kn_ta/translate/grammar-connect-logic-result/01.md

14 KiB

ತಾರ್ಕಿಕ ಸಂಬಂಧಗಳು

ಕೆಲವು ಸಂಯೋಜಕಾವ್ಯಯ ಪದಗಳು ಎರಡು ನುಡಿಗಟ್ಟುಗಳ, ಉಪವಾಕ್ಯಗಳ, ವಾಕ್ಯಗಳ ಅಥವಾ ಪಠ್ಯದ ಭಾಗಗಳ ನಡುವೆ ತಾರ್ಕಿಕ ಸಂಬಂಧವನ್ನು ಏರ್ಪಡಿಸುತ್ತವೆ.

ಕಾರಣ–ಮತ್ತು-ಪರಿಣಾಮ ಸಂಬಂಧಾರ್ಥಕಗಳು

ವಿವರಣೆ

ಕಾರಣ ಮತ್ತು ಪರಿಣಾಮದ ಸಂಬಂಧಾರ್ಥಕವು ಒಂದು ತಾರ್ಕಿಕ ಸಂಬಂಧವಾಗಿದೆ, ಇದರಲ್ಲಿ ಒಂದು ಸಂಗತಿಯು ಕಾರಣ ಆಗಿದೆ ಅಥವಾ ಇನ್ನೊಂದು ಸಂಗತಿಗೆ ಹೇತುವಾಗಿದೆ. ಎರಡನೆಯ ಸಂಗತಿಯು, ಮೊದಲನೆಯ ಸಂಗತಿಯ ಪರಿಣಾಮ ಆಗಿದೆ.

ಕಾರಣವೇನಂದರೆ ಇದು ಭಾಷಾಂತರದ ಸಮಸ್ಯೆಯಾಗಿದೆ

ಕಾರಣ ಮತ್ತು ಪರಿಣಾಮದ ಸಂಬಂಧಾರ್ಥಕವು ಮುಂದೆ ನೋಡುವಂಥದ್ದಾಗಿದೆ - "ನಾನು ಅದು (ಎಕ್ಸ್) ಆಗಬೇಕೆಂದು ಬಯಸಿದ್ದರಿಂದ ನಾನು ಇದನ್ನು (ವೈ) ಮಾಡಿದ್ದೇನೆ." ಆದರೆ ಸಾಧಾರಣವಾಗಿ ಅದು ಹಿಂದೆ ನೋಡುವದಂಥದ್ದಾಗಿದೆ- "ಅದು (ಎಕ್ಸ್) ನಡೆದಿದೆ, ಮತ್ತು ನಾನು ಇದನ್ನು (ವೈ) ಮಾಡಿದ್ದೇನೆ." ಅದಲ್ಲದೆ, ಪರಿಣಾಮಕ್ಕಿಂತ ಮೊದಲು ಅಥವಾ ನಂತರ ಕಾರಣವನ್ನು ಹೇಳುವ ಸಾಧ್ಯತೆಯಿದೆ. ಅನೇಕ ಭಾಷೆಗಳು ಕಾರಣಕ್ಕಾಗಿ ಮತ್ತು ಪರಿಣಾಮಕ್ಕಾಗಿ ಕ್ರಮವನ್ನು ಉಪಯೋಗಿಸಲು ಬಯಸುತ್ತವೆ, ಮತ್ತು ಅವುಗಳನ್ನು ತದ್ವಿರುದ್ಧ ಕ್ರಮದಲ್ಲಿದ್ದರೆ ಅದು ಓದುಗರಿಗೆ ಗೊಂದಲವನ್ನುಂಟು ಮಾಡುತ್ತದೆ. ಇಂಗ್ಲಿಷ್‌ ಭಾಷೆಯಲ್ಲಿ ಕಾರಣ-ಮತ್ತು-ಪರಿಣಾಮದ ಸಂಬಂಧಾರ್ಥಕವನ್ನು ಸೂಚಿಸಲು “ಏಕೆಂದರೆ,” “ಅದರಿಂದಾಗಿ,” “ಆದ್ದರಿಂದ,” ಮತ್ತು “ಆದಕಾರಣ” ಎಂಬ ಪದಗಳು ಸಾಮಾನ್ಯವಾಗಿ ಬಳಸುತ್ತಾರೆ. ಈ ಕೆಲವು ಪದಗಳನ್ನು ಗುರಿಯ ಸಂಬಂಧಾರ್ಥಕವನ್ನು ಸೂಚಿಸಲು ಸಹ ಬಳಸುತ್ತಾರೆ, ಆದ್ದರಿಂದ ಅನುವಾದಕರು ಗುರಿಯ ಸಂಬಂಧಾರ್ಥಕದ ಮತ್ತು ಕಾರಣ-ಮತ್ತು-ಪರಿಣಾಮದ ಸಂಬಂಧಾರ್ಥಕದ ನಡುವಿನ ವ್ಯತ್ಯಾಸದ ಬಗ್ಗೆ ಅರಿವುಳ್ಳರಾಗಿರಬೇಕು. ಅನುವಾದಕರು ಎರಡು ಸಂಗತಿಗಳು ಹೇಗೆ ಸಂಪರ್ಕ ಹೊಂದಿವೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮತ್ತು ಅವುಗಳನ್ನು ತಮ್ಮ ಭಾಷೆಯಲ್ಲಿ ಸ್ಪಷ್ಟವಾಗಿ ಸಂವಹನ ಮಾಡುವುದು ಅವಶ್ಯಕವಾಗಿದೆ.

