kn_ta/translate/resources-porp/01.md

4.4 KiB

ವಿವರಣೆ

ಕೆಲವೊಮ್ಮೆ ಸತ್ಯವೇದ ವಿದ್ವಾಂಸರು ಸತ್ಯವೇದದಲ್ಲಿ ಬರುವ ನಿರ್ದಿಷ್ಟ ಪದಗುಚ್ಛಗಳು, ಅಥವಾ ವಾಕ್ಯಗಳಲ್ಲಿ ಬರುವ ಅರ್ಥಗಳನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಾರೆ. ಈ ಕೆಲವು ಕಾರಣಗಳು ಇಲ್ಲಿವೆ.

  1. ಪ್ರಾಚೀನ ಸತ್ಯವೇದದ ವಾಕ್ಯಭಾಗಗಳಲ್ಲಿ ಅನೇಕ ಚಿಕ್ಕ ವ್ಯತ್ಯಾಸಗಳು ಕಂಡುಬರುತ್ತವೆ.
  2. ಒಂದು ಪದಕ್ಕೆ ಒಂದಕ್ಕಿಂತ ಹೆಚ್ಚು ಅರ್ಥಕೊಡುತ್ತದೆ. ಮತ್ತು ವಿವಿಧ ರೀತಿಯಲ್ಲಿ ಬಳಕೆಯಾಗುತ್ತದೆ.
  3. ಕೆಲವೊಮ್ಮೆ ಅದು ಯಾವ ಪದ ಎಂದು ಸ್ಪಷ್ಟವಾಗದೆ ಇರಬಹುದು (ಉದಾ: - ಸರ್ವನಾಮ) ಮತ್ತು ಕೆಲವೊಮ್ಮೆ ನಿರ್ದಿಷ್ಟ ಪದಗುಚ್ಛವನ್ನು ಉಲ್ಲೇಖಿಸಬಹುದು.

ಭಾಷಾಂತರದ ಟಿಪ್ಪಣಿಗಳ ಉದಾಹರಣೆಗಳು

ಕೆಲವೊಮ್ಮೆ ವಿದ್ವಾಂಸರು ಒಂದು ಪದ ಅಥವಾ ಪದಗುಚ್ಛದ ಅರ್ಥ ಒಂದು ವಿಷಯದ ಬಗ್ಗೆ ಅರ್ಥೈಸಿದರೆ ಇನ್ನೂ ಕೆಲವರು ಹೆಚ್ಚಾಗಿ ಸಾಮಾನ್ಯ ಅರ್ಥಕೊಡುವ ಬಗ್ಗೆ ಹೇಳುತ್ತಾರೆ. ನಮ್ಮ ಟಿಪ್ಪಣಿಗಳು ಇಂತಹ ಸನ್ನಿವೇಶಗಳಲ್ಲಿ ಸಂಬವನೀಯ ಅರ್ಥಗಳನ್ನು ಕೊಡಲು ಪ್ರಾರಂಭಿಸುವುದಲ್ಲದೆ ಇವುಗಳ ಒಂದು ಪಟ್ಟಿಯನ್ನು ಸಂಖ್ಯೆಗಳಲ್ಲಿ ಗುರುತಿಸಿ ತಿಳಿಸಬಹುದು. ಆದರೆ ನಾವು ಮೊದಲು ಕೊಟ್ಟ ಅರ್ಥವನ್ನು ಶಿಫಾರಸ್ಸು ಮಾಡಬಹುದು. ಹಾಗಾಗಿ ನಿಮ್ಮ ಸಮುದಾಯದಲ್ಲಿ ಇರುವ ಜನರು ಬೇರೆ ಸತ್ಯವೇದವನ್ನು ಬಳಸುವ ಸಾಧ್ಯತೆ ಇದ್ದರೆ ಆಗ ಅದರಲ್ಲಿ ಇನ್ನೊಂದು ಸಾಧ್ಯವಾದ ಅರ್ಥಗಳನ್ನು ಉಪಯೋಗಿಸುವ ಬಗ್ಗೆ ನೀವು ಅದೇ ಪದ ಬಳಸಲು ನಿರ್ಧರಿಸುವುದು ಉತ್ತಮ.

ಸಿಮೋನ್ ಪೇತ್ರನು, ಇದನ್ನು ಕಂಡು ಯೇಸುವಿನ ಮೊಣಕಾಲಿಗೆ ಬಿದ್ದು , " ಸ್ವಾಮಿ, ನಾನು ಪಾಪಾತ್ಮನು, ನನ್ನನ್ನು ಬಿಟ್ಟು ಹೋಗಬೇಕು " ಎಂದು ಕೇಳಿದನು (ಲೂಕe 5:8 ULB)

  • ಯೇಸುವಿನ ಮೊಣಕಾಲಿಗೆ ಬಿದ್ದು - ಇದರ ಸಂಭವನೀಯ ಅರ್ಥಗಳು 1. “ಯೇಸುವಿನ ಮುಂದೆ ಮೊಣಕಾಲೂರಿ” ಅಥವಾ 2. "ಯೇಸುವಿನ ಕಾಲಿಗೆ ಬಾಗಿ ನಮಸ್ಕರಿಸಿದ " ಅಥವಾ 3. “ಯೇಸುವಿನ ಮುಂದೆ ಸಾಷ್ಠಾಂಗವಾಗಿ ನಮಸ್ಕರಿಸಿದ” ಎಂಬುದು ಇವೆ. ಪೇತ್ರನು ಆಕಸ್ಮಿಕವಾಗಿ ಕಾಲಿಗೆ ಬೀಳಲಿಲ್ಲ. ಇದು ಪೇತ್ರನ ವಿಧೇಯತೆಯ ಗುರುತಾಗಿದೆ ಮತ್ತು ಯೇಸುವಿಗೆ ಗೌರವ ಸೂಚಿಸುವುದು.

ಭಾಷಾಂತರ ಕೌಶಲ್ಯಗಳು

  1. ಓದುಗರು ಎರಡೂ ರೀತಿಯ ಸಂಭವನೀಯ ಅರ್ಥಗಳನ್ನು ಅರ್ಥಮಾಡಿಕೊಳ್ಳುವಂತೆ ಭಾಷಾಂತರ ಮಾಡಬೇಕು.
  2. ನಿಮ್ಮ ಭಾಷೆಯಲ್ಲಿ ಇದೇನೋ ಸಂಭವನೀಯವಾಗುವಂತೆ ಆಗದಿದ್ದರೆ ಸರಿಯಾದ ಸೂಕ್ತವಾದ ಅರ್ಥಕೊಡುವಂತೆ ಭಾಷಾಂತರ ಮಾಡಬೇಕು.
  3. ಓದುಗರು ಸಹಜವಾಗಿ ಅರ್ಥಮಾಡಿಕೊಳ್ಳುವಂತೆ ಸೂಕ್ತ ಪದವನ್ನು ಬಳಸಲು ಸಾಧ್ಯವಾಗದಿದ್ದರೆ ಅರ್ಥಕೊಡುವಂತಹ ಪದವನ್ನು ಹುಡುಕಿ ಭಾಷಾಂತರಿಸಿ.