kn_ta/translate/translate-aim/01.md

16 KiB
Raw Permalink Blame History

ಒಬ್ಬ ಭಾಷಾಂತರಗಾರನು ಒಳ್ಳೆ ಬೇಟೆಗಾರನಂತೆ ಇರಬೇಕು.

ಒಬ್ಬ ಭಾಷಾಂತರಗಾರನು ಒಳ್ಳೆ ಬೇಟೆಗಾರನಂತೆ ತಾನು ಬೇಟೆಯಾಡಲು ನಿರ್ಧರಿಸಿರುವ ಪ್ರಾಣಿಯತ್ತ ತನ್ನ ಗುರಿಯನ್ನು ಕೇಂದ್ರೀಕರಿಸಿರಬೇಕು. ಅವನಿಗೆ ತಾನು ಬೇಟೆಯಾಡುವ ಪ್ರಾಣಿ ಯಾವುದು ಎಂದು ತಿಳಿದಿರಬೇಕು. ಏಕೆಂದರೆ ಅವರು ಜಿಂಕೆಯನ್ನು ಬೇಟೆಯಾಡಲು ಉದ್ದೇಶಿಸಿದ್ದರೆ ಅವನು ಬಳಸುವ ಬಂದೂಕು ಮತ್ತು ಗುಂಡುಗಳು ಅದಕ್ಕೆ ಮಾತ್ರ ಬಳಸುವಂತಾದ್ದು, ಪಕ್ಷಿಯನ್ನು ಬೇಟೆಯಾಡಲು ಬರುವುದಿಲ್ಲ. ನಾವು ಮಾತನಾಡುವಾಗಲೂ ಸಹ ಇದೇ ರೀತಿ ಮಾತುಗಳನ್ನು ಬಳಸುತ್ತೇವೆ.

ನಾವು ದೊಡ್ಡವರೊಂದಿಗೆ ಮಾತನಾಡುವಂತೆ ಚಿಕ್ಕ ಮಕ್ಕಳೊಂದಿಗೆ ಮಾತನಾಡುವುದಿಲ್ಲ ಕೆಲವು ಪದಗಳು ಚಿಕ್ಕವರೊಂದಿಗೆ ಮಾತನಾಡಲು ಬಳಸಲಾಗುವುದಿಲ್ಲ. ನಾವು ನಮ್ಮ ಸ್ನೇಹಿತರೊಂದಿಗೆ ಮಾತನಾಡುವಂತೆ ಬಳಸುವ ಪದಗಳನ್ನು ದೇಶದ ರಾಷ್ಟ್ರಪತಿಯೊಂದಿಗೆ ಇಲ್ಲವೇ ರಾಜ್ಯದ ಮುಖ್ಯಸ್ಥರೊಂದಿಗೆ ಮಾತನಾಡಲು ಅದೇ ಪದಗಳನ್ನು ಉಪಯೋಗಿಸಲು ಬರುವುದಿಲ್ಲ. ಈ ಎಲ್ಲಾ ವಿಚಾರಗಳಲ್ಲಿ ನಾವು ಬಳಸುವ ಪದಗಳು ಮತ್ತು ಅಭಿವ್ಯಕ್ತಿಗೊಳಿಸುವ ಭಾವನೆಗಳು ಭಿನ್ನವಾಗಿರುತ್ತದೆ.

