kn_ta/translate/qualifications/01.md

7.2 KiB

ಭಾಷಾಂತರಗಾರರ ಅಥವಾ ಭಾಷಾಂತರ ತಂಡದ ಅರ್ಹತೆಗಳು.

ಸಭೆಯ / ಚರ್ಚ್ ನ ಕಾರ್ಯಜಾಲದ ನಾಯಕರು ಭಾಷಾಂತರ ಕಾರ್ಯದಲ್ಲಿ ತೊಡಗಿಸಿಕೊಳ್ಳುವಾಗ ಕೆಳಗೆ ಕೊಟ್ಟಿರುವ ಪ್ರಶ್ನೆಗಳಿಗೆ ತಕ್ಕಂತೆ ಆಲೋಚಿಸಿ ಭಾಷಾಂತರ ತಂಡದ ಸದಸ್ಯರನ್ನು ಆಯ್ಕೆಮಾಡಬೇಕು. ಈ ಪ್ರಶ್ನೆಗಳು ಚರ್ಚ್ ಮತ್ತು ಸಮುದಾಯದ ನಾಯಕರಿಗೆ ಭಾಷಾಂತರ ತಂಡದವರು ಸತ್ಯವೇದವನ್ನು ಪರಿಣಾಮಕಾರಿಯಾಗಿ ಹಾಗೂ ಯಶಸ್ವಿಯಾಗಿ ಭಾಷಾಂತರಮಾಡಲು ಸತ್ಯವೇದದ ಕಥೆಗಳನ್ನು ಮುಕ್ತವಾಗಿ ಭಾಷಾಂತರಿಸಲು ಅರ್ಹವ್ಯಕ್ತಿಗಳನ್ನು ಆಯ್ಕೆಮಾಡಲು ಸಹಕಾರಿಯಾಗಿವೆ.

  1. ಭಾಷಾಂತರ ಮಾಡಬೇಕಾದ ಭಾಷೆಯಲ್ಲಿ ಸುಲಲಿತವಾಗಿ ಮಾತನಾಡುವ ಮತ್ತು ಭಾಷಾಂತರಿಸುವ ಜ್ಞಾನ ಭಾಷಾಂತರ ಮಾಡುವವನಿಗೆ/ಳಿಗೆ ಇದೆಯೇ? ಭಾಷಾಂತರಗಾರನಿಗೆ ತಾನು ಭಾಷಾಂತರಿಸುವ ಭಾಷೆ ಚೆನ್ನಾಗಿ ಮಾತನಾಡಲು ಬರುತ್ತದೆಯೇ ?
  • ಭಾಷಾಂತರ ಮಾಡುವ ಭಾಷೆಯನ್ನು ಚೆನ್ನಾಗಿ ಓದಲು, ಬರೆಯಲು ಭಾಷಾಂತರಗಾರನಿಗೆ ಬರುತ್ತದೆಯೇ ?
  • ಭಾಷಾಂತರಿಸುವ ಭಾಷೆಯ ಸಮುದಾಯದಲ್ಲಿ ಭಾಷಾಂತರಗಾರರು ಎಷ್ಟು ಸಮಯದಿಂದ ವಾಸವಾಗಿದ್ದಾರೆ? ಇಂತಹ ಸಮುದಾಯದಿಂದ ದೀರ್ಘಕಾಲದವರೆಗೆ ದೂರ ವಾಸಿಸುತ್ತಿರುವ ಜನರಿಗೆ ಸಹಜವಾದ ಭಾಷಾಂತರ ಮಾಡಲು ಸಾಧ್ಯವಾಗುತ್ತದೆಯೇ ?
  • ಈ ವ್ಯಕ್ತಿ ಅವರದೇ ಆದ ಭಾಷೆಯನ್ನು ಮಾತನಾಡಿದರೆ ಜನರು ಅವನನ್ನು ಗೌರವಿಸುವರೇ ?
  • ಪ್ರತಿಯೊಬ್ಬ ಭಾಷಾಂತರಗಾರರ ವಯಸ್ಸು ಮತ್ತು ಸ್ಥಳೀಯ ಭಾಷೆಯ ಹಿನ್ನೆಲೆ ಏನಾಗಿರಬೇಕು?.