ಕಾರಣ ಮತ್ತು ಪರಿಣಾಮಗಳನ್ನು ಬೇರೆ ಬೇರೆ ವಚನಗಳಲ್ಲಿ ಹೇಳಿದ್ದರೆ, ಅವುಗಳನ್ನು ಬೇರೆ ಕ್ರಮದಲ್ಲಿ ಜೋಡಿಸುವ ಸಾಧ್ಯತೆಯಿದೆ. ನೀವು ವಚನಗಳ ಕ್ರಮವನ್ನು ಬದಲಾಯಿಸಿದರೆ, ಪುನಃಸ್ಸಂಯೋಜಿಸಿದ ವಚನಗಳ ಗುಚ್ಛದ ಆರಂಭದಲ್ಲಿ ಕೆಳಗಿನಂತೆ ವಚನಗಳ ಸಂಖ್ಯೆಗಳನ್ನು ಒಟ್ಟಿಗೆ ಹಾಕಿರಿ: 1-2. ಇದನ್ನು ವಚನದ ಸೇತುವೆ ಎಂದು ಕರೆಯಲಾಗುತ್ತದೆ.

ಒಬಿಎಸ್ ಮತ್ತು ಸತ್ಯವೇದದಲ್ಲಿನ ಉದಾಹರಣೆಗಳು

ಯೆಹೂದ್ಯರು ಆಶ್ಚರ್ಯಚಕಿತರಾದರು, ಏಕೆಂದರೆ ಸೌಲನು ವಿಶ್ವಾಸಿಗಳನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದನು, ಮತ್ತು ಈಗ ಅವನೇ ಯೇಸುವನ್ನು ನಂಬಿದ್ದಾನೆ! (ಕಥೆ 46 ಚೌಕ್ಕಟ್ಟು 6 ಒಬಿಎಸ್)

** ಕಾರಣವು** ಸೌಲನಲ್ಲಿ ಆಗಿರುವ ಬದಲಾವಣೆಯಾಗಿದೆ - ಅವನು ಯೇಸುವನ್ನು ನಂಬಿದ ಜನರನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದನು, ಮತ್ತು ಈಗ ಅವನೇ ಯೇಸುವನ್ನು ನಂಬಿದ್ದಾನೆ. ಪರಿಣಾಮ ಏನೆಂದರೆ ಯೆಹೂದ್ಯರು ಆಶ್ಚರ್ಯಚಕಿತರಾದರು. “ಏಕೆಂದರೆ” ಎಂಬುದು ಎರಡು ವಿಚಾರಗಳಿಗೆ ಸಂಪರ್ಕವನ್ನು ಕಲ್ಪಿಸುತ್ತದೆ ಮತ್ತು ಕಾರಣವು ಅದನ್ನು ಹಿಂಬಾಲಿಸುತ್ತದೆ ಎಂದು ಇದು ಸೂಚಿಸುತ್ತದೆ.

