kn_ta/translate/translate-bweight/01.md

12 KiB
Raw Permalink Blame History

ವಿವರಣೆ

ಈ ಕೆಳಗೆ ಕೊಟ್ಟಿರುವ ಪದಗಳು ಸತ್ಯವೇದದಲ್ಲಿ ಬರುವ ಸಾಮಾನ್ಯ ತೂಕದ ಅಂಶಗಳು. "ಶೆಕಲ್" ಎಂದರೆ "ತೂಕ," (11.5 ಗ್ರಾಂ ತೂಕದ ಬೆಳ್ಳಿ) ಇದರಲ್ಲಿ ತೂಕವನ್ನು ವಿವರಿಸಿದೆ. ಕೆಲವು ತೂಕಗಳನ್ನು ಹಣದ ರೂಪದಲ್ಲಿ ಬಳಸಲಾಗಿದೆ. ಕೆಳಗೆಕೊಟ್ಟಿರುವ ಮೆಟ್ರಿಕ್ ಮೌಲ್ಯಗಳನ್ನು ಕೆಳಗೆ ಕೊಟ್ಟಿರುವ ಸತ್ಯವೇದ ಆಧಾರಿತ ತೂಕಕ್ಕೆ ಅಷ್ಟೇನು ಸಮಾನವಾಗಿಲ್ಲ. ಸತ್ಯವೇದದ ಅಳತೆಗಳು ಮೌಲ್ಯ / ಹಣದ ರೂಪದಲ್ಲಿ ಕಾಲಕಾಲಕ್ಕೆ, ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಭಿನ್ನವಾಗಿರುತ್ತದೆ. ಕೆಳಗೆ ನೀಡಿರುವ ಸಮಾನ ಅಳತೆಯ ಪ್ರಯತ್ನ ಸರಾಸರಿ ಅಳತೆ ಪ್ರಮಾಣವಾಗಿದೆ.

ಮೂಲ ಅಳತೆ


ಶೆಕಲ್ | ಶೆಕೆಲ್|11ಗ್ರಾ | - | ಬೆಕ್ | 1/2 ಶೆಕೆಲ್ | 5.7 ಗ್ರಾಂ | - | ಪಿಮ್| 2/3 ಶೆಕೆಲ್ l | 7.6 ಗ್ರಾಂ | - | ಗೇರಾ 1/20 ಶೆಕೆಲ್ | 0.57 ಗ್ರಾಂ | - | ಮಿನ | 50 ಶೆಕೆಲ್ | 550 ಗ್ರಾಂ | 1/2 ಕಿಲೋ ಗ್ರಾಂ | ತಲಾಂತು | 3,000 ಶೆಕೆಲ್ | - | 34 ಕಿಲೋ ಗ್ರಾಂ |

