kn_ta/translate/guidelines-sonofgodprinciples/01.md

11 KiB

ದೇವರನ್ನು ಕುರಿತು ಉಲ್ಲೇಖಿಸಿ ಮಾತನಾಡುವಾಗ Door43 ಈ ಪರಿಕಲ್ಪನೆಗಳು ಸತ್ಯವೇದದ ಭಾಷಾಂತ್ರವನ್ನು ಪ್ರತಿನಿಧಿಸಿ ಬೆಂಬಲಿಸುತ್ತದೆ.

ಸತ್ಯವೇದದ ಸಾಕ್ಷಿಗಳು

  • " ತಂದೆ " ಮತ್ತು "ಮಗ "ಎಂಬ ಪದಗಳಿಂದ ದೇವರು ತನ್ನನ್ನು ಸತ್ಯವೇದದಲ್ಲಿ ಗುರುತಿಸಿಕೊಂಡಿದ್ದಾನೆ ಹಾಗೂ ಕರೆದುಕೊಂಡಿದ್ದಾನೆ

ಸತ್ಯವೇದವು ದೇವರು ತನ್ನ ಮಗನನನ್ನು “ಯೇಸು“ ಎಂದು ಕರೆದ ಬಗ್ಗೆ ತಿಳಿಸುತ್ತದೆ.

ಯೇಸುವಿಗೆ ದೀಕ್ಷಾಸ್ನಾನವಾದ ಕೂಡಲೆ ನೀರಿನಿಂದ ಮೇಲಕ್ಕೆ ಬರಲು ಆಕಾಶವು ತೆರೆಯಿತು ಮತ್ತು ದೇವರ ಆತ್ಮವು ಪಾರಿವಾಳದ ಹಾಗೆ ಇಳಿದು ತನ್ನ ಮೇಲೆ ಬರುವುದನ್ನು ಕಂಡನು. ಆಗ "ಈತನು ಪ್ರಿಯನಾಗಿರುವ ನನ್ನ ಮಗನು . ಈತನನ್ನು ನಾನು ಮೆಚ್ಚಿದ್ದೇನೆ.ಎಂದು ಆಕಾಶವಾಣಿ ಆಯಿತು. "ಈತನನ್ನು ನಾನು ಮೆಚ್ಚಿದ್ದೇನೆ." (ಮತ್ತಾಯ 3:16-17 ULB)

ಸತ್ಯವೇದದಲ್ಲಿ ಯೇಸು ದೇವರನ್ನು ತನ್ನ ತಂದೆ ಎಂದು ಕರೆದಿದ್ದಾನೆ.

ಯೇಸು ಹೇಳಿದ್ದೇನೆಂದರೆ, "ಪರಲೋಕ ಭೂಲೋಕಗಳ ಒಡೆಯನೇ ತಂದೆಯೇ,ನಿನ್ನ ಹೊರತು ಮಗನನ್ನು , ತಿಳಿದವರಿಲ್ಲ, ಮಗನನ್ನು ಹೊರತು,ತಂದೆಯನ್ನು ಅರಿತವರಿಲ್ಲ (ಮತ್ತಾಯ 11:25-27 ULB) (ಮತ್ತು ನೋಡಿ: ಯೋಹಾನ 6:26-57)

ಕ್ರೈಸ್ತರು " ತಂದೆ " ಮತ್ತು " ಮಗ " ನ ಎಂಬ ಈ ಎರಡು ಕಲ್ಪನೆಗಳು ತ್ರ್ಯೇಕತ್ವದ ಮೊದಲ ಮತ್ತು ಎರಡನೆಯ ವ್ಯಕ್ತಿಗಳ ನಿತ್ಯವಾದ ಸಂಬಂಧವನ್ನು ಸೂಚಿಸುತ್ತದೆ ಎಂಬುದು ಕ್ರೈಸ್ತರ ಭಾವನೆ. ಸತ್ಯವೇದದಲ್ಲಿ ತಂದೆ ಮಗನ ಬಗ್ಗೆ ಅನೇಕ ರೀತಿಯಲ್ಲಿ ಉಲ್ಲೇಖಿಸಿ ಹೇಳಿದೆ. ಆದರೆ ಈ ಎರಡು ಪದಗಳನ್ನು ಬಿಟ್ಟರೆ ನಿರಂತರವಾದ ಪ್ರೀತಿ ಅವರ ಆತ್ಮೀಯ ಸಂಬಂಧ ಮತ್ತು ಪರಸ್ಪರ ಅವಲಂಬನೆ ಇವುಗಳ ವಿವರಣೆಯನ್ನು ನೀಡಲು ಸಾಧ್ಯವಿಲ್ಲ.

