kn_ta/translate/translate-bvolume/01.md

19 KiB
Raw Permalink Blame History

ವಿವರಣೆಗಳು

ಕೆಳಗೆ ಕೊಟ್ಟಿರುವ ಪರಿಮಾಣಗಳು ಸಾಮಾನ್ಯವಾಗಿ ಹೆಚ್ಚು ಬಳಸಲ್ಪಡುವಂತದ್ದು ಮತ್ತು ಇದು ಸತ್ಯವೇದದಲ್ಲಿ ಪಾತ್ರೆ ಅಥವಾ ಡಬ್ಬಿ ಎಷ್ಟು ಅಳತೆಯನ್ನು ಹಿಡಿದಿಡ ಬಲ್ಲದು ಎಂದು ತಿಳಿಸುತ್ತದೆ. ಈ ಪಾತ್ರೆಗಳು ಅಥವಾ ಡಬ್ಬಿ ಮತ್ತು ಅಳತೆ ಪರಿಮಾಣಗಳು ದ್ರವರೂಪ (ಉದಾ: ದ್ರಾಕ್ಷಾರಸ) ಮತ್ತು ಒಣ ವಸ್ತುಗಳು (ಉದಾ : ಕಾಳು ಮತ್ತು ದವಸಧಾನ್ಯಗಳು) ಮೆಟ್ರಿಕ್ ಮೌಲ್ಯಗಳು ಸತ್ಯವೇದದಲ್ಲಿ ಬರುವ ಅಳತೆಗಳಿಗೆ ನಿಖರವಾಗಿ ಸಮವಾಗಿರುವುದಿಲ್ಲ

ಕಾಲಕ್ಕೆ ಅನುಗುಣವಾಗಿ, ಸ್ಥಳದಿಂದ ಸ್ಥಳಕ್ಕೆ ಸತ್ಯವೇದದ ಅಳತೆಗಳಲ್ಲಿ ಮೌಲ್ಯಗಳಲ್ಲಿ ವ್ಯತ್ಯಾಸಗಳು ಕಂಡುಬರುತ್ತವೆ. ಕೆಳಗೆ ಕೊಟ್ಟಿರುವ ಅಳತೆ ಪರಿಮಾಣಗಳು ಸಮಾನವಾಗಿಲ್ಲದಿದ್ದರೂಸರಾಸರಿ ಅಳತೆ ಪರಿಮಾಣ ಗಳಾಗಿರುತ್ತವೆ.

ವಿಧ


ಒಣ | ಓಮರ್ | 2 ಲೀಟರ್ | ಒಣ | ಏಫಾ | 22 ಲೀಟರ್ | ಒಣ | ಹೊಮೆರ್ | 220 ಲೀಟರ್ | ಒಣ | ಕೋರ್ | 220 ಲೀಟರ್ | ಒಣ | ಕೋರ್ | 220 ಲೀಟರ್ | ಒಣ | ಲೆತೆಕ್ | 114.8 ಲೀಟರ್ | ದ್ರವ | ಮೀಟರ್ | 40 ಲೀಟರ್ | ದ್ರವ | ಬತ್ | 22 ಲೀಟರ್ | ದ್ರವ | ಹಿನ್ | 3.7 ಲೀಟರ್ | ದ್ರವ | ಕಬ್ | 1.23 ಲೀಟರ್ | ದ್ರವ | ಲಾಗ್ | 0.31 ಲೀಟರ್ |

ಭಾಷಾಂತರ ತತ್ವಗಳು.

