kn_ta/translate/grammar-connect-logic-contrast/01.md

12 KiB

ತಾರ್ಕಿಕ ಸಂಬಂಧಾರ್ಥಕಗಳು

ಕೆಲವು ಸಂಯೋಜಕಾವ್ಯಯ ಪದಗಳು ಎರಡು ನುಡಿಗಟ್ಟುಗಳ, ಉಪವಾಕ್ಯಗಳ, ವಾಕ್ಯಗಳ ಅಥವಾ ಪಠ್ಯದ ಭಾಗಗಳ ನಡುವೆ ತಾರ್ಕಿಕ ಸಂಬಂಧವನ್ನು ಏರ್ಪಡಿಸುತ್ತವೆ.

ಭಿನ್ನತೆಯ ಸಂಬಂಧಾರ್ಥಕ

ವ್ಯಾಖ್ಯೆ

ಭಿನ್ನತೆಯ ಸಂಬಂಧಾರ್ಥಕವು ಒಂದು ತಾರ್ಕಿಕ ಸಂಬಂಧವಾಗಿದ್ದು, ಇದರಲ್ಲಿ ಒಂದು ಘಟನೆಯು ಅಥವಾ ವಸ್ತುವು ಇನ್ನೊಂದಕ್ಕೆ ಭಿನ್ನವಾಗಿ ಅಥವಾ ವಿರೋಧಾಭಾಸವಾಗಿ ಇರುತ್ತದೆ.

ಕಾರಣವೇನಂದರೆ ಇದು ಭಾಷಾಂತರದ ಸಮಸ್ಯೆಯಾಗಿದೆ

ಸತ್ಯವೇದದ ವಚನಗಳಲ್ಲಿ, ಭಾಗಿಯಾಗಿರುವ ಜನರು ಉದ್ದೇಶಿಸಿದಂತೆ ಅಥವಾ ಸಂಭವಿಸಬೇಕೆಂದು ನಿರೀಕ್ಷಿಸಿದಂತೆ ಅನೇಕ ಘಟನೆಗಳು ನಡೆಯುವುದಿಲ್ಲ. ಕೆಲವೊಮ್ಮೆ ಜನರು ನಿರೀಕ್ಷಿಸದ ರೀತಿಯಲ್ಲಿ ವರ್ತಿಸುತ್ತಾರೆ, ಅದು ಒಳ್ಳೆಯದಾಗಿರಬಹುದು ಅಥವಾ ಕೆಟ್ಟದಾಗಿರಬಹುದು. ಸಾಮಾನ್ಯವಾಗಿ ದೇವರು ಘಟನೆಗಳನ್ನು ಬದಲಾಯಿಸುವ ಕಾರ್ಯವನ್ನು ಮಾಡುವವನಾಗಿದ್ದಾನೆ. ಅನೇಕವೇಳೆ ಈ ಘಟನೆಗಳು ಪ್ರಮುಖವಾಗಿವೆ ಮತ್ತು ಅನುವಾದಕರು ಈ ಭಿನ್ನತೆಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಸಂವಹನ ಮಾಡುವುದು ಮುಖ್ಯವಾಗಿರುತ್ತದೆ. “ಆದರೆ,” “ಆದರೂ,” “ಹಾಗಿದ್ದರೂ,” “ಹಾಗಾದರೂ,” “ಇನ್ನೂ,” ಅಥವಾ “ಆದಾಗ್ಯೂ” ಎಂಬ ಪದಗಳಿಂದ ಇಂಗ್ಲಿಷ್ ಭಾಷೆಯಲ್ಲಿ ಪ್ರಭೇದಗಳ ಸಂಬಂಧಾರ್ಥಕಗಳನ್ನು ಸಾಮಾನ್ಯವಾಗಿ ಸೂಚಿಸಲಾಗುತ್ತದೆ.

