kn_ta/translate/resources-links/01.md

7.7 KiB
Raw Permalink Blame History

ಭಾಷಾಂತರ ಟಿಪ್ಪಣಿಯಲ್ಲಿ ಎರಡು ರೀತಿಯ ಲಿಂಕ್ ಗಳಿವೆ ಭಾಷಾಂತರ ವಿಧ್ಯಾಸಂಸ್ಥೆಯ ವಿಷಯಕ್ಕೆ ಸಂಬಂಧಿಸಿದ ಲಿಂಕ್ ಪುಟ ಮತ್ತು) ಅದೇ ಪುಸ್ತಕದಲ್ಲಿರುವ ಪದಗಳು ಮತ್ತು ನುಡಿಟ್ಟುಗಳು.

ಭಾಷಾಂತರ ವಿಧ್ಯಾಸಂಸ್ಥೆಯ ವಿಷಯಗಳು

ಭಾಷಾಂತರ ವಿಧ್ಯಾಸಂಸ್ಥೆಯ ವಿಷಯಗಳು ಭಾಷಾಂತರ ಮಾಡುವ ಪ್ರತಿಯೊಬ್ಬರಿಗೂ ಭಾಷಾಂತರ ಪ್ರಕ್ರಿಯೆಯಲ್ಲಿ ಸಹಕಾರಿಯಾಗಿರುತ್ತದೆ ಸತ್ಯವೇದವನ್ನು ಅವರವರ ಭಾಷೆಗಳಲ್ಲಿ ಭಾಷಾಂತರಿಸಲು ಬೇಕಾದ ಮೂಲಭೂತ ವಿಷಯಗಳನ್ನು ತಿಳಿದುಕೊಳ್ಳಲು ಹಾಗೂ ಬಳಸಲು ಸಹಕಾರಿಯಾಗಿರುತ್ತದೆ. ಇವುಗಳನ್ನು ಅಂತರ್ ಜಾಲದ ಮೂಲಕ, ಮೊಬೈಲ್,ವೀಡಿಯೋಗಳ ಮೂಲಕ ಕಲಿತುಕೊಳ್ಳಲು ಅತ್ಯಂತ ಸಹಜವಾಗಿ,ಸುಲಭವಾಗಿ ಬಳಸಲು ಸಹಕಾರಿಯಾಗಿದೆ.

ಪ್ರತಿಯೊಂದು ಭಾಷಾಂತರ ಟಿಪ್ಪಣಿಗಳು ULBಯಿದ ತೆಗೆದುಕೊಂಡ ನುಡಿಗಟ್ಟು ಭಾಷಾಂತರ ಮಾಡಬೇಕಾದ ನುಡಿಗಟ್ಟುಗಳನ್ನು ಭಾಷಾಂತರಿಸಲು ಸಹಾಯ ಮಾಡುತ್ತದೆ. ಕೆಲವೊಮ್ಮೆ ಕೆಲವು ವಾಕ್ಯಗಳು ಭಾಷಾಂತರವಾದ ಮೇಲೆ ಕೊನೆಯಲ್ಲಿ ಆವರಣವಾಕ್ಯಗಳಾಗಿ ಬರಬಹುದು ಎಂದು ಈ ಕೆಳಗೆ ನೀಡಿದೆ. ನೋಡಿ (ರೂಪಕ ಅಲಂಕಾರ).

ಹಸಿರು ಶಾಹಿಯಲ್ಲಿರುವ ಪದ ಅಥವಾ ಪದಗಳು ಭಾಷಾಂತರ ಅಕೆಡಾಮಿಯ ವಿಷಯಗಳಿಗೆ ಲಿಂಕ್ ಗಳಾಗಿವೆ. ಲಿಂಕ್ ಮೇಲೆ ಕ್ಲಿಕ್ ಮಾಡುವ ಮೂಲಕ ವಿಷಯದ ಬಗ್ಗೆ ಹೆಚ್ಚು ತಿಳಿದುಕೊಳ್ಳಬಹುದು. ಭಾಷಾಂತರ ವಿಧ್ಯಾಸಂಸ್ಥೆಯ ವಿಷಯಗಳ ಮಾಹಿತಿಯನ್ನು ಓದಿ ತಿಳಿದುಕೊಳ್ಳಲು ಅನೇಕ ಕಾರಣಗಳಿವೆ.

