kn_ta/translate/resources-eplain/01.md

4.9 KiB

ವಿವರಣೆ

ಕೆಲವೊಮ್ಮೆ ಒಂದು ಪದ ಅಥವಾ ನುಡಿಗಟ್ಟು ULB,ಯಲ್ಲಿ ಯಾವ ರೀತಿಯ ಅರ್ಥ ನೀಡುತ್ತದೆ ಎಂದು ಗೊತ್ತಿರುವುದಿಲ್ಲ ಮತ್ತು ಇದನ್ನು UDBಯಲ್ಲಿ ಉಪಯೋಗಿಸಲಾಗುತ್ತದೆ. ಈ ವಿಚಾರದ ಬಗ್ಗೆ ಟಿಪ್ಪಣಿಯಲ್ಲಿ ವಿವರಿಸಲಾಗಿದೆ. ಈ ಎಲ್ಲಾ ವಿವರಣೆಗಳು ಪದ ಅಥವಾ ಒಂದು ನುಡಿಗಟ್ಟನ್ನು ಅರ್ಥಮಾಡಿಕೊಳ್ಳಲು ವಿವರಣೆ ಕೊಡುತ್ತದೆ. ವಿವರಣೆಗಳನ್ನು ನಿಮ್ಮ ಸತ್ಯವೇದದಲ್ಲಿ ಭಾಷಾಂತರಿಸಬಾರದು. ನೀವು ವಾಕ್ಯ ಭಾಗವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಇದನ್ನು ಬಳಸಬೇಕು. ಇದರಿಂದ ನೀವು ಸತ್ಯವೇದವನ್ನು ನಿಖರವಾಗಿ ಭಾಷಾಂತರಿಸಲು ಸಾಧ್ಯವಾಗುತ್ತದೆ.

ಭಾಷಾಂತರ ಟಿಪ್ಪಣಿಗಳ ಉದಾಹರಣೆಗಳು.

ಸರಳವಾದ ವಿವರಣೆಗಳು ಪದ ಅಥವಾ ನುಡಿಗಟ್ಟುಗಳ ಬಗ್ಗೆ ಪೂರ್ಣವಾಕ್ಯಗಳಲ್ಲಿ ಬರೆಯಲ್ಪಟ್ಟಿವೆ. ಇವುಗಳು ದೊಡ್ಡ ಅಕ್ಷರಗಳಿಂದ (capital letter) ಪ್ರಾರಂಭವಾಗಿ ಕಾಲಾವಧಿಯಿಂದ (".") ಕೊನೆಗೊಳ್ಳುತ್ತವೆ.

ಬೆಸ್ತರು ದೋಣಿಗಳಿಂದ ಹೊರಬಂದು ಬಲೆಗಳನ್ನು ತೊಳೆಯುತ್ತಿದ್ದರು .(ಲೂಕ 5:2 ULB)

  • ಅವರ ಬಲೆಗಳನ್ನು ತೊಳೆಯುತ್ತಿದ್ದರು - ಅವರು ಅವರ ಮೀನು ಹಿಡಿಯುವ ಬಲೆಗಳನ್ನು ತೊಳೆಯುತ್ತಿದ್ದರು. ಮೀನು ಹಿಡಿಯಲು ಬೆಸ್ತರು ಬಲೆಗಳನ್ನು ಬಳಸುತ್ತಾರೆ ಎಂದು ನಿಮಗೆ ಗೊತ್ತಿಲ್ಲದಿದ್ದರೆ. ಅವರು ಬಲೆಗಳನ್ನು ಏಕೆ ತೊಳೆಯುತ್ತಿದ್ದರು ಎಂದು ಆಶ್ಚರ್ಯ ಪಡುತ್ತಿದ್ದಿರಿ. ಈ ವಿವರಣೆ ನಿಮ್ಮನ್ನು "ತೊಳೆಯುತ್ತಿದ್ದರು" ಮತ್ತು "ಬಲೆಗಳು" ಎಂಬ ಪದಗಳಿಗೆ ಇನ್ನೂ ಒಳ್ಳೆಯ ಪರ್ಯಾಯ ಪದಗಳನ್ನು ಬಳಸಲು ಅನುಕೂಲವಾಗಬಹುದು

ಅವರು ತಮ್ಮ ಇನ್ನೊಂದು ದೋಣಿಯಲ್ಲಿದ್ದ ಜೊತೆಗಾರರನ್ನು ಕರೆದರು (ಲೂಕ 5:7 ULB)

  • ಸನ್ನೆಮಾಡಿದರು - ಅವರು ತಮ್ಮ ಜೊತೆಗಾರರು ದೋಣಿಯಿಂದ ದೂರವಿದ್ದುದರಿಂದ ಅವರನ್ನು ಸನ್ನೆಮಾಡಿ ಕರೆದರು ಇದರಿಂದ ನೀವು ಅವರು ಯಾವ ರೀತಿಯ ಸನ್ನೆ ಮಾಡಿರಬಹುದು ಎಂದು ತಿಳಿದುಕೊಳ್ಳಲು ಅನುಕೂಲವಾಗುತ್ತದೆ. ಅವರು ಮಾಡಿದ ಸನ್ನೆಯನ್ನು ಜೊತೆಗಾರರು ಅವರ ದೋಣಿಯಿಂದ ನೋಡಲು ಸಾಧ್ಯವಾಗಿತ್ತು. ಈ ವಿವರಣೆ ಅವರು ಮಾಡಿದ ಸನ್ನೆಯನ್ನು ಇನ್ನೂ ಸೂಕ್ತವಾದ ಪದಗಳಿಂದ "ಹೇಳಲು " ಸಾಧ್ಯವಾಗುತ್ತದೆ.

ತಾಯಿಯ ಗರ್ಭದಲ್ಲಿರುವಾಗ ಪವಿತ್ರಾತ್ಮನಿಂದ ತುಂಬಿದವನಾಗಿದ್ದನು . (ಲೂಕ 1:14 ULB)

  • ಅವನು ಅವನ ತಾಯಿಯ ಗರ್ಭದಲ್ಲಿರುವಾಗಲೂ - "ಇರುವಾಗಲೂ" ಎಂಬ ಪದ ಆಶ್ಚರ್ಯಕರ ವಾದ ಅರ್ಥವನ್ನು ಧ್ವನಿಸುತ್ತದೆ. "ಜನರು ಪವಿತ್ರಾತ್ಮ ಭರಿತರಾಗಿದ್ದಾರೆ " ಎಂಬುದನ್ನು ಕೇಳಿ ತಿಳಿದಿದ್ದರೂ. ಗರ್ಭದಲ್ಲಿರುವ ಶಿಶು ಪವಿತ್ರಾತ್ಮ ಭರಿತವಾಗಿರುವುದೆಂದರೆ ಇದೊಂದು ಅದ್ಭುತ ಸಂಗತಿ. ಇದರಿಂದ ಈ ಟಿಪ್ಪಣಿ ಇಲ್ಲಿ "ಇರುವಾಗಲೂ" ಎಂಬ ಪದವನ್ನು ಅರ್ಥಮಾಡಿಕೊಳ್ಳಲು, ವಾಕ್ಯದಲ್ಲಿ ಅದು ಹೇಗೆ ಧ್ವನಿಸುತ್ತದೆ, ಹಾಗೆಯೇ ಇಂತಹ ಪದಗಳಿಂದ ಆಶ್ಚರ್ಯಕರವಾದ ಸಂಗತಿ ಹೇಗೆ ಪ್ರಕಟಮಾಡಲು ಸಾಧ್ಯ ಎಂಬುದು ತಿಳಿಯುತ್ತದೆ.