kn_ta/translate/grammar-connect-logic-goal/01.md

16 KiB
Raw Permalink Blame History

ತಾರ್ಕಿಕ ಸಂಬಂಧಗಳು

ಕೆಲವು ಸಂಯೋಜಕಾವ್ಯಯ ಪದಗಳು ಎರಡು ನುಡಿಗಟ್ಟುಗಳ, ಉಪವಾಕ್ಯಗಳ, ವಾಕ್ಯಗಳ ಅಥವಾ ಪಠ್ಯದ ಭಾಗಗಳ ನಡುವೆ ತಾರ್ಕಿಕ ಸಂಬಂಧವನ್ನು ಏರ್ಪಡಿಸುತ್ತವೆ.

ಗುರಿ (ಅಥವಾ ಉದ್ದೇಶ) ಸಂಬಂಧಾರ್ಥಕ

ವಿವರಣೆ

ಗುರಿಯ ಸಂಬಂಧಾರ್ಥಕವು ತಾರ್ಕಿಕವಾದ ಸಂಬಂಧವಾಗಿದ್ದು, ಇದರಲ್ಲಿ ಎರಡನೇ ಸಂಗತಿಯು ಮೊದಲ ಸಂಗತಿಯ ಉದ್ದೇಶವು ಅಥವಾ ಗುರಿಯು ಆಗಿರುತ್ತದೆ. ಯಾವುದೇ ಒಂದು ಕಾರ್ಯವು ಗುರಿಯ ಸಂಬಂಧಾರ್ಥಕವಾಗಬೇಕಾದರೆ, ಯಾರಾದರೊಬ್ಬರು ಎರಡನೇ ಸಂಗತಿಯು ನಡೆಯಬೇಕೆಂಬ ಉದ್ದೇಶದಿಂದ ಮೊದಲ ಸಂಗತಿಯನ್ನು ಮಾಡಬೇಕು.

ಕಾರಣವೇನಂದರೆ ಇದು ಭಾಷಾಂತರದ ಸಮಸ್ಯೆಯಾಗಿದೆ

ಸತ್ಯವೇದದ ವಚನದಲ್ಲಿ, ಗುರಿಯನ್ನು ಅಥವಾ ಉದ್ದೇಶವನ್ನು ಮೊದಲನೆಯದಾಗಿ ಅಥವಾ ಎರಡನೆಯದಾಗಿಯೂ ಸಹ ಹೇಳಬಹುದು. ಆದರೆ ಕೆಲವು ಭಾಷೆಗಳಲ್ಲಿ, ಆ ತಾರ್ಕಿಕ ಸಂಬಂಧವನ್ನು ಅರ್ಥಮಾಡಿಕೊಳ್ಳಲು ಗುರಿಯು ಅಥವಾ ಉದ್ದೇಶವು ಯಾವಾಗಲೂ ಒಂದೇ ಸ್ಥಾನದಲ್ಲಿರಬೇಕು (ಮೊದಲನೆಯ ಅಥವಾ ಎರಡನೆಯ). ನೀವು (ಅನುವಾದಕ) ಎರಡು ಭಾಗಗಳ ನಡುವಿನ ಸಂಬಂಧವನ್ನು ಅರ್ಥಮಾಡಿಕೊಳ್ಳಬೇಕು ಮತ್ತು ನಿಮ್ಮ ಭಾಷೆಯಲ್ಲಿ ನಿಖರವಾಗಿ ಸಂವಹನ ಮಾಡಬೇಕು. ಹಾಗೆ ಮಾಡುವುದಕ್ಕೆ ಎರಡು ಸಂಗತಿಗಳ ಕ್ರಮವನ್ನು ಬದಲಾಯಿಸಬೇಕಾಗಬಹುದು. ಒಂದು ಇನ್ನೊಂದರ ಗುರಿ ಅಥವಾ ಉದ್ದೇಶ ಅಗಿದೆ ಎಂಬುದನ್ನು ಸೂಚಿಸಲು ನಿರ್ದಿಷ್ಟವಾದ ಪದಗಳನ್ನು ಬಳಸಬೇಕಾಗಬಹುದು. ಇಂಗ್ಲಿಷ್ ಭಾಷೆಯಲ್ಲಿ ಗುರಿಯ ಸಂಬಂಧಾರ್ಥಕವನ್ನು ಸೂಚಿಸಲು “ಸಲುವಾಗಿ,” “ಅದರ ಸಲುವಾಗಿ” ಅಥವಾ “ಆದ್ದರಿಂದ” ಎಂಬ ಪದಗಳನ್ನು ಸಾಮಾನ್ಯವಾಗಿ ಬಳಸುತ್ತಾರೆ. ಅನುವಾದಕನು ಗುರಿಯ ಸಂಬಂಧಾರ್ಥಕವನ್ನು ಸೂಚಿಸುವ ಪದಗಳನ್ನು ತಿಳಿದುಕೊಳ್ಳುವುದು ಮತ್ತು ಆ ಸಂಬಂಧಾರ್ಥಕವನ್ನು ಸಹಜವಾದ ರೀತಿಯಲ್ಲಿ ಭಾಷಾಂತರಿಸುವುದು ಅಗತ್ಯವಾಗಿದೆ.

