kn_ta/translate/translate-bmoney/01.md

8.6 KiB

ವಿವರಣೆ.

ಹಳೆ ಒಡಂಬಡಿಕೆಯ ಕಾಲದಲ್ಲಿ ಜನರು ಲೋಹಗಳನ್ನು ತೂಕ ಮಾಡುತ್ತಿದ್ದರು. ಉದಾಹರಣೆಗೆ ಬೆಳ್ಳಿ, ಬಂಗಾರ ಮುಂತಾದವುಗಳನ್ನು ತೂಕಮಾಡಿಕೊಟ್ಟು ಅದಕ್ಕೆ ಬದಲಾಗಿ ಅಷ್ಟೇ ತೂಕದ ಬೇಕಾದ ವಸ್ತುಗಳನ್ನು ಪಡೆಯುತ್ತಿದ್ದರು. ಕೆಲವುಕಾಲದ ನಂತರ ಲೋಹಗಳನ್ನು ಬಳಸಿ ನಾಣ್ಯಗಳನ್ನು ಮಾಡಲು ತೊಡಗಿದರು. ಪ್ರತಿಯೊಂದು ನಾಣ್ಯಕ್ಕೂ ಅದರದೇ ಆದ ಮೌಲ್ಯವನ್ನು ನಿಗಧಿಪಡಿಸಿದ್ದರು.

ಡಾರಿಕ್ ಅಂತಹ ಒಂದು ನಾಣ್ಯ. ಹೊಸ ಒಡಂಬಡಿಕೆಯ ಕಾಲದಲ್ಲಿ ಜನರು ಬೆಳ್ಳಿ ಮತ್ತು ತಾಮ್ರದ ನಾಣ್ಯಗಳನ್ನು ಬಳಸುತ್ತಿದ್ದರು. ಕೆಳಗೆ ಕೊಟ್ಟಿರುವ ಎರಡು ಪಟ್ಟಿಗಳಲ್ಲಿ ಹಳೆ ಒಡಂಬಡಿಕೆಯ ಕಾಲದಲ್ಲಿ ಮತ್ತು ಹೊಸ ಒಡಂಬಡಿಕೆಯ ಕಾಲದಲ್ಲಿ ಬಳಸುತ್ತಿದ್ದ ಹಣ ಮತ್ತು ಅವುಗಳ ಮೌಲ್ಯವನ್ನು ತಿಳಿಸಿದೆ. ಹಳೆ ಒಡಂಬಡಿಕೆಯ ಕಾಲದ ಹಣಗಳಿಗೆ ಯಾವ ಲೋಹವನ್ನು ಬಳಸುತ್ತಿದ್ದರು, ಅವು ಎಷ್ಟು ತೂಕ ಉಳ್ಳದ್ದು ಮತ್ತು ಎಷ್ಟು ಮೌಲ್ಯ ಉಳ್ಳದ್ದು ಎಂದು ತಿಳಿಸಿದೆ. ಹೊಸ ಒಡಂಬಡಿಕೆಯ ಕಾಲದ ಹಣಗಳಿಗೆ ಎಷ್ಟು ಮೌಲ್ಯ ಉಳ್ಳದ್ದು ಎಂದು ತಿಳಿಸಿದೆ. ಇದರೊಂದಿಗೆ ಒಂದು ದಿನದ ಸಂಬಳಕ್ಕೆ ಎಷ್ಟು ಹಣ ಎಂಬುದನ್ನು ತಿಳಿಸುತ್ತದೆ.

ಹಳೆ ಒಡಂಬಡಿಕೆ ಕಾಲದ ಅಳತೆ ಲೋಹ |ತೂಕ |


ಡೆರಿಕ್ | ಬಂಗಾರದ ನಾಣ್ಯ | 8.4 ಗ್ರಾಂ | ಶೆಕೆಲ್ | ವಿವಿಧ ಲೋಹಗಳು | 11 ಗ್ರಾಂ | ತಲಾಂತು | ವಿವಿಧ ಲೋಹಗಳು | 33 ಕೇ.ಜಿ

ಹೊಸ ಒಡಂಬಡಿಕೆಯ ಅಳತೆ | ಲೋಹ | ದಿನಗೂಲಿ

----------“ -----------

ದಿನಾರಿಗಳು/ದಿನಾರಿ | ಬೆಳ್ಳಿ ನಾಣ್ಯ | 1 ದಿನ 1 | ಡ್ರಾಕ್ ಮ | ಬೆಳ್ಳಿ ನಾಣ್ಯ | 1 ದಿನ 1 | ಮೈಟ್ | ತಾಮ್ರದ ನಾಣ್ಯ | 1/64 ದಿನ | ಶೆಕೆಲ್ | ಬೆಳ್ಳಿ ನಾಣ್ಯ | 4 ದಿನಗಳು | ತಲಾಂತು| ಬೆಳ್ಳಿ | 6,000 ದಿವಸಗಳು |

ಭಾಷಾಂತರ ತತ್ವಗಳು.