  • ಸತ್ಯವೇದದಲ್ಲಿ ಬರುವ ಜನರು ಅಧುನಿಕ ಅಳತೆಗಳಾದ ಲೀಟರ್, ಮೀಟರ್ ಮತ್ತು ಕಿಲೋಗ್ರಾಂಗಳನ್ನು ಬಳಸಿಲ್ಲ ಮೂಲ ಕೃತಿಯಲ್ಲಿರುವ ಅಳತೆ ಪ್ರಮಾಣಗಳನ್ನು ಬಳಸುವುದರಿಂದ ಓದುಗರಿಗೆ ಸತ್ಯವೇದದಲ್ಲಿ ಇರುವ ಅಳತೆಗಳು, ಸತ್ಯವೇದ ತುಂಬಾ ಹಿಂದಿನ ದಿನಗಳಲ್ಲಿ ಬರೆದದ್ದು.ಮತ್ತು ಅಂದಿನ ಜನರು ಈ ಅಳತೆಗಳನ್ನೇ ಬಳಸುತ್ತಿದ್ದರು.ಎಂದು ತಿಳಿದುಕೊಳ್ಳುತ್ತಾರೆ.
  • ಇದರೊಂದಿಗೆ ಆಧುನಿಕ ಅಳತೆ ಪರಿಮಾಣ ತಿಳಿಸಿದರೆ ವಾಕ್ಯಭಾಗವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ.
  • ನೀವು ಯಾವ ಅಳತೆ ಪರಿಮಾಣಗಳನ್ನು ಬಳಸಿದರೂ ಒಳ್ಳೆಯದು.ವಾಕ್ಯಭಾಗದಲ್ಲಿ ಸಾಧ್ಯವಾದರೆ ಅದರ ಬಗ್ಗೆ ವಿವರವಾಗಿ ಹೇಳಬಹುದು ಇಲ್ಲವೆ ಅಡಿ ಟಿಪ್ಪಣಿಯಲ್ಲಿ ತಿಳಿಸಬಹುದು.
  • ನೀವು ಸತ್ಯವೇದದಲ್ಲಿ ಬರುವ ಅಳತೆ ಪರಿಮಾಣಗಳನ್ನು ಉಪಯೋಗಿಸದಿದ್ದರೆ ಓದುಗರಿಗೆ ನೀವು ತಿಳಿಸಿರುವ ಅಳತೆ ಪರಿಮಾಣಗಳ ಬಗ್ಗೆ ನಿಖರವಾದುದು ಎಂದು ವಿವರಣೆ ನೀಡುವುದು ಸಮರ್ಪಕವಾಗಿರುವು ದಿಲ್ಲ. ಉದಾಹರಣೆಗೆ ನೀವು ಒಂದು ಹಿನ್ ಎಂಬುದನ್ನು "3.7 ಲೀಟರ್ ಗಳು," ಎಂದು ಭಾಷಾಂತರಿಸಿದರೆ ಓದುಗರು ಒಂದು " ಹಿನ್ " ಎಂದರೆ ನಿಖರವಾಗಿ "3.7 ಲೀಟರ್ ಗಳುಹೊರತು "3.6 ಅಥವಾ 3.8. ಲೀಟರ್ ಗಳು," ಅಲ್ಲ ಎಂದು ತಿಳಿದುಕೊಳ್ಳುವ ಸಾಧ್ಯತೆ ಇರುತ್ತದೆ. ಅದರ ಬದಲು ಹೆಚ್ಚು ಕಡಿಮೆ ಅಳತೆ ತಿಳಿಸುವಂತೆ " ಮೂರು ಮತ್ತು ಅರ್ಧ ಲೀಟರ್ ಗಳು " ಅಥವಾ " ನಾಲ್ಕು ಲೀಟರ್ ಗಳು " ಎಂದು ತಿಳಿಸುವುದು ಉತ್ತಮ.
  • ದೇವರು ಜನರಿಗೆ ಎಷ್ಟು ಅಳತೆ ಪರಿಮಾಣಗಳನ್ನು ಉಪಯೋಗಿಸಬೇಕು ಎಂದು ಹೇಳಿರುತ್ತಾನೋ ಹಾಗೇ ಜನರು ವಿಧೇಯರಾಗಿ ಅಷ್ಟೇ ಅಳತೆಯನ್ನು ನಿಖರವಾಗಿ ಬಳಸಿಕೊಳ್ಳುವರು.ಆದರೆ ಇದನ್ನು "ಸುಮಾರು" ಎಂಬ ಪದವನ್ನು ಬಳಸಿ ಭಾಷಾಂತರ ಮಾಡಬಾರದು. ಇಲ್ಲದಿದ್ದರೆ ಇದು ದೇವರು ನಿಖರವಾದ ಅಳತೆ ಪರಿಮಾಣಗಳ ಬಗ್ಗೆ ಗಮನವಹಿಸಿಲ್ಲ ಎಂಬ ಅಭಿಪ್ರಾಯ ಬರುವಂತೆ ಮಾಡಬಹುದು.