ಉದಾಹರಣೆಗೆ ; ನಾವು ಚಿಕ್ಕಮಗುವಿನ ಬಳಿ ಸುವಾರ್ತೆಯ ಬಗ್ಗೆ ಹೇಳುವಾಗ "ಪಶ್ಚಾತ್ತಾಪ ಪಡು ಆಗ ಮಾತ್ರ ದೇವರು ನಿನಗೆ ಕೃಪೆ ತೋರಿಸುವನು" ಎಂದು ಹೇಳಲು ಬರುವುದಿಲ್ಲ. ಅದರ ಬದಲು ಮಗುವಿಗೆ “ನೀನು ಏನಾದರೂ ತಪ್ಪು ಮಾಡಿದರೆ ಅದನ್ನು ತಿಳಿದುಕೊಂಡು ಯೇಸುವಿನ ಬಳಿ ನಾನು ತಪ್ಪುಮಾಡಿದ್ದೇನೆ ಕ್ಷಮಿಸು ಎಂದು ಹೇಳಿದರೆ ದೇವರು ಕ್ಷಮಿಸುತ್ತಾನೆ” ಎಂದು ಹೇಳುವುದು ಒಳ್ಳೆಯದು. "ಆಗ ಆತನು ನಿನ್ನನ್ನು ಬರಮಾಡಿಕೊಳ್ಳುತ್ತಾನೆ ಏಕೆಂದರೆ ಆತನು ನಿನ್ನನ್ನು ಪ್ರೀತಿಸುತ್ತಾನೆ." ಪ್ರತಿಯೊಂದು ಭಾಷೆಯಲ್ಲೂ ಹಿರಿಯರು ಉಪಯೋಗಿಸುವ ಪದಗಳು, ಮತ್ತು ಮಕ್ಕಳು ಉಪಯೋಗಿಸುವ ಪದಗಳು ಎಂದು ಬೇರೆ ಬೇರೆ ಇವೆ. ಮಕ್ಕಳು ಇನ್ನೂ ಕೆಲವು ಪದಗಳನ್ನು ಬಳಸಲು ಕಲಿತಿರುವುದಿಲ್ಲ. ಹೌದು, ಮಕ್ಕಳು ಕಾಲಕ್ರಮೇಣ ಇಂತಹ ಪದಗಳನ್ನು ಬಳಸಲು ಕಲಿಯುತ್ತಾರೆ.

ಆದರೆ ಮಕ್ಕಳೊಂದಿಗೆ ನಾವು ಅನೇಕ ಪದಗಳನ್ನು ಒಂದೇ ಸಲಕ್ಕೆ ಹೇಳಿದರೆ ಅವರಿಗೆ ಕಲಿಯಲು, ತಿಳಿದುಕೊಳ್ಳಲು ಅರ್ಥ ಮಾಡಿಕೊಳ್ಳಲು ಕಷ್ಟವಾಗಬಹುದು. ಇದರೊಂದಿಗೆ ಭಾಷೆಗಳು ಮರಗಳಿದ್ದಂತೆ ಮರಗಳಲ್ಲಿ ಹಳೆಯ ಎಲೆಗಳು ಉದುರಿ ಹೊಸ ಎಲೆಗಳು ಬರುವಂತೆ ಹೊಸಹೊಸ ಪದಗಳು ಬರುತ್ತಿದ್ದಂತೆ, ಕಲಿಯುತ್ತಿದ್ದಂತೆ ಹಳೆಯ ಪದಗಳು ಮರೆತುಹೋಗುವ ಸಾಧ್ಯತೆಗಳು ಇರುತ್ತದೆ. ಹಳೆಯ ಪದಗಳು ಹಳೆಯ ಎಲೆಗಳು ಒಣಗಿ ಉದುರಿಹೊಗುವಂತೆ ಕೆಲವೊಮ್ಮೆ ಹಿರಿಯರು ಮಾತ್ರ ಉಪಯೋಗಿಸುತ್ತಾರೆ. ಹೊಸ ಪೀಳಿಗೆಯವರು ಬರುತ್ತಿದ್ದಂತೆ ಕೆಲವು ಪದಗಳನ್ನು ಬಳಸದೆ ಬಿಟ್ಟುಬಿಡುತ್ತಾರೆ. ಕೆಲವು ಹಳೆಯ ಕಾಲದ ಪದಗಳನ್ನು ಹಿರಿಯರುಮರೆಯಾದಂತೆ ಅವರೊಂದಿಗೆ ಮರೆಯಾಗುತ್ತವೆ. ಹೊಸ ಪೀಳಿಗೆಯ ಜನರು ಇವುಗಳನ್ನು ಉಪಯೋಗಿಸುವುದಿಲ್ಲ.

