kn_ta/translate/translate-discover/01.md

4.2 KiB

ಸತ್ಯವೇದದಲ್ಲಿನ ಪದಗಳ ಅರ್ಥವನ್ನು ಹೇಗೆ ಅನಾವರಣಗೊಳಿಸುವುದು.

ಸತ್ಯವೇದದಲ್ಲಿನ ವಾಕ್ಯಭಾಗಗಳ ಅರ್ಥವನ್ನು ಅನಾವರಣಗೊಳಿಸಲು ವಿವಿಧ ಮಾರ್ಗಗಳು ನಮಗೆ ಸಹಾಯಮಾಡುತ್ತವೆ. ಇದು ವಾಕ್ಯಭಾಗವು ನಮಗೆ ಏನನ್ನು ತಿಳಿಸಲು ಪ್ರಯತ್ನಿಸುತ್ತದೆ ಎಂದು ನಾವು ಸರಿಯಾಗಿ ಅರ್ಥಮಾಡಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಬೇಕು. ಇಲ್ಲಿ ಕೆಲವು ಸಲಹೆಗಳಿವೆ.

  1. ಭಾಷಾಂತರಿಸಬೇಕಾದ ವಾಕ್ಯಭಾಗವನ್ನು ಭಾಷಾಂತರಿಸುವ ಮೊದಲು ಚೆನ್ನಾಗಿ ಓದಿಕೊಳ್ಳಬೇಕು. ನೀವು ಭಾಷಾಂತರಿಸುವ ವಾಕ್ಯಭಾಗವನ್ನು ಭಾಷಾಂತರ ಮಾಡಲು ಪ್ರಾರಂಭಿಸುವ ಮೊದಲು ಚೆನ್ನಾಗಿ ಅರ್ಥಮಾಡಿಕೊಂಡು ಪ್ರಮುಖ ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಭಾಷಾಂತರಿಸಬೇಕಾದ ವಾಕ್ಯಭಾಗವು ನಿರೂಪಣೆಯ ಮಾದರಿಯಲ್ಲಿ ಇದ್ದರೆ ಉದಾಹರಣೆಗೆ ಯೇಸು ಮಾಡಿದ ಮಹತ್ಕಾರ್ಯಗಳಲ್ಲಿ ಒಂದಾಗಿದ್ದರೆ ಅದನ್ನು ಮೂಲ ಸನ್ನಿವೇಶಕ್ಕೆ ತಕ್ಕಂತೆ ಚಿತ್ರಿಸಿ (ಕಣ್ಣಿಗೆ ಕಟ್ಟುವಂತೆ ಹೇಳಿ).

ನೀವೇ ಆ ಸನ್ನಿವೇಶ ನಡೆಯುವಾಗ ಅಲ್ಲಿ ಇದ್ದು ಅನುಭವಿಸಿದಂತೆ ಕಲ್ಪಿಸಿಕೊಳ್ಳಿ. ಅಲ್ಲಿದ್ದ ಜನರು ಹೇಗೆ ಆ ಅನುಭವವನ್ನು ಸ್ವೀಕರಿಸಿದರು ಎಂದು ಕಲ್ಪಿಸಿಕೊಳ್ಳಿ.

  1. ಸತ್ಯವೇದವನ್ನು ಭಾಷಾಂತರಿಸುವಾಗ ಕೊನೆಪಕ್ಷ ಎರಡು ರೀತಿಯ ಸತ್ಯವೇದದ ಪ್ರತಿಗಳನ್ನು ನೀವು ನಿಮ್ಮ ಆಕರಗ್ರಂಥಗಳಾಗಿ ಬಳಸಬೇಕು. ಇಂತಹ ಎರಡು ರೀತಿಯ ಪ್ರತಿಗಳನ್ನು ಬಳಸುವುದರಿಂದ, ಹೋಲಿಸಿ ನೋಡುವುದರಿಂದ ಪದಗಳ ಅರ್ಥವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು, ಒಂದೇ ದೃಷ್ಟಿಕೋನದಲ್ಲಿ ಆಲೋಚಿಸುವುದನ್ನು ತಡೆಯಲು ಸಾಧ್ಯವಾಗುತ್ತದೆ. ಆ ಎರಡು ಆಕರಗಳಾಗಿ ಬಳಸುವ ಸತ್ಯವೇದಗಳು:
  • ಮೂಲಪ್ರತಿಗೆ ಹತ್ತಿರವಾದ ಭಾಷೆಯನ್ನು ಹೊಂದಿರುವ ULB (Unlocked Literal Bible) ನ್ ಒಂದು ಪ್ರತಿ.
  • ಮತ್ತೊಂದು ಅರ್ಥ ಆಧಾರಿತ ಪ್ರತಿ ಅಂದರೆ Unlocked Dynamic Bible (UDB). ಆಗಿರಬೇಕು.
  1. ನಿಮಗೆ ತಿಳಿಯದ ಪದಗಳನ್ನು ಕಲಿತುಕೊಳ್ಳುವ ಸಲುವಾಗಿ ಅನುವಾದ ಪದಗಳ ಸಂಪನ್ಮೂಲಳನ್ನು ಉಪಯೋಗಿಸಿರಿ. ಆ ವಕ್ಯಭಾಗದಲ್ಲಿ ಇರುವ ಪದಗಳನ್ನು ಸರಿಯಾರಿ ಅರ್ಥಮಾಡಿಕೊಳ್ಳಬೇಕು. ULT ಸತ್ಯವೇದದಲ್ಲಿನ ಟಿಪ್ಪಣಿಗಳನ್ನುಉಪಯೋಗಿಸಿರಿ. ಇವು ಅನುವಾದದ ಸ್ಟುಡಿಯೋದಲ್ಲಿ ಮತ್ತು Door43 ಜಾಲತಾಣದಲ್ಲಿ ಲಭ್ಯವಿರುತ್ತದೆ. ಇವುಗಳು ವಾಕ್ಯಗಳ ವಿವರಣೆ ನೀಡುತ್ತದೆ. ಇತರ ಅನುವಾದಗಳ ಸತ್ಯವೇದ, ಸಾಧ್ಯವಾದರೆ ಸತ್ಯವೇದ ವ್ಯಾಖ್ಯಾನಗಳನ್ನು ಸತ್ಯವೇದ ನಿಘಂಟುಗಳನ್ನು ಉಪಯೋಗಿಸಿರಿ.