ಭಾಷಾಂತರ ತತ್ವಗಳು

  1. ಸತ್ಯವೇದದಲ್ಲಿ ಬರುವ ಜನರು ಆಧುನಿಕ ಅಳತೆಗಳಾದ ಮೀಟರ್ ಗಳು, ಲೀಟರ್ ಗಳು ಮತ್ತು ಕಿಲೋಗ್ರಾಂಗಳನ್ನು ಬಳಸಿರಲಿಲ್ಲ. ಮೂಲ ಅಳತೆಗಳನ್ನು ಉಪಯೋಗಿಸುವುದರಿಂದ ಓದುಗರು ಸತ್ಯವೇದವು ನಿಜವಾಗಲೂ ತುಂಬಾ ಹಿಂದೆ ಬರೆಯಲ್ಪಟ್ಟದ್ದು ಎಂದು ತಿಳಿಯುವುದಲ್ಲದೆ ಅಂದಿನ ಜನರು ಇಂದಿನ ಅಳತೆಗಳನ್ನು ಬಳಸಲಿಲ್ಲ ಎಂಬುದನ್ನು ತಿಳಿಯುತ್ತಾರೆ.
  2. ಆಧುನಿಕ ಅಳತೆ ಪ್ರಮಾಣಗಳ ಮೂಲಕ ತಿಳಿಸುವುದರಿಂದ ಅಂದಿನ ಅಳತೆಗಳನ್ನು ಸತ್ಯವೇದದ ಮೂಲಕ ಸುಲಭವಾಗಿ ಅರ್ಥ ಮಾಡಿಕೊಳ್ಳಲು ಅನುಕೂಲವಾಗುತ್ತದೆ.
  3. ಯಾವ ಅಳತೆಯನ್ನೇ ಬಳಸಿದರೂ ಅದು ಒಳ್ಳೆಯದೇ ಸಾಧ್ಯವಾದರೆ ವಾಕ್ಯಭಾಗದಲ್ಲಿರುವ ಅಳತೆಗಳನ್ನು ಅರ್ಥವಾಗುವ ರೀತಿಯಲ್ಲಿ ಹೇಳಬೇಕು ಅಥವಾ ಅಡಿ ಟಿಪ್ಪಣಿಯಲ್ಲಿ ವಿವರಿಸಬೇಕು.
  4. ನೀವು ಸತ್ಯವೇದದ ಅಳತೆಗಳನ್ನು ಬಳಸಿದ್ದರೆ ಅದಕ್ಕೆ ಸಮಾನ ಅಳತೆಗಳನ್ನು ಓದುಗರಿಗೆ ನೀಡುವ ಪ್ರಯತ್ನ ಮಾಡಬೇಡಿ. ಉದಾಹರಣೆಗೆ ಒಂದು".ಗೇರಾ ". ಎಂಬುದನ್ನು ಭಾಷಾಂತರ ಮಾಡುವಾಗ ".57 ಗ್ರಾಂ"ಗಳು ಎಂದು ತಿಳಿಸಿದರೆ ಓದುಗರು ಇದು ನಿಖರವಾದ ಮೌಲ್ಯವುಳ್ಳ ಅಳತೆ ಎಂದು ತಿಳಿಯಬಹುದು. ಅದರ ಬದಲು "ಅರ್ಧ ಗ್ರಾಂ." ಎಂದು ಹೇಳುವುದು ಸರಿಯಾಗಿರಬಹುದು.
  5. ಕೆಲವೊಮ್ಮೆ " ಸುಮಾರು " ಎಂಬ ಪದವನ್ನು ಬಳಸಿ ಉಪಯೋಗಿಸುವ ಅಳತೆ ಪದದ ಅರ್ಥ ಸಮಾನವಲ್ಲ ಎಂದು ತಿಳಿಸುತ್ತದೆ. ಉದಾಹರಣೆಗೆ 2 ನೇ ಸಮುವೇಲ 21:16ರಲ್ಲಿ ಹೇಳಿರುವಂತೆ ಗೊಲಿಯಾತನ ಭರ್ಜಿಯ ತೂಕವು 300 ಶೆಕಲ್ಸ್ ತೂಕದ್ದಾಗಿತ್ತು ಇದನ್ನು "3300 ಗ್ರಾಂ ಗಳು" ಅಥವಾ "3.3 ಕಿಲೋಗ್ರಾಂಗಳು,ಎಂದು ಭಾಷಾಂತರ ಮಾಡುವ ಬದಲು ಅದನ್ನು" ಸುಮಾರು ಮೂರು ಮತ್ತು ಅರ್ಧ ಕಿಲೋಗ್ರಾಂಗಳು " ಎಂದು ಭಾಷಾಂತರಿಸಬೇಕು."
  6. ಸತ್ಯವೇದದಲ್ಲಿ ದೇವರು ಜನರಿಗೆ ಎಷ್ಟು ತೂಕವನ್ನು ಅಳತೆಮಾಡಬೇಕು ಎಂದು ಹೇಳಿದಾಗ ಜನರು ಅದರಂತೆ ತೂಕವನ್ನು ಅಳತೆ ಮಾಡಿದಾಗ ಅದನ್ನು " ಸುಮಾರು " ಎಂಬ ಪದವನ್ನು ಬಳಸಿ ತೂಕದ ಅಳತೆಯನ್ನು ಭಾಷಾಂತರ ಮಾಡಬಾರದು. ಹೀಗೆ ಮಾಡದಿದ್ದರೆ ದೇವರು ನಿಖರವಾದ ಅಳತೆ, ತೂಕದ ಬಗ್ಗೆ ಗಮನ ವಹಿಸದೆ ತೂಕಮಾಡಿದಂತೆ ಅಭಿಪ್ರಾಯ ಮೂಡುತ್ತದೆ.