ಇಂತಹ ಪದಗಳನ್ನು ಹಾಗೇ ಉಳಿಸಲು ನಿಘಂಟಿನಲ್ಲಿ ದಾಖಲಿಸಿದ್ದರೂ ಹೊಸ ಯುವ ಪೀಳಿಗೆಯವರು ಬಹುಶಃ ಈ ಪದಗಳನ್ನು ಬಳಸಿಕೊಳ್ಳುವುದಿಲ್ಲ. ಕಾರಣಗಳಿಂದ ಸತ್ಯವೇದ ಭಾಷಾಂತರಗಾರರು ಯಾರನ್ನು ಉದ್ದೇಶಿಸಿ ಭಾಷಾಂತರಿಸುತ್ತಿದ್ದಾರೆ, ಈ ಭಾಷಾಂತರವಾದ ಕೃತಿಯನ್ನು ಓದುವವರು ಯಾರು ಎಂದು ತಿಳಿದು ಭಾಷಾಂತರಿಸಬೇಕು. ಇಲ್ಲಿ ಕೆಲವು ಆಯ್ಕೆಗಳಿವೆ.

ಭವಿಷ್ಯದಲ್ಲಿ ಬಳಸಬೇಕಾಗಿರುವ ಉದ್ದೇಶದ ಗುರಿಗಳು.

ಭಾಷಾಂತರವಾಗುತ್ತಿರುವ ಭಾಷೆಯನ್ನು ಮಾತನಾಡುವ ಯುವ ತಾಯಿಯಂದಿರು ಮತ್ತು ಅವರ ಚಿಕ್ಕ ಮಕ್ಕಳನ್ನು ಗುರಿಯಾಗಿರಿಸಿಕೊಂಡು ಭಾಷಾಂತರ ಮಾಡುತ್ತಾರೆ. ಏಕೆಂದರೆ ಇವರೇ ಭವಿಷ್ಯದಲ್ಲಿ ಈ ಭಾಷೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವವರು. ಭಾಷಾಂತರಗಾರರು ಈ ನಿಟ್ಟಿನಲ್ಲಿ ಮುಂದುವರೆದು ಹಳೆಯ ಪದಗಳನ್ನು ಯುವಜನಾಂಗದವರು ಬಳಸದೆ ಬಿಟ್ಟುಬಿಡುವ ಪದಗಳನ್ನು ಬಳಸುತ್ತಾ ಹೋದರೆ ಬಹುಶಃ ಆ ಪದಗಳ ಉಳಿವು ಆಗಬಹುದು

ಆದರೆ ಅದರ ಬದಲು ಸರಳವಾದ, ಸುಲಭವಾದ, ಪ್ರತಿತ್ಯ ಪಯೋಗಿಸುವ ಪದಗಳನ್ನು ಎಷ್ಟು ಸಾಧ್ಯವೋ ಅಷ್ಟು ಉಪಯೋಗಿಸಬೇಕು. ಇದರೊಂದಿಗೆ ಅಂತಹ ಭಾಷಾಂತರಗಾರರು ಈ ಕೆಳಗೆ ಕೊಟ್ಟಿರುವ ಕೆಲವು ನಿಯಮಗಳನ್ನು ಪಾಲಿಸ ಬಹುದು.