ಒಬಿಎಸ್ ಮತ್ತು ಸತ್ಯವೇದದಲ್ಲಿನ ಉದಾಹರಣೆಗಳು

ನೀವು ನನ್ನನ್ನು ದಾಸನನ್ನಾಗಿ ಮಾರಿದಾಗ ನೀವು ಕೇಡನ್ನು ಮಾಡಲು ಪ್ರಯತ್ನಿಸಿದ್ದೀರಿ, ಆದರೆ ದೇವರು ಕೇಡನ್ನು ಒಳ್ಳೆಯದಕ್ಕಾಗಿ ಉಪಯೋಗಿಸಿದನು! (ಕಥೆ 8 ಚೌಕ್ಕಟ್ಟು 12 ಒಬಿಎಸ್)

ಯೋಸೇಫನನ್ನು ಮಾರಬೇಕೆಂಬ ಅವನ ಸಹೋದರರ ಕೆಟ್ಟ ಯೋಜನೆಯು ಅನೇಕ ಜನರನ್ನು ಕಾಪಾಡುವ ದೇವರ ಉತ್ತಮ ಯೋಜನೆಗೆ ವ್ಯತಿರಿಕ್ತವಾಗಿದೆ. "ಆದರೆ" ಎಂಬ ಪದವು ಭಿನ್ನತೆಯನ್ನು ತೋರಿಸುತ್ತದೆ.

ಯಾವನು ಹೆಚ್ಚಿನವನು? ಊಟಕ್ಕೆ ಕೂತವನೋ ಸೇವೆಮಾಡುವವನೋ? ಊಟಕ್ಕೆ ಕೂತವನಲ್ಲವೇ. ಆದರೆ ನಾನು ನಿಮ್ಮಲ್ಲಿ ಸೇವೆ ಮಾಡುವವನಂತಿದ್ದೇನೆ. (ಲೂಕ 22:27 ULT)

ಮನುಷ್ಯ ನಾಯಕರು ವರ್ತಿಸುವ ಹೆಮ್ಮೆಯ ರೀತಿಗೆ ಮತ್ತು ತಾನು ವರ್ತಿಸುವ ದೀನತೆಯ ರೀತಿಗೆ ಇರುವ ವ್ಯತ್ಯಾಸವನ್ನು "ಆದರೆ" ಎಂಬ ಪದದ ಮೂಲಕ ಯೇಸು ಸೂಚಿಸುತ್ತಾನೆ.

… ಇದಲ್ಲದೆ ಅವನನ್ನು ಕಾವಲಲ್ಲಿಟ್ಟು ಸರಪಣಿಗಳಿಂದಲೂ ಬೇಡಿಗಳಿಂದಲೂ ಬಂಧಿಸಿದ್ದರು ಆದರೂ ಅವನು ಅವುಗಳನ್ನು ಮುರಿದುಹಾಕುತ್ತಿದ್ದನು; ಮತ್ತು ಆ ದೆವ್ವವು ಅವನನ್ನು ನಿರ್ಜನ ಪ್ರದೇಶಗಳಿಗೆ ಓಡಿಸುತ್ತಿತ್ತು. (ಲೂಕ 8:29 ULT)

ಸರಪಣಿಗಳಿಂದ ಬಂಧಿಸಲ್ಪಟ್ಟ ಯಾರಾದರೂ ಅವುಗಳನ್ನು ಮುರಿದುಹಾಕಲು ಆಗುವಂಥದ್ದು ಅನಿರೀಕ್ಷಿತವಾದ ಘಟನೆಯಾಗಿದೆ. “ಆದರೂ” ಎಂಬ ಪದವು ಅನಿರೀಕ್ಷಿತ ಘಟನೆಯ ಭಿನ್ನತೆಯನ್ನು ಸೂಚಿಸುತ್ತದೆ.