ಒಬಿಎಸ್ ಮತ್ತು ಸತ್ಯವೇದದಲ್ಲಿನ ಉದಾಹರಣೆಗಳು

ಅವಳು ಕೋಪಗೊಂಡು ಯೋಸೇಫನ ಮೇಲೆ ಸುಳ್ಳಾದ ಆರೋಪ ಮಾಡಿದಳು ಆದ್ದರಿಂದ ಅವನನ್ನು ಬಂಧಿಸಿ ಸೆರೆಮನೆಗೆ ಕಳುಹಿಸಲಾಯಿತು. (ಕಥೆ 8 ಚೌಕ್ಕಟ್ಟು 5 ಒಬಿಎಸ್)

ಸ್ತ್ರೀಯು ಮಾಡಿದ ಸುಳ್ಳು ಆರೋಪದ ಗುರಿಯು ಅಥವಾ ಉದ್ದೇಶವು ಯೋಸೇಫನನ್ನು ಬಂಧಿಸಿ ಸೆರೆಮನೆಗೆ ಕಳುಹಿಸುವುದಾಗಿತ್ತು.

ಯೋವಾಷನ ಮಗನಾದ ಗಿದ್ಯೋನನು ಮಿದ್ಯಾನ್ಯರಿಗೆ ಮರೆಮಾಡುವುದಕ್ಕೆ ದ್ರಾಕ್ಷೆಯ ಆಲೆಯಲ್ಲಿ ಗೋದಿಯನ್ನು ಬಡಿಯುತ್ತಿದ್ದನು (ನ್ಯಾಯಸ್ಥಾಪಕರು 6:11ಬಿ ULT)

ಇಲ್ಲಿ ಉಪಸರ್ಗೀಯ ಪದಗುಚ್ಛವು "ಕ್ಕೆ" ಎಂಬ ಪದದಿಂದ ಅಂತ್ಯವಾಗುತ್ತದೆ ಆದರೆ "ಸಲುವಾಗಿ" ಎಂಬ ಅರ್ಥವನ್ನು ಕೊಡುತ್ತದೆ.

ಈಗ ನನಗೆ ನಿನ್ನ ದೃಷ್ಟಿಯಲ್ಲಿ ದಯೆ ದೊರಕಿರುವುದಾದರೆ, ನಿನ್ನ ಮಾರ್ಗಗಳನ್ನು ನನಗೆ ತೋರಿಸು ಇದರಿಂದ ನಾನು ನಿನ್ನನ್ನು ತಿಳಿದುಕೊಳ್ಳಬಹುದು ಮತ್ತು ನಿನ್ನ ದೃಷ್ಟಿಯಲ್ಲಿ ದಯೆಯನ್ನು ಹೊಂದಿಕೊಳ್ಳಬಹುದು. ಈ ಜನಾಂಗವು ನಿನ್ನ ಪ್ರಜೆ ಎಂಬುದನ್ನು ನೆನಪುಮಾಡಿಕೋ." (ವಿಮೋಚನಕಾಂಡ 33:13 ULT)

