kn_ta/translate/resources-alterm/01.md

5.8 KiB

ವಿವರಣೆ

ಸತ್ಯವೇದದ ವಿದ್ವಾಂಸರು ಸತ್ಯವೇದದಲ್ಲಿ ಬರುವ ಪದಗಳು ಮತ್ತು ಪದಗುಚ್ಛಗಳಿಗೆ ವಿಭಿನ್ನವಾದ ಅರ್ಥಗಳನ್ನು ಹೊಂದಿರುತ್ತಾರೆ. ಅಂತಹ ಸಮಯದಲ್ಲಿ ಪರ್ಯಾಯ ಅರ್ಥ ನೀಡುವ ಪದಗಳನ್ನು ಪ್ರಸ್ತಾಪಮಾಡುತ್ತಾರೆ. ಟಿಪ್ಪಣಿಗಳು ULB ವಾಕ್ಯಭಾಗವನ್ನು ಅನುಸರಿಸಿ ವಿವರಣೆ ನೀಡಿ ಸಂಭವನೀಯ ಅರ್ಥ ನೀಡುವ ಪದಗಳಿಂದ ಪ್ರಾರಂಭಮಾಡಬಹುದು

ಅರ್ಥಗಳನ್ನು ಎಣಿಸಿ ಸಂಖ್ಯೆ ನೀಡಲಾಗುವುದು, ಸತ್ಯವೇದದ ವಿದ್ವಾಂಸರು ಮೊದಲ ಪದವನ್ನೇ ಸರಿಯಾದ ಪದವೆಂದು ಪರಿಗಣಿಸುತ್ತಾರೆ. ಒಂದು ಪದದ ಕ ಅರ್ಥ ಭಾಷಾಂತರ ಮಾಡುವಲ್ಲಿ ಸಹಾಯ ಮಾಡುವವರಾದರೆ ಅದನ್ನು ಉಪಯೋಗಿಸಬಹುದು. ಆದರೆ ಅದಕ್ಕೆ " " ಈ ಚಿಹ್ನೆಗಳನ್ನು ಬಳಸಬೇಕು. ಭಾಷಾಂತರಗಾರರು ಯಾವ ಪದವನ್ನು ಭಾಷಾಂತರ ಮಾಡಬೇಕೆಂದು ನಿರ್ಧರಿಸಬೇಕು. ಭಾಷಾಂತರಗಾರರು ಮೊದಲ ಅರ್ಥವನ್ನು ಆಯ್ಕೆ ಮಾಡಬೇಕು. ಇಲ್ಲದಿದ್ದರೆ ಪರ್ಯಾಯ ಅರ್ಥ ನೀಡುವ ಪದವನ್ನು ಬಳಸಬಹುದು ಇದು ಭಾಷಾಂತರ ಆಗುತ್ತಿರುವ ಸಮುದಾಯದ ಜನರು ಸತ್ಯವೇದದ ಇತರ ಪ್ರತಿಗಳಲ್ಲಿರುವ ಅರ್ಥವನ್ನು ಅರ್ಥಮಾಡಿಕೊಂಡು ಗೌರವಿಸಿದರೆ ಆ ಪದವನ್ನು ಬಳಸಬಹುದು.

ಭಾಷಾಂತರ ಟಿಪ್ಪಣಿಗಳ ಉದಾಹರಣೆಗಳು.

ಆದರೆ ಕಡೆಯದಾಗಿ ಉಳಿಸಿಕೊಂಡ ಕೆಲವು ಕೂದಲನ್ನು ನಿನ್ನ ಮೇಲಂಗಿಯ ಅಂಚಿನ ಮಡಿಕೆಯಲ್ಲಿ ಕಟ್ಟು . (ಯೆಹೆಜ್ಜೇಲ 5:3 ULB)

  • ಮೇಲಂಗಿಯ ಅಂಚಿನ ಮಡಿಕೆ - ಸಂಭವನೀಯ ಅರ್ಥಗಳು 1. ನಿನ್ನ ತೋಳಿನ ಮೇಲಿರುವ ಮೇಲಂಗಿ (ತೋಳಬಟ್ಟೆ) (UDB) or 2) ಮೇಲಂಗಿಯ ಕೊನೆಯ ಭಾಗ ಅಂಚಿನಭಾಗ 3. ಮೇಲಂಗಿಯನ್ನು ಮಡಚಿ ಹೊಲೆದಿರುವ ಭಾಗ ಸೊಂಟಪಟ್ಟಿಯಲ್ಲಿ ಸೇರಿರುವುದು

