kn_ta/translate/resources-connect/01.md

11 KiB

ವಿವರಣೆ

ಟಿಪ್ಪಣಿಗಳು ಪಟ್ಟಿಯ ಮೇಲ್ಭಾಗದಲ್ಲಿ, ಸಂಪರ್ಕ ಕಲ್ಪಿಸುವ ವಾಕ್ಯಗಳು ಅಥವಾ ಸಾಮಾನ್ಯ ಮಾಹಿತಿಗಳನ್ನು ಹೊಂದಿರುತ್ತವೆ.

** ಸಂಪರ್ಕ ಸೂಚಿಸುವ ವಾಕ್ಯಗಳು** ಒಂದು ವಾಕ್ಯ ಭಾಗದ ಹೇಳಿಕೆಗಳು ಹಿಂದಿನ ಸತ್ಯವೇದದ ವಿಷಯಗಳೊಂದಿಗೆ ಹೇಗೆ ಸಂಪರ್ಕ ಸಾಧಿಸಿವೆ ಎಂದು ತಿಳಿಸುತ್ತವೆ. ಕೆಳಗೆ ಕೊಟ್ಟಿರುವ ಕೆಲವು ಮಾಹಿತಿಗಳು ಹೇಗೆ ಸಂಪರ್ಕಸಾಧಿಸುವ ವಾಕ್ಯಗಳಾಗಿ ಬರುತ್ತವೆ ಎಂಬುದನ್ನು ಹೇಳುತ್ತವೆ.

  • ಈ ಚಿಕ್ಕ ವಿಷಯ ಪ್ರಾರಂಭದಲ್ಲಿದೆಯೋ, ಮಧ್ಯಭಾಗದಲ್ಲಿದೆಯೋ ಅಥವಾ ವಾಕ್ಯಭಾಗದ ಕೊನೆಯಲ್ಲಿ ಬರುತ್ತದೋ ನೋಡಬೇಕು.
  • ಮಾತನಾಡುತ್ತಿರುವವರು ಯಾರು?
  • ಮಾತನಾಡುತ್ತಿರುವವರು ಯಾರೊಂದಿಗೆ ಮಾತನಾಡುತ್ತಿದ್ದಾರೆ.?

** ಸಾಮಾನ್ಯ ಮಾಹಿತಿ** ಟಿಪ್ಪಣಿಗಳು ಸಂಬಂಧಿತ ವಿಷಯಗಳನ್ನು ಚಿಕ್ಕ ಚಿಕ್ಕ ಭಾಗಗಳಲ್ಲಿ ಒಂದು ನುಡಿಗುಚ್ಛಕ್ಕಿಂತ ಹೆಚ್ಚಾಗಿ ಹೇಳಲು ಪ್ರಯತ್ನಿಸುತ್ತವೆ. ಈ ಕೆಳಗೆ ಕೊಟ್ಟಿರುವ ಕೆಲವು ಮಾಹಿತಿಗಳು ಸಾಮಾನ್ಯಮಾಹಿತಿ ನೀಡುವ ವಾಕ್ಯಗಳಾಗಿ ಸಾಮಾನ್ಯ ಮಾಹಿತಿ ನೀಡುವ ವಾಕ್ಯಗಳಾಗಿ / ಹೇಳಿಕೆಗಳಾಗಿ ಬಂದಿವೆ.

  • ಒಬ್ಬ ವ್ಯಕ್ತಿ ಅಥವ ವಸ್ತುವನ್ನು ಸರ್ವನಾಮಗಳಿಂದ ಗುರುತಿಸಿ ಹೇಳುವುದು.
  • ವಾಕ್ಯಭಾಗಗಳನ್ನು ಅರ್ಥಮಾಡಿಕೊಳ್ಳಲು ಬಹುಮುಖ್ಯ ಹಿನ್ನೆಲೆ ಅಥವಾ ತಿಳಿದ ಮಾಹಿತಿಗಳನ್ನು ಹೊಂದಿಕೊಳ್ಳುವುದು ಅವಶ್ಯ.
  • ತರ್ಕಬದ್ಧವಾದ ಚರ್ಚೆಗಳು ಮತ್ತು ಅಂತಿಮ ತೀರ್ಮಾನಗಳು. ಈ ಎರಡೂ ರೀತಿಯ ಟಿಪ್ಪಣಿಗಳು ನಿಮಗೆ ವಾಕ್ಯಭಾಗಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಮತ್ತು ಭಾಷಾಂತರ ಕಾರ್ಯದಲ್ಲಿ ಎದುರಾಗುವ ವಿಷಯಗಳನ್ನು ಪರಿಹರಿಸಿಕೊಳ್ಳಲು ಸಹಾಯಕವಾಗಿರುತ್ತವೆ.