ಯೇಸು ತನ್ನ ತಂದೆಯಾದ ದೇವರನ್ನು ಕುರಿತು ಈ ಕೆಳಕಂಡಂತೆ ಉಲ್ಲೇಖಿಸಿ ಹೇಳಿದ್ದಾನೆ.

ಅವರಿಗೆ ತಂದೆಯ, ಮಗನ ಮತ್ತು ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿ . (ಮತ್ತಾಯ 28:19 ULB)

ತಂದೆ ಮತ್ತು ಮಗನ ನಡುವಿನ ಆತ್ಮೀಯವಾದ ಸಂಬಂಧ ಅವರಿಬ್ಬರಂತೆ ನಿತ್ಯ ನಿರಂತರವಾದುದು.

ತಂದೆ ತನ್ನ ಮಗನನ್ನು ಪ್ರೀತಿಸುತ್ತಾನೆ. (ಯೋಹಾನ 3:35-36; 5:19-20 ULB)

ನಾನು ತಂದೆಯನ್ನು ಪ್ರೀತಿಸುತ್ತೇನೆ ಎಂಬುದು ಲೋಕಕ್ಕೆ ತಿಳಿದಿರಬೇಕೆಂದು ತಂದೆಯು ನನಗೆ ಕೊಟ್ಟ ಆಜ್ಞೆಯ ಮೇರೆಗೆಇದನ್ನ ಮಾಡುತ್ತೇನೆ. (ಯೋಹಾನ 14:31 ULB)
.., ತಂದೆ ಎಂತವನು ಎಂದು ಮಗನ ಹೊರತು ಯಾರಿಗೂ ತಿಳಿಯದು ಮಗನು ಎಂತವನು ಎಂದು ತಂದೆ ಹೊರತು ಇನ್ಯಾರೂ ತಿಳಿದವನಲ್ಲ . (ಲೂಕ 10:22 ULB)

"ತಂದೆ" ಮತ್ತು "ಮಗ" ಎಂಬ ಪದಗಳು ತಂದೆ ಮತ್ತು ಮಗನ ಬಗ್ಗೆ ಒಂದೇ ಅರ್ಥವನ್ನು ಕೊಡುವಂತಾದ್ದು ಹಾಗೆಯೇ ಇಬ್ಬರೂ ನಿತ್ಯ ನಿರಂತರ ದೇವರು.

"ತಂದೆಯೇ" ಕಾಲಬಂದಿದೆ, ನಿನ್ನ ಮಗನನ್ನು ಮಹಿಮೆ ಪಡಿಸು ಆಗ ಮಗನು ನಿನ್ನನ್ನು ಮಹಿಮೆಪಡಿಸುವನು....ಎಂದು ಯೇಸು ಹೇಳಿದನು. ನಿನ್ನನ್ನು ಭೂಲೋಕದಲ್ಲಿ ಮಹಿಮೆಪಡಿಸಿದೆನು.... ಈಗ ತಂದೆಯೇ ನೀನು ನಿನ್ನ ಬಳಿಯಲ್ಲಿ ನನ್ನನ್ನು ಮಹಿಮೆಪಡಿಸುವನು ಲೋಕ ಉಂಟಾಗುವುದಕ್ಕಿಂತ ಮೊದಲು ನಿನ್ನ ಬಳಿಯಲ್ಲಿ ನನಗಿದ್ದ ಮಹಿಮೆಯಿಂದಲೇ ನನ್ನನ್ನು ಮಹಿಮೆ ಪಡಿಸು ." (ಯೋಹಾನ 17:1-5 ULB)

