kn_ta/translate/resources-alter/01.md

7.2 KiB

ವಿವರಣೆ

ಭಾಷಾಂತರ ಮಾಡುತ್ತಿರುವ ಭಾಷೆಯಲ್ಲಿ ಭಾಷಾಂತರ ಮಾಡಲು ಅಥವಾ ವಿಭಿನ್ನ ಮಾದರಿ ಬೇಕೆಂದರೆ ಪರ್ಯಾಯ ಭಾಷಾಂತರದಿಂದ ULB ಮಾದರಿಯನ್ನು ಭಾಷಾಂತರಿಸುವ ಮಾರ್ಗ ದೊರೆಯುತ್ತದೆ. ULB ಮಾದರಿಯಲ್ಲಿ ಭಾಷಾಂತರ ಮಾಡುವಾಗ ಅಥವಾ ಈ ವಿಷಯ ಭಾಷಾಂತರವಾಗುವಾಗ ತಪ್ಪಾಗಿ ಭಾಷಾಂತರವಾಗುತ್ತದೆ ಇಲ್ಲವೇ, ಅಸ್ಪಷ್ಟ ಮತ್ತು ಅಸಹಜವಾಗಿ ಭಾಷಾಂತರವಾಗುತ್ತದೆ ಎಂಬ ಸಂದರ್ಭ ಬಂದಾಗ ಪರ್ಯಾಯ ಭಾಷಾಂತರದ ಅವಶ್ಯಕತೆ ಇರುತ್ತದೆ.

ಪರ್ಯಾಯ ಭಾಷಾಂತರದ ಸಲಹೆಗಳಲ್ಲಿ, ಈ ಕೆಲವು ವಿಷಯದಲ್ಲಿ ಭಾಷಾಂತರ ಆಗುವ ಸಾಧ್ಯತೆ ಇರುತ್ತದೆ. ಉದಾಹರಣೆಗೆ ಧ್ವನಿತ / ಅಡಕವಾಗಿರುವ ಮಾಹಿತಿಯನ್ನುಸ್ಪಷ್ಟವಾಗಿ ತಿಳಿಸುವಾಗ ಕರ್ತರೀ ಕರ್ಮಣಿ ವಾಕ್ಯಗಳ ಬದಲಾವಣೆ, ಅಲಂಕಾರಿಕ ಪದಗಳನ್ನು /ವಾಕ್ಯಗಳನ್ನು ಹೇಳುವಾಗ ಪ್ರಶ್ನೆಗಳನ್ನು ಸರಳವಾಕ್ಯವಾಗಿ ಬದಲಾಯಿಸುವಾಗ ಇಂತಹ ಬದಲಾವಣೆ ಆಗುತ್ತದೆ. ಟಿಪ್ಪಣಿಯಲ್ಲಿ ಪರ್ಯಾಯ ಭಾಷಾಂತರ ಮಾಡುವಾಗ ವಿವರಣೆಯನ್ನು ನೀಡುವ ಸಂದರ್ಭದಲ್ಲಿ ವಿಷಯಗಳನ್ನು ವಿವರಿಸುವ ಪುಟದಲ್ಲಿನ ಲಿಂಕ್ ನೋಡಬೇಕಿದೆ

ಭಾಷಾಂತರದ ಟಿಪ್ಪಣಿ ಉದಾಹರಣೆಗಳು

"AT:" ಎನ್ನುವ ಪದ ಪರ್ಯಾಯ ಭಾಷಾಂತರ ಎಂದು ತೋರಿಸುತ್ತದೆ. ಕೆಲವು ಉದಾಹರಣೆಗಳು

** ಅನನ್ಯವಾಗಿರುವ ಮಾಹಿತಿಯನ್ನು ಸ್ಪಷ್ಟಪಡಿಸುವುದು**.

ರಾಜನು ವಿಧಿಸಿದ ಯಾವ ನಿಬಂಧನೆಯಾಗಲಿ, ನಿಯಮವಾಗಲಿ ರದ್ದಾಗಬಾರದು .ಎಂಬ ಧರ್ಮಸೂತ್ರವು ಮೇಧ್ಯರಲ್ಲಿಯೂ, ಪಾರಸಿಯರಲ್ಲಿಯೂ ಉಂಟೆಂಬುದು ನಿನಗೆ ಗೊತ್ತಿರಲಿ. (ದಾನಿಯೇಲ 6:15 ULB)