ಉದಾಹರಣೆಗಳು

ಈ ವಿಷಯ ಭಾಗಗಳು ವಾಕ್ಯದ ಪ್ರಾರಂಭದಲ್ಲಿ, ಮಧ್ಯಭಾಗದಲ್ಲಿ ಅಥವಾ ವಾಕ್ಯಭಾಗದ ಕೊನೆಯಲ್ಲಿ ಬರುತ್ತದೋ ಗಮನಿಸಬೇಕು.

1ಯೇಸುತನ್ನ ಹನ್ನೆರಡು ಮಂದಿ ಶಿಷ್ಯರಿಗೆ ಬೇಕಾದುದನ್ನು ಹೇಳಿ ಮುಗಿಸಿದ ಬಳಿಕ ಸಮೀಪದ ಊರುಗಳಲ್ಲಿ ಉಪದೇಶ ಮಾಡುವುದಕ್ಕೂ, ಸುವಾರ್ತೆಯನ್ನು ಸಾರುವುದಕ್ಕೂ ಅಲ್ಲಿಂದ ಹೊರಟನು 2ಯೋಹಾನನು ಕ್ರಿಸ್ತನ ಕಾರ್ಯಗಳ ಸುದ್ದಿಯನ್ನು ಸೆರೆಮನೆಯಲ್ಲಿ ಕೇಳಿ ಆತನ ಬಳಿಗೆ ಶಿಷ್ಯರನ್ನು ಕಳುಹಿಸಿ 3ಬರಬೇಕಾದವನು ನೀನೋ, ನಾವು ಬೇರೊಬ್ಬನ ದಾರಿಯನ್ನು ನೋಡಬೇಕೋ ಎಂದು ಕಳುಹಿಸಿದನು ? "(ಮತ್ತಾಯ 11:1-3 ULB)

  • ಸಾಮಾನ್ಯ ಮಾಹಿತಿ - ಇದು ಕಥೆಯ ನೂತನ ಪ್ರಾರಂಭದ ಸುವಾರ್ತೆಯನ್ನು ಬರೆದವನು ಸ್ನಾನಿಕನಾದ ಯೋಹಾನನು ಕಳುಹಿಸಿದ ಶಿಷ್ಯರಿಗೆ ಯೇಸು ಹೇಗೆ ಪ್ರತಿಕ್ರಿಯಿಸಿದನು ಎಂಬುದನ್ನು ಹೇಳಿದಂತಿದೆ. (ಹೊಸ ವಿಷಯ / ಘಟನೆಯ ಪರಿಚಯ : ನೋಡಿ)

ಈ ಟಿಪ್ಪಣಿಯು ಹೊಸಕತೆ / ಹೊಸವಿಷಯದ ಪ್ರಾರಂಭ ಮಾಡುವುದರ ಬಗ್ಗೆ ಮತ್ತು ಭಾಷಾಂತರಿಸಬೇಕು ಎಂಬುದರ ಕಡೆಗೆ ನಮ್ಮನ್ನು ಎಚ್ಚರಿಸುತ್ತದೆ.

ಮಾತನಾಡುತ್ತಿರುವುದು ಯಾರು ?

