಎಂದು ಫಿಲಿಪ್ಪನನ್ನು ಕೇಳಿದನು 6(ಯೇಸು ತಾನು ಮಾಡಬೇಕೆಂದಿದ್ದು ತನಗೆ ತಿಳಿದಿದ್ದರೂ ಅವನನ್ನು ಪರೀಕ್ಷಿಸುವುದಕ್ಕೆ ಈ ಮಾತನ್ನು ಹೇಳಿದನು .) 7ಅದಕ್ಕೆ ಫಿಲಿಪ್ಪನು ಒಬ್ಬೊಬ್ಬನಿಗೆ ಸ್ವಲ್ಪಸ್ವಲ್ಪ ಸಿಕ್ಕಬೇಕಾದರೆ ಇನ್ನೂರು ಹಣದ ರೊಟ್ಟಿಯಾದರೂ ಸಾಲದು ಅಂದನು." (ಯೋಹಾನ 6:5-7 ULB)

ಕೆಳಗೆ ಆವರಣದಲ್ಲಿ ಕೊಟ್ಟಿರುವ ಮಾತುಗಳು ಯೇಸು ಹೇಳಿದ ಮಾತುಗಳಲ್ಲ, ಆದರೆ ಮತ್ತಾಯನು ಓದುಗರಿಗೆ ಹೇಳಿದ ಮಾತುಗಳು. ಯೇಸು ಮಾತನಾಡುತ್ತಿದ್ದ ಮಾತುಗಳನ್ನು ಓದುಗರು ಅರ್ಥ ಮಾಡಿಕೊಳ್ಳಲು, ಆಲೋಚಿಸಲು, ಅಭಿವ್ಯಕ್ತಿಗೊಳಿಸಲು ತಿಳಿದುಕೊಳ್ಳುವಂತೆ ಎಚ್ಚರಿಸಿದ್ದಾನೆ.

"ಆದುದರಿಂದ ಪ್ರವಾದಿಯಾದ ದಾನಿಯೇಲನು ಹೇಳಿದಂತಹ ಹಾಳುಮಾಡುವಂತಹ ಅಸಹ್ಯ ವಸ್ತುವು ಪವಿತ್ರ ಸ್ಥಾನದಲ್ಲಿ ನಿಂತಿರುವುದನ್ನು ನೀವು ಕಾಣುವಾಗ " (ಇದನ್ನು ಓದುವವನು ತಿಳಿದುಕೊಳ್ಳಲಿ ), ಯುದಾಯದಲ್ಲಿರುವವರು ಬೆಟ್ಟಗಳಿಗೆ ಓಡಿಹೋಗಲಿ ಮಾಳಿಗೆಯ ಮೇಲೆ ಇರುವವನು ತನ್ನ ಮನೆಯೊಳಗೆ ಇರುವುದನ್ನು ತೆಗೆದುಕೊಳ್ಳಲು ಇಳಿಯದೆ, ಹೊಲದಲ್ಲಿ ಇರುವವನು ತನ್ನ ಹೊದಿಕೆಯನ್ನು ತೆಗೆದುಕೊಳ್ಳುವುದಕ್ಕೆ ಮನೆಗೆ ಹಿಂತಿರುಗದೆ ಓಡಿಹೋಗಲಿ." (ಮತ್ತಾಯ 24:15-18 ULB)

Indentation/ ಪರಿಚ್ಛೇದದ ಗುರುತುಗಳು.

** ವ್ಯಾಖ್ಯಾನ** - ವಾಕ್ಯಭಾಗಗಳು ಪರಿಚ್ಛೇದಗಳಾಗಿ ಬರುವಾಗ ವಾಕ್ಯಭಾಗದ ಸಾಲುಗಳು ಪ್ರಾರಂಭವಾಗಿ ಮೇಲಿನ ಮತ್ತು ಕೆಳಗಿನ ವಾಕ್ಯಗಳನ್ನು ವಿಂಗಡಿಸಿ ಗುರುತಿಸಲ್ಪಡುತ್ತದೆ. ಇದು ಸಾಮಾನ್ಯವಾಗಿ ಪದ್ಯಭಾಗಗಳಲ್ಲಿ, ಕೆಲವು ಪದಗಳನ್ನು ಬಳಸಲಾಗುತ್ತದೆ,.ಯಾವ ಸಾಲಿನಿಂದ ಪ್ರಾರಂಭವಾಗಬೇಕು,ಯಾವ ಸಾಲಿನಲ್ಲಿ ಕೊನೆಗೊಳ್ಳಬೇಕು, ಮಧ್ಯಭಾಗದಲ್ಲಿ ಯಾವಯಾವ ಸಾಲಿನಲ್ಲಿ ಎಲ್ಲೆಲ್ಲಿ ನಿಲ್ಲಿಸ ಬೇಕು ಎಲ್ಲಿಮತ್ತು ಪ್ರಾರಂಭಿಸಬೇಕು ಎಂಬುದನ್ನು ತಿಳಿಸಲು ಬಳಸಲಾಗುತ್ತದೆ. ಉದಾಹರಣೆಗೆ:

5 ನಿಮಗೆ ಯುದ್ದದಲ್ಲಿ ಮುಖ್ಯಸ್ಥರಾಗಿ ಸಹಾಯಕರಾಗಿರ ಬೇಕಾದವರು ಯಾರು ಯಾರೆಂದರೆ 6ರೂಬೆನ್ ಕುಲದಿಂದ ಶೆದೇಯಾದನ ಮಗನಾದ ಎಲೀಚೂರ್ 6ಸಿಮೆಯೋನ್ ಕುಲದಿಂದ ಚೂರೀಷದ್ದೈಯ ಮಗನಾದ ಶೆಲುಮೀಯೇಲ್. 7</sup ಯೆಹೂದನ ಕುಲದಿಂದ ಅಮಿನಾದಾಬನ ಮಗನಾದ ನಹಶೂನ್ (ಅರಣ್ಯಕಾಂಡ 1:5-7 ULB)