ಈ ಅಂತ್ಯ ದಿನಗಳಲ್ಲಿ ತಂದೆಯಾದ ದೇವರು ನಮ್ಮ ಸಂಗಡ ಮಗನ ಮೂಲಕ ಮಾತನಾಡಿದ್ದಾನೆ ಈತನನ್ನು ಎಲ್ಲದಕ್ಕೂ ಬಾಧ್ಯಸ್ಥನನ್ನಾಗಿ ನೇಮಿಸಿದ್ದಾನೆ, ಈತನ ಮೂಲಕವೇ ಜಗತ್ತನ್ನು ಉಂಟುಮಾಡಿದನು. ಈತನು ದೇವರ ಪ್ರಭಾವದ ಪ್ರಕಾಶವುಆತನ ತತ್ವದ ಮೂರ್ತಿಯೂ ಆಗಿದ್ದಾನೆ . ತನ್ನ ಶಕ್ತಿಯ ವಾಕ್ಯದಿಂದ ಸಮಸ್ತಕ್ಕೆ ಆಧಾರವೂ ಆಗಿದ್ದಾನೆ. (ಇಬ್ರಿಯಾ 1:2-3 ULB)

ಯೇಸು ಫಿಲಿಪ್ಪನನ್ನು ಕುರಿತು, ಫಿಲಿಪ್ಪನೇ ನಾನು ಇಷ್ಟುದಿನ ನಿಮ್ಮ ಸಂಗಡ ಇದ್ದರೂ ನೀನು ಇನ್ನೂ ನನ್ನನ್ನು ಅರಿತುಕೊಳ್ಳಲಿಲ್ಲವೇ ? ನನ್ನನ್ನು ನೊಡಿದವನು ತಂದೆಯನ್ನು ನೋಡಿದ್ದಾನೆ . " ನಮಗೆ ತಂದೆಯನ್ನು ತೋರಿಸು ಎಂದು ಹೇಗೆ ಕೇಳುತ್ತೀರಿ? (ಯೋಹಾನ 14:9 ULB)

ಮಾನವ ಸಂಬಂಧಗಳು

** ಮಾನವ ತಂದೆಗಳು ಮತ್ತು ಮಕ್ಕಳು ಯಾರೂ ಪರಿಪೂರ್ಣರಲ್ಲ. ಆದರೆ ಸತ್ಯವೇದದಲ್ಲಿ ಈ ಪದಗಳನ್ನು ತಂದೆಮತ್ತು ಮಗ,ಎಂಬ ಪದಗಳನ್ನು ಬಳಸುತ್ತಾರೆ.ಯಾರು ಸಂಪೂರ್ಣರು**

ಪ್ರಸ್ತುತ ದಿನಗಳಲ್ಲಿ ತಂದೆ ಮತ್ತು ಮಗನ ನಡುವಿನ ಪ್ರೀತಿ ಮತ್ತು ಸಂಬಂಧಗಳಂತೆ ಸತ್ಯವೇದದ ಕಾಲದಲ್ಲಿ ಪ್ರೀತಿ ಅಷ್ಟೊಂದು ಸಂಪೂರ್ಣವಾಗಿರಲಿಲ್ಲ ಆದರೆ ತಂದೆ ದೇವರು ಮತ್ತು ಮಗನ ನಡುವಿನ ಸಂಬಂಧ ಉತ್ತಮವಾಗಿದೆ. ಇದರ ಅರ್ಥ ತಂದೆ ಮತ್ತು ಮಗನ ಪರಿಕಲ್ಪನೆಯನ್ನು ಭಾಷಾಂತರ ಮಾಡುವವರು ಬದಲಾಯಿಸುವುದಾಗಲೀ, ತಪ್ಪಿಸುವುದಾಗಲೀ ಮಾಡಬಾರದು. ಸತ್ಯವೇದದಲ್ಲಿ ಈ ಪದಗಳನ್ನು ದೇವರನ್ನು ಉದ್ದೇಶಿಸಿ ಹೇಳಲು ಬಳಸುತ್ತಾರೆ ಇಲ್ಲಿ ಉಲ್ಲೇಖವಿದೆ. ಪರಿಪೂರ್ಣನಾದ ತಂದೆ ಆತನ ಮಗನು ಹಾಗು ಲೌಕಿಕ ಜಗತ್ತಿನ ಪಾಪಿಗಳಾದ ತಂದೆ ಮತ್ತು ಮಗನ ಬಗ್ಗೆ. ನಿಮ್ಮ ಭಾಷೆಯಲ್ಲಿ ವ್ಯಾಪಕವಾಗಿ ಬಳಸುವ ಮಾನವ "ತಂದೆ" ಮತ್ತು "ಮಗ"ಎಂಬ ಸಹಜವಾದ ಪದಗಳನ್ನು ಉಲ್ಲೇಖಿಸುವುದರ ಮೂಲಕ ದೇವರನ್ನು "ತಂದೆ" ಮತ್ತು "ಮಗ" ಎಂಬ ಪದಗಳ ಮೂಲಕ ಸೂಚಿಸಿರಿ