ಇಗೋ, ಸಮುದ್ರದಲ್ಲಿ ದೊಡ್ಡ ಬಿರುಗಾಳಿಯು ಎದ್ದಿತ್ತು ಅದರಿಂದಾಗಿ ದೋಣಿಯು ಅಲೆಗಳಿಂದ ಮುಚ್ಚಿಹೋಯಿತು. (ಮತ್ತಾಯ 8:24 ULT)

ದೊಡ್ಡ ಬಿರುಗಾಳಿಯು ಕಾರಣ ವಾಗಿದೆ, ಮತ್ತು ಪರಿಣಾಮ ಏನೆಂದರೆ ದೋಣಿಯು ಅಲೆಗಳಿಂದ ಮಚ್ಚಿಹೋಯಿತ್ತು. ಎರಡು ಸಂಗತಿಗಳನ್ನು "ಅದರಿಂದಾಗಿ" ಎಂಬ ಪದದಿಂದ ಸಂಪರ್ಕವನ್ನು ಕಲ್ಪಿಸುತ್ತದೆ. “ಅದರಿಂದಾಗಿ” ಎಂಬ ಪದವು ಸಾಮಾನ್ಯವಾಗಿ ಗುರಿಯ ಸಂಬಂಧಾರ್ಥಕವನ್ನು ಸೂಚಿಸುತ್ತದೆ ಎಂಬುದನ್ನು ಗಮನಿಸಿರಿ, ಆದರೆ ಇಲ್ಲಿ ಸಂಬಂಧಾರ್ಥಕವು ಕಾರಣ-ಮತ್ತು-ಪರಿಣಾಮಕ್ಕೆ ಸಂಬಂಧಪಟ್ಟಿದೆ. ಏಕೆಂದರೆ ಸಮುದ್ರವು ಯೋಚಿಸುವುದಕ್ಕೆ ಆಗುವುದಿಲ್ಲ ಆದ್ದರಿಂದ ಅದಕ್ಕೆ ಗುರಿಯಿಲ್ಲ.

ದೇವರು ತನ್ನ ಸೃಷ್ಟಿ ಕಾರ್ಯವನ್ನು ಮುಗಿಸಿದ ನಂತರ ಏಳನೆಯ ದಿನದಲ್ಲಿ ವಿಶ್ರಮಿಸಿಕೊಂಡನು ಆದ್ದರಿಂದ ಆ ದಿನವನ್ನು ಆಶೀರ್ವದಿಸಿದನು ಮತ್ತು ಪರಿಶುದ್ಧಗೊಳಿಸಿದನು. (ಆದಿಕಾಂಡ 2:3 ULT)

** ಪರಿಣಾಮ** ದೇವರು ಏಳನೇ ದಿನವನ್ನು ಆಶೀರ್ವದಿಸಿದನು ಮತ್ತು ಪರಿಶುದ್ಧಗೊಳಿಸಿದನು. ಕಾರಣವು ಏಕೆಂದರೆ ಆತನು ತನ್ನ ಕೆಲಸದಿಂದ ಏಳನೇ ದಿನದಲ್ಲಿ ವಿಶ್ರಮಿಸಿಕೊಂಡನು.

“ಬಡವರಾದ ನೀವು ಧನ್ಯರು, ಏಕೆಂದರೆ ದೇವರ ರಾಜ್ಯವು ನಿಮ್ಮದು. (ಲೂಕ 6:20 ULT)

** ಪರಿಣಾಮ** ಏನೆಂದರೆ ಬಡವರು ಧನ್ಯರಾಗಿದ್ದಾರೆ. ಕಾರಣ ಏನೆಂದರೆ ದೇವರ ರಾಜ್ಯವು ಅವರದಾಗಿದೆ.

ಅವರಿಗೆ ಪ್ರತಿಯಾಗಿ ಯೆಹೋವನು ಬೆಳೆಯಿಸಿದ ಅವರ ಮಕ್ಕಳಿಗೆ ಯೆಹೋಶುವನು ಸುನ್ನತಿ ಮಾಡಿದನು, ಏಕೆಂದರೆ ದಾರಿಯಲ್ಲಿ ಅವರಿಗೆ ಸುನ್ನತಿಮಾಡಿರಲಿಲ್ಲ. (ಯೆಹೋಶುವ 5:7 ULT)

** ಪರಿಣಾಮ** ಏನೆಂದರೆ, ಯೆಹೋಶುವನು ಅರಣ್ಯದಲ್ಲಿ ಹುಟ್ಟಿದ ಹುಡುಗರಿಗೆ ಮತ್ತು ಪುರುಷರಿಗೆ ಸುನ್ನತಿ ಮಾಡಿದನು. ಕಾರಣ ಏನೆಂದರೆ ಅವರು ಪ್ರಯಾಣ ಮಾಡುವಾಗ ಅವರಿಗೆ ಸುನ್ನತಿ ಮಾಡಿರಲಿಲ್ಲ.

