kn_ta/translate/translate-bibleorg/01.md

5.3 KiB

ಸತ್ಯವೇದವು 66"ಪುಸ್ತಕಗಳ." ಒಂದು ಗ್ರಂಥ. ಸತ್ಯವೇದದಲ್ಲಿ ಈ "ಪುಸ್ತಕ"ಗಳನ್ನು ಪುಸ್ತಕಗಳೆಂದು ಹೇಳಿದರೂ ಅವು ಗಾತ್ರದಲ್ಲಿ ಕೆಲವು ದೀರ್ಘವಾದುದು ಮತ್ತು ಸಂಕ್ಷಿಪ್ತವಾಗಿ ಒಂದು ಅಥವಾ ಎರಡು ಪುಟಗಳನ್ನು ಸಹಾ ಹೊಂದಿವೆ. ಬೈಬಲ್ ನಲ್ಲಿ ಎರಡು ಮುಖ್ಯ ಭಾಗಗಳಿವೆ. ಮೊದಲನೆ ಭಾಗವು ಮೊದಲು ಬರೆದದ್ದು ಇದನ್ನು ಹಳೆ ಒಡಂಬಡಿಕೆ ಎಂದು ಕರೆಯಲಾಗಿದೆ. ಎರಡನೆ ಭಾಗವು ನಂತರ ಬರೆದದ್ದು ಇದನ್ನು ಹೊಸ ಒಡಂಬಡಿಕೆ ಎಂದು ಕರೆಯುತ್ತಾರೆ, ಹಳೆಒಡಂಬಡಿಕೆಯಲ್ಲಿ ಒಟ್ಟು 39 ಪುಸ್ತಕಗಳು ಮತ್ತು ಹೊಸ ಒಡಂಬಡಿಕೆಯಲ್ಲಿ 27 ಪುಸ್ತಕಗಳಿವೆ. (ಹೊಸ ಒಡಂಬಡಿಕೆಯಲ್ಲಿನ ಹೆಚ್ಚಿನ ಪುಸ್ತಕಗಳು ಜನರಿಗೆ ಬರೆದ ಪತ್ರಗಳಾಗಿವೆ.)

ಪ್ರತಿಯೊಂದು ಪುಸ್ತಕದಲ್ಲಿಯೂ ಅಧ್ಯಾಯಗಳಂತೆ ವಿಭಜಿಸಿ ಬರೆಯಲಾಗಿದೆ. ಕೆಲವು ಪುಸ್ತಕಗಳಲ್ಲಿ ಒಂದಕ್ಕಿಂತಲೂ ಹೆಚ್ಚು ಅಧ್ಯಾಯಗಳಿವೆ. ಆದರೆ ಓಬೇದ್ಯ, ಫಿಲೋಮಿನ, ಯೋಹಾನನಿಗೆ ಬರೆದ 2ನೇ ಪತ್ರಿಕೆ 3ನೇ ಯೋಹಾನನಿಗೆ ಬರೆದ 3ನೇ ಪತ್ರಿಕೆ, ಯೂದ ಈ ಎಲ್ಲಾ ಪುಸ್ತಕದಲ್ಲಿ ಒಂದೊಂದೇ ಅಧ್ಯಾಯಗಳಿವೆ. ಎಲ್ಲಾ ಅಧ್ಯಾಯಗಳನ್ನು ವಾಕ್ಯಗಳನ್ನಾಗಿ ವಿಭಜಿಸಲಾಗಿದೆ. ನಾವು ಯಾವುದಾದರೂ ವಾಕ್ಯಗಳನ್ನು ಉದ್ದೇಶಿಸಿ ಮಾತನಾಡುವಾಗ, ಬರೆಯುವಾಗ ಮೊದಲು ಪುಸ್ತಕದ ಹೆಸರು,ನಂತರ ಅಧ್ಯಾಯ ಮೇಲೆ ವಾಕ್ಯಗಳನ್ನು ಬರೆಯುತ್ತೇವೆ, ಹೇಳುತ್ತೇವೆ. ಉದಾಹರಣೆಗೆ "ಯೋಹಾನ 3:16 " ಅಂದರೆ ಯೋಹಾನನು ಬರೆದ ಸುವಾರ್ತೆ, ಅಧ್ಯಾಯ 3, 16.ನೇ ವಾಕ್ಯ