ಮೋಶೆಯು ದೇವರನ್ನು ತಿಳಿದುಕೊಳ್ಳಬೇಕು ಮತ್ತು ದೇವರ ದಯೆಯನ್ನು ಹೊಂದಿಕೊಳ್ಳಬೇಕು ಎಂಬ ಗುರಿಗಾಗಿ ಅಥವಾ ಉದ್ದೇಶಕ್ಕಾಗಿ ದೇವರ ಮಾರ್ಗಗಳನ್ನು ದೇವರು ತನಗೆ ತೋರಿಸಬೇಕೆಂದು ಮೋಶೆ ಬಯಸಿದನು.

“ಅವಳಿಗಾಗಿ ಸಿವುಡುಗಳಿಂದ ಸ್ವಲ್ಪ ತೆನೆಯನ್ನು ಕಿತ್ತುಹಾಕಿರಿ, ಮತ್ತು ಅವುಗಳನ್ನು ಅವಳು ಕೊಡಿಸಿಕೊಳ್ಳುವುದಕ್ಕಾಗಿ ಬಿಟ್ಟುಬಿಡಿರಿ, ಮತ್ತು ಅವಳನ್ನು ಗದರಿಸಬೇಡಿರಿ.” (ರೂತಳು 2:16 ULT)

ಅವರ ಸಿವುಡಗಳಿಂದ ತೆನೆಯನ್ನು ಕಿತ್ತುಹಾಕಲು ಮತ್ತು ಅದನ್ನು ಹಾಗೆಯೇ ಬಿಡಲು ಪುರುಷರಿಗೆ ಆಜ್ಞಾಪಿಸಿದ್ದರ ಬೋವಜನ ಗುರಿಯು ಅಥವಾ ಉದ್ದೇಶವು ರೂತಳು ಅದನ್ನು ಶೇಖರಿಸಿಕೊಳ್ಳುವುದಾಗಿತ್ತು (ಹಕ್ಕಲಾಯುವುದು).

… ಆ ಕುರುಬರು, “ನಾವು ಈಗಲೇ ಬೇತ್ಲೆಹೇಮಿಗೆ ಹೋಗಿ ಕರ್ತನು ನಮಗೆ ತಿಳಿಯಪಡಿಸಿದ ಮತ್ತು ನಡೆದ ಈ ಸಂಗತಿಯನ್ನು ನೋಡಲು ಹೋಗೋಣ” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು. (ಲೂಕ 2:15 ULT)

ಬೇತ್ಲೆಹೇಮಿಗೆ ಹೋಗುವ ಉದ್ದೇಶವು ನಡೆದ ಸಂಗತಿಯನ್ನು ನೋಡುವುದು ಆಗಿತ್ತು. ಇಲ್ಲಿ ಉದ್ದೇಶವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಲಾಗಿಲ್ಲ ಮತ್ತು ಅದನ್ನು ತಪ್ಪಾಗಿ ಅರ್ಥಮಾಡಿಕೊಳ್ಳುವ ಸಾಧ್ಯತೆಯಿದೆ.

“… ನೀನು ಆ ಜೀವಕ್ಕೆ ಸೇರಬೇಕೆಂದಿದ್ದರೆ ದೇವರಾಜ್ಞೆಗಳಿಗೆ ವಿಧೇಯನಾಗಿ ನಡೆದುಕೊ” ಎಂದು ಹೇಳಿದನು. (ಮತ್ತಾಯ 19:17 ULT)

ಆಜ್ಞೆಗಳನ್ನು ಕೈಗೊಳ್ಳುವ ಗುರಿಯು ಜೀವಕ್ಕೆ ಸೇರವುದು ಆಗಿತ್ತು.

