kn_ta/translate/guidelines-sonofgod/01.md

6.9 KiB
Raw Permalink Blame History

ದೇವರು ಒಬ್ಬನೆ, ಆತನು ತ್ರೈಯಕತ್ವದಲ್ಲಿ ಅಂದರೆ ತಂದೆ, ಮಗ ಮತ್ತು ಪವಿತ್ರಾತ್ಮನ ಹಾಗೆ ಇದ್ದಾನೆ.

ಸತ್ಯವೇದ ನಮಗೆ ದೇವರು ಒಬ್ಬನೇ ಎಂದು ಬೋಧಿಸುತ್ತದೆ.

ಹಳೆ ಒಡಂಬಡಿಕೆಯಲ್ಲಿ :

ಯೆಹೋವನ, ಹೊರತು ಬೇರೆ ದೇವರಿಲ್ಲ ! ಆತನೇ ದೇವರು. (I ಅರಸು 8:60 ULB)

ಹೊಸ ಒಡಂಬಡಿಕೆಯಲ್ಲಿ :

ಯೇಸು ಹೇಳಿದ್ದು------ ಒಬ್ಬನೇ ಸತ್ಯದೇವವಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನು ತಿಳಿಯುವುದೇ ನಿತ್ಯ ಜೀವವು. (ಯೋಹಾನ 17:3 ULB)

ಇದರೊಂದಿಗೆ ಇಲ್ಲಿ ಕೊಟ್ಟಿರುವ ವಾಕ್ಯಭಾಗಗಳನ್ನು ಓದಿ ನೋಡಿ. ಧರ್ಮೋಪದೇಶಕಾಂಡ 4:35 ಎಫೇಸ 4:5-6, 1 ತಿಮೋಥಿ 2:5, ಯಾಕೋಬ2:19)

ಹಳೆ ಒಡಂಬಡಿಕೆಯಲ್ಲಿ ಮೂವರು ದೇವರ ಮನುಷ್ಯರನ್ನು ಪ್ರಕಟಿಸುತ್ತದೆ.

ದೇವರುಆಕಾಶವನ್ನೂ ಭೂಮಿಯನ್ನೂ ಉಂಟುಮಾಡಿದನು -->ದೇವರ ಆತ್ಮವು ಜಲಸಮೂಹಗಳ ಮೇಲೆ ಚಲಿಸುತ್ತಿತ್ತು. " ಆಮೇಲೆ ದೇವರು ನಮ್ಮ ಸ್ವರೂಪದಲ್ಲಿ ನಮ್ಮ ಹೋಲಿಕೆಗೆ ಸರಿಯಾಗಿ ಮನುಷ್ಯರನ್ನು ಉಂಟು ಮಾಡೋಣ." (ಆದಿಕಾಂಡ 1:26 ULB)

ಈ ಅಂತ್ಯ ದಿನಗಳಲ್ಲಿ ದೇವರು ತನ್ನ ಮಗನ..ಮುಖಾಂತರ ಮಾತನಾಡಿದ್ದಾನೆ ಮತ್ತು ಆತನ ಮೂಲಕವೇ ಜಗತ್ತನ್ನು ಉಂಟುಮಾಡಿದನು. ಆತನ ಮಗನು.. ದೇವರ ಪ್ರಭಾವದ ಪ್ರಕಾಶವೂ, ಆತನ ತತ್ವದ ಮೂರ್ತಿಯೂ ತನ್ನ ಶಕ್ತಿಯ ವಾಕ್ಯದಿಂದ ಆಧಾರವಾಗಿದ್ದಾನೆ ಎಂದು ತನ್ನ ಮಗನ..ಬಗ್ಗೆ ಹೇಳುತ್ತಾನೆ. " ಕರ್ತನೇ ಆದಿಯಲ್ಲಿ ನೀನು ಭೂಮಿಗೆ ಆಸ್ತಿವಾರಹಾಕಿದೆ ಗಗನ ಮಂಡಲವು ನಿನ್ನ ಕೈಕೆಲಸವಾಗಿದೆ " (ಇಬ್ರಿಯ1:2-3, ಮತ್ತು 8-10 ULB Psalm 102:25 ವಾಕ್ಯಗಳನ್ನು ತಿಳಿಸುತ್ತದೆ)

ಹೊಸ ಒಡಂಬಡಿಕೆಯಲ್ಲಿ ಯೂ ಸಹ ದೇವರು ತ್ರೈಯತ್ವದಲ್ಲಿ ಮೂರು ವ್ಯಕ್ತಿಗಳಲ್ಲಿ ಇರುವಂತೆ ಹೇಳುವುದನ್ನು ಎಲ್ಲಾ ಚರ್ಚ್/ಸಭೆಯಲ್ಲಿ ದೃಢಪಡಿಸಿ ಹೇಳುತ್ತಾರೆ.