[ದಾವೀದನು] ದೇವರ ಸನ್ನಿಧಾನದಲ್ಲಿ ಕೃಪೆ ಹೊಂದಿ ಯಾಕೋಬನ ದೇವರಿಗಾಗಿ ಆಲಯವನ್ನು ಕಟ್ಟಿಸುವುದಕ್ಕೆ ಅಪ್ಪಣೆಯಾಗಬೇಕೆಂದು ಕೇಳಿಕೊಂಡನು. ಆದರೂ ದೇವರಿಗೋಸ್ಕರ ಆಲಯವನ್ನು ಕಟ್ಟಿಸಿದವನು ಸೊಲೊಮೋನನು. ಆದರೂ ಪರಾತ್ಪರನಾದ ದೇವರು ಮನುಷ್ಯರ ಕೈಯಿಂದ ಕಟ್ಟಿದ ಆಲಯಗಳಲ್ಲಿ ವಾಸಮಾಡುವವನಲ್ಲ. (ಅಪೊಸ್ತಲರ ಕೃತ್ಯಗಳು 7:46-48 ULT)

ಇಲ್ಲಿ ಎರಡು ಭಿನ್ನತೆಗಳಿವೆ, ಎರಡನ್ನೂ “ಆದರೂ” ಎಂದು ಪದದಿಂದ ಸೂಚಿಸಲಾಗಿದೆ. ದೇವರಿಗಾಗಿ ಆಲಯವನ್ನು ಕಟ್ಟಿಸುವುದಕ್ಕೆ ಅಪ್ಪಣೆಯಾಗಬೇಕೆಂದು ದಾವೀದನು ಕೇಳಿಕೊಂಡರೂ, ಅದನ್ನು ಕಟ್ಟಿಸಿದವನು ಸೊಲೊಮೋನನು ಇದು ಎಂದು ತೋರಿಸುತ್ತದೆ. ಅದಾದ ನಂತರ ಮತ್ತೊಂದು ಭಿನ್ನತೆಯಿದೆ. ಸೊಲೊಮೋನನು ದೇವರಿಗಾಗಿ ಆಲಯವನ್ನು ಕಟ್ಟಿಸಿದರೂ, ಜನರು ಕೈಯಿಂದ ಕಟ್ಟುವ ಆಲಯಗಳಲ್ಲಿ ದೇವರು ವಾಸಿಸುವುದಿಲ್ಲ.

ಭಾಷಾಂತರದ ಕಾರ್ಯತಂತ್ರಗಳು

ನಿಮ್ಮ ಭಾಷೆಯಲ್ಲಿ ಭಿನ್ನತೆಗಳನ್ನು ತೋರಿಸುವ ಸಂಬಂಧಾರ್ಥಕಗಳನ್ನು ಮೇಲಿನ ಪಠ್ಯದಲ್ಲಿರುವ ಅದೇ ರೀತಿಯಲ್ಲಿ ಬಳಸುವುದಾದರೆ, ಅವುಗಳನ್ನು ಹಾಗೆಯೇ ಬಳಸಿರಿ.

  1. ಉಪವಾಕ್ಯಗಳ ನಡುವಿನ ಭಿನ್ನತೆಯನ್ನು ತೋರಿಸುವ ಸಂಬಂಧಾರ್ಥಕಗಳು ಅಷ್ಟ ಸ್ಪಷ್ಟವಾಗಿಲ್ಲದಿದ್ದರೆ, ಹೆಚ್ಚು ನಿರ್ದಿಷ್ಟವಾದ ಅಥವಾ ಹೆಚ್ಚು ಸ್ಪಷ್ಟವಾದ ಸಂಪರ್ಕ ಕಲ್ಪಿಸುವ ಪದವನ್ನು ಅಥವಾ ಪದಗುಚ್ಛವನ್ನು ಬಳಸಿರಿ.
  2. ಭಿನ್ನತೆಯನ್ನು ತೋರಿಸುವ ಸಂಬಂಧಾರ್ಥಕದ ಇತರ ಉಪವಾಕ್ಯವನ್ನು ಗುರುತಿಸುವುದು ನಿಮ್ಮ ಭಾಷೆಯಲ್ಲಿ ಹೆಚ್ಚು ಸ್ಪಷ್ಟವಾಗಿದ್ದರೆ, ಇತರ ಉಪವಾಕ್ಯಕ್ಕೆ ಸಂಪರ್ಕ ಕಲ್ಪಿಸುವ ಪದವನ್ನು ಬಳಸಿರಿ.
  3. ನಿಮ್ಮ ಭಾಷೆಯಲ್ಲಿ ಭಿನ್ನತೆಯನ್ನು ತೋರಿಸುವ ಸಂಬಂಧಾರ್ಥಕವನ್ನು ಬೇರೆ ರೀತಿಯಲ್ಲಿ ಸೂಚಿಸುವುದಾದರೆ, ಆ ರೀತಿಯನ್ನು ಬಳಸಿರಿ.