  1. ಅವರು ಸತ್ಯವೇದವನ್ನು ಭಾಷಾಂತರಿಸುತ್ತಿರುವ ಭಾಷೆಗೆ ಸತ್ಯವೇದದಲ್ಲಿನ ಕೆಲವು ಸಾಮಾನ್ಯಪದಗಳನ್ನು ಯಥಾವತ್ತಾಗಿ ಟ್ರಾನ್ಸ್ ಲಿಟರೇಟ್ ಇಂಗ್ಲೀಷ್ ಪದವನ್ನು ಹಾಗೆಯೇ ಕನ್ನಡ ಅಕ್ಷರದಲ್ಲಿ ಬರೆಯುವ ಪ್ರಯತ್ನ ಮಾಡುತ್ತಿಲ್ಲ. ಉದಾಹರಣೆಗೆ ಸತ್ಯವೇದದಲ್ಲಿ ಬರುವ "synagogue" ಎಂಬ ಪದವನ್ನು "sinagog" ಎಂದು ಬರೆದು (ಯೆಹೂದ್ಯರ ಸಭಾಮಂದಿರ) ಅದರ ಅರ್ಥವನ್ನು ಜನರಿಗೆ ತಿಳಿಸುವ ಪ್ರಯತ್ನ ಮಾಡುತ್ತಾರೆ. ಸತ್ಯವೇದದಲ್ಲಿ ಬರುವ "angel " ಎಂಬ ಪದವನ್ನು "enjel"ಎಂದು ಬರೆದು ಅದರ ಅರ್ಥವನ್ನು ಭಾಷಾಂತರ ಮಾಡುತ್ತಿರುವ ಭಾಷೆಯ ಜನರಿಗೆ ತಿಳಿಸಲು ಪ್ರಯತ್ನಿಸುವುದಿಲ್ಲ.
  2. ಸತ್ಯವೇದದಲ್ಲಿ ಬರುವ ಕೆಲವು ಪದಗಳಿಗೆ ಕಂಡುಕೊಳ್ಳುವ ಅರ್ಥಗಳಿಗೆ ಹೊಸ ಪದಗಳನ್ನು ಸೃಷ್ಟಿಸಲು ಅವರು ಪ್ರಯತ್ನಿಸುವುದಿಲ್ಲ. ಉದಾಹರಣೆಗೆ ಭಾಷಾಂತರ ಮಾಡುತ್ತಿರುವ ಭಾಷೆಯಲ್ಲಿ "ಕೃಪೆ " ("grace" or "sanctify,") " ಪರಿಶುದ್ಧಗೊಳಿಸು " ಎಂಬ ಪದಗಳಿಗೆ ಸೂಕ್ತವಾದ ಪದಗಳು ಕಂಡು ಬರದಿದ್ದಾರೆ. ಹೊಸ ಪದಗಳನ್ನು ಸೃಷ್ಟಿಸದೆ ಅದೇ ಪದವನ್ನು ಬಳಸುವರು. ಅದರ ಬದಲು ಸೂಕ್ತವಾದ, ಅರ್ಥ ಕೆಡದಂತೆ ಬಳಸುವ ಪದಗಳನ್ನು ಸತ್ಯವೇದದಲ್ಲಿ ಇರುವಂತೆಯೇ ಬರೆಯಲು ಪ್ರಯತ್ನಿಸಬೇಕು.
  3. ಭಾಷಾಂತರ ಆಗುತ್ತಿರುವ ಭಾಷೆಯಲ್ಲಿರುವ ಪದಗಳನ್ನು ತೆಗೆದುಕೊಳ್ಳದೆ ಹೊಸ ಪದಗಳನ್ನು ಬಳಸಿ ಕೊಳ್ಳಬೇಕು ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಅವರು ಇದನ್ನು ಪ್ರಯತ್ನಿಸಿದರೆ ಜನರು ಹೊಸ ಅರ್ಥಗಳನ್ನು ಉಪೇಕ್ಷಿಸಬಹುದು. ಇದರ ಪರಿಣಾಮ ವಾಕ್ಯ ಭಾಗಗಳನ್ನು ಭಾಷಾಂತರಿಸುವಾಗ ಜನರು ಅದರ ಸರಿಯಾದ ಅರ್ಥವನ್ನು ಮಾಡಿಕೊಳ್ಳಲು ಅಸಮರ್ಥರಾಗುವರು.
  4. ಅವರು ಸತ್ಯವೇದದ ವಿಚಾರಗಳನ್ನು ಸಹಜವಾಗಿ ಮತ್ತು ಸ್ಪಷ್ಟವಾಗಿ ವ್ಯಕ್ತಪಡಿಸಲು ನೆನಪಿನಲ್ಲಿಟ್ಟು ಕೊಳ್ಳುತ್ತಾರೆ. (See: ಸ್ಪಷ್ಟವಾದ ಭಾಷಾಂತರದ ಸೃಷ್ಟಿ, ಸಹಜವಾದ ಭಾಷಾಂತರದ ಸೃಷ್ಟಿ ಇವುಗಳನ್ನು ನೋಡಿ)