ಭಾಷಾಂತರ ಕೌಶಲ್ಯಗಳು.

  1. ULBಯಲ್ಲಿರುವ ಅಳತೆಗಳನ್ನು ಬಳಸಿ. ಇದರಲ್ಲಿ ಬಳಸಿರುವ ಅಳತೆ, ಪ್ರಮಾಣಗಳು ಮೂಲ ಲೇಖಕರು ಸತ್ಯವೇದದಲ್ಲಿ ಬಳಸಿದವುಗಳು. ULB ಯಲ್ಲಿ ಬಳಸಿದ ಅಕ್ಷರಗಳು ಮತ್ತು ಅವುಗಳ ಧ್ವನಿ ಉಚ್ಛಾರಣೆಗಳು ಒಂದೇ ರೀತಿಯಾಗಿರಬೇಕೆಂದು ಗಮನವಹಿಸಬೇಕು.(ಪ್ರತಿಮಾಡಿ ಅಥವಾ ಬೇರೇ ಪದಗಳನ್ನು ತಂದುಕೊಳ್ಳಬಹುದು ಈ ಆಧ್ಯಾಯವನ್ನು ನೋಡಿ
  2. UDBಯಲ್ಲಿ ಮೆಟ್ರಿಕ್ ಪದ್ಧತಿಯ ಅಳತೆಗಳನ್ನು ಬಳಸಿ. UDBಯತೆ ಭಾಷಾಂತರ ಮಾಡುವವರು ಈಗಾಗಲೇ ಮೆಟ್ರಿಕ್ ಪದ್ಧತಿಯಂತೆ ಅಳತೆ ಮತ್ತು ಮೌಲ್ಯಗಳನ್ನು ನಿಗಧಿಪಡಿಸಿದ್ದಾರೆ.
  3. ಈಗಾಗಲೇ ನಿಮ್ಮ ಭಾಷೆಯಲ್ಲಿ ಬಳಸಿರುವ ಅಳತೆ ಪ್ರಮಾಣಗಳನ್ನು ಬಳಸಿಕೊಳ್ಳಿ. ಈ ರೀತಿ ಮಾಡುವುದಾದರೆ ನೀವು ಬಳಸಿರುವ ಅಳತೆಗಳನ್ನು ತಿಳಿದುಕೊಳ್ಳಬೇಕು ಮತ್ತು ಅವು ಮೆಟ್ರಿಕ್ ಪದ್ಧತಿಯ ಅಳತೆ ಪ್ರಮಾಣಗಳಿಗೆ ಸಮಾನವಾಗಿದೆಯೇ ಎಂದು ಪ್ರತಿಯೊಂದು ಅಳತೆಗಳನ್ನು ಹೋಲಿಸಿ ನೋಡಬೇಕು.
  4. ULBಯಲ್ಲಿರುವ ಅಳತೆ ಪ್ರಮಾಣಗಳನ್ನು ನಿಮ್ಮ ಜನರು ಉಪಯೋಗಿಸುವ ಅಳತೆ ಪ್ರಮಾಣಗಳನ್ನು ವಾಕ್ಯಭಾಗದಲ್ಲಿ ಅಥವಾ ಟಿಪ್ಪಣಿಯಲ್ಲಿ ಬಳಸಿರುವ ಅಳತೆಗಳನ್ನು ಬಳಸಿಕೊಳ್ಳಿ.
  5. ನಿಮ್ಮ ಜನರಿಗೆ ಗೊತ್ತಿರುವ ಅಳತೆ ಪ್ರಮಾಣಗಳನ್ನು ULB ಅಳತೆ ಪ್ರಮಾಣಗಳೊಂದಿಗೆ ಸೇರಿಸಿ ವಾಕ್ಯಭಾಗ ಅಥವಾ ಟಿಪ್ಪಣಿಗಳಿಂದ ಬಳಸಿಕೊಳ್ಳಿ.