ಅದನ್ನು ಬಿಟ್ಟು ಎಡಕ್ಕಾಗಲಿ ಬಲಕ್ಕಾಗಲಿ ತಿರುಗಬೇಡ, ಅದರಿಂದ ನೀನು ಸಫಲನಾಗುವಿ. (ಯೆಹೋಶುವ 1:7 ULT)

ಮೋಶೆಯು ಇಸ್ರಾಯೇಲ್ಯರಿಗೆ ಕೊಟ್ಟ ಅಜ್ಞೆಗಳಿಂದ ತಿರುಗಿಕೊಳ್ಳಬಾರದು ಎಂಬುದರ ಉದ್ದೇಶವು ಅವರು ಸಫಲರಾಗುವುದು ಆಗಿತ್ತು.

ಆದರೆ ಆ ದ್ರಾಕ್ಷೇ ತೋಟಗಾರರು ಅವನ ಮಗನನ್ನು ಕಂಡು, ʼಇವನೇ ಉತ್ತರಾಧಿಕಾರಿ, ಬನ್ನಿ ಇವನನ್ನು ಕೊಂದು ಹಾಕೋಣ, ಮತ್ತು ಇವನ ಸ್ವತ್ತನ್ನು ನಾವೇ ತೆಗೆದುಕೊಳ್ಳೋಣʼ ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು. ಆದ್ದರಿಂದ ಅವನನ್ನು ಹಿಡಿದು ದ್ರಾಕ್ಷಾತೋಟದಿಂದ ಹೊರಕ್ಕೆ ದೊಬ್ಬಿ ಕೊಂದು ಹಾಕಿದರು. (ಮತ್ತಾಯ 21:38-39 ULT)

ಉತ್ತರಾಧಿಕಾರಿಯನ್ನು ಕೊಲ್ಲುವುದು ದ್ರಾಕ್ಷೇ ತೋಟಗಾರರ ಉದ್ದೇಶವಾಗಿತ್ತು ಆದ್ದರಿಂದ ಅವರು ಅವನ ಸ್ವತ್ತನ್ನು ತೆಗೆದುಕೊಳ್ಳಬಹುದಾಗಿತ್ತು. ಅವರು ಎರಡೂ ಸಂಗತಿಗಳನ್ನು ಒಂದೇ ಯೋಜನೆಯ ರೀತಿಯಲ್ಲಿ ಹೇಳುತ್ತಾರೆ, ಅವುಗಳನ್ನು “ಮತ್ತು” ಎಂಬುದರೊಂದಿಗೆ ಸೇರಿಸಿದ್ದಾರೆ. “ಆದ್ದರಿಂದ” ಎಂಬ ಪದವು ಮೊದಲ ಸಂಗತಿಯನ್ನು ತಿಳಿಸುತ್ತದೆ, ಆದರೆ ಎರಡನೇ ಸಂಗತಿಯನ್ನು (ಗುರಿ ಅಥವಾ ಉದ್ದೇಶ) ತಿಳಿಸುವುದಿಲ್ಲ.

ಭಾಷಾಂತರದ ಕಾರ್ಯತಂತ್ರಗಳು

ನಿಮ್ಮ ಭಾಷೆಯಲ್ಲಿ ಗುರಿ ಅಥವಾ ಉದ್ದೇಶದ ಸಂಬಂಧಾರ್ಥಕಗಳನ್ನು ಮೇಲಿನ ಪಠ್ಯದಲ್ಲಿ ಬಳಸಿದಂತೆಯೇ ಬಳಸುವುದಾದರೆ, ಅವುಗಳನ್ನು ಹಾಗೆಯೇ ಬಳಸಿರಿ.

