kn_ta/translate/resources-synequi/01.md

3.2 KiB

ವಿವರಣೆ

ಕೆಲವು ಟಿಪ್ಪಣಿಗಳು ULB ಪ್ರತಿಯಿಂದ ಉಲ್ಲೇಖಿಸಿದ್ದಂಥ ಪದವನ್ನು ಅಥವಾ ನುಡಿಗಟ್ಟನ್ನು ಬದಲಾಯಿಸುವಂಥ ಭಾಷಾಂತರದ ಸಲಹೆಗಳನ್ನು ಒದಗಿಸುತ್ತವೆ. ವಾಕ್ಯದ ಅರ್ಥದಲ್ಲಿ ಯಾವುದೇ ಬದಲಾವಣೆ ಮಾಡದೆ ಈ ಬದಲಾವಣೆಗಳನ್ನು ಇದರಲ್ಲಿ ಸರಿಹೊಂದುವ ಹಾಗೆ ಮಾಡಬಹುದು. ಇವು ಪರ್ಯಾಯ ಪದಗಳು ಮತ್ತು ಸಮಾನಾರ್ಥಕ ನುಡಿಗಟ್ಟುಗಳು ಆಗಿವೆ ಮತ್ತು ಅವುಗಳನ್ನು ಉದ್ಧರಣ ಚಿಹ್ನೆ (" ") ಗಳಿಂದ ಬರೆಯಲಾಗಿದೆ. ಇವುಗಳು ULB ಪಠ್ಯದಲ್ಲಿರುವ ವಿಷಯ ಒಂದೇ ಆಗಿರುತ್ತದೆ. ULB ಯಲ್ಲಿರುವ ಪದ ಅಥವಾ ನುಡಿಗಟ್ಟಿಗೆ ಸಮಾನಾರ್ಥಕವಾದ ಸಹಜವಾದ ಪದಗಳು ನಿಮ್ಮ ಭಾಷೆಯಲ್ಲಿ ಇಲ್ಲದಿದ್ದರೆ ಆಗ ಈ ರೀತಿಯ ಟಿಪ್ಪಣಿಗಳು ಅದೇ ವಿಷಯವನ್ನು ಬೇರೊಂದು ರೀತಿಯಲ್ಲಿ ಹೇಳಲು ಸಹಾಯಕವಾಗಿರುತ್ತದೆ.

ಭಾಷಾಂತರ ಟಿಪ್ಪಣಿಗಳ ಉದಾಹರಣೆಗಳು

ಕರ್ತನ ದಾರಿಯನ್ನು ಸಿದ್ಧಮಾಡಿರಿ, (ಲೂಕ 3:4 ULB)

  • ದಾರಿ - "ಹಾದಿ" ಅಥವಾ "ರಸ್ತೆ". ಈ ಉದಾಹರಣೆಯಲ್ಲಿ "ಹಾದಿ" ಅಥವಾ "ರಸ್ತೆ" ಎಂಬ ಪದಗಳನ್ನು ULB ಯಲ್ಲಿರುವ "ದಾರಿ" ಪದವನ್ನು ಬಳಸಿ ಬದಲಾಯಿಸಬಹುದು. ನಿಮ್ಮ ಭಾಷೆಯಲ್ಲಿ "ದಾರಿ" "ಹಾದಿ" ಅಥವಾ "ರಸ್ತೆ" ಇದರಲ್ಲಿ ಯಾವುದು ಸಹಜವಾಗಿ ಹೇಳುತ್ತಾರೆ ಎಂದು ನೀವು ನಿರ್ಧರಿಸಬಹುದು.

ಅದೇರೀತಿ Deacons/ಡೀಕನ್ ಗಳು (ಸಭಾಸೇವಕರು) , ಗೌರವಪೂರ್ಣರಾಗಿರಬೇಕು ಅವರು ಎರಡು ಮಾತಿನವರು ಆಗಿರಬಾರದು. (1 ನೇ ತಿಮೊಥೆ 3:8 ULB)

"ಸಭಾಸೇವಕರ, ಅದೇ ರೀತಿ" - ಅದರಂತೆ ಸಭಾಸೇವಕರು ಅಥವಾ ಮೇಲ್ವಿಚಾರಕರಂತಹ ಸಭಾಸೇವಕರು. ಈ ಉದಾಹರಣೆಯಲ್ಲಿ “ಈ ರೀತಿಯಾಗಿ ಸಭಾಸೇವಕರು,” ಅಥವಾ “ಸಭಾಸೇವಕರು, ಮೇಲ್ವಿಚಾರಕರಂತೆ” ಎಂಬ ಪದಗಳಿಂದ ULB ಯಲ್ಲಿರುವ “ಸಭಾಸೇವಕರು, ಹೀಗೆ” ಎಂಬ ಪದವನ್ನು ಬದಲಾಯಿಸಬಹುದು. ಭಾಷಾಂತರಕಾರರಾದ ನೀವು ನಿಮ್ಮ ಭಾಷೆಯಲ್ಲಿ ಯಾವುದು ಸಹಜವಾದದ್ದು ಎಂಬುದನ್ನು ನಿರ್ಧರಿಸಬೇಕು