ಭಾಷಾಂತರ ಕೌಶಲ್ಯಗಳನ್ನು ಅಳವಡಿಸಿರುವ ಬಗ್ಗೆ.

ಎಲ್ಲಾ ಕೌಶಲ್ಯಗಳು ಕೆಳಗೆ ಕೊಟ್ಟಿರುವಂತೆ (ವಿಮೋಚನಾ ಕಾಡ38:29 ULB)ರಂತೆ ಅಳವಡಿಸಿದೆ.

  • ಜನರು ಕಾಣಿಕೆಯಾಗಿ ಕೊಟ್ಟ ತಾಮ್ರದ ಲೆಕ್ಕ ಎಪ್ಪತ್ತು ತಲಾಂತು ಮತ್ತು 2,400 ಶೆಕಲ್ ಗಳು s. (ವಿಮೋಚನಾ ಕಾಂಡ 38:29 ULB)
  1. ULBಯಿದ ಅಳತೆ ಪ್ರಮಾಣಗಳನ್ನು ಬಳಸಿಕೊಳ್ಳಿ. ಇದರಲ್ಲಿರುವ ಎಲ್ಲಾ ಅಳತೆ ಪ್ರಮಾಣಗಳು ಮೂಲಲೇಖಕರು ಬರೆಯಲು ಬಳಸಿದಂತವು. ULBಯಲ್ಲಿ ಬಳಸಿದ ಅಕ್ಷರಗಳು ಮತ್ತು ಅವುಗಳ ಧ್ವನಿ ಉಚ್ಛಾರಣೆಗಳು ಒಂದೇ ರೀತಿಯಾಗಿರಬೇಕೆಂದು ಗಮನ ವಹಿಸಬೇಕು.(ಪ್ರತಿಮಾಡಿ ಅಥವಾ ಬೇರೇ ಪದಗಳನ್ನು ತಂದುಕೊಳ್ಳಬಹುದುಈ ಆಧ್ಯಾಯವನ್ನು ನೋಡಿ)
  • ಜನರು ಕಾಣಿಕೆಯಾಗಿ ಕೊಟ್ಟ ತಾಮ್ರದ ಲೆಕ್ಕ ಎಪ್ಪತ್ತು ತಲಾಂತು ಮತ್ತು 2,400 ಶೆಕಲ್ ಗಳು s. (ವಿಮೋಚನಾ ಕಾಂಡ 38:29 ULB)
  1. UDB.ಯಲ್ಲಿ ಕೊಟ್ಟಿರುವ ಮೆಟ್ರಿಕ್ ಅಳತೆ ಪ್ರಮಾಣಗಳನ್ನು ಬಳಸಿಕೊಳ್ಳಿ. UDBಯತೆ ಭಾಷಾಂತರ ಮಾಡುವವರು ಈಗಾಗಲೇ ಮೆಟ್ರಿಕ್ ಪದ್ಧತಿಯಂತೆ ಅಳತೆ ಮತ್ತು ಮೌಲ್ಯಗಳನ್ನು ನಿಗಧಿಪಡಿಸಿದ್ದಾರೆ
  • " ಕಾಣಿಕೆ ರೂಪದಲ್ಲಿ ಬಂದ ತಾಮ್ರ 2,400 ಕಿಲೋಗ್ರಾಂಗಳಷ್ಟು ತೂಕವಿತ್ತು ."