ನಾವು ಎರಡು ಅದಕ್ಕಿಂತ ಹೆಚ್ಚಿನ ವಾಕ್ಯಗಳನ್ನು ಕುರಿತು ಹೇಳುವಾಗ, ಮುಂದುವರೆಯುವಾಗ ಮದ್ಯದಲ್ಲಿ ಒಂದು ಗೆರೆಯನ್ನು ಹಾಕಿ ಗುರುತಿಸುತ್ತೇವೆ. "ಯೋಹಾನ 3:2,-6, 9 "ಅಂದರೆ ಯೋಹಾನ, ಅಧ್ಯಾಯ 3: ವಾಕ್ಯಗಳು 16, 17, ಮತ್ತು 18. ಉದ್ದೇಶಿಸಿರುವ ವಾಕ್ಯಗಳು ಒಂದರನಂತರ ಒಂದರಂತೆ ನಿರಂತರವಾಗಿ ಇಲ್ಲದಿದ್ದರೆ ಅರ್ಧವಿರಾಮ (ಕಾಮ -,) ಗಳನ್ನು ಬಳಸಿ ಪ್ರತ್ಯೇಕ ಮಾಡಲಾಗುತ್ತದೆ. "ಯೋಹಾನ 3:2, 6, 9" ಅಂದರೆ ಯೋಹಾನನು ಬರೆದ ಸುವಾರ್ತೆ 3ನೇ ಅಧ್ಯಾಯ 2, 6, ಮತ್ತು 9ನೇ ವಾಕ್ಯಗಳು. ಈ ಅಧ್ಯಾಯಗಳು ಮತ್ತು ವಾಕ್ಯಗಳ ಸಂಖ್ಯೆ ನಂತರ ಸಂಕ್ಷೇಪ ಸಂಕೇತಾಕ್ಷರಗಳನ್ನು ಸತ್ಯವೇದ ಭಾಷಾಂತರ ಮಾಡಲು ಬಳಸುತ್ತೇವೆ. ಕೆಳಗಿನ ಉದಾಹರಣೆಗಳಲ್ಲಿ "ULB" ಎಂಬ ಸಂಕ್ಷಿಪ್ತ ಸಂಕೇತಾಕ್ಷರಗಳು "ಅನ್ ಲಾಕ್ಡ್ ಲಿಟರಲ್ ಬೈಬಲ್ "ಎಂಬುದನ್ನು ತಿಳಿಸುತ್ತದೆ.

ಭಾಷಾಂತರ ಅಕಾಡೆಮಿಯಲ್ಲಿ ಈ ಪದ್ಧತಿಯನ್ನು ಬಳಸಿ ಸತ್ಯವೇದದ ಯಾವ ಭಾಗದಿಂದ ಪ್ರಸ್ತುತ ಭಾಗ ಬಂದಿದೆ ಎಂದು ತಿಳಿಯಬಹುದು. ಅಂದರೆ ಇದರಿಂದ ಇಡೀ ವಾಕ್ಯದ ಅಥವಾ ವಾಕ್ಯ ಭಾಗವನ್ನು ಇಲ್ಲಿ ಹೇಳಲಾಗಿದೆ ಎಂದು ತಿಳಿಯಬಾರದು. ಕೆಳಗೆ ನೀಡಿರುವ ನ್ಯಾಯಸ್ಥಾಪಕರು, ಅಧ್ಯಾಯ 6, 28,ನೇ ವಚನ ಎಂದು ಹೇಳುವಾಗ ಇಡೀ ವಾಕ್ಯಭಾಗಎಂದು ಅರ್ಥವಲ್ಲ. ಈ ವಚನ ಕೊನೆಯಲ್ಲಿ ಹೆಚ್ಚಿನ ಅರ್ಥ ಹೊಂದಿರುತ್ತದೆ. ಭಾಷಾಂತರ ಅಕಾಡೆಮಿಯಲ್ಲಿ ನಾವು ಮಾತನಾಡಬೇಕಾಗಿರುವ ವಚನಗಳನ್ನು ಮಾತ್ರ ಹೇಳಿ ಅದರ ಬಗ್ಗೆ ಮಾತನಾಡುತ್ತೇವೆ.

ಆ ಊರಿನ ಜನರು ಬೆಳಿಗ್ಗೆ ಎದ್ದು ನೋಡಿದಾಗ ಬಾಳನ ಯಜ್ಞವೇದಿ ಎಲ್ಲಾ ಮುರಿದು ಬಿದ್ದಿತ್ತು... (ನ್ಯಾಯಸ್ಥಾಪಕರು 6:28 ULB)