17ಯೂದನು ನಮ್ಮ ಲೆಕ್ಕದಲ್ಲಿ ಸೇರಿ ಈ ಸೇವೆಯಲ್ಲಿ ಪಾಲು ಹೊಂದಿದವನಾಗಿದ್ದನು 18(ಈ ಮನುಷ್ಯನು ತನ್ನ ದ್ರೋಹದಿಂದ ಸಂಪಾದಿಸಿದ ಹಣಕ್ಕೆ ಒಂದು ಹೊಲವನ್ನು ಕೊಂಡುಕೊಂಡನು. ನಂತರ ಅವನು ತಲೆಕೆಳಗಾಗಿ ಬಿದ್ದ ಅವನ ಹೊಟ್ಟೆ ಒಡೆದು ಕರುಳುಗಳೆಲ್ಲಾ ಹೊರಗೆ ಸುರಿದವು.19ಇದು ಯೆರೂಸಲೇಮ್, ಪಟ್ಟಣದ ನಿವಾಸಿಗಳಿಗೆಲ್ಲಾ ತಿಳಿದು ಬಂದುದರಿಂದ ಆ ಹೊಲಕ್ಕೆ ಅವರ ಭಾಷೆಯಲ್ಲಿ “ ಅಕೆಲ್ಡೆಮಾ “ ಅಂದರೆ ಜೀವಹತ್ಯೆಯ ಹೊಲ ಎಂಬ ಹೆಸರು ಬಂತು. (ಆ.ಕೃ. 1:17-19 ULB)

  • ಸಂಪರ್ಕಿಸುವ ವಾಕ್ಯ / ಹೇಳಿಕೆ - ಪೇತ್ರನು ಅಲ್ಲಿ ಕೂಡಿಬಂದ ವಿಶ್ವಾಸಿಗಳ ಮಧ್ಯದಲ್ಲಿ ನಿಂತು ಈ ರೀತಿ ಪ್ರಾರಂಭಿಸಿದನು.(ಆ.ಕೃ. 1:16.) ಈ ಟಿಪ್ಪಣಿ ನಮಗೆ ಪೇತ್ರನು ಇನ್ನು 17ನೇ ವಾಕ್ಯದಲ್ಲೂ ಮಾತನಾಡುತ್ತಿರುವ ಬಗ್ಗೆ ತಿಳಿಸುತ್ತದೆ.

ಒಬ್ಬ ವ್ಯಕ್ತಿ ಅಥವಾ ವಸ್ತುಗಳನ್ನು ಸರ್ವನಾಮಗಳಿಂದ ಗುರುತಿಸಿ ಹೇಳುತ್ತಿದೆಯೋ.

20ಯೆಶಾಯ ತುಂಬಾ ಧೈರ್ಯವಾಗಿ ಇಲ್ಲಿ ಹೇಳುವುದೇನೆಂದರೆ, " ನನ್ನನ್ನು ಹುಡುಕದವರಿಗೂ ಸಿಕ್ಕಿದೆನು " "ನನ್ನ ವಿಷಯ ವಿಚಾರಮಾಡದವರಿಗೂ ಪ್ರತ್ಯಕ್ಷನಾದೆನು " 21ಆದರೆ ಅವನು ಇಸ್ರಾಯೇಲರನ್ನು ಕುರಿತು ನನ್ನ ಕೈಗೆ ಸಿಗದೆ ದೂರವಾಗಿ ಉಳಿದವರನ್ನು ದಿನವೆಲ್ಲಾ ಕೈಚಾಚಿ ಕರೆದೆ. ನನ್ನ ಮಾತಿಗೆ ವಿಧೇಯರಾಗಿ ಎದುರುಮಾತನಾಡುವ ಜನರನ್ನೂ ಕರೆದೆ (ರೋಮಾ10:20-21 ULB),

  • ಸಾಮಾನ್ಯ ಮಾಹಿತಿ : ಇಲ್ಲಿ ಬರುವ "ನಾನು," "ನನ್ನ," ಮತ್ತು "ನನಗೆ" ಎಂಬ ಪದಗಳು ದೇವರನ್ನು ಕುರಿತು ಹೇಳಿಕೊಳ್ಳುವಂತದ್ದು. ಈ ಟಿಪ್ಪಣಿ ಇಲ್ಲಿ ಬಳಸಿರುವ ಸರ್ವನಾಮಗಳು ಯಾರನ್ನು ಉದ್ದೇಶಿಸಿ ಹೇಳಿವೆಎಂದು ತಿಳಿಸುತ್ತದೆ. ಇಲ್ಲಿ ಯೆಶಾಯನು ತನ್ನ ಬಗ್ಗೆ ಹೇಳುತ್ತಿಲ್ಲ, ಆದರೆ ದೇವರ ಬಗ್ಗೆ ಹೇಳುತ್ತಿದ್ದಾನೆ ಎಂದು ತಿಳಿಸಲು ಓದುಗರಿಗೆ ಅರ್ಥವಾಗುವಂತೆ ನಿಮಗೆ ಬೇಕಾದ ಪದಗಳನ್ನು ಬಳಸುವ ಅಗತ್ಯವಿದೆಯೇ ನೋಡಿ ಬಳಸಿ.