ಭಾಷಾಂತರದ ಕಾರ್ಯತಂತ್ರಗಳನ್ನು ಅನ್ವಯಿಸಲಾಗಿರುವ ಉದಾಹರಣೆಗಳು

  1. ಉಪವಾಕ್ಯಗಳ ನಡುವಿನ ಭಿನ್ನತೆಯನ್ನು ತೋರಿಸುವ ಸಂಬಂಧಾರ್ಥಕಗಳು ಅಷ್ಟ ಸ್ಪಷ್ಟವಾಗಿಲ್ಲದಿದ್ದರೆ, ಹೆಚ್ಚು ನಿರ್ದಿಷ್ಟವಾದ ಅಥವಾ ಹೆಚ್ಚು ಸ್ಪಷ್ಟವಾದ ಸಂಪರ್ಕ ಕಲ್ಪಿಸುವ ಪದವನ್ನು ಅಥವಾ ಪದಗುಚ್ಛವನ್ನು ಬಳಸಿರಿ.

ಯಾವನು ಹೆಚ್ಚಿನವನು? ಊಟಕ್ಕೆ ಕೂತವನೋ ಸೇವೆಮಾಡುವವನೋ? ಊಟಕ್ಕೆ ಕೂತವನಲ್ಲವೇ. ಆದರೆ ನಾನು ನಿಮ್ಮಲ್ಲಿ ಸೇವೆ ಮಾಡುವವನಂತಿದ್ದೇನೆ. (ಲೂಕ 22:27 ULT)

ಯಾವನು ಹೆಚ್ಚಿನವನು? ಊಟಕ್ಕೆ ಕೂತವನೋ ಸೇವೆಮಾಡುವವನೋ? ಊಟಕ್ಕೆ ಕೂತವನಲ್ಲವೇ. ಆ ವ್ಯಕ್ತಿಗಿಂತ ಭಿನ್ನವಾಗಿ ನಾನು ನಿಮ್ಮಲ್ಲಿ ಸೇವೆ ಮಾಡುವವನಂತಿದ್ದೇನೆ.

  1. ಭಿನ್ನತೆಯನ್ನು ತೋರಿಸುವ ಸಂಬಂಧಾರ್ಥಕದ ಇತರ ಉಪವಾಕ್ಯವನ್ನು ಗುರುತಿಸುವುದು ನಿಮ್ಮ ಭಾಷೆಯಲ್ಲಿ ಹೆಚ್ಚು ಸ್ಪಷ್ಟವಾಗಿದ್ದರೆ, ಇತರ ಉಪವಾಕ್ಯಕ್ಕೆ ಸಂಪರ್ಕ ಕಲ್ಪಿಸುವ ಪದವನ್ನು ಬಳಸಿರಿ.