  • ಈ ವಿಷಯಗಳನ್ನು ಕಲಿತುಗೊಳ್ಳುವುದರಿಂದ ನಿರ್ದಿಷ್ಟವಾಗಿ ಸರಿಯಾದ ಭಾಷಾಂತರ ಮಾಡಲು ಸಹಾಯವಾಗುತ್ತದೆ. ಭಾಷಾಂತರದ ತತ್ವಗಳನ್ನು, ತಂತ್ರಗಳನ್ನು ಅರ್ಥಮಾಡಿಕೊಳ್ಳಲು ಅನುಕೂಲವಾಗುವಂತೆವಿಷಯಗಳನ್ನು ಇಲ್ಲಿ ಆಯ್ಕೆ ಮಾಡಲಾಗಿದೆ.

ಉದಾಹರಣೆಗಳು

  • ಪ್ರಾತಃಕಾಲ ಮತ್ತು ಸಾಯಂಕಾಲ- ಇದು ಇಡೀ ದಿನವನ್ನು ಕುರಿತು ಹೇಳುತ್ತದೆ. ದಿನದ ಎರಡೂ ವೇಳೆಯನ್ನು ಅಂದರೆ ಇಲ್ಲಿ ಇಡೀ ದಿನವನ್ನು ಕುರಿತು ಹೇಳಲು ಬಳಸಿದೆ. ಯೆಹೂದಿಗಳ ಸಂಸ್ಕೃತಿಯಲ್ಲಿ ದಿನದ ಪ್ರಾರಂಭ ಸೂರ್ಯಸ್ತಮಾನದಿಂದ ಪ್ರಾರಂಭವಾಗುತ್ತದೆ. (ಮೆರಿಸಮ್ : Merism) ನೋಡಿ
  • ನಡೆಯುವುದು - "ವಿಧೇಯವಾಗಿರುವುದು" (ರೂಪಕಅಲಂಕಾರ)ನೋಡಿ.
  • ತಿಳಿದು ಕೊಳ್ಳುವಂತೆ ಮಾಡುವುದು - "ತಿಳಿಸುವುದು " (ನುಡಿಗಟ್ಟು: Idiom) ನೋಡಿ

ಪುಸ್ತಕದಲ್ಲಿ ಪುನರಾವರ್ತನೆಯಾದ ನುಡಿಗುಚ್ಛಗಳು.

ಕೆಲವೊಮ್ಮೆ ಒಂದು ಪದಗುಚ್ಛವನ್ನು ಒಂದು ಪುಸ್ತಕದಲ್ಲಿ ಅನೇಕಬಾರಿ ಬಳಸಿರುತ್ತಾರೆ. ಭಾಷಾಂತರ ವಿಧ್ಯಾಸಂಸ್ಥೆ ಟಿಪ್ಪಣಿಯಲ್ಲಿ ಗ್ರೀನ್ ಚಾಪ್ಟರ್/ ಅಧ್ಯಾಯದಲ್ಲಿ ಒಂದು ಲಿಂಕ್ ಇದೆ ಬೇಕಾದ ವಾಕ್ಯದ ಸಂಖ್ಯೆ ಕ್ಲಿಕ್ ಮಾಡಿದರೆ ನೀವು ಭಾಷಾಂತರಮಾಡಿದ ಪದಗುಚ್ಛಗಳನ್ನು ತೋರಿಸುತ್ತದೆ. ಪದಗಳು ಅಥವಾ ಪದಗುಚ್ಛಗಳು ಈಗಾಗಲೇ ಭಾಷಾಂತರವಾಗಿದ್ದರೆ ಅಂತಹವುಗಳನ್ನು ತಿಳಿದುಕೊಳ್ಳುವುದು ಅವಶ್ಯವಾಗಿದೆ ಎಂಬುದಕ್ಕೆ ಅನೇಕ ಕಾರಣಗಳಿವೆ.