ಭಾಷಾಂತರಗಾರರು ಈ ನಿಯಮಗಳನ್ನು ಪಾಲಿಸಿದರೆ ಪ್ರತಿಫಲವಾಗಿ ಸಾಮಾನ್ಯ ಭಾಷೆಯ ಪ್ರತಿಯಾಗಿ ದೊರೆಯುತ್ತದೆ. ಮೊದಲ ಸತ್ಯವೇದದ ಭಾಷೆಯ ಬಗ್ಗೆ ನೀವು ಕಾರ್ಯನಿರ್ವಹಿಸುತ್ತಿದ್ದರೆ ಈ ಕೆಳಗೆ ಕೊಟ್ಟಿರುವ ಮಾರ್ಗದರ್ಶನಗಳನ್ನು ಅನುಸರಿಸಿ. ಇಂಗ್ಲೀಷಿನ ಸಾಮಾನ್ಯ ಭಾಷಾ ಕೃತಿಗಳು ಇಂದಿನ ಇಂಗ್ಲೀಷ್ ಭಾಷಾಂತರ ಪ್ರತಿ ಮತ್ತು ಸಾಮಾನ್ಯ ಇಂಗ್ಲೀಷ್ ಸತ್ಯವೇದಗಳನ್ನು ಒಳಗೊಂಡಿರುತ್ತದೆ. ಈ ಇಂಗ್ಲೀಷ್ ಭಾಷೆಯ ಸತ್ಯವೇದಗಳಲ್ಲಿ ಕಂಡುಬರುವ ಭಾಷೆಗಿಂತ ಭಾಷಾಂತರಿಸುತ್ತಿರುವ ಭಾಷೆಯ ಮೂಲಕ ನೀವು ವ್ಯಕ್ತಪಡಿಸಲು ಬಯಸುತ್ತಿರುವ ಅನೇಕ ವಿಚಾರಗಳು ವಿಭಿನ್ನವಾಗಿರುತ್ತದೆ.

ಸತ್ಯವೇದದ ಅಧ್ಯಯನಕ್ಕಾಗಿ ಅಧ್ಯಯನ ಸತ್ಯವೇದವನ್ನು ಭಾಷಾಂತರಿಸುವ ಗುರಿ.

ಭಾಷಾಂತರಗಾರರು ಸತ್ಯವೇದವನ್ನು ಆಳವಾಗಿ ಅಧ್ಯಯನ ಮಾಡುವ ಕ್ರೈಸ್ತರನ್ನ ಗುರಿಯಾಗಿಟ್ಟುಕೊಂಡು ಭಾಷಾಂತರ ಮಾಡಬೇಕು ಮತ್ತು ಅದು ಹೊಸದಾಗಿ ಕ್ರೈಸ್ತರಾದವರಿಗೂ ಓದಲು ಸುಲಭವಾಗಿರುವಂತೆ ಇರಬೇಕು ಮತ್ತು ಇವರಿಗಿಂತ ಹೆಚ್ಚು ಆಳವಾಗಿ ಅಧ್ಯಯನ ಮಾಡುವಂತಿರಬೇಕು. ಭಾಷಾಂತರಿಸುತ್ತಿರುವ ಭಾಷೆಯಲ್ಲಿ ಈಗಾಗಲೇ ಒಳ್ಳೆ ಸತ್ಯವೇದ ಇದ್ದರೆ ಅದು ಅವಿಶ್ವಾಸಿಗಳಿಗೂ ಹೊಸದಾಗಿ ಕ್ರೈಸ್ತರಾದವರಿಗೂ ಚೆನ್ನಾಗಿ ಅರ್ಥವಾಗುವ ರೀತಿಯಲ್ಲಿ ಇರುವಂತೆ ನೋಡಿಕೊಳ್ಳಲು ಭಾಷಾಂತರಗಾರರು ನಿರ್ಧರಿಸಬೇಕು. ಭಾಷಾಂತರಗಾರರು ಈ ರೀತಿಯಲ್ಲಿ ನಿರ್ಧರಿಸಿದರೆ ಅವರು ಈ ರೀತಿಯೂ ನಿರ್ಧರಿಸಬಹುದು.