ಭಾಷಾಂತರದ ಕಾರ್ಯತಂತ್ರಗಳು

ನಿಮ್ಮ ಭಾಷೆಯಲ್ಲಿ ಕಾರಣ ಮತ್ತು ಪರಿಣಾಮದ ಸಂಬಂಧಾರ್ಥಕಗಳನ್ನು ಮೇಲಿನ ಪಠ್ಯದಲ್ಲಿ ಬಳಸಿರುವಂತೆಯೇ ಬಳಸುವುದಾದರೆ, ಅವುಗಳನ್ನು ಹಾಗೆಯೇ ಬಳಸಿರಿ.

  1. ಉಪವಾಕ್ಯಗಳ ಕ್ರಮವು ಓದುಗರಿಗೆ ಗೊಂದಲವನ್ನುಂಟುಮಾಡುತ್ತಿದ್ದರೆ, ಅದರ ಕ್ರಮವನ್ನು ಬದಲಾಯಿಸಿರಿ.
  2. ಉಪವಾಕ್ಯಗಳ ನಡುವಿನ ಸಂಬಂಧಾರ್ಥಕವು ಅಷ್ಟು ಸ್ಪಷ್ಟವಾಗಿಲ್ಲದಿದ್ದರೆ, ಹೆಚ್ಚು ಸ್ಪಷ್ಟವಾಗಿ ಸಂಪರ್ಕವನ್ನು ಕಲ್ಪಿಸುವ ಪದವನ್ನು ಬಳಸಿರಿ.
  3. ಉಪವಾಕ್ಯಗಳಲ್ಲಿ ಸಂಪರ್ಕವನ್ನು ಕಲ್ಪಿಸುವ ಪದವು ಇಲ್ಲದಿದ್ದರೆ ಮತ್ತು ಸಂಪರ್ಕವನ್ನು ಕಲ್ಪಿಸುವ ಪದವನ್ನು ಸೇರಿಸುವುದು ಹೆಚ್ಚು ಸ್ಪಷ್ಟವಾಗಿದ್ದರೆ, ಹಾಗೆ ಮಾಡಿರಿ.

ಭಾಷಾಂತರದ ಕಾರ್ಯತಂತ್ರಗಳನ್ನು ಅನ್ವಯಿಸಲಾಗಿರುವ ಉದಾಹರಣೆಗಳು

ದೇವರು ತನ್ನ ಸೃಷ್ಟಿ ಕಾರ್ಯವನ್ನು ಮುಗಿಸಿದ ನಂತರ ಏಳನೆಯ ದಿನದಲ್ಲಿ ವಿಶ್ರಮಿಸಿಕೊಂಡನು ಆದ್ದರಿಂದ ಆ ದಿನವನ್ನು ಆಶೀರ್ವದಿಸಿದನು ಮತ್ತು ಪರಿಶುದ್ಧಗೊಳಿಸಿದನು. (ಆದಿಕಾಂಡ 2:3 ULT)

(1) ದೇವರು ತನ್ನ ಸೃಷ್ಟಿಕಾರ್ಯದಲ್ಲಿ ಮಾಡಿದ ಎಲ್ಲಾ ಕೆಲಸಗಳಿಂದ ಏಳನೆಯ ದಿನದಲ್ಲಿ ವಿಶ್ರಮಿಸಿಕೊಂಡನು. ಅದಕ್ಕಾಗಿಯೇ ಆತನು ಏಳನೆಯ ದಿನವನ್ನು ಆಶೀರ್ವದಿಸಿದನು ಮತ್ತು ಅದನ್ನು ಪರಿಶುದ್ಧಗೊಳಿಸಿದನು.

“ಬಡವರಾದ ನೀವು ಧನ್ಯರು, ಏಕೆಂದರೆ ದೇವರ ರಾಜ್ಯವು ನಿಮ್ಮದು. (ಲೂಕ 6:20 ULT)

(1) ದೇವರ ರಾಜ್ಯವು ಬಡವರಾದ ನಿಮಗೆ ಸೇರಿದ್ದಾಗಿದೆ. ಆದ್ದರಿಂದ, ಬಡವರು ಧನ್ಯರು.