  • ಯಾವ ನಿಭಂದನೆಯಾಗಲೀ, ನಿಯಮವಾಗಲೀ ರದ್ದಾಗಬಾರದು. - ಎಂಬ ವಾಕ್ಯವನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ಅನುಕೂಲವಾಗುವಂತೆ ಸೇರಿಸಬಹುದು. ಪರ್ಯಾಯ ಭಾಷಾಂತರ: ಯಾವ ನಿಭಂದನೆಯನ್ನು ರದ್ದುಮಾಡಲಾಗುವುದಿಲ್ಲ. ದಾನಿಯೇಲನನ್ನು ಸಿಂಹಗಳಿರುವ ಗವಿಯಲ್ಲಿ ಹಾಕಬೇಕು (ಸ್ಪಷ್ಟವಾದ ಮಾಹಿತಿಯನ್ನು ನೋಡಿ)

ವಾಕ್ಯಗಳಿಗೆ ಸಹಕಾರಿಯಾಗಿ ಬರುವ ವಾಕ್ಯಗಳು ರಾಜನು ಅರ್ಥಮಾಡಿಕೊಳ್ಳುವಂತೆ ಹೇಳಲಾಗಿದೆ, ರಾಜನ ನಿಬಂಧನೆಗಳು ಮತ್ತು ನಿಯಮಗಳನ್ನು ರದ್ದುಪಡಿಸಲು ಸಾಧ್ಯವಿಲ್ಲ ಎಂಬುದನ್ನು ಇಲ್ಲಿ ನೆನಪು ಮಾಡಿಕೊಳ್ಳಲಾಗುತ್ತಿದೆ. ಮೂಲ ಲೇಖಕ ಅಥವಾ ಮಾತನಾಡುತ್ತಿರುವ ವ್ಯಕ್ತಿ ಸ್ಪಷ್ಟವಾಗಿ ತಿಳಿಸಲು ಅಸಮರ್ಥವಾದ ವಿಷಯವನ್ನು ಭಾಷಾಂತರಗಾರರು ಸ್ಪಷ್ಟವಾಗಿ ತಿಳಿಸಲು ಪ್ರಯತ್ನಿಸಬೇಕು.

** ಕರ್ಮಣಿ ಪ್ರಯೋಗದಿಂದ ಕರ್ತರೀ** ಪ್ರಯೋಗಕ್ಕೆ ಬದಲಾವಣೆ.

ಪವಿತ್ರಾತ್ಮನನ್ನು ದೂಷಿಸಿದವನಿಗೆ ಕ್ಷಮಾಪಣೆಯಿಲ್ಲ (ಲೂಕ 12:10 ULB)

  • ಇದನ್ನು ಕ್ಷಮಿಸಲಾಗುವುದಿಲ್ಲ ಇದನ್ನು ಕರ್ತರಿ ಪ್ರಯೋಗದ ಮೂಲಕ ವ್ಯಕ್ತಪಡಿಸಬಹುದು. ಪರ್ಯಾಯ ಭಾಷಾಂತರ ದೇವರು ಅವನನ್ನು ಕ್ಷಮಿಸುವುದಿಲ್ಲ ಇಲ್ಲಿರುವ ನಕಾರಾತ್ಮಕ ಕ್ರಿಯಾಪದವನ್ನು ಸಕಾರಾತ್ಮಕ ಕ್ರಿಯಾಪದ " ಕ್ಷಮೆ " ಇದರ ವಿರುದ್ಧಪದವನ್ನು ಬಳಸಿ ಅರ್ಥ ಕೆಡದಂತೆ ಬಳಸಬಹುದು. ಪರ್ಯಾಯ ಭಾಷಾಂತರ "ದೇವರು ಆತನನ್ನು ಯಾವಾಗಲೂ ತಪ್ಪಿತಸ್ಥನೆಂದು ನಿರ್ಧರಿಸುತ್ತಾನೆ" "(ನೋಡಿ: ಕರ್ತರಿ ಕರ್ಮಣಿ ಪ್ರಯೋಗ) ನೋಡಿ