  1. ಸತ್ಯವೇದದ ಭಾಷೆಯಲ್ಲಿರುವ ವ್ಯಾಕರಣ ಅಂಶಗಳು ಮತ್ತು ರಚನೆಗಳನ್ನು ಆದಷ್ಟು ಅನುಕರಣೆ ಮಾಡುವುದು ಒಳ್ಳೆಯದು. ಉದಾಹರಣೆಗೆ ಸತ್ಯವೇದದಲ್ಲಿ "ದೇವರ ಪ್ರೀತಿ" ಎಂಬ ವಿಚಾರವನ್ನು ಗೂಡಾರ್ಥದಲ್ಲಿ ಇಡಬಹುದು. ಹೀಗೆ ಮಾಡುವುದರಿಂದ ಜನರು ದೇವರ ಬಗ್ಗೆ ಇಟ್ಟಿರುವ ಪ್ರೀತಿಯೋ ಅಥವಾ ದೇವರು ಜನರ ಬಗ್ಗೆ ಇಟ್ಟಿರುವ ಪ್ರೀತಿಯೋ ಎಂಬುದನ್ನು ನಿರ್ಧರಿಸಲಾಗದೆ ಗೊಂದಲಕ್ಕೆ ಒಳಗಾಗುವರು. ಸತ್ಯವೇದದಲ್ಲಿ "ನಾವು ಕ್ರಿಸ್ತ ಯೇಸುವಿನಲ್ಲಿ ಇಟ್ಟಿರುವ ಪ್ರೀತಿ" ಎಂಬುದನ್ನು ಭಾಷಾಂತರಗಾರರು ಇದನ್ನು "ಯೇಸುಕ್ರಿಸ್ತನಿಂದ" ಅಥವಾ "ಯೇಸು ಕ್ರಿಸ್ತನಲ್ಲಿ ಒಂದಾಗಿ" ಎಂದು ಹೇಳಬಾರದೆಂದು ನಿರ್ಧರಿಸಬಹುದು.
  2. ಭಾಷಾಂತರ ಮಾಡುವಾಗ ಆದಷ್ಟು ಹಿಬ್ರು ಮತ್ತು ಗ್ರೀಕ್ ಭಾಷೆಗಳಲ್ಲಿ ಹೇಳಿರುವ ಅರ್ಥ ಮತ್ತು ಭಾವನೆಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ಭಾಷಾಂತರ ಮಾಡಬೇಕು. ಉದಾಹರಣೆ ಅವರುಇದನ್ನು ಅಡಿಟಿಪ್ಪಣಿಯಲ್ಲಿ ಬರೆಯುವ ಮೂಲಕ ತಿಳಿಸಿಕೊಳ್ಳಬೇಕು
  3. ಭಾಷಾಂತರ ಮಾಡುತ್ತಿರುವ ಭಾಷೆಯಲ್ಲಿ ಸತ್ಯವೇದದ ಭಾಷೆಗಿಂತ ಹೆಚ್ಚಾದ ಅರ್ಥವನ್ನುನೀಡುವಂತಹ ಪದಗಳನ್ನು ಅಭಿವ್ಯಕ್ತಿಪಡಿಸುವ ಭಾವನೆಗಳನ್ನು ವ್ಯಕ್ತಪಡಿಸುವ ಹೊಸಪದಗಳನ್ನು ಇಲ್ಲಿ ಬಳಸಬಹುದು. ಭಾಷಾಂತರಗಾರರು ಈ ರೀತಿ ಮಾಡಿದರೆ ಭಾಷಾಂತರ ಮಾಡುತ್ತಿರುವ ಭಾಷೆಯಲ್ಲಿ ಹೆಚ್ಚು ಕ್ರಿಯಾತ್ಮಕವಾಗಿರುತ್ತದೆ.

ಭಾಷಾಂತರವಾಗುತ್ತಿರುವ ಭಾಷೆಯಲ್ಲಿ ಈಗಾಗಲೇ ಸ್ಪಷ್ಟ ಹಾಗೂ ಸಹಜ ರೀತಿಯಲ್ಲಿ ಸತ್ಯವೇದ ಭಾಷಾಂತರವಾಗಿದ್ದರೆ ಎರಡನೇ ರೀತಿಯನ್ನು ಅನುಸರಿಸುವಂತೆ ನಾವು ಸಲಹೆ ನೀಡುವುದಿಲ್ಲ.