ಒಂದು ಅಳತೆಯ ಪರಿಮಾಣವನ್ನು ಕುರಿತು ಹೇಳಿದಾಗ.

ಭಾಷಾಂತರ ಕೌಶಲ್ಯಗಳು

  1. ULB ಯಿಂದ ಅಳತೆ ಪರಿಮಾಣಗಳನ್ನು ಬಳಸಿಕೊಳ್ಳಿ. ಇದರಲ್ಲಿರುವ ಅಳತೆ ಪರಿಮಾಣಗಳು ಸತ್ಯವೇದದ ಮೂಲ ಲೇಖಕರು ಬರೆಯಲು ಬಳಸಿದಂತವು. ಈ ಪದಗಳನ್ನು ULBಯಲ್ಲಿರುವ ಧ್ವನಿ ಉಚ್ಛರಣಾ ಪದಗಳಂತೆ ಅದೇ ರೀತಿ ಬಳಸಬೇಕು ನೋಡಿ. (see Copy or Borrow Words)
  2. UDB ಯಲ್ಲಿ ಕೊಟ್ಟಿರುವ ಮೆಟ್ರಿಕ್ ಪದ್ಧತಿಯಂತೆ ಅಳತೆ ಪರಿಮಾಣಗಳನ್ನು ಬಳಸಬೇಕು. UDBಯ ಭಾಷಾಂತರಗಾರರು ಈಗಾಗಲೇ ಮೆಟ್ರಿಕ್ ಪದ್ಧತಿಯಂತೆ ಎಷ್ಟು ಮೌಲ್ಯ ಆಗಬಹುದು ಎಂಬುದನ್ನು ಪ್ರತಿನಿಧಿಸುವಂತೆ ಸಿದ್ಧಮಾಡಿದ್ದಾರೆ.
  3. ನಿಮ್ಮ ಭಾಷೆಯಲ್ಲಿ ಈಗಾಗಲೇ ಉಪಯೋಗಿಸುತ್ತಿರುವ ಅಳತೆ ಪರಿಮಾಣಗಳನ್ನು ಬಳಸಿಕೊಳ್ಳಬಹುದು. ಹಾಗೆ ಮಾಡಬೇಕಾದರೆ ಮೆಟ್ರಿಕ್ ಪದ್ಧತಿಗೆ ನಿಮ್ಮ ಅಳತೆ ಪರಿಮಾಣಗಳು ಎಷ್ಟರಮಟ್ಟಿಗೆ ಸರಿಹೊಂದುತ್ತದೆ ಎಂದು ತಿಳಿದುಕೊಳ್ಳಬೇಕು ಮತ್ತು ಪ್ರತಿಯೊಂದು ಅಳತೆ ಪರಿಮಾಣಗಳನ್ನು ಗುರುತಿಸಬೇಕು.
  4. ನಿಮ್ಮ ಜನರಿಗೆ ಗೊತ್ತಿರುವ ಅಳತೆ, ಪರಿಮಾಣಗಳನ್ನು ULBಯಅಳತೆ ಪರಿಮಾಣಗಳೊಂದಿಗೆ ಸೇರಿಸಿ ವಾಕ್ಯಭಾಗ ಅಥವಾ ಟಿಪ್ಪಣಿಗಳಿಂದ ಬಳಸಿಕೊಳ್ಳಿ.
  5. ನಿಮ್ಮ ಜನರಿಗೆ ಗೊತ್ತಿರುವ ಅಳತೆ ಪರಿಮಾಣಗಳನ್ನು ULB ವಾಕ್ಯಭಾಗದಲ್ಲಿ ಅಥವಾ ಟಿಪ್ಪಣಿಯಲ್ಲಿದ್ದಂತೆ ಬಳಸಿಕೊಳ್ಳಿ.