ಈ ಟಿಪ್ಪಣಿಯು ULB ವಾಕ್ಯಭಾಗವನ್ನು ಅನುಸರಿಸಿ ಮೂರು ಸಂಭವನೀಯ ಅರ್ಥವನ್ನು ಸೂಚಿಸುತ್ತದೆ. " ನಿನ್ನ ಮೇಲಂಗಿಯ ಮಡಚಿದ ಭಾಗ ಎಂದರೆ ಮೇಲಂಗಿಯ ಸಡಿಲವಾದ ಭಾಗ ಎಂಬುದನ್ನು ಸೂಚಿಸುತ್ತದೆ. ಬಹುಪಾಲು ವಿದ್ವಾಂಸರು ಇದು ತೋಳಿನ ಭಾಗದ ಬಟ್ಟೆಗೆ ಸಂಬಂಧಿಸಿದ್ದು ಎಂದು ಅಭಿಪ್ರಾಯ ಪಡುತ್ತಾರೆ. ಇದು ಮೇಲಂಗಿಯ ಕೆಳಗಿನ ಭಾಗವೂ ಆಗಿರಬಹುದು ಇಲ್ಲವೇ ಸೊಂಟದ ಬಳಿ ಇರುವ ನಡುಪಟ್ಟಿಯ ಭಾಗವೂ ಇರಬಹುದು.

ಆದರೆ ಸಿಮೋನ ಪೇತ್ರನು ಅದನ್ನು ನೋಡಿದೊಡನೆ ಯೇಸುವಿನ ಮೊಣಕಾಲಿನ ಮೇಲೆ ಬಿದ್ದನು (ಲೂಕ 5:8 ULB)

  • ಯೇಸುವಿನ ಮೊಣಕಾಲಿನ ಮೇಲೆ ಬಿದ್ದನು - ಸಂಭವನೀಯ ಅರ್ಥಗಳು 1. “ಯೇಸುವಿನ ಮುಂದೆ ಮೊಣಕಾಲೂರಿದನು”. 2. “ಯೇಸುವಿನ ಕಾಲಿಗೆ ಬಾಗಿ ನಮಸ್ಕರಿಸಿದನು” 3. “ಯೇಸುವಿಗೆ ಸಾಷ್ಠಾಂಗವೆರಗಿದನು”

ಪೇತ್ರನು ಆಕಸ್ಮಿಕವಾಗಿ ಬೀಳಲಿಲ್ಲ. ಅವನು ಯೇಸುವಿನ ಬಗ್ಗೆ ವಿಧೇಯತೆ ಮತ್ತು ಗೌರವದಿಂದ ಈ ರೀತಿ ಮಾಡಿದನೆಂಬುವುದಕ್ಕೆ ಗುರುತು. ಇಲ್ಲಿ ಟಿಪ್ಪಣಿಯಲ್ಲಿ ಯೇಸುವಿನ ಮೊಣಕಾಲಿನ ಮೇಲೆ ಏನು ಬಿದ್ದಿತು ಎಂದು ತಿಳಿಸುವ ಅರ್ಥ. ಮೊದಲು ನೀಡಿರುವ ಅರ್ಥ ಸರಿಯಾದರೂ ಇನ್ನೆರಡು ಅರ್ಥಗಳು ಸಹಾ ಸಂಭವನೀಯವಾದುದು. ನಿಮ್ಮ ಭಾಷೆಯಲ್ಲಿ ಈ ರೀತಿಯ ಸಾಮಾನ್ಯ ಅಭಿವ್ಯಕ್ತಿಗಳು ವಿವಿಧ ಕ್ರಿಯೆಗಳನ್ನು ಒಳಗೊಂಡಿದ್ದರೆ ನೀವು ಹೆಚ್ಚು ನಿರ್ದಿಷ್ಠವಾಗಿ ಹೇಳುವ ಸಂಭವನೀಯ ಅರ್ಥದ ಪದವನ್ನು ಪೇತ್ರ ನು ಮಾಡಿದ ಎಂಬುವುದರ ಬಗ್ಗೆ ಬಳಸಬಹುದು.

ಸೀಮೋನ ಪೇತ್ರ ಏಕೆ ಹೀಗೆ ಮಾಡಿದ ಎಂಬುದರ ಬಗ್ಗೆ ಆಲೋಚಿಸಲೂ ಸಹ ಇದು ಸಹಾಯ ಮಾಡುತ್ತದೆ ಮತ್ತು ಯಾವ ರೀತಿಯ ಕ್ರಿಯೆಯನ್ನು ಬಳಸಿ ಅದೇ ರೀತಿಯ ಮನೋಭಾವನೆಯನ್ನು ವ್ಯಕ್ತಪಡಿಸಲು, ವಿಧೇಯತೆ ಮತ್ತು ಗೌರವದ ಬಗ್ಗೆ ನಿಮ್ಮ ಸಂಸ್ಕೃತಿಯಲ್ಲಿರುವ ಸೂಕ್ತ ಪದವನ್ನು ಬಳಸಬಹುದು.