ಆಧುನಿಕ ಯುಗದ ಹಣ ಮೌಲ್ಯವನ್ನು ಇಲ್ಲಿ ಬಳಸಬೇಡಿ. ಏಕೆಂದರೆ ಈ ಮೌಲ್ಯಗಳು ವರ್ಷದಿಂದ ವರ್ಷಕ್ಕೆ ಬದಲಾಗುತ್ತದೆ. ಈ ರೀತಿ ಮಾಡಿದರೆ ಸತ್ಯವೇದದ ಭಾಷಾಂತರ ತಪ್ಪಾಗಬಹುದು ಮತ್ತು ಹಳೆಯ ಮೌಲ್ಯಕ್ಕೆ ಹೊಸ ಮೌಲ್ಯ ಹೊಂದದೆ ಹೋಗಬಹುದು.

ಭಾಷಾಂತರ ಕೌಶಲ್ಯಗಳು.

ಏಕೆಂದರೆ ಹಣದ ಮೌಲ್ಯಗಳು ಹಳೆ ಒಡಂಬಡಿಕೆಯಲ್ಲಿ ಅದರ ತೂಕದ ಮೇಲೆ ಅವಲಂಬಿಸಿರುತ್ತದೆ. ಹಳೆ ಒಡಂಬಡಿಕೆಯ ಈ ತೂಕಗಳನ್ನು ಭಾಷಾಂತರಿಸುವಾಗ [ಸತ್ಯವೇದದ ತೂಕಗಳನ್ನು]ನೋಡಿ. ಕೆಳಗಿನ ಕೌಶಲ್ಯಗಳು ಹೊಸ ಒಡಂಬಡಿಕೆಯಲ್ಲಿನ ಹಣದ ಮೌಲ್ಯವನ್ನು ಭಾಷಾಂತರಿಸುವ ಬಗ್ಗೆ ತಿಳಿಸುತ್ತದೆ.

  1. ಸತ್ಯವೇದದಲ್ಲಿನ ಪದಗಳನ್ನು ಮತ್ತು ಅದರ ಪ್ರತಿಯೊಂದು ಅಕ್ಷರಗಳು ಅದರ ಉಚ್ಛಾರಣೆಗೆ ಸಮಾನ ವಾಗಿರುವಂತೆ ನೋಡಿಕೊಳ್ಳಬೇಕು.
  2. ಈ ನಾಣ್ಯಗಳ ಮೌಲ್ಯ ಹಾಗೂ ಯಾವ ಲೋಹದಿಂದ ಮಾಡಿದ್ದು, ಎಷ್ಟು ರೀತಿಯ ನಾಣ್ಯಗಳನ್ನು ಬಳಸಿದರು ಎಂಬುದನ್ನು ವಿವರಿಸಬೇಕು.
  3. ಈ ನಾಣ್ಯಗಳ ವಿವರವನ್ನು ಸತ್ಯವೇದ ಬರೆದ ಕಾಲದಲ್ಲಿ ಜನರು ಹೇಗೆ ಬಳಸಿದರು ಮತ್ತು ಒಂದುದಿನದ ಗಳಿಕೆಯ ಮೌಲ್ಯವೇನು ಎಂಬುದನ್ನು ವಿವರಿಸಬೇಕು.
  4. ಸತ್ಯವೇದದಲ್ಲಿ ಬಳಸಿರುವ ಪದವನ್ನೇ ಬಳಸಿ, ಸಮಾನ ಮೌಲ್ಯದ ಹಣವನ್ನು ಭಾಷಾಂತರದ ವಾಕ್ಯಭಾಗದಲ್ಲಿ ಮತ್ತು ಟಿಪ್ಪಣಿಯಲ್ಲಿ ಬಳಸಿ.
  5. ಸತ್ಯವೇದದಲ್ಲಿನ ಪದವನ್ನೇ ಬಳಸಿ ಟಿಪ್ಪಣಿಯಲ್ಲಿ ವಿವರಿಸಿ.

ಭಾಷಾಂತರ ಕೌಶಲ್ಯಗಳು

ಭಾಷಾಂತರ ಕೌಶಲ್ಯಗಳನ್ನು ಲೂಕ7:41ಕ್ಕೆ ಕೆಳಗಿನಂತೆ ಅಳವಡಿಸಬೇಕು.