ಭಾಷಾಂತರ ಕೌಶಲ್ಯಗಳನ್ನು ಅಳವಡಿಸಿರುವ ಬಗ್ಗೆ.

ಇಲ್ಲಿರುವ ಎಲ್ಲಾ ಕೌಶಲ್ಯಗಳನ್ನು ಯೆಶಾಯ 5:10ರತೆ ಈ ಕೆಳಗೆ ಕೊಟ್ಟಿರುವ ರೀತಿಯಲ್ಲಿ ಅಳವಡಿಸಿದೆ.

  • ನಾಲ್ಕು ಹೆಕ್ಟೇರ್ ಭೂಮಿಯು ನಾಲ್ಕು ಕೊಳಗದಷ್ಟೇ ದ್ರಾಕ್ಷಾರಸವನ್ನು ಕೊಡುವುದು., ಒಂದು ಹೋಮರ್ ಬೀಜದಿಂದ ಒಂದು ಎಫಾದಷ್ಟೇ ದವಸವು ಸಿಕ್ಕಿತು (ಯೆಶಾಯ 5:10 ULB)
  1. ULB ಯಿಂದ ಅಳತೆ ಪರಿಮಾಣಗಳನ್ನು ಬಳಸಿಕೊಳ್ಳಿ. ಇದರಲ್ಲಿರುವಅಳತೆ ಪರಿಮಾಣಗಳು ಮೂಲ ಲೇಖಕರು ಬಳಸಿದಂತವು. ಈ ಪದಗಳನ್ನು ULBಯಲ್ಲಿರುವ ಧ್ವನಿ ಉಚ್ಛರಣಾ ಪದಗಳಂತೆ ಅದೇ ರೀತಿ ಬಳಸಬೇಕು ನೋಡಿ. (see Copy or Borrow Words)
  • " ನಾಲ್ಕು ಹೆಕ್ಟೇರ್ ದ್ರಾಕ್ಷೆ ತೋಟವು ಒಂದೇ ಒಂದು ಬತ್,ಮತ್ತು ಹೋಮರ್ಬೀಜವು ಒಂದೇ ಒಂದು ಎಫಾ. ದವಸವನ್ನು ನೀಡಿತು."
  1. ULBಯಲ್ಲಿ ಕೊಟ್ಟಿರುವ ಅಳತೆ ಪರಿಮಾಣಗಳನ್ನು ಬಳಸಿಕೊಳ್ಳಿ. ಸಾಮಾನ್ಯವಾಗಿ ಇದರಲ್ಲಿ ಮೆಟ್ರಿಕ್ ಅಳತೆ ಪರಿಮಾಣಗಳನ್ನು ಬಳಸಲಾಗಿದೆ. UDB ಭಾಷಾಂತರಗಾರರು ಈಗಾಗಲೇ ಮೆಟ್ರಿಕ್ ಪದ್ಧತಿಯಂತೆ ಎಷ್ಟು ಮೌಲ್ಯವಾಗಬಹುದು ಎಂದು ಗುರುತಿಸಿ ಇದನ್ನು ಹೇಗೆ ಪ್ರತಿನಿಧಿಸಬೇಕು ಎಂಬುದನ್ನು ತಿಳಿಸಿದ್ದಾರೆ.