  1. ನಿಮ್ಮ ಭಾಷೆಯಲ್ಲಿ ಈಗಾಗಲೇ ಬಳಸಿರುವ ಅಳತೆ ಪ್ರಮಾಣಗಳನ್ನು ಬಳಸಿಕೊಳ್ಳಿ. ಈ ರೀತಿ ಮಾಡುವುದಾದರೆ ನೀವು ಬಳಸಿರುವ ಅಳತೆಗಳನ್ನು ತಿಳಿದುಕೊಳ್ಳಬೇಕು ಮತ್ತು ಅವು ಮೆಟ್ರಿಕ್ ಪದ್ಧತಿಯ ಅಳತೆ ಪ್ರಮಾಣಗಳಿಗೆ ಸಮಾನವಾಗಿದೆಯೇ ಎಂದು ಪ್ರತಿಯೊಂದು ಅಳತೆಗಳನ್ನು ಹೋಲಿಸಿ ನೋಡಬೇಕು.
  • ಕಾಣಿಕೆ ರೂಪದಲ್ಲಿ ಬಂದ ತಾಮ್ರದ ತೂಕವು 5,300 ಪೌಂಡ್ ಗಳಷ್ಟಿತ್ತು ."
  1. ULBಯಲ್ಲಿರುವ ಅಳತೆ ಪ್ರಮಾಣಗಳನ್ನು ಉಪಯೋಗಿಸಿರಿ. ನಿಮ್ಮ ಜನರು ಉಪಯೋಗಿಸುವ ಅಳತೆ ಪ್ರಮಾಣಗಳನ್ನು ಮತ್ತು.ಅಡಿ ಟಿಪ್ಪಣಿಯಲ್ಲಿರುವ ಅಳತೆಗಳನ್ನು ಬಳಸಿರಿ. ಕೆಳಗೆ ಕೊಟ್ಟಿರುವ ಉದಾಹರಣೆಗಳಲ್ಲಿ ವಾಕ್ಯಭಾಗದಲ್ಲಿರುವ ಎರಡೂ ಅಳತೆಗಳನ್ನು ತಿಳಿಸುತ್ತದೆ.
  • "ಕಾಣಿಕೆಯಾಗಿ ಬಂದ ತಾಮ್ರ ಎಪ್ಪತ್ತು ತಲಾಂತುಗಳು (2,380 ಕಿಲೋಗ್ರಾಂಗಳು)ಮತ್ತು 2,400 ಶೆಕಲ್ ಗಳು (26.4 ಕಿಲೋಗ್ರಾಂಗಳು)."
  1. ನಿಮ್ಮ ಜನರಿಗೆ ಗೊತ್ತಿರುವ ಅಳತೆ ಪ್ರಮಾಣಗಳನ್ನು ULB ಅಳತೆ ಪ್ರಮಾಣಗಳೊಂದಿಗೆ ಸೇರಿಸಿ ವಾಕ್ಯಭಾಗ ಅಥವಾ ಟಿಪ್ಪಣಿಗಳಿಂದ ಬಳಸಿಕೊಳ್ಳಿ ಅಡಿ ಟಿಪ್ಪಣಿಯಿಂದಾಗಬೇಕು. ಕೆಳಗಿನ ಉದಾಹರಣೆಗಳಲ್ಲಿ ULB ಅಳತೆ ಪ್ರಮಾಣಗಳನ್ನು ಟಿಪ್ಪಣಿಯಲ್ಲಿ ಇದ್ದಂತೆ ತಿಳಿಸುತ್ತದೆ.
  • " ಕಾಣಿಕೆಯಾಗಿ ಬಂದ ತಾಮ್ರ ಎಪ್ಪತ್ತು ತಲಾಂತುಗಳು ಮತ್ತು 2,400ಶೆಕಲ್ ಗಳಷ್ಟು ತೂಕವಿತ್ತು.1"
  • ಅಡಿ ಟಿಪ್ಪಣಿ ಈ ರೀತಿ ತೋರುತ್ತದೆ. [1]ಇದರ ಒಟ್ಟು ಮೊತ್ತ 2,400 ಕಿಲೋಗ್ರಾಂಗಳು