  1. ಗುರಿಯ ಹೇಳಿಕೆಯ ರಚನೆಯು ಅಸ್ಪಷ್ಟವಾಗಿದ್ದರೆ, ಅದನ್ನು ಹೆಚ್ಚು ಸ್ಪಷ್ಟವಾಗಿರುವ ಹಾಗೆ ಬದಲಾಯಿಸಿರಿ.
  2. ಹೇಳಿಕೆಗಳ ಕ್ರಮವು ಗುರಿಯ ಹೇಳಿಕೆಯನ್ನು ಅಸ್ಪಷ್ಟ ಪಡಿಸುವಂಥದ್ದಾಗಿದ್ದರೆ ಅಥವಾ ಓದುಗರಿಗೆ ಗೊಂದಲವನ್ನುಂಟುಮಾಡಿದರೆ, ಅದರ ಕ್ರಮವನ್ನು ಬದಲಾಯಿಸಿರಿ.

ಭಾಷಾಂತರದ ಕಾರ್ಯತಂತ್ರಗಳನ್ನು ಅನ್ವಯಿಸಲಾಗಿರುವ ಉದಾಹರಣೆಗಳು

(1) ಗುರಿಯ ಹೇಳಿಕೆಯ ರಚನೆಯು ಅಸ್ಪಷ್ಟವಾಗಿದ್ದರೆ, ಅದನ್ನು ಹೆಚ್ಚು ಸ್ಪಷ್ಟವಾಗಿರುವ ಹಾಗೆ ಬದಲಾಯಿಸಿರಿ.

“ಅವಳಿಗಾಗಿ ಸಿವುಡುಗಳಿಂದ ಸ್ವಲ್ಪ ತೆನೆಯನ್ನು ಕಿತ್ತುಹಾಕಿರಿ, ಮತ್ತು ಅವುಗಳನ್ನು ಅವಳು ಕೊಡಿಸಿಕೊಳ್ಳುವುದಕ್ಕಾಗಿ ಬಿಟ್ಟುಬಿಡಿರಿ, ಮತ್ತು ಅವಳನ್ನು ಗದರಿಸಬೇಡಿರಿ.” (ರೂತಳು 2:16 ULT)

“ಸಿವುಡಗಳಿಂದ ಅವಳಿಗಾಗಿ ಸ್ವಲ್ಪ ತೆನೆಯನ್ನು ಕಿತ್ತುಹಾಕಿರಿ ಮತ್ತು ಅದನ್ನು ಬಿಟ್ಟುಬಿಡಿರಿ ಇದರಿಂದ ಅವಳು ಅದನ್ನು ಹಕ್ಕಲಾಯ್ದುಕೊಳ್ಳಬಹುದು, ಮತ್ತು ಅವಳನ್ನು ಗದರಿಸಬೇಡಿರಿ.”

… >… ಆ ಕುರುಬರು, “ನಾವು ಈಗಲೇ ಬೇತ್ಲೆಹೇಮಿಗೆ ಹೋಗಿ ಕರ್ತನು ನಮಗೆ ತಿಳಿಯಪಡಿಸಿದ ಮತ್ತು ನಡೆದ ಈ ಸಂಗತಿಯನ್ನು ನೋಡಲು ಹೋಗೋಣ” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು. (ಲೂಕ 2:15 ULT)

… ಆ ಕುರುಬರು, “ನಾವು ಈಗಲೇ ಬೇತ್ಲೆಹೇಮಿಗೆ ಹೋಗೋಣ, ಇದರಿಂದಾಗಿ ನಡೆದಿರುವ ಈ ಸಂಗತಿಯನ್ನು ನೋಡಬಹುದು ಅದನ್ನು ಕರ್ತನು ನಮಗೆ ತಿಳಿಯಪಡಿಸಿದ್ದಾನೆ” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು.

(2) ಹೇಳಿಕೆಗಳ ಕ್ರಮವು ಗುರಿಯ ಹೇಳಿಕೆಯನ್ನು ಅಸ್ಪಷ್ಟ ಪಡಿಸುವಂಥದ್ದಾಗಿದ್ದರೆ ಅಥವಾ ಓದುಗರಿಗೆ ಗೊಂದಲವನ್ನುಂಟುಮಾಡಿದರೆ, ಅದರ ಕ್ರಮವನ್ನು ಬದಲಾಯಿಸಿರಿ.