ಈ ಟಿಪ್ಪಣಿ ನಮಗೆ ಭಾಷಾಂತರಗಾರರು ಈ ವಾಕ್ಯವನ್ನು ಈ ಕರ್ಮಣಿ ಪ್ರಯೋಗದಲ್ಲಿ ಬಳಸಲು ಒಂದು ಉದಾಹರಣೆಯಾಗಿ) ಸಹಾಯಮಾಡುತ್ತದೆ. ಅವರ ಭಾಷೆಯಲ್ಲಿ ಕರ್ಮಣಿ ಪ್ರಯೋಗ ಇಲ್ಲದಿದ್ದರೂ ಇದು ಸಹಾಯಮಾಡುತ್ತದೆ.

** ಅಲಂಕಾರಿಕ ಪ್ರಶ್ನೆಗಳು**

ಸಾಲನೇ, ಸಾಲನೇ ನನ್ನನ್ನು ಏಕೆ ಹಿಂಸೆ ಪಡಿಸುತ್ತಿದ್ದಿ?(ಆ.ಕೃ 9:4 ULB)

  • ನನ್ನ ಏಕೆ ಹಿಂಸೆ ಪಡಿಸುತ್ತಿದ್ದಿ? ಈ ಅಲಂಕಾರಿಕ ಪ್ರಶ್ನೆ ಸಾಲನ ತಿದ್ದುಪಡಿಗೆ ಬದಲಾವಣೆಯನ್ನು ತಿಳಿಸುತ್ತದೆ ಕೆಲವು ಭಾಷೆಯಲ್ಲಿ ಸರಳವಾಕ್ಯಗಳು ಹೆಚ್ಚು ಸಹಜವಾಗಿ ಮೂಡಿ ಬರುತ್ತವೆ): "ನೀನು ನನ್ನನ್ನು ಹಿಂಸಿಸುತ್ತಿದ್ದೀ !" ಅಥವಾ ಆದೇಶ ವಾಕ್ಯ ಬಳಸಬಹುದು.(ಪರ್ಯಾಯ ಭಾಷಾಂತರ): "ನನ್ನನ್ನು ಹಿಂಸಿಸುವುದನ್ನು ನಿಲ್ಲಿಸು!" (ನೊಡಿ: ಅಲಂಕಾರಿಕ ಪ್ರಶ್ನೆಗಳು)

ಭಾಷಾಂತರದ ಸಲಹೆಗಳು ಇಲ್ಲಿ ಪರ್ಯಾಯ ರೀತಿಯ ಭಾಷಾಂತರವನ್ನು ಒದಗಿಸುತ್ತದೆ (ಪರ್ಯಾಯ ಭಾಷಾಂತರ) ನಿಮ್ಮ ಭಾಷೆಯಲ್ಲಿ ತಿದ್ದುಪಡಿಗೆ / ಬದಲಾವಣೆ ತರಲು ಬಳಸುವು ಪರಿಣಾಮಕಾರಿಯಾದ ಪದಗಳು, ಪಶ್ನಾರ್ಥಕ ಪದಗಳು ಇಲ್ಲದಿದ್ದರೆ ಪರ್ಯಾಯಪದ ಬಳಸಬಹುದು.