  • ಈ ನುಡಿಗುಚ್ಛಗಳನ್ನು ಭಾಷಾಂತರಿಸಲು ಸುಲಭವಾಗಿಸುತ್ತದೆ. ಮತ್ತು ಈಗಾಗಲೇ ಭಾಷಾಂತರಿಸಿದ ವಿಷಯವನ್ನು ನಿಮಗೆ ನೆನಪಿಸುತ್ತದೆ.
  • ನೀವು ಈಗಾಗಲೇ ಈ ರೀತಿಯ ಪದಗಳನ್ನು ಭಾಷಾಂತರಿಸಿರುವುದರಿಂದ ಮತ್ತು ನಿಮ್ಮ ನೆನಪಿನಲ್ಲಿ ಇರುವುದರಿಂದ ಭಾಷಾಂತರ ಕಾರ್ಯವು ವೇಗವಾಗಿಯೂ, ನಿಖರವಾಗಿಯೂ ನಡೆಯಲು ಅನುಕೂಲವಾಗುತ್ತದೆ.

ನೀವು ಈಗಾಗಲೇ ಭಾಷಾಂತರಮಾಡಿರುವ ಪದಗುಚ್ಛವಾದರೆ ಹೊಸ ಸನ್ನಿವೇಶಕ್ಕೆ ಹೊಂದದೆ ಇರಬಹುದು ಆಗ ನೀವು ಬೇರೆ ರೀತಿಯಲ್ಲಿ ಆ ಪದವನ್ನು ಬಳಸಿ ಭಾಷಾಂತರ ಮಾಡಬೇಕಾಗಬಹುದು. ಅಂತಹ ಸಮಯದಲ್ಲಿ ನೀವು ಇದರ ಬಗ್ಗೆ ಗುರುತು ಮಾಡಿಟ್ಟುಕೊಂಡು ಭಾಷಾಂತರ ತಂಡದ ಸದಸ್ಯರೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬೇಕು. ಈ ಲಿಂಕ್ ಗಳು ನಿಮ್ಮನ್ನು ನೀವು ಭಾಷಾಂತರಿಸುತ್ತಿರುವ ಪುಸ್ತಕದ ಟಿಪ್ಪಣಿಯ ಕಡೆಗೆ ತಿರುಗಿ ನೋಡುವಂತೆ / ಮಾಡಬಹುದು.

ಉದಾಹರಣೆಗಳು

  • ನೀವು ಬಹು ಸಂತಾನವುಳ್ಳವರಾಗಿ ಹೆಚ್ಚಿರಿ -ನೀವು ಈ ವಾಕ್ಯವನ್ನು ಯಾವರೀತಿ ಭಾಷಾಂತರಿಸಿದ್ದೀರಿ ನೋಡಿ - ಆದಿಕಾಂಡ 1:28.
  • ನೆಲದ ಮೇಲೆ ಹರಿದಾಡುವ ಕ್ರಿಮುಕೀಟಗಳನ್ನು ಇದು ಎಲ್ಲಾ ಜಾತಿಯ ಕ್ರಿಮಿಕೀಟಗಳನ್ನು ಪ್ರತಿನಿಧಿಸುತ್ತದೆ. ಆದಿಕಾಂಡ 1:25.
  • will be blessed in him ನೀನು ಆಶೀರ್ವಾದದ ನಿಧಿಯಾಗುವಿ ಪರ್ಯಾಯ ಅನುವಾದ: ಅಬ್ರಹಾಮಿನಿಂದ ಆಶೀರ್ವದಿಸಲ್ಪಟ್ಟನು ಅಥವಾ ನಾನು ಅಬ್ರಹಾಮನನ್ನು ಆಶೀರ್ವಾದಿಸಿದ್ದರಿಂದ ಆಶೀರ್ವಾದಿಸಲ್ಪಡುವಿ. ಭಾಷಾಂತರಿಸುವಾಗ “ ಅವನಲ್ಲಿ” ಈ ಪದವನ್ನು ಭಾಷಾಂತರಿಸುವಾಗ “ನಿನ್ನ ಮೂಲಕ” ಎಂದಾಗಿದೆ ಆದಿಕಾಂಡ 12:3.