“… ನೀನು ಆ ಜೀವಕ್ಕೆ ಸೇರಬೇಕೆಂದಿದ್ದರೆ ದೇವರಾಜ್ಞೆಗಳಿಗೆ ವಿಧೇಯನಾಗಿ ನಡೆದುಕೊ” ಎಂದು ಹೇಳಿದನು. (ಮತ್ತಾಯ 19:17 ULT)

“… ಜೀವಕ್ಕೆ ಸೇರಲು ನೀನು ಬಯಸಿದರೆ ಆಜ್ಞೆಗಳನ್ನು ಕೈಕೊಂಡು ನಡೆದುಕೋ.” ಅಥವಾ: “… ಆಜ್ಞೆಗಳನ್ನು ಕೈಕೊಂಡು ನಡೆದುಕೋ ಇದರಿಂದ ನೀನು ಜೀವಕ್ಕೆ ಸೇರಬಹುದು.”

ಆದರೆ ಆ ದ್ರಾಕ್ಷೇ ತೋಟಗಾರರು ಅವನ ಮಗನನ್ನು ಕಂಡು, ʼಇವನೇ ಉತ್ತರಾಧಿಕಾರಿ, ಬನ್ನಿ ಇವನನ್ನು ಕೊಂದು ಹಾಕೋಣ, ಮತ್ತು ಇವನ ಸ್ವತ್ತನ್ನು ನಾವೇ ತೆಗೆದುಕೊಳ್ಳೋಣʼ ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು. ಆದ್ದರಿಂದ ಅವನನ್ನು ಹಿಡಿದು ದ್ರಾಕ್ಷಾತೋಟದಿಂದ ಹೊರಕ್ಕೆ ದೊಬ್ಬಿ ಕೊಂದು ಹಾಕಿದರು. (ಮತ್ತಾಯ 21:38-39 ULT)

(1) ಮತ್ತು (2)

ಆದರೆ ಆ ದ್ರಾಕ್ಷೇ ತೋಟಗಾರರು ಅವನ ಮಗನನ್ನು ಕಂಡು, ʼಇವನೇ ಉತ್ತರಾಧಿಕಾರಿ, ಬನ್ನಿ ಇವನನ್ನು ಕೊಂದು ಹಾಕೋಣ, ಮತ್ತು ಇವನ ಸ್ವತ್ತನ್ನು ನಾವೇ ತೆಗೆದುಕೊಳ್ಳೋಣʼ ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು. ಆದ್ದರಿಂದ ಅವನನ್ನು ಹಿಡಿದು ದ್ರಾಕ್ಷಾತೋಟದಿಂದ ಹೊರಕ್ಕೆ ದೊಬ್ಬಿ ಕೊಂದು ಹಾಕಿದರು. (ಮತ್ತಾಯ 21:38-39 ULT)

ಆದರೆ ಆ ದ್ರಾಕ್ಷೇ ತೋಟಗಾರರು ಅವನ ಮಗನನ್ನು ಕಂಡು, ʼಇವನೇ ಉತ್ತರಾಧಿಕಾರಿ, ಬನ್ನಿ ಇವನನ್ನು ಕೊಂದು ಹಾಕೋಣ, ಅದರಿಂದ ಇವನ ಸ್ವತ್ತನ್ನು ನಾವೇ ತೆಗೆದುಕೊಳ್ಳಬಹುದುʼ ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು. ಆದ್ದರಿಂದ ಅವನನ್ನು ಹಿಡಿದು ದ್ರಾಕ್ಷಾತೋಟದಿಂದ ಹೊರಕ್ಕೆ ದೊಬ್ಬಿ ಕೊಂದು ಹಾಕಿದರು ಅದರಿಂದ ಅವರು ಇವನ ಸ್ವತ್ತನ್ನು ತೆಗೆದುಕೊಳ್ಳಬಹುದು.