ಮುಖ್ಯವಾದ ಹಿನ್ನೆಲೆ ಅಥವಾ ತಿಳಿಸಬೇಕಾದ ಮಾಹಿತಿ

26ಅಷ್ಟರಲ್ಲಿ ಕರ್ತನ ದೂತನು ಫಿಲಿಪ್ಪನಿಗೆ ನೀನು ಎದ್ದು ದಕ್ಷಿಣದ ಕಡೆಗೆ ಯೆರೂಸಲೇಮಿನಿಂದ ಗಾಜಕ್ಕೆ ಹೊಗುವ ದಾರಿಯಲ್ಲಿ ಹೋಗು (ಅದು ಮರಳುಗಾಡು) 27ಅವನು ಎದ್ದು ಹೊರಟುಹೋದನು. ಹೋಗುತ್ತಿರುವಾಗ ಇಥಿಯೋಪಿಯಾ ದೇಶದ ಒಬ್ಬ ಮನುಷ್ಯನನ್ನು ಕಂಡನು ಅವನು ಕಂಚುಕಿಯು ಇಥಿಯೋಪಿಯಾ ದೇಶದ ರಾಣಿಯಾಗಿದ್ದ ಕಂದಾಕೆಯ ಬಳಿ ಅಧಿಕಾರಿಯಾಗಿದ್ದ.

ಆಕೆಯ ಎಲ್ಲ ಖಜಾನೆಯ ಮೇಲ್ವಿಚಾರಕನೂ ಆಗಿದ್ದ. ಅವನು ದೇವಾರಾಧನೆಗೋಸ್ಕರ 28ಯೆರೂಸಲೇಮಿಗೆ ಬಂದು ಹಿಂತಿರುಗಿ ಹೋಗುವಾಗ ತನ್ನ ರಥದಲ್ಲಿ ಕುಳಿತುಕೊಂಡು ಯೆಶಾಯ ಪ್ರವಾದಿಯ ಗ್ರಂಥವನ್ನು ಓದುತ್ತಿದ್ದನು. (ಆ.ಕೃ. 8:26-28 ULB)

  • ಸಾಮಾನ್ಯ ಮಾಹಿತಿ: - ಇದು ಫಿಲಿಪ್ಪಿ ಮತ್ತು ಇಥಿಯೋಪಿಯಾದ ಮನುಷ್ಯನ ಬಗ್ಗೆ ಹೇಳುತ್ತಿದ್ದ ಕತೆಯ ಪ್ರಾರಂಭದ ಭಾಗ. 27ನೇ ವಾಕ್ಯ ಇಥಿಯೋಪಿಯಾದಿಂದ ಬಂದ ಮನುಷ್ಯನ ಬಗ್ಗೆ ಹಿನ್ನೆಲೆ ಮಾಹಿತಿಯನ್ನು ನೀಡುತ್ತದೆ. (ಹಿನ್ನೆಲೆಗಳು ನೋಡಿ)

ಈ ಟಿಪ್ಪಣಿ ಕತೆಯ ನೂತನ ಭಾಗದ ಪ್ರಾರಂಭ ಮತ್ತು ಹಿನ್ನೆಲೆ ಮಾಹಿತಿಯನ್ನು ನಿಮ್ಮ ಭಾಷೆಯಲ್ಲಿ ಹೇಗೆ ಹೇಳಬಹುದು ಎಂಬುದರ ಬಗ್ಗೆ ತಿಳಿಸಲು ಎಚ್ಚರಿಕೆಯನ್ನು ನೀಡುತ್ತದೆ. ಹಿನ್ನೆಲೆ ಮಾಹಿತಿ ಪುಟಕ್ಕೆ ಈ ಟಿಪ್ಪಣಿ ಸಂಪರ್ಕ ಕಲ್ಪಿಸುತ್ತದೆ. ಇದರಿಂದ ಇಂತಹ ಮಾಹಿತಿಗಳನ್ನು ಹೇಗೆ ಭಾಷಾಂತರಿಸಬಹುದು ಎಂಬುದನ್ನು ತಿಳಿಯಲು ಸಾಧ್ಯವಾಗುತ್ತದೆ.