ಈ ರೀತಿ ಬರೆಯುವುದರಿಂದ ತಂದೆ ದೇವರು ಮತ್ತು ದೇವರ ಮಗ ಇಬ್ಬರೂ ಒಂದೇ ಎಂದು ತಿಳಿಯುತ್ತದೆ (ಇಬ್ಬರೂ ಒಂದೇ ದೇವರು) ಮಾನವ ತಂದೆ ಮತ್ತು ಮಗನ ನಡುವೆ ಅನೇಕ ಹೋಲಿಕೆಗಳು, ಗುಣಗಳು ಒಂದೇ ಆಗಿರುವಂತೆ ದೇವರು ಮತ್ತು ಆತನ ಮಗ ಒಂದೇ ಆಗಿರುತ್ತಾರೆ/

ಭಾಷಾಂತರ ಕೌಶಲ್ಯಗಳು

  1. ನಿಮ್ಮ ಭಾಷೆಯ " ತಂದೆ " ಮತ್ತು " ಮಗ " ಎಂಬ ಪದಗಳಿಗೆ ಎಷ್ಟು ಸಾಧ್ಯವೋ ಅಷ್ಟು ಅರ್ಥಕೊಡುವ ಪದಗಳನ್ನು ಬಳಸಬಹುದು. ದೈವಿಕವಾದ " ತಂದೆ " ಮತ್ತು " ಮಗ " ಪದಗಳಿಗೆ ಯಾವ ಉತ್ತಮ ಪದವನ್ನು ಬಳಸಬಹುದು ಎಂದು ನಿರ್ಧರಿಸಬೇಕು.
  2. ನಿಮ್ಮ ಭಾಷೆಯಲ್ಲಿ “ಮಗ” ಎಂಬ ಪದಕ್ಕೆ ಸಮಾನವಾದ ಬೇರೆ, ಮೊದಲ ಮಗ ಅಥವಾ ಏಕೈಕ ಪುತ್ರ ಎಂಬ ಎಂಬ ಅರ್ಥಕೊಡುವ ಪದವನ್ನು ಬಳಸಿರಿ.
  3. ನಿಮ್ಮ ಭಾಷೆಯಲ್ಲಿ ತಂದೆ ಎಂಬ ಪದಕ್ಕೆ ಸಮಾನ ಅರ್ಥ ಕೊಡುವ ಪದಗಳಿದ್ದರೆ, ಸಮೀಪವಾದ ಅರ್ಥಕೊಡುವ ಪದವಿದ್ದರೆ ಅಂದರೆ ಜನ್ಮ ನೀಡಿದ ತಂದೆ, ಕೆಲವೊಮ್ಮೆ ದತ್ತು ಪಡೆದ ತಂದೆ ಪದಗಳಿಗೆ ಸಮಾನ ಅರ್ಥಕೊಡುವ ಪದವಿದ್ದರೆ ಅದನ್ನು ಬಳಸಿರಿ

(ಭಾಷಾಂತರದ ಪದಗಳು ಇದರಲ್ಲಿ ತಂದೆಯಾದ ದೇವರು ಮತ್ತು* ಮಗನಾದ ದೇವರು* ಪುಟಗಳನ್ನು ನೋಡಿ “ತಂದೆ” ಮತ್ತು “ಮಗನು” ಎಂಬ ಪದಗಳನ್ನು ಭಾಷಾಂತರ ಮಾಡಲು.)