(2) ಬಡವರು ಧನ್ಯರು, ಏಕೆಂದರೆ ದೇವರ ರಾಜ್ಯ ನಿಮ್ಮದ್ದಾಗಿದೆ.

(3) ಈ ಕಾರಣದಿಂದ ಬಡವರು ಧನ್ಯರಾಗಿದ್ದಾರೆ ಏಕೆಂದರೆ ದೇವರ ರಾಜ್ಯ ನಿಮ್ಮದು.

ಇಗೋ, ಸಮುದ್ರದಲ್ಲಿ ದೊಡ್ಡ ಬಿರುಗಾಳಿಯು ಎದ್ದಿತ್ತು ಅದರಿಂದಾಗಿ ದೋಣಿಯು ಅಲೆಗಳಿಂದ ಮುಚ್ಚಿಹೋಯಿತು. (ಮತ್ತಾಯ 8:24 ULT)

(1) ಇಗೋ, ದೋಣಿಯು ಅಲೆಗಳಿಂದ ಮುಚ್ಚಿಹೋಯಿತು ಏಕೆಂದರೆ ಸಮುದ್ರದ ಮೇಲೆ ದೊಡ್ಡ ಬಿರುಗಾಳಿ ಎದ್ದಿತ್ತು.

(2) ಇಗೋ, ಸಮುದ್ರದ ಮೇಲೆ ದೊಡ್ಡ ಬಿರುಗಾಳಿ ಎದ್ದಿತ್ತು, ಇದರ ಪರಿಣಾಮವಾಗಿ ದೋಣಿಯು ಅಲೆಗಳಿಂದ ಮುಚ್ಚಿಹೋಯಿತು.

(3) ಇಗೋ, ಸಮುದ್ರದ ಮೇಲೆ ದೊಡ್ಡ ಬಿರುಗಾಳಿ ಎದ್ದಿತ್ತು, ಆದ್ದರಿಂದ ದೋಣಿಯು ಅಲೆಗಳಿಂದ ಮುಚ್ಚಿಹೋಯಿತು.

ಎಲ್ಲ ಗದ್ದಲದ ನಿಮಿತ್ತವಾಗಿ ಸಹಸ್ರಾಧಿಪತಿಗೆ ಏನನ್ನೂ ಹೇಳಲಾಗದ ಕಾರಣ, ಪೌಲನನ್ನು ಕೋಟೆಯೊಳಗೆ ತೆಗೆದುಕೊಂಡು ಹೋಗಿರೆಂದು ಅಪ್ಪಣೆಕೊಟ್ಟನು. (ಕಾಯಿದೆಗಳು 21:34 ULT)

(1) ಪೌಲನನ್ನು ಕೋಟೆಯೊಳಗೆ ತೆಗೆದುಕೊಂಡು ಹೋಗಿರೆಂದು ಸಹಸ್ರಾಧಿಪತಿಯು ಅಪ್ಪಣೆಕೊಟ್ಟನು, ಏಕೆಂದರೆ ಎಲ್ಲ ಗದ್ದಲದ ನಿಮಿತ್ತವಾಗಿ ಅವನಿಗೆ ಏನನ್ನೂ ಹೇಳಲಾಗಲಿಲ್ಲ.

(2) ಸಹಸ್ರಾಧಿಪತಿಗೆ ಎಲ್ಲ ಗದ್ದಲದ ನಿಮಿತ್ತವಾಗಿ ಏನನ್ನೂ ಹೇಳಲಾಗದ ಕಾರಣ, ಪೌಲನನ್ನು ಕೋಟೆಯೊಳಗೆ ತೆಗೆದುಕೊಂಡು ಹೋಗಿರೆಂದು ಅಪ್ಪಣೆಕೊಟ್ಟನು.

(3) ಸಹಸ್ರಾಧಿಪತಿಗೆ ಎಲ್ಲ ಗದ್ದಲದ ನಿಮಿತ್ತವಾಗಿ ಏನನ್ನೂ ಹೇಳಲಾಗಲಿಲ್ಲ, ಆದ್ದರಿಂದ ಪೌಲನನ್ನು ಕೋಟೆಯೊಳಗೆ ತೆಗೆದುಕೊಂಡು ಹೋಗಿರೆಂದು ಅಪ್ಪಣೆಕೊಟ್ಟನು.