kn_ta/translate/resources-questions/01.md

8.1 KiB

ಸತ್ಯವೇದದ ಮೂಲ ಲೇಖಕರು ಉದ್ದೇಶಿಸಿ ಅರ್ಥವನ್ನು ಭಾಷಾಂತರ ಮಾಡುವವರು ಸರಿಯಾಗಿ, ನಿಖರವಾಗಿ ಮಾಡಲು ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳುವುದು ಅವರ ಕರ್ತವ್ಯವಾಗಿರುತ್ತದೆ. ಹೀಗೆ ಉತ್ತಮ ಭಾಷಾಂತರ ಮಾಡಲು ಸತ್ಯವೇದ ಭಾಷಾಂತರಗಾರರು ಮತ್ತು ಸತ್ಯವೇದದ ವಿದ್ವಾಂಸರು ತಯಾರಿಸಿರುವ ಭಾಷಾಂತರ ಕೈಪಿಡಿಯನ್ನು ಮತ್ತು ಭಾಷಾಂತರ ಪ್ರಶ್ನೆಗಳ ಮಾಲಿಕೆಯನ್ನು ಓದಿ ಮನನ ಮಾಡಿಕೊಳ್ಳಬೇಕು. ULB ಅನುವಾದದ ಭಾಷಾಂತರ ಪ್ರಶ್ನೆಗಳು, ಸತ್ಯವೇದದ ವಾಕ್ಯಭಾಗಗಳನ್ನು ಆಧರಿಸಿದೆ. ಆದರೆ ಈ ಪ್ರಶ್ನೆಗಳನ್ನು ಸತ್ಯವೇದದ ಯಾವುದೇ ರೀತಿಯ ಭಾಷಾಂತರವನ್ನು ಪ್ರಶ್ನಿಸಲು ಪರಿಶೀಲಿಸಬಹುದು.

ಈ ಪ್ರಶ್ನೆಗಳು ಸತ್ಯವೇದದಲ್ಲಿನ ವಿಷಯವನ್ನು ಕುರಿತಾಗಿರಬಹುದು ಮತ್ತು ಯಾವುದೇ ಭಾಷೆಗೆ ಭಾಷಾಂತರವಾದರೂ ವಿಷಯಾಂತರವಾಗಿದೆ ಒಂದು ಚಿಕ್ಕ ಬದಲಾವಣೆಯೂ ಆಗದಿರಬೇಕು ಎಂಬುದು ತುಂಬಾ ಮುಖ್ಯ. ಪ್ರತಿಯೊಂದು ಪ್ರಶ್ನೆಗೂ ಭಾಷಾಂತರ ಪ್ರಶ್ನೆಗಳು ಸೂಕ್ತ ಉತ್ತರವನ್ನು ಸಲಹೆಯನ್ನು ನೀಡುತ್ತದೆ. ಈ ಪ್ರಶ್ನೆಗಳನ್ನು ಮತ್ತು ಉತ್ತರಗಳನ್ನು ಭಾಷಾಂತರದ ನಿಖರತೆಯನ್ನು ಪರಿಶೀಲಿಸಲು ಬಳಸಬಹುದು ಮತ್ತು ಇವುಗಳನ್ನು ಭಾಷಾಂತರಮಾಡುತ್ತಿರುವ ಭಾಷೆಯ ಸದಸ್ಯರೊಂದಿಗೆ ಉಪಯೋಗಿಸಿ ಭಾಷಾಂತರ ಸರಿಯಾಗಿದೆಯೇ ಪರಿಶೀಲಿಸಬಹುದು. ಭಾಷಾಂತರ ಮಾಡುತ್ತಿರುವ ಭಾಷೆಯ ಸಮುದಾಯದ ಸದಸ್ಯರೊಂದಿಗೆ ಈ ಪರಿಶೀಲನೆ ನಡಿಸಿದಾಗ ಭಾಷಾಂತರ ಪ್ರಶ್ನೆಗಳು ಭಾಷಾಂತರಗಾರರಿಗೆ ತಾವು ಮಾಡಿರುವ ಭಾಷಾಂತರ ಸರಿಯಾಗಿದೆಯೆಂದು ತಿಳಿದಿರಲು ಸಹಕಾರಿಯಾಗಿರುತ್ತದೆ. ಭಾಷಾಂತರವಾದ ಸತ್ಯವೇದದ ಅಧ್ಯಾಯಗಳನ್ನು ಓದಿ ತಿಳಿದು ಭಾಷಾಂತರ ಪ್ರಶ್ನೆಗಳಿಗೆ ಈ ಸಮುದಾಯದ ಜನರು ಸರಿಯಾಗಿ ಉತ್ತರಿಸಿದರೆ ಆಗ ಈ ಭಾಷಾಂತರ ಪರಿಪೂರ್ಣವಾಗಿದೆ ಎಂದು ಹೇಳಬಹುದು.