ಸಾಮಾನ್ಯವಾಗಿ ವಿವಿಧ ಭಾಷೆಯ ಜ್ಞಾನವಿರುವ, ವಿವಿಧ ಸ್ಥಳಗಳಿಂದ ಬಂದ ಜನರು ಭಾಷಾಂತರ ತಂಡದಲ್ಲಿ ಇರುವುದು ಒಳ್ಳೆಯದು. ಅನೇಕ ವಯಸ್ಸಿನ, ವಿವಿಧ ಸ್ಥಳಗಳಿಂದ ಬಂದ ಜನರು ಭಾಷಾಂತರಮಾಡುವಾಗ ವಿವಿಧ ಭಾಷೆಗಳನ್ನು ಜ್ಞಾನದ ಅನುಭವವನ್ನು ಬಳಸಲು ಸಾಧ್ಯವಾಗುತ್ತದೆ. ಇಂತಹ ವ್ಯಕ್ತಿಗಳಿಂದ ಉತ್ತಮ, ನಿರ್ದಿಷ್ಟ ಭಾಷಾಂತರ ಮಾಡುವುದನ್ನು ಒಪ್ಪಿಕೊಳ್ಳುತ್ತಾರೆ.

  1. ಭಾಷಾಂತರ ಮಾಡುವವನಿಗೆ / ಳಿಗೆ ಮೂಲಭಾಷೆಯ ಜ್ಞಾನ ಚೆನ್ನಾಗಿದೆಯೇ ಮತ್ತು ಅರ್ಥಮಾಡಿಕೊಳ್ಳಲು ಸಾಧ್ಯವೇ?
  • ಅವರಿಗೆ ಯಾವ ಹಂತದ ಶಿಕ್ಷಣವನ್ನು ಪಡೆದಿದ್ದಾರೆ ಮತ್ತು ಅವರು ಮೂಲಭಾಷೆಯಲ್ಲಿನ ಕೌಶಲಗಳನ್ನು ಹೇಗೆ ಪಡೆದಿದ್ದಾರೆ ಎಂಬುದನ್ನು ತಿಳಿಯಬೇಕು.
  • ಕ್ರೈಸ್ತ ಸಮುದಾಯವು ಸದರಿ ವ್ಯಕ್ತಿಗೆ ಮೂಲಭಾಷೆಯಲ್ಲಿ ಮಾತನಾಡಲು, ಭಾಷಾಂತರಿಸಲು, ಬೇಕಾದ ಎಲ್ಲಾ ಕೌಶಶಲಗಳು ಇದೆಯೇ ಎಂದು ಗುರುತಿಸಿದೆಯೇ ? ಟಿಪ್ಪಣಿಗಳನ್ನು ಮತ್ತು ವೇದಾಭ್ಯಾಸಕ್ಕೆ ಸಂಬಂಧಿಸಿದ ವಿಚಾರಗಳನ್ನು ಅರ್ಥಮಾಡಿಕೊಂಡು ಬಳಸಿಕೊಳ್ಳಲು ತಕ್ಕ ಶಿಕ್ಷಣ ಸಾಕಷ್ಟು ಇದೆಯೇ ?
  • ಮೂಲಭಾಷೆಯನ್ನು ಸುಲಲಿತವಾಗಿ ಓದಲು, ಬರೆಯಲು ಮತ್ತು ಅರ್ಥಮಾಡಿಕೊಳ್ಳಲು ಸಾಧ್ಯವೇ?