… ಇದಲ್ಲದೆ ಅವನನ್ನು ಕಾವಲಲ್ಲಿಟ್ಟು ಸರಪಣಿಗಳಿಂದಲೂ ಬೇಡಿಗಳಿಂದಲೂ ಬಂಧಿಸಿದ್ದರು ಆದರೂ ಅವನು ಅವುಗಳನ್ನು ಮುರಿದುಹಾಕುತ್ತಿದ್ದನು; ಮತ್ತು ಆ ದೆವ್ವವು ಅವನನ್ನು ನಿರ್ಜನ ಪ್ರದೇಶಗಳಿಗೆ ಓಡಿಸುತ್ತಿತ್ತು. (ಲೂಕ 8:29 ULT)

… ಇದಲ್ಲದೆ ಅವನನ್ನು ಕಾವಲಲ್ಲಿಟ್ಟು ಸರಪಣಿಗಳಿಂದಲೂ ಬೇಡಿಗಳಿಂದಲೂ ಬಂಧಿಸಿದ್ದರು ಹಾಗಿದ್ದರೂ ಸಹ ಅವನು ಅವುಗಳನ್ನು ಮುರಿದುಹಾಕುತ್ತಿದ್ದನು; ಮತ್ತು ಆ ದೆವ್ವವು ಅವನನ್ನು ನಿರ್ಜನ ಪ್ರದೇಶಗಳಿಗೆ ಓಡಿಸುತ್ತಿತ್ತು.

  1. ನಿಮ್ಮ ಭಾಷೆಯಲ್ಲಿ ಭಿನ್ನತೆಯನ್ನು ತೋರಿಸುವ ಸಂಬಂಧಾರ್ಥಕವನ್ನು ಬೇರೆ ರೀತಿಯಲ್ಲಿ ಸೂಚಿಸುವುದಾದರೆ, ಆ ರೀತಿಯನ್ನು ಬಳಸಿರಿ.

[ದಾವೀದನು] ದೇವರ ಸನ್ನಿಧಾನದಲ್ಲಿ ಕೃಪೆ ಹೊಂದಿ ಯಾಕೋಬನ ದೇವರಿಗಾಗಿ ಆಲಯವನ್ನು ಕಟ್ಟಿಸುವುದಕ್ಕೆ ಅಪ್ಪಣೆಯಾಗಬೇಕೆಂದು ಕೇಳಿಕೊಂಡನು. ಆದರೂ ದೇವರಿಗೋಸ್ಕರ ಆಲಯವನ್ನು ಕಟ್ಟಿಸಿದವನು ಸೊಲೊಮೋನನು. ಆದರೂ ಪರಾತ್ಪರನಾದ ದೇವರು ಮನುಷ್ಯರ ಕೈಯಿಂದ ಕಟ್ಟಿದ ಆಲಯಗಳಲ್ಲಿ ವಾಸಮಾಡುವವನಲ್ಲ. (ಅಪೊಸ್ತಲರ ಕೃತ್ಯಗಳು 7:46-48 ULT)

[ದಾವೀದನು] ದೇವರ ಸನ್ನಿಧಾನದಲ್ಲಿ ಕೃಪೆ ಹೊಂದಿ ಯಾಕೋಬನ ದೇವರಿಗಾಗಿ ಆಲಯವನ್ನು ಕಟ್ಟಿಸುವುದಕ್ಕೆ ಅಪ್ಪಣೆಯಾಗಬೇಕೆಂದು ಕೇಳಿಕೊಂಡನು. ಆದರೆ ದೇವರಿಗೋಸ್ಕರ ಆಲಯವನ್ನು ಕಟ್ಟಿಸಿದವನು ಸೊಲೊಮೋನನು ದಾವೀದನಲ್ಲ. ಸೊಲೊಮೋನನು ಆತನಿಗಾಗಿ ಆಲಯವನ್ನು ಕಟ್ಟಿದರೂ ಪರಾತ್ಪರನಾದ ದೇವರು ಮನುಷ್ಯರ ಕೈಯಿಂದ ಕಟ್ಟಿದ ಆಲಯಗಳಲ್ಲಿ ವಾಸಮಾಡುವವನಲ್ಲ.