  • " ನಾಲ್ಕು ಹೆಕ್ಟೇರ್ ದ್ರಾಕ್ಷೆತೋಟವು ಇಪ್ಪತ್ತೆರಡು ಲೀಟರ್ ಗಳು ಮಾತ್ರ, ದ್ರಾಕ್ಷಾರಸ ಕೊಡುತ್ತದೆಮತ್ತು ಹತ್ತು ಪುಟ್ಟಿಬೀಜವು ಒಂದೇ ಒಂದು ಪುಟ್ಟಿಧಾನ್ಯ ನೀಡಿದೆ."
  • " ನಾಲ್ಕು ಹೆಕ್ಟೇರ್ ದ್ರಾಕ್ಷೆ ತೋಟವು ಇಪ್ಪತ್ತೆರಡು ಲೀಟರ್ ಗಳಷ್ಟು , ದ್ರಾಕ್ಷಾರಸ ನೀಡಿದೆ. ಮತ್ತು 220 ಲೀಟರ್ ಗಳಷ್ಟು ಬೀಜ ಇಪ್ಪತ್ತೆರಡು ಲೀಟರ್ ಗಳಷ್ಟು ಮಾತ್ರ ಧಾನ್ಯ ನೀಡಿದೆ."
  1. ಈಗಾಗಲೇ ನಿಮ್ಮ ಭಾಷೆಯಲ್ಲಿ ಬಳಸಿರುವ ಅಳತೆ ಪರಿಮಾಣಗಳನ್ನು ಬಳಸಿ. ಇದನ್ನು ಮಾಡಲು ಮೆಟ್ರಿಕ್ ಪದ್ಧತಿಯ ಅಳತೆಗೆ ತಕ್ಕಂತೆ ನಿಮಗೆ ಗೊತ್ತಿರುವ ಅಳತೆಗಳನ್ನು ಸರಿ ಹೊಂದಿ ಸಲು ತಿಳಿದಿರಬೇಕು ಮತ್ತು ಪ್ರತಿಯೊಂದು ಅಳತೆ ಪರಿಮಾಣಗಳು ನಿಮಗೆ ಗುರುತಿಸಲು ತಿಳಿದಿರಬೇಕು.
  • " ನಾಲ್ಕು ಹೆಕ್ಟೇರ್ ದ್ರಾಕ್ಷೆ ತೋಟ ಆರು ಗ್ಯಾಲನ್ ದ್ರಾಕ್ಷಾರಸ ನೀಡಿದರೆ ಮತ್ತು ಆರು ಮತ್ತು ಅರ್ಧ/ ಆರೂವರೆ ಬುಶೆಲ್ ಗಳಷ್ಟು ಬೀಜ ಇಪ್ಪತ್ತು ಕ್ವಾರ್ಟ್ಸ್ ನಷ್ಟು ಮಾತ್ರ ಧಾನ್ಯ ನೀಡುತ್ತದೆ."