  • ಒಬ್ಬನು ಐನೂರು ದಿನಾರಿ (ಹಣ) ಇನ್ನೊಬ್ಬ ಐವತ್ತು ದಿನಾರಿ (ಹಣ) ಕೊಡಬೇಕಿತ್ತು. (ಲೂಕ 7:41 ULB)
  1. ಸತ್ಯವೇದದಲ್ಲಿನ ಪದಗಳನ್ನು ಮತ್ತು ಅದರ ಪ್ರತಿಯೊಂದು ಅಕ್ಷರಗಳು ಅದರ ಉಚ್ಛಾರಣೆಗೆ ಸಮಾನ ವಾಗಿರುವಂತೆ ನೋಡಿಕೊಳ್ಳಬೇಕು. (ನೋಡಿ Copy or Borrow Words)
  • "ಒಬ್ಬನು ಐನೂರು ದಿನಾರಿ (ಹಣ) , ಇನ್ನೊಬ್ಬ ಐವತ್ತು ದಿನಾರಿ (ಹಣ) ." ಕೊಡಬೇಕಿತ್ತು.(ಲೂಕ 7:41 ULB)
  1. ಈ ನಾಣ್ಯಗಳ ಮೌಲ್ಯ ಹಾಗೂ ಯಾವ ಲೋಹದಿಂದ ಮಾಡಿದ್ದು, ಎಷ್ಟು ರೀತಿಯ ನಾಣ್ಯಗಳನ್ನು ಬಳಸಿದರು ಎಂಬುದನ್ನು ವಿವರಿಸಬೇಕು.
  • ಒಬ್ಬನು ಐನೂರು ಬೆಳ್ಳಿ ನಾಣ್ಯಗಳನ್ನು , ಇನ್ನೊಬ್ಬ ಐವತ್ತು ಬೆಳ್ಳಿ ನಾಣ್ಯಗಳನ್ನು." ಕೊಡಬೇಕಿತ್ತು. (ಲೂಕ 7:41 ULB)
  1. ಈ ನಾಣ್ಯಗಳ ವಿವರವನ್ನು ಸತ್ಯವೇದ ಬರೆದ ಕಾಲದಲ್ಲಿ ಜನರು ಹೇಗೆ ಬಳಸಿದರು ಮತ್ತು ಒಂದುದಿನದ ಗಳಿಕೆಯ ಮೌಲ್ಯವೇನು ಎಂಬುದನ್ನು ವಿವರಿಸಬೇಕು.
  • " ಒಬ್ಬನು ಐನೂರು ದಿನಗಳ ಸಂಬಳ , ಮತ್ತು ಇನ್ನೊಬ್ಬ ಐವತ್ತು ದಿನಗಳ ಸಂಬಳ ಬಾಕಿ ಕೊಡಬೇಕಿತ್ತು ."
  1. ಸತ್ಯವೇದದಲ್ಲಿ ಬಳಸಿರುವ ಪದವನ್ನೇ ಬಳಸಿ, ಸಮಾನ ಮೌಲ್ಯದ ಹಣವನ್ನು ಭಾಷಾಂತರದ ವಾಕ್ಯಭಾಗದಲ್ಲಿ ಮತ್ತು ಟಿಪ್ಪಣಿಯಲ್ಲಿ ಬಳಸಿ.
  • " ಒಬ್ಬನುಐನೂರು ದಿನಾರಿ 1, ಇನ್ನೊಬ್ಬ ಐವತ್ತು ದಿನಾರಿ . 2"ಕೊಡಬೇಕಿತ್ತು (ಲೂಕ 7:41 ULB) :ಅಡಿ ಟಿಪ್ಪಣಿಗಳು ಕೆಳಗೆ ಕೊಟ್ಟಿರುವಂತೆ ಇದೆ.
  • [1]ಐನೂರು ದಿನಗಳ ಸಂಬಳ.
  • [2]ಐವತ್ತು ದಿನಗಳ ಸಂಬಳ
  1. ಸತ್ಯವೇದದಲ್ಲಿನ ಪದವನ್ನೇ ಬಳಸಿ ಟಿಪ್ಪಣಿಯಲ್ಲಿ ವಿವರಿಸಿ.
  • " ಒಬ್ಬ ಐನೂರು ದಿನಾರಿ 1, ಮತ್ತು ಇನ್ನೊಬ್ಬ ಐವತ್ತು ದಿನಾರಿ ." (ಲೂಕ 7:41 ULB)
  • [1]ಒಂದು ದಿನಾರಿ ಬೆಳ್ಳಿನಾಣ್ಯಗಳನ್ನು ಒಂದು ದಿನದಲ್ಲಿ ಮಾಡಿದ ಕೆಲಸಕ್ಕೆ ಗಳಿಸಿದ ಹಣವಾಗಿರುತ್ತದೆ.