  1. ಸಮುದಾಯದಲ್ಲಿ ಕ್ರಿಸ್ತನ ತತ್ವಗಳನ್ನು ಅನುಸರಿಸಿ ನಡೆಯುವವನು /ವಳು ಎಂದು ಮನ್ನಣೆ ಪಡೆದಿರುವರೇ?. ತಾನು ಮಾಡಿದ ಭಾಷಾಂತರವನ್ನು ಪರಿಶೀಲಿಸಿ ಸಲಹೆ ಮತ್ತು ತಿದ್ದುಪಡಿಗಳನ್ನು ಈ ಬಗ್ಗೆ ಕಾಳಜಿ ಇರುವವರು ಹೇಳಿದಾಗ ವಿನಯದಿಂದ ಕೇಳುವ ಇಚ್ಛೆ ಉಳ್ಳವನಾಗಿರಬೇಕು ಭಾಷಾಂತರಿಸುವವರು ಯಾವಾಗಲೂ ಇತರರಿಂದ ಕಲಿಯುವ ಇಚ್ಛೆಯನ್ನು ಉಳ್ಳವನಾಗಿರಬೇಕು
  • ಅವರು ಎಷ್ಟು ದಿನದಿಂದ ಕ್ರೈಸ್ತರಾಗಿದ್ದಾರೆ ? ಕ್ರೈಸ್ತ ಸಮುದಾಯದಲ್ಲಿ ಉತ್ತಮ ಸ್ಥಾನ ಹೊಂದಿದ್ದಾರೆಯೇ ?
  • ಕ್ರಿಸ್ತನ ಶಿಷ್ಯನಾಗಿ ಬದ್ಧತೆಯಿಂದ ಇವರು ನಡೆದುಕೊಳ್ಳುತ್ತಿದ್ದಾರಾ? ಸತ್ಯವೇದದ ಭಾಷಾಂತರ ಕಠಿಣವಾದುದು, ಏಕೆಂದರೆ ಅದರಲ್ಲಿ ಅನೇಕ ಪುನರಾವರ್ತನೆಗಳು, ಪರಿಷ್ಕರಣಗಳು ಇರುತ್ತವೆ.ಹಾಗೆಯೇ ಭಾಷಾಂತರ ಕಾರ್ಯಮಾಡಲು ಸಮರ್ಪಣಭಾವ ಇರಬೇಕು. ಭಾಷಾಂತರ ಕಾರ್ಯಮಾಡಲು ತೊಡಗಿದ ಸ್ವಲ್ಪ ಸಮಯದ ನಂತರ ಭಾಷಾಂತರ ತಂಡ ಭಾಷಾಂತರ ಸರಿಯಾದ ದಾರಿಯಲ್ಲಿ ನಡೆಯುತ್ತಿದೆಯೇ ಅದರ ಗುಣಮಟ್ಟ ಉತ್ತಮವಾಗಿದೆಯೇ ಎಂಬುದನ್ನು ಆಗಿಂದಾಗ್ಗೆ ಪರಿಶೀಲಿಸಬೇಕು. ಭಾಷಾಂತರ ಮಾಡುತ್ತಿರುವವರು ನಿಮ್ಮನ್ನು ಕೇಳಬಹುದು.
  • ಅವರು ಮಾಡುತ್ತಿರುವ ಭಾಷಾಂತರ ಕಾರ್ಯ ಸಹ ಭಾಷಾಂತರಗಾರ ಮತ್ತು ಸ್ಥಳೀಯ ಸಭೆಯ ನಾಯಕರ ನಿರೀಕ್ಷಿತ ಮಟ್ಟದಲ್ಲಿ ಇದೆಯೋ?

(ಇತರರೊಂದಿಗೆ ತಾವು ಮಾಡಿದ ಭಾಷಾಂತರವನ್ನು ಆಗಿಂದಾಗ್ಗೆ ಪರಿಶೀಲನೆಗೆ ಒಳಪಡಿಸಿ, ತಿದ್ದುಪಡಿ ಮಾಡಿಕೊಳ್ಳಲು ಇಚ್ಛೆ ಉಳ್ಳವರೇ?)