  1. ನಿಮ್ಮ ಜನರಿಗೆ ಗೊತ್ತಿರುವ ಅಳತೆ, ಪರಿಮಾಣಗಳನ್ನು ULBಯಅಳತೆ ಪರಿಮಾಣಗಳೊಂದಿಗೆ ಸೇರಿಸಿ ವಾಕ್ಯಭಾಗ ಅಥವಾ ಟಿಪ್ಪಣಿಗಳಿಂದ ಬಳಸಿಕೊಳ್ಳಿ. ಕೆಳಗಿನ ಉದಾಹರಣೆಗಳು ಎರಡೂ ಅಳತೆ ಪರಿಮಾಣಗಳು ವಾಕ್ಯಭಾಗಗಳಲ್ಲಿ ಇರುವುದನ್ನು ತೋರಿಸುತ್ತದೆ.
  • "ನಾಲ್ಕು ಹೆಕ್ಟೇರ್ ದ್ರಾಕ್ಷೆ ತೋಟ ಒಂದೇ ಒಂದು" ಬತ್ " (ಆರು ಗ್ಯಾಲನ್ ಗಳು) ನಷ್ಟು ಮಾತ್ರ ದ್ರಾಕ್ಷಾರಸ ನೀಡುತ್ತದೆ., ಒಂದೇಒಂದು ಹೊಮರ್ (ಆರು ಬುಶೆಲ್ ಗಳಷ್ಟು ಬೀಜವು ಒಂದೇ ಒಂದು ಎಫಾ (ಇಪ್ಪತ್ತು ಕ್ವಾರ್ಟ್ಸ್) ದಷ್ಟು ಮಾತ್ರ ಧಾನ್ಯ ನೀಡುತ್ತದೆ."
  1. ನಿಮ್ಮ ಜನರಿಗೆ ಗೊತ್ತಿರುವ ಅಳತೆ ಪರಿಮಾಣಗಳನ್ನು ULB ವಾಕ್ಯಭಾಗದಲ್ಲಿ ಅಥವಾ ಟಿಪ್ಪಣಿಯಲ್ಲಿದ್ದಂತೆ ಬಳಸಿಕೊಳ್ಳಿ. ಕೆಳಗಿನವುಗಳು ULB ಅಳತೆ ಪರಿಮಾಣಗಳನ್ನು ಅಡಿ ಟಿಪ್ಪಣಿಯಲ್ಲಿ ತೋರಿಸಲಾಗಿದೆ.
  • " ನಾಲ್ಕು ಹೆಕ್ಟೇರ್ ನಷ್ಟು ದ್ರಾಕ್ಷೆ ತೋಟ ಇಪ್ಪತ್ತೆರಡು ಲೀಟರ್ ಗಳಷ್ಟು ಮಾತ್ರ ದ್ರಾಕ್ಷಾರಸ ನೀಡುತ್ತದೆ., 1,ಮತ್ತು 220 ಲೀಟರ್ ಗಳು 2ಬೀಜ ಇಪ್ಪತ್ತೆರಡು ಲೀಟರ್ ನಷ್ಟುಮಾತ್ರ ಧಾನ್ಯ ನೀಡುತ್ತದೆ 3." ಅಡಿ ಟಿಪ್ಪಣಿಗಳು ಹೀಗಿರುತ್ತವೆ
  • [1]ಒಂದು ಬತ್
  • [2]ಒಂದು ಹೋಮರ್
  • [3]ಒಂದು ಎಫಾ