ತಂದೆ, ಮಗ ಮತ್ತು ಪವಿತ್ರಾತ್ಮ

ನೀನು ಹೊರಟುಹೋಗಿ ಎಲ್ಲಾ ದೇಶದ ಜನರನ್ನು ಶಿಷ್ಯರನ್ನಾಗಿ ಮಾಡಿರಿ ಅವರಿಗೆ ತಂದೆಯ, ಮಗನ, ಮತ್ತು ಪವಿತ್ರಾತ್ಮನ ." ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿ " (ಮತ್ತಾಯ 28:19 ULB)

ಆತನು ತನ್ನ ಮಗನನ್ನು ,ಸ್ತ್ರೀಯಲ್ಲಿ ಹುಟ್ಟಿದವನಾಗಿರಲು ಕಳುಹಿಸಿಕೊಟ್ಟನು..... ದೇವರು ಅಪ್ಪಾ ತಂದೆಯೇ ಎಂದು ಕೂಗುವ ತನ್ನ ಮಗನ ಆತ್ಮವನ್ನು ನಮ್ಮ ಹೃದಯಗಳಲ್ಲಿ, ಕಳುಹಿಸಿಕೊಟ್ಟನು, "ಅಬ್ಬಾ, ತಂದೆಯೇ." (ಗಲಾತ್ಯ 4:4-6 ULB)

ಈ ಕೆಳಗೆಕೊಟ್ಟಿರುವ ವಾಕ್ಯಭಾಗಗಳನ್ನು ಓದಿನೋಡಿ. ಯೋಹಾನ 14:16-17, 1 ಪೇತ್ರ 1:2

ನಮಗಾದರೋ ಒಬ್ಬನೇ ದೇವರಿದ್ದಾನೆ ಎಂಬುದು ಸತ್ಯವೇದ ತಿಳಿಸಿದೆ.

ನಮಗಾದರೋ ಒಬ್ಬನೇ ದೇವರಿದ್ದಾನೆ ಆತನು ತಂದೆಯೆಂಬಾತನೇ.. (1 ಕೊರಿಂಥ 8:6 ULB) ಆತನು ಸಮಸ್ತಕ್ಕೂ ಕಾರಣನು.

ತೋಮನು ಆತನಿಗೆ ನನ್ನ ಸ್ವಾಮಿ ನನ್ನ ದೇವರು ! ಎಂದು ಹೇಳಿದನು ." ಯೇಸುಅವನಿಗೆ, ನೀನು ನನ್ನನ್ನು ನೋಡಿದ್ದರಿಂದ ನಂಬಿದ್ದೀ. "ನೋಡದೆ ನಂಬಿದವರು ಧನ್ಯರು ಎಂದು ಹೇಳಿದನು." (ಯೋಹಾನ 20:28-29 ULB)
ಆಗ ಪೇತ್ರನು ಅನನೀಯಾ, ಸೈತಾನನು ನಿನ್ನ ಹೃದಯದಲ್ಲಿ ತುಂಬಿಕೊಂಡಿ -ದ್ದೇನು ? ನೀನು ಏಕೆ ಆ ಹೊಲದ ಕ್ರಯದಲ್ಲಿ ಕೆಲವನ್ನು ಬಚ್ಚಿಟ್ಟುಕೊಂಡು ಪವಿತ್ರಾತ್ಮನನ್ನು ವಂಚಿಸಬೇಕೆಂದಿದ್ದೀ ? ನೀನು ಸುಳ್ಳು ಹೇಳಿದ್ದು ಮನುಷ್ಯರಿಗಲ್ಲ ದೇವರಿಗೆ .ಸುಳ್ಳಾಡಿದ್ದಿ " (ಆ.ಕೃ 5:3-4 ULB)

ಪ್ರತಿಯೊಬ್ಬ ವ್ಯಕ್ತಿಯೂ ಇತರ ಇಬ್ಬರು ವ್ಯಕ್ತಿಗಳಿಗಿಂತ ಭಿನ್ನವಾಗಿರುತ್ತಾನೆ. ಎಲ್ಲಾ ಮೂರು ವ್ಯಕ್ತಿಗಳು ಒಂದೇ ಸಮಯದಲ್ಲಿ ಪ್ರತ್ಯೇಕವಾಗಿ ಕಾಣಿಸಿಕೊಳ್ಳಬಹುದು. ಈ ಕೆಳಗಿನ ವಾಕ್ಯಗಳಲ್ಲಿ ದೇವರು ತನ್ನ ಮಗನಿಗೆ ದೀಕ್ಷಾಸ್ನಾನ ಆಗುವಾಗ ದೇವರ ಆತ್ಮವು ಕೆಳಗಿಳಿದು ಬಂದಿತು ಮತ್ತು ತಂದೆ ದೇವರು ಆಕಾಶದಿಂದ ಮಾತನಾಡಿದನು

ಯೇಸು ದೀಕ್ಷಾಸ್ನಾನ ಮಾಡಿಸಿಕೊಂಡ ಕೂಡಲೇ ಯೇಸುನೀರಿನಿಂದ ಮೇಲೆ ಬಂದನು. ದೇವರ ಆತ್ಮ ತನ್ನ ಮೇಲೆ ಪಾರಿವಾಳದ ಹಾಗೆ ಇಳಿದು ಬರುವುದನ್ನು ಕಂಡನು, ಆಗ, "ಈತನು ಪ್ರಿಯನಾಗಿರುವ ನನ್ನ ಮಗನು, " ಈತನನ್ನು ನಾನು ಮೆಚ್ಚಿದ್ದೇನೆ ಎಂದು ಆಕಾಶವಾಣಿ ಯಾಯಿತು .." [ತಂದೆಯ]. (ಮತ್ತಾಯ 3:16-17 ULB)