ಭಾಷಾಂತರವನ್ನು ಭಾಷಾಂತರ ಪ್ರಶ್ನೆಗಳೊಂದಿಗೆ ಪರಿಶೀಲಿಸುವುದು.

ಸ್ವಯಂ ಪರೀಕ್ಷೆಮಾಡುವಾಗ ಭಾಷಾಂತರ ಪ್ರಶ್ನೆಗಳನ್ನು ಬಳಸುವ ಹಂತಗಳು.

  1. ಸತ್ಯವೇದದ ಒಂದು ಅಧ್ಯಾಯವನ್ನು ಇಲ್ಲವೇ ಒಂದು ವಾಕ್ಯಭಾಗವನ್ನು ಭಾಷಾಂತರಿಸಿ.
  2. "ಪ್ರಶ್ನೆಗಳು." ಈ ಭಾಗದ ಕಡೆ ಗಮನಕೊಡಿ.
  3. ಪ್ರತಿಯೊಂದು ವಾಕ್ಯಭಾಗದ ಪ್ರಾರಂಭದಲ್ಲಿ ಪ್ರಶ್ನೆಯ ಪ್ರಾರಂಭವನ್ನು ಓದಿ.
  4. ಭಾಷಾಂತರದಿಂದ ಪ್ರಶ್ನೆಗಳಿಗೆ ಉತ್ತರವನ್ನು ಆಲೋಚಿಸಿ. ಈ ಪ್ರಶ್ನೆಗಳಿಗೆ ಸತ್ಯವೇದದ ಭಾಷಾಂತರದಿಂದ ತಿಳಿದ ವಿಷಯಗಳ ಮೂಲಕ ಉತ್ತರಿಸಲು ಪ್ರಯತ್ನಿಸಬೇಡಿ.
  5. .ಪ್ರಶ್ನೆಯಮೇಲೆ ಕ್ಲಿಕ್ ಮಾಡಿದರೆ ಉತ್ತರ ಕಾಣಿಸಿಕೊಳ್ಳುತ್ತದೆ
  6. ನಿಮ್ಮ ಉತ್ತರ ಸರಿಯಾಗಿದ್ದರೆ ನೀವು ಮಾಡಿದ ಭಾಷಾಂತರ ಉತ್ತಮವಾಗಿದೆ ಎಂದು ಅರ್ಥ. ಆದರೂ ನೀವು ನಿಮ್ಮ ಭಾಷೆಯ ಸಮುದಾಯದ ಜನರೊಂದಿಗೆ ನಿಮ್ಮ ಭಾಷಾಂತರವನ್ನು ಓದಿ ಪರಿಶೀಲಿಸಿ ಸರಿಯಾದ ಅರ್ಥವನ್ನು ನೀಡುತ್ತಿದೆಯೇ ಎಂದು ಪರಿಶೀಲಿಸುವುದನ್ನು ಮರೆಯಬಾರದು. ಸಮುದಾಯದ ಸದಸ್ಯರೊಂದಿಗೆ ಭಾಷಾಂತರ ಪ್ರಶ್ನೆಗಳನ್ನು ಬಳಸುವಾಗ ಕೆಳಗೆ ಕೊಟ್ಟಿರುವ ಹಂತಗಳನ್ನು ಅಳವಡಿಸಿ.
  7. ನೀವು ಭಾಷಾಂತರ ಮಾಡಿ ಮುಗಿಸಿರುವ ಸತ್ಯವೇದದ ಅಧ್ಯಾಯಗಳನ್ನುಇಬ್ಬರಿಗಿಂತ ಹೆಚ್ಚು ಭಾಷಾ ಸಮುದಾಯದ ಸದಸ್ಯರಿಗೆ ಓದಿ ಸರಿಯಾಗಿರುವ ಬಗ್ಗೆ ಖಚಿತಪಡಿಸಿಕೊಳ್ಳಿ.
  8. ನೀವು ಓದಿ ಹೇಳುವ ಸದಸ್ಯರಿಗೆ ನೀವು ಭಾಷಾಂತರಮಾಡಿ ಓದುತ್ತಿರುವ ಸತ್ಯವೇದದ ಭಾಗವನ್ನು ಕುರಿತ ಪ್ರಶ್ನೆಗಳಿಗೆ ಮಾತ್ರ ಉತ್ತರಿಸಬೇಕೆಂದು ಹೇಳಬೇಕು. ಅವರು ಈಗಾಗಲೇ ಓದಿರುವ ತಿಳಿದಿರುವ ಇತರ ಸತ್ಯವೇದದ ಅಂಶಗಳನ್ನು ಆಧರಿಸಿ ಉತ್ತರಿಸಬಾರದು. ಏಕೆಂದರೆ ಇದು ನೀವು ಮಾಡಿರುವ ಸತ್ಯವೇದದ ಭಾಷಾಂತರದ ಬಗ್ಗೆ ನಡೆಯುತ್ತಿರುವ ಪರಿಶೀಲನೆಯೇ ಹೊರತು ಜನರ ಜ್ಞಾನದ ಪರಿಶೀಲನೆಯಲ್ಲ. ಇದರ ಬದಲು ಸತ್ಯವೇದದ ಬಗ್ಗೆ ಹೆಚ್ಚು ತಿಳಿಯದ ಜನರೊಂದಿಗೆ ಭಾಷಾಂತರದ ಪರಿಶೀಲನೆ ಮಾಡಿದರೆ ಬಹುಶಃ ಹೆಚ್ಚು ಉಪಯೋಗಕಾರಿ ಆಗಿರಬಹುದು.
  9. "ಪ್ರಶ್ನೆಗಳು." ಎಂಬ ಭಾಗದ ಕಡೆ ಗಮನ ಹರಿಸಿ.
  10. ಪ್ರತಿಯೊಂದು ಅಧ್ಯಾಯದ ಪ್ರಾರಂಭದ ಮೊದಲ ಪ್ರಶ್ನೆಯನ್ನು ಓದಿ.
  11. ಭಾಷಾ ಸಮುದಾಯದ ಸದಸ್ಯರನ್ನು ಪ್ರಶ್ನೆಗಳಿಗೆ ಉತ್ತರಿಸುವಂತೆ ಹೇಳಿ. ನೀವು ಭಾಷಾಂತರ ಮಾಡಿರುವುದರ ಬಗ್ಗೆ ಮಾತ್ರ ಉತ್ತರಿಸುವಂತೆ ಹೇಳಲು ನೆನಪಿಡಿ.
  12. ಪ್ರಶ್ನೆಯ ಮೇಲೆ ಕ್ಲಿಕ್ ಮಾಡಿ ಉತ್ತರವನ್ನು ಪಡೆಯಲು ಪ್ರಯತ್ನಿಸಿ. ಪ್ರದರ್ಶಿತವಾದ ಉತ್ತರಕ್ಕೆ ಸರಿಯಾಗಿ ನಿಮ್ಮ ಸಮುದಾಯದ ಸದಸ್ಯರು ಉತ್ತರಿಸಿದರೆ ನಿಮ್ಮ ಭಾಷಾಂತರ ಸರಿಯಾದ ವಿಷಯವನ್ನು ಹೊಂದಿದೆ ಎಂದು ಖಚಿತ ಪಡಿಸಿಕೊಳ್ಳಿ. ಒಂದು ವೇಳೆ ಸರಿಯಾದ ಉತ್ತರ ಬರದೆ ತಪ್ಪು ಉತ್ತರ ಬಂದರೆ ಆಗ ನೀವು ಮಾಡಿದ ಭಾಷಾಂತರವನ್ನು ಪುನಃ ಸರಿಪಡಿಸಿ ಮಾಡಬೇಕಾಗುತ್ತದೆ
  13. ಇದೇ ರೀತಿ ಎಲ್ಲಾ ಅಧ್ಯಾಯಗಳನ್ನು ಇತರ ಪ್ರಶ್ನೆಗಳಿಂದ ಪರಿಶೀಲಿಸಿ ಭಾಷಾಂತರದಲ್ಲಿ ನಿಖರತೆಯನ್ನು ಸಾಧಿಸಬೇಕು.