ಒಂದು ಅಳತೆಯ ಪರಮಾಣವನ್ನು ಬಳಸಲು ತಿಳಿದಿದ್ದರೆ.

ಕೆಲವೊಮ್ಮೆಹಿಬ್ರೂಭಾಷೆ ಒಂದು ಅಳತೆಯ ಪರಿಮಾಣವನ್ನು ನಿರ್ದಿಷ್ಟವಾಗಿ ಹೇಳದಿದ್ದರೂ ಸಂಖ್ಯೆಯನ್ನು ಮಾತ್ರ ಉಪಯೋಗಿಸುತ್ತದೆ. ಇಂತಹ ಸಂದರ್ಭದಲ್ಲಿ ಇಂಗ್ಲೀಷ್ ಪ್ರತಿಗಳು ULB ಮತ್ತು UDB, ಪ್ರತಿಗಳು ಪದಗಳ ಮೂಲಕ ಅಳತೆ "ಪರಿಮಾಣ"ಗಳನ್ನು ಗುರುತಿಸುತ್ತವೆ.

  • ಆ ಕಾಲದಲ್ಲೆಲ್ಲಾ ಒಬ್ಬನು ಇಪ್ಪತ್ತು ಸೇರು ಮೆದೆಗೆ ಬಂದಾಗ ಹತ್ತು ಸೇರು ,ಧಾನ್ಯ ಮಾತ್ರ ಸಿಕ್ಕುತ್ತಿತ್ತಲ್ಲವೇ? ಐವತ್ತು ಸೇರು ,ದ್ರಾಕ್ಷಾರಸವನ್ನು ಮೊಗೆಯಬೇಕೆಂದು ತೊಟ್ಟಿಗೆ ಬಂದಾಗ ಇಪ್ಪತ್ತು ಸೇರು . ಮಾತ್ರ ದೊರೆಯುತ್ತದೆ (ಹಗ್ಗಾಯ 2:16 ULB)

ಭಾಷಾಂತರ ಕೌಶಲ್ಯಗಳು.

  1. ಅಳತೆ/ ಪರಿಮಾಣ ಬಳಸದೆ ಸಂಖ್ಯೆಗಳನ್ನು ಬಳಸಿ ಅಕ್ಷರಷಃ ಭಾಷಾಂತರಿಸಿ.
  2. " ಅಳತೆ " ಪರಿಮಾಣ, ಮೌಲ್ಯ ಎಂಬ ಸಾಮಾನ್ಯ ಪದಗಳನ್ನು ಬಳಸಿ.
  3. ದವಸಧಾನ್ಯಗಳ ಬಗ್ಗೆ ಹೇಳುವಾಗ ಪುಟ್ಟಿ, ಕೊಳಗ ಎಂಬ ಪದಗಳನ್ನು, ದ್ರವರೂಪದ ಬಗ್ಗೆ ಹೇಳುವಾಗ "ಜಾಡಿ" ಎಂಬ ಪದವನ್ನು ಬಳಸಿ.
  4. ಈಗಾಗಲೇ ನಿಮ್ಮ ಭಾಷೆಯಲ್ಲಿ ಅಳತೆ, ಪರಿಮಾಣಗಳಿಗೆ ಬಳಸುತ್ತಿರುವ ಪದಗಳನ್ನೇ ಬಳಸಿಕೊಳ್ಳಿ.

ಭಾಷಾಂತರ ಕೌಶಲ್ಯಗಳನ್ನು ಅಳವಡಿಸಿರುವ.

ಈ ಎಲ್ಲಾ ಕೌಶಲ್ಯಗಳನ್ನು ಅಳವಡಿಸಿರುವ ಬಗ್ಗೆ.

  • ಆ ಕಾಲದಲ್ಲೆಲ್ಲಾ ಒಬ್ಬನು ಇಪ್ಪತ್ತು ಸೇರುಆ ಕಾಲದಲ್ಲೆಲ್ಲಾ ಒಬ್ಬನು ಇಪ್ಪತ್ತು ಸೇರು ಮೆದೆಗೆ ಬಂದಾಗ ಹತ್ತು ಸೇರು ,ಧಾನ್ಯ ಮಾತ್ರ ಸಿಕ್ಕುತ್ತಿತ್ತಲ್ಲವೇ? ಐವತ್ತು ಸೇರು ,ದ್ರಾಕ್ಷಾರಸವನ್ನು ಮೊಗೆಯಬೇಕೆಂದು ತೊಟ್ಟಿಗೆ ಬಂದಾಗ ಇಪ್ಪತ್ತು ಸೇರು . ಮಾತ್ರ ದೊರೆಯುತ್ತದೆ (ಹಗ್ಗಾಯi 2:16 ULB)
  1. ಅಳತೆ/ ಪರಿಮಾಣ ಬಳಸದೆ ಸಂಖ್ಯೆಗಳನ್ನು ಬಳಸಿ ಅಕ್ಷರಷಃ ಭಾಷಾಂತರಿಸಿ.
  • ಯಾರಾದರೂ ಒಬ್ಬನು ಇಪ್ಪತ್ತು ಸೇರುಮೆದೆಗೆ ಬಂದಾಗ ಅಲ್ಲಿ ಹತ್ತು ಸೇರು ,ಧಾನ್ಯ ಮಾತ್ರ ಇತ್ತು ಐವತ್ತು ಸೇರು,ಮೌಲ್ಯದ ದ್ರಾಕ್ಷಾರಸವನ್ನು ಮೊಗೆಯಲು ಬಂದಾಗ ಇಪ್ಪತ್ತು ಸೇರು .ದ್ರಾಕ್ಷಾರಸ ಮಾತ್ರ ದೊರೆಯಿತು.
  1. " ಅಳತೆ " ಪರಿಮಾಣ, ಮೌಲ್ಯ ಎಂಬ ಸಾಮಾನ್ಯ ಪದಗಳನ್ನು ಬಳಸಿ.
  • ಯಾರಾದರೂ ಒಬ್ಬನು ಇಪ್ಪತ್ತು ಸೇರುಮೆದೆಗೆ ಬಂದಾಗ ಅಲ್ಲಿ ಹತ್ತು ಸೇರು ,ಧಾನ್ಯ ಮಾತ್ರ ಇತ್ತು ಐವತ್ತು ಸೇರು,ಮೌಲ್ಯದ ದ್ರಾಕ್ಷಾರಸವನ್ನು ಮೊಗೆಯಲು ಬಂದಾಗ ಇಪ್ಪತ್ತು ಸೇರು .ದ್ರಾಕ್ಷಾರಸ ಮಾತ್ರ ದೊರೆಯಿತು.
  1. ದವಸಧಾನ್ಯಗಳ ಬಗ್ಗೆ ಹೇಳುವಾಗ ಪುಟ್ಟಿ, ಕೊಳಗ ಎಂಬ ಪದಗಳನ್ನು, ದ್ರವರೂಪದ ಬಗ್ಗೆ ಹೇಳುವಾಗ "ಜಾಡಿ" ಎಂಬ ಪದವನ್ನು ಬಳಸಿ.
  • ಆ ಕಾಲದಲ್ಲೆಲ್ಲಾ ಒಬ್ಬನು ಇಪ್ಪತ್ತು ಪುಟ್ಟಿಧಾನ್ಯವನ್ನು ಪಡೆಯಲು ಮೆದೆಗೆ ಬಂದಾಗ ಹತ್ತು ಪುಟ್ಟಿ ,ಧಾನ್ಯವನ್ನು ಪಡೆದನು ಹಾಗೆಯೇ ಐವತ್ತು ಜಾಡಿ ದ್ರಾಕ್ಷಾರಸ ಪಡೆಯಲು ಬಂದಾಗ ಇಪ್ಪತ್ತು ಜಾಡಿ.ಮಾತ್ರ ದೊರೆಯಿತು.
  1. ಈಗಾಗಲೇ ನಿಮ್ಮ ಭಾಷೆಯಲ್ಲಿ ಭಾಷಾಂತರ ಮಾಡುವಾಗ ಬಳಸುತ್ತಿರುವ ಅಳತೆಪರಿಮಾಣಗಳನ್ನು ಬಳಸಿಕೊಳ್ಳಿ.
  • ಯಾರಾದರೂ ಮೆದೆಗೆ ಬಂದು ಇಪ್ಪತ್ತು ಲೀಟರ್ ಗಳಷ್ಟು ಧಾನ್ಯ ಪಡೆಯಲು ಬಂದರೆ ಹತ್ತು ಲೀಟರ್ ಗಳಷ್ಟು ಮಾತ್ರ ಮತ್ತು ಯಾರಾದರೂ ದ್ರಾಕ್ಷೆ ತೋಟಕ್ಕೆ, ಐವತ್ತು ಲೀಟರ್ ಗಳಷ್ಟು ದ್ರಾಕ್ಷಾರಸ ಪಡೆಯಲು ಬಂದರೆ ಇಪ್ಪತ್ತು ಲೀಟರ್ ಮಾತ